*ಸಪ್ರೇಮ ವಂದನೆಗಳು,*
ನಮ್ಮ ಚಿತ್ಪಾವನ ಸಂಘಟನೆ, ಹಲವು ವರ್ಷಗಳಿಂದ ನಾನಾ ರೀತಿಯ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಬಾಂಧವರ ಕಲ್ಯಾಣಕ್ಕಾಗಿ ದುಡಿಯುತ್ತಲೇ ಇದೆ. ಈ ಕೊಂಡಿಯಲ್ಲಿ, ಈಗ ಒಂದು ಮಾನವೀಯ ವಿನಂತಿಯೊಂದಿಗೆ ನಿಮ್ಮೆದುರು ನಿಲ್ಲುತ್ತಿದ್ದೇವೆ.
ನಮ್ಮ ಸಮಾಜದ ಅತ್ಯಂತ ಪ್ರತಿಭಾನ್ವಿತ ಸದಸ್ಯರಾದ “ಶ್ರೀ ಚಂದ್ರಮೋಹನ ಮರಾಠೆ” ಅವರು, ಕಳೆದ ಒಂದು ವರ್ಷದಿಂದ ಬಲಪಾರ್ಶ್ವವಾಯು (Paralysis) ಸಮಸ್ಯೆಯಿಂದ ಗಂಭೀರವಾಗಿ ಬಳಲುತ್ತಿದ್ದಾರೆ. ಇವರಿಗೆ ಮಾತಾಡಲು ಸಹ ಆಗುತ್ತಿಲ್ಲ, ದಿನನಿತ್ಯದ ಚಟುವಟಿಕೆಗಳಿಗಾಗಿ ಇತರರ ಅವಲಂಬನೆಯಾಗಿದ್ದಾರೆ.
ಅವರ ಕುಟುಂಬವು ಈಗ ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದು, ಅವರ ತಂದೆ *ಶ್ರೀ ರಾಮಕೃಷ್ಣ ಮರಾಠೆ* ಸಹ ಎಡಪಾರ್ಶ್ವವಾಯುವಿನಿಂದ ಪೀಡಿತರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯಕೀಯ ಚಿಕಿತ್ಸೆ ಮತ್ತು ಉಪಚಾರಗಳ ಹೊರತಾಗಿಯೂ ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಂಡುಬಂದಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ, ಅವರ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ, ನಮ್ಮ ಸಂಘಟನೆಯ ಪರವಾಗಿ, ಸಮುದಾಯದ ಎಲ್ಲಾ ಬಾಂಧವರಿಗೆ ಸಹೃದಯ ವಿನಂತಿ ಸಲ್ಲಿಸುತ್ತಿದ್ದೇವೆ.
ಶಕ್ತ್ಯಾನುಸಾರ ಧನಸಹಾಯ ನೀಡಿ, ಮಾನವೀಯತೆ ಮತ್ತು ಸಹಾನುಭೂತಿಯ ಸಂಕೇತವನ್ನಾಗಿ ಮಾಡಿಕೊಡಿ.
ನಾವು ಈ ತಿಂಗಳ (ಸೆಪ್ಟೆಂಬರ್) ಕೊನೆಯವರೆಗೆ ಸಹಾಯಧನವನ್ನು ಸಂಗ್ರಹಿಸಿ, ಅದನ್ನು *ಅಕ್ಟೋಬರ್ 1* ರಂದು “ಚಂದ್ರಮೋಹನರ” ಕುಟುಂಬದವರಿಗೆ ಹಸ್ತಾಂತರಿಸುವ ಯೋಜನೆಯಿದೆ.
ಸಹಾಯ ಮಾಡಲು ಇಚ್ಛಿಸುವವರು *ಚೆಕ್ ಅಥವಾ ನಗದು* ಮುಖಾಂತರ ಸಹಾಯ ನೀಡಲು ಬಯಸಿದರೆ, ದಯವಿಟ್ಟು ಸಂಘದ *ಅಧ್ಯಕ್ಷರು* ಶ್ರೀಮತಿ ಸುಷ್ಮಾ ಭಿಡೆ, *(ದೂರವಾಣಿ: +91 98408 86279)* ಅಥವಾ *ಕಾರ್ಯದರ್ಶಿ* ಶ್ರೀ ರಂಗನಾಥ್ ಹೆಬ್ಬಾರ್ *(ದೂರವಾಣಿ: +91 90081 66369)* ಅವರನ್ನು ಸಂಪರ್ಕಿಸಿ.
ಇದು ಒಂದೆಡೆ ವ್ಯಕ್ತಿಯ ಆರೋಗ್ಯಪೂರ್ಣ ಬದುಕಿಗಾಗಿ ಹೋರಾಟವಾಗಿದ್ದರೆ, ಇನ್ನೊಂದೆಡೆ ನಮ್ಮ ಸಮುದಾಯದ ಒಗ್ಗಟ್ಟಿನ ಪರೀಕ್ಷೆಯಾಗಿದೆ. ನೀವು ಈ ಸಂದರ್ಭದಲ್ಲಿ ಕೈಜೋಡಿಸಿ, ನಿಮ್ಮ ಶಕ್ತಿ ಹಾಗು ಸಾಮರ್ಥ್ಯವನ್ನು ಮಾನವೀಯ ಸೇವೆಗೆ ನೀಡುವಂತೆ ಮನವಿ.
*ವಂದನೆಗಳೊಂದಿಗೆ,*
*ಅಧ್ಯಕ್ಷರು*
*ಚಿತ್ಪಾವನ ಸಂಘಟನೆ, ಮುಂಡಾಜೆ*
Donations:
- Mr. Sudarshan Chiplunkar – On behalf of Suddi Suvidha – Rs. 47,000/-
- Dinakar Kale, Sorba-Rs. 1000/-
- Aishwarya Joshi, Pune – Rs. 2000/-
ಸುದ್ದಿ ಸುವಿಧಾ ದಾನಿಗಳ ಹೆಸರುಗಳು ಮತ್ತು ದಾನದ ಮೊತ್ತವನ್ನು ಇತರರನ್ನು ಪ್ರೋತ್ಸಾಹಿಸಲು ಮತ್ತು ಸಮುದಾಯದ ಹಿತಕ್ಕಾಗಿ ಹೆಚ್ಚು ದಾನ ನೀಡಲು ಪ್ರೇರೇಪಿಸುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸುತ್ತಿದೆ. ದಾನಿಗಳು ತಮ್ಮ ಹೆಸರುಗಳನ್ನು ಬಹಿರಂಗಪಡಿಸಲು ವಿಶೇಷವಾಗಿ ನಮಗೆ ಸೂಚನೆ ನೀಡಿಲ್ಲದಿರುವುದನ್ನು ದಯವಿಟ್ಟು ಗಮನಿಸಿ.














