ಚಿತ್ಪಾವನರು ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ಎಂದರೆ ಇವರ ವಲಸೆ, ಕರ್ನಾಟಕದ ಹತ್ತು ಹಲವು ಸ್ಥಳಗಳಲ್ಲಿ ಅಥವಾ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕರ್ನಾಟಕದಲ್ಲಿಡೀ ಹರಡಿಕೊಂಡಿರುವ ಚಿತ್ಪಾವನ ಸಂಘಟನೆಯ ವಲಸೆ ಒಂದು ಮಹತ್ತರವಾಗಿರುವಂತಹ ಮೈಲಿಗಲ್ಲು.
ಚಿತ್ಪಾವನರು ಮುಖ್ಯವಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದಿರುವಂತಹ ಒಂದು ಸಂಘಟನೆ. ಇದಕ್ಕೆ ತಾಳಗುಂದದ ಶಾಸನದಲ್ಲೂ ಪುರಾವೆಗಳಿವೆ . ಮಹಾರಾಷ್ಟ್ರದ ಗುಹಾಗರ್, ಚಿಪ್ಳೂಣ್, ರತ್ನಾಗಿರಿ ಇಂತಹ ಪ್ರದೇಶಗಳಲ್ಲಿ ಚಿತ್ಪಾವನರು ನೆಲೆಸಿದ್ದರು.
ಖ್ಯಾತ ಸಂಶೋಧಕರಾದಂತಹ ನಾ. ಗೋ. ಚಾಫೇಕರರು ಚಿತ್ಪಾವನರ ಪ್ರಾಚೀನ ಹೆಸರು ಆರ್ಯಾವರ್ತಃ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಚಿತ್ಪಾವನರ ಈ ವಲಸೆಗೆ ಸುಮಾರು 500 ಕ್ಕಿಂತಲೂ ಹೆಚ್ಚಿನ ವರ್ಷಗಳ ಇತಿಹಾಸವಿದೆ.
ಕರ್ನಾಟಕಕ್ಕೆ ಮಹಾರಾಷ್ಟ್ರದಿಂದಾದ ಚಿತ್ಪಾವನರ ವಲಸೆಗೆ ಪ್ರಮುಖ ಕಾರಣಗಳು :
- ಮತೀಯ ಆಕ್ರಮಣಗಳು
- ಉದ್ಯೋಗಾನ್ವೇಷಣೆ
- ಮರಾಠಾ ದೊರೆಗಳ ಸಂಸ್ಥಾನಿಕರಂತೆ ಬಂದವರು
- ಜೀವನ ನಿರ್ವಹಣೆಗಾಗಿ
- ಪರಾಕ್ರಮದಿಂದ ಸಂಸ್ಥಾನಿಕರಾಗಿ ರಾಜ್ಯಭಾರ ಮಾಡಿದವರು
ಹೀಗೆ ಚಿತ್ಪಾವನರು ಮಹಾರಾಷ್ಟ್ರದಿಂದ ಕರ್ನಾಟಕದ ಕರಾವಳಿ, ಮಲೆನಾಡು ಹಾಗೆಯೇ ಬಯಲುಸೀಮೆಯ ಪ್ರದೇಶಗಳಲ್ಲಿ ವಲಸೆ ಬಂದು ಬೀಡುಬಿಟ್ಟರು.


