ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮಂಡಳಿಯ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮೊಕೇಸರ, ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆಡಳಿತ ಮೊತ್ತೇಸರರಾಗಿ ವಾಸುದೇವ ಗೋಖಲೆ, ಅಧ್ಯಕ್ಷರಾಗಿ ಕಜೆ ವೆಂಕಟೇಶ್ವರ ಭಟ್ ಅವಿರೋಧವಾಗಿ ಆಯ್ಕೆಯಾದರು. ಕಾವ್ಯದರ್ಶಿಯಾಗಿ ಶಶಿಧರ ಡೋಸರ್, ಉಪಾಧ್ಯಕ್ಷರಾಗಿ ಅಶ್ವಿನಿ ಎ.ಹೆಬ್ಬಾರ್, ಜತೆ ಕಾಠ್ಯದರ್ಶಿಯಾಗಿ ಶೀನಪ್ಪಗೌಡ, ಖಜಾಂಚಿ ಯಾಗಿ ಅರೆಕ್ಕಲು ರಾಮಚಂದ್ರ ಭಟ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ರಾಗಿ ಜಗದೀಶ ಫಡಕೆ ಮುಂದುವರಿಯಲಿದ್ದಾರೆ. ಸದಸ್ಯರಾಗಿ ಉಷಾ ಪ್ರಹ್ಲಾದ ಫಡಕೆ, ವಿಜಯ ಕುಮಾರ್ ರೈ, ಚಂದ್ರಕಾಂತ ವೆಂಕಟೇಶ್ವರ ಭಟ್ ವಾಸುದೇವ ಗೋಖಲೆ ಪ್ರಭು, ಚೆನ್ನಕೇಶವ ನಾಯ್ಕ, ಶಶಾಂಕ ಮರಾಠ ಆಯ್ಕೆಯಾಗಿ ದ್ದಾರೆ. ಬಾಬು ಪೂಜಾರಿ ಮತ್ತು ಋತು ಪರ್ಣ ಡೋಂಗ್ರೆ ವಿಶೇಷ ಆಹ್ವಾನಿತರಾಗಿ ಆಯ್ಕೆಯಾದರು. 12ರಂದು ದೀಪೋತ್ಸವ ಪೂರ್ವಭಾವಿ ಸಭೆ: ದೇವಸ್ಥಾನದಲ್ಲಿ ನ.9ರಂದು ಜರುಗಲಿರುವ ದೀಪೋತ್ಸವದ ಪೂರ್ವ ಭಾವಿ ಸಭೆ ಅ.12ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
News courtesy: Vijaya Karnataka