ತದನಂತರದಲ್ಲಿ ಕರ್ನಾಟಕದಲ್ಲೂ ಹಲವು ಆಂತರಿಕ ವಲಸೆಗಳಾದವು. ಅವುಗಳಿಗೆ ಕಾರಣಗಳು ಹೀಗಿವೆ:
- ವೃತ್ತಿ, ಉದ್ಯಮ , ವ್ಯಾಪಾರ
- ವೈವಾಹಿಕ ಸಂಬಂಧಗಳು
- ಅಡುಗೆ, ಪೌರೋಹಿತ್ಯ ಮುಂತಾಗಿ ವೃತ್ತಿಪರತೆಯಿಂದ ಸಿಗುವ ಅವಕಾಶಗಳು
- ಐಟಿ, ಬಿಟಿ, ಔದ್ಯೋಗಿಕ ಕ್ರಾಂತಿ
- ವಯಸ್ಸಾದವರ ವಲಸೆ
ದಕ್ಷಿಣ ಕನ್ನಡದ ಪ್ರಾಂತಗಳಿಗೆ ಅಥವಾ ಕರಾವಳಿ ಪ್ರದೇಶಕ್ಕೆ ವಲಸೆ ಬಂದವರಲ್ಲಿ ಸಿಂಹಪಾಲು ಎಂದರೆ ಉತ್ತರಕೊಂಕಣದಿಂದ ಬಂದವರದ್ದು. ಉತ್ತರ ಕೊಂಕಣ ಎಂದರೆ ಗೋವಾ ಹಾಗೂ ಮಹಾರಾಷ್ಟ್ರದ ಕಡಲ ತೀರ. ಅಲ್ಲಿಂದ ವಲಸೆ ಬಂದವರಲ್ಲಿ ಚಿತ್ಪಾವನರು ಹಲವರು.
ಒಂದು ಊಹೆಯ ಪ್ರಕಾರ ಚಿತ್ಪಾವನ ಜನಾಂಗವು ಪರ್ಷಿಯಾ ಇಲ್ಲವೇ ಬರ್ಬರದಿಂದ ಗುಜರಾತಿನ ಆಸುಪಾಸಿನ ಕರಾವಳಿಗೆ ಬಂದು ನೆಲೆಗೊಂಡಿತು. ಇವರಲ್ಲಿದ್ದ ಒಳ ಪಂಗಡಗಳು ನಾಗರ, ತುರ್ಕಿ, ಉದೀಚ್ಯ ಬ್ರಾಹ್ಮಣರು. ಅಲ್ಲಿಂದ ಒಂದು ಸಮೂಹ ಸಮುದ್ರದಾರಿಯಾಗಿ ಕೊಂಕಣದ ಅಥವಾ ಮಹಾರಾಷ್ಟ್ರದ ಗುಹಾಗರ, ಚಿಪಳೂಣಗಳಿಗೆ ಬಂದು ನೆಲೆನಿಂತು ಚಿಪ್ಳೂಣೆ ಚಿತ್ಪಾವನರು ಎಂದೆನಿಸಿ ಆರ್ಯಾವರ್ತರಾದರು.
ಮಹಾರಾಷ್ಟ್ರದ ಪ್ರಾಕೃತ ಭಾಷೆಯೊಂದನ್ನು ಅಂಗೀಕರಿಸಿಕೊಂಡು ಚಿತ್ಪಾವನರಿಗೆ ಚಿತ್ಪಾವನಿ ಭಾಷೆಯೊಂದು ರೂಪುಗೊಂಡಿತು.
ಸುಮಾರು 14ನೇ ಶತಮಾನದ ಹೊತ್ತಿಗೆ ಈ ಚಿತ್ಪಾವನ ಜನಾಂಗವು ಉತ್ತರ ಕೊಂಕಣದಿಂದ ದಕ್ಷಿಣಕನ್ನಡಕ್ಕೆ ಯಾವಾಗ ಮತ್ತು ಯಾವ ಕಾರಣಕ್ಕಾಗಿ ಬಂದಿರಬಹುದು ಎಂಬುದಕ್ಕೆ ಉತ್ತರ ಹೀಗಿರಬಹುದು. ಪೋರ್ಚುಗೀಸರು ನಡೆಸಿದ ಮತಾಂತರ, ಮುಸ್ಲಿಂ ದೊರೆಗಳ ಕಿರುಕುಳ, ಪ್ರಾಕೃತಿಕ ವಿಕೋಪ ಇತ್ಯಾದಿ.
ದಕ್ಷಿಣ ಕನ್ನಡದಲ್ಲಿ ಚಿತ್ಪಾವನರು ಮುಖ್ಯವಾಗಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಶಿಶಿಲ, ಹತ್ಯಡ್ಕ, ಶಿಬಾಜೆ, ಸೂಳಬೆಟ್ಟು, ಬಂಗಾಡಿ, ನಿಡ್ಲೆ, ಫಂಡಿಜೆ, ಅಳಂಬ, ಕುದ್ಯಾಡಿ ಗ್ರಾಮಗಳಲ್ಲಿ, ಪುತ್ತೂರು ತಾಲೂಕಿನ ಕಡಬದಲ್ಲಿರುವ ಹೊಸಮಠ ಎಂಬಲ್ಲಿ ನೆಲೆಸಿದ್ದಾರೆ.
ಅದೇ ರೀತಿ ದಕ್ಷಿಣ ಕನ್ನಡದಿಂದ ವಿಭಜಿತಗೊಂಡ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ, ಕೆರ್ವಾಶೆ, ದುರ್ಗ, ತೆಳ್ಳಾರು, ಈದು, ಹೆಬ್ರಿ, ಗಂಗೆನೀರು ಗ್ರಾಮಗಳಲ್ಲಿ, ಹಾಗೂ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ನೆಲೆಸಿರುತ್ತಾರೆ.
ಹೀಗೆ ಚಿತ್ಪಾವನರು ನೆಲೆನಿಂತ ಪ್ರದೇಶಗಳನ್ನು ವಾಳ್ಯ ಅಥವಾ ವಠಾರಗಳೆಂದು ಕರೆದಿದ್ದಾರೆ.
ಕೆಲವು ವಾದಗಳ ಪ್ರಕಾರ ಚಿತ್ಪಾವನರು ಇಂಡೋ ಇರಾನಿಯನ್ ಮೂಲಕ್ಕೆ ಸೇರಿದವರೆಂದೂ ಪ್ಯಾಲೆಸ್ತಿನ್, ಈಜಿಪ್ಟ್, ಅಫ್ಘಾನ್ ಮೂಲದವರೆಂದೂ ಮಂಡಿಸಲಾಗುತ್ತದೆ. ಇವರ ಗೋಧಿ ಮೈಬಣ್ಣ , ಕೆಂಚಾದ ಕೂದಲ ಬಣ್ಣ , ಬೂದು ಬಣ್ಣ ಮಿಶ್ರಿತ ಕಣ್ಣುಗಳು ಇಂತಹ ದೈಹಿಕ ಲಕ್ಷಣಗಳನ್ನು ಅನುಸರಿಸಿಕೊಂಡು ಇತ್ತೀಚಿಗೆ ನಡೆಸಿದಂತಹ DNA ಪರೀಕ್ಷೆಗಳ ಫಲಿತಾಂಶವೂ ಈ ವಾದಕ್ಕೆ ಒಂದು ದಾರಿಯನ್ನು ತೋರಿಸುತ್ತಿವೆ.
ನಮ್ಮ ಚಿತ್ಪಾವನರ ಇನ್ನೊಂದು ವಿಶೇಷತೆಯೆಂದರೆ ಅವರ ಕುಲನಾಮಗಳು. ಒಂದೊಂದು ಕುಲಗಳಿಗೆ ಒಂದೊಂದು ಕುಲನಾಮಗಳಿರುತ್ತವೆ. ಅಂತಹ ಕುಲನಾಮಗಳು ನಮ್ಮ ಚಿತ್ಪಾವನರಲ್ಲಿ 100ಕ್ಕೂ ಹೆಚ್ಚಿವೆ.
ಕೆಲವರ ಪ್ರಕಾರ ಅವರು ವಾಸವಗಿದ್ದ ಊರುಗಳ , ವಾಳ್ಯಗಳ ಮೂಲಕ ಈ ಕುಲನಾಮಗಳು ಬಂದಿವೆ.
ಉದಾಹರಣೆಗೆ, ಗಣಫುಲೆ, ಚಿತಳೆ, ನಾತು, ಚಿಪಳೂಣಕರ್, ಮೆಹೆಂದಳೆ, ಪಟವರ್ಧನ್, ಗೋರೆ, ಸಾಠೆ ಹೀಗೆ.
ಮಾಹಿತಿ: ಕರ್ನಾಟಕ ಚಿತ್ಪಾವನ ವೃತ್ತಾಂತ ಪುಸ್ತಕ
Migration of the Chitpavans
When it comes to Chitpavans, the first thing that comes to mind is their migration, which is a major milestone in many places in Karnataka, or in other words, the migration of the Chitpavan organization spread across Karnataka.
Chitpavanas are mainly a community that has come from Maharashtra to Karnataka. There is evidence of this in the Talagunda inscription as well.The Chitpavans lived in areas such as Guhagar, Chiplun, Ratnagiri in Maharashtra
Renowned researcher Na. Go. Chaphekar has opined that the ancient name of Chitpavana is Aryavarta.
This migration of the Chitpavans has a history of more than 500 years.
The main reasons for the migration of Chitpavans from Maharashtra to Karnataka are:
- Religious attacks
- Job search
- Those who came as courtiers of the Maratha kings
- For life support
Thus, Chitpavan migrated from Maharashtra and settled in Coastal, mountainous, and plains of Karnataka.
Later, many internal migrations took place in Karnataka as well. The reasons for them are as follows:
- Profession, industry, business
- Marital relations
- Opportunities for professional careers in cooking and the priesthood
- IT, BT, Industrial Revolution
- Migration of the elderly
The lion’s share of those who migrated to the provinces or coastal areas of Dakshina Kannada are from North Konkan. North Konkan refers to the coastal areas of Goa and Maharashtra. Many of the migrants from there are Chitpavans.
According to one hypothesis, the Chitpavana race came from Persia or Berbera to the coast around Gujarat and settled. The sub-tribes among them were Nagas, Turks, and Udicya Brahmins. From there, a group sailed to the Guhagars and Chipaluns of Konkan or Maharashtra and settled there. The Chipluns believed that they were Chitpavanas and became Aryavartas.
A Chitpavani language was formed for the Chitpavans by adopting a Prakrit language from Maharashtra.
The answer to when and why this Chitpavana tribe may have come from North Konkan to South Kannada around the 14th century may be as follows: conversion by the Portuguese, persecution by Muslim rulers, natural disasters, etc.
Chitpavanas are mainly found in Dakshina Kannada.Mundaje, Shishila, Hatyadka, Shibaje, Sulabettu, Bangadi, Nidle, Fandije, Alamba, Kudyadi in Belthangady taluk,Hosa matha in Kadaba, Puttur taluk etc.
Similarly, they are also settled in Mala, Kerwashe, Durga, Thellar, Eedu, Hebri, Gangenir in Karkala taluk of Udupi district, Haladi, Kundapur taluk
Thus, the areas where the Chitpavans settled are called Valya or Vatharas.
Some argue that the Chitpavans are of Indo-Iranian origin, or of Palestinian, Egyptian, or Afghan origin. Their wheatish complexion, reddish hair, and gray eyes, along with recent DNA testing, are also pointing the way to this argument.
Another special feature of our Chitpavans is their clan names. Each clan has its own clan name. There are more than 100 such clan names in our Chitpavans.
According to some, these clan names came from the towns and villages where they lived.
For example, Ganaphule, Chitale, Natu, Chiplunkar, Mehendale, Patavardhan, Gore, Sathe, and so on.
Information: Karnataka Chitpavana Vruttanta Book















