ದಿನಾಂಕ 08/03/2026, ಭಾನುವಾರ ದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರಿನ ಉತ್ತರ ಕನ್ಡಡ ಜಿಲ್ಲಾ ಸಾಂಸ್ಕೃತಿಕ ಸಂಘ ಹಾಗೂ ಕರಾಡ ಬ್ರಾಹ್ಮಣ ಸಭಾ, ಜಂಟಿಯಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉತ್ತರ ಜಿಲ್ಲಾ ಸಾಂಸ್ಕೃತಿಕ ಸಂಘದ ಭವ್ಯವಾದ ಪ್ರಾಂಗಣ ದಲ್ಲಿ ಏರ್ಪಡಿಸಲಾಗಿತ್ತು.
ಮಧ್ಯಾಹ್ನ 3-30 ಕ್ಕೆ ಮೖಸೂರಿನ ಶ್ರೀ ಶಾರದ ವಿಶ್ವ ಭಾವೖಕ್ಯ ಆಶ್ರಮದ ( ರಾಮಕೃಷ್ಣ ಆಶ್ರಮದ ಮಹಿಳಾ ವಿಭಾಗ ) ಅಧ್ಯಕ್ಷರಾದ ಮಾತಾಜಿ ಅಮೋಘಮಯಿ ಯವರು ಉದ್ಘಾಟಸಿ ಸಮಯೋಚಿತ ಹಿತ ನುಡಿಗಳಲ್ಲಿ ಮಾತೃತ್ವ ದ ಪವಿತ್ರ ಕರ್ತವ್ಯವನ್ನು ನಿಭಾಯಿಸುವ ಮಹಿಳೆಯರನ್ನು ಗೌರವಿಸಿದರೆ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದರು. ವೇದಿಕೆಯಲ್ಲಿದ್ದ ಚಿ. ಬ್ರಾ. ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಚಿಪಳೂಣಕರ್, ಉತ್ತರ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶ್ರೀ ರಾಮಚಂದ್ರ ಭಟ್ ಹಾಗೂ ಕರಾಡ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಕೃಷ್ಣಮೋಹನ್ ರವರು ತಮ್ಮ ಸಂಘಗಳ ಮಾಹಿತಿ ಹಾಗೂ ಚಟುವಟಿಗೆ ಗಳ ಬಗ್ಗೆ ತಿಳಿಸಿದರು.
ಆನಂತರ ಪ್ರಾರಂಭವಾದ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಕರಾಡ ಬ್ರಾಹ್ಮಣ ಸಭಾದ ಕುಮಾರಿಯರಾದ ಕೀರ್ತನಾ, ಶರಣ್ಯಾ, ಅಕ್ಷತಾ ರವರಿಂದ ಶಾಸ್ತ್ರೀಯ ಸಂಗೀತ, ಕುಮಾರಿ ಪೃಷಾ ಮತ್ತು ತನಿಷಾ ಸುಬ್ರಮಣ್ಯ ಸಹೋದರಿಗಳ ಭರತನಾಟ್ಯ, ಖ್ಯಾತ ಚಿತ್ಪಾವನ ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಸಂಜನಾ ಗೋಗಟೆ ಯವರ ಭರತ ನಾಟ್ಯ ಕೊನೆಯಲ್ಲಿ ಬೆಂಗಳೂರಿನ ಚಿತ್ಪಾವನ ಮಹಿಳಾ ಯಕ್ಷಗಾನ ತಂಡದವರಿಂದ “ದಕ್ಷಯಜ್ನ” ಪ್ರಸಂಗದ ಯಕ್ಷಗಾನ ಎಲ್ಲ ಪ್ರೇಕ್ಷಕರ ಮನಸೂರೆ ಗೊಂಡಿತು.
ವಿಶೇಷ ವಾಗಿ, ಹಾಗೂ ಪ್ರಪ್ರಥಮವಾಗಿ ಬೆಂಗಳೂರಿನ ಮಹಿಳಾ ಯಕ್ಷಗಾನ ತಂಡದ ಜೊತೆಗೆ ಹಿಮ್ಮೇಳದಲ್ಲಿ ಖ್ಯಾತ ಚಿತ್ಪಾವನ ಮಹಿಳೆ, ಇಂಪಾದ ಕಂಠ ಸಿರಿಯ ಭಾಗವತರಾದ ಶ್ರೀಮತಿ ಶಾಲಿನಿ ಹೆಬ್ಬಾರ್ ಜೊತೆಗೆ ಮದ್ದಳೆ, ಚಂಡೆ ಮತ್ತು ಚಕ್ರತಾಳ ಮಂಗಳೂರಿನಿಂದ ಆಗಮಿಸಿದ ಮೂವರು ಮಹಿಳೆಯರು ಸಹಕಾರ ನೀಡಿದರು. ( ವಿವರ 👆 ಪೋಷ್ಟರ್ ನಲ್ಲಿದೆ )
ಹಾಗಾಗಿ ಪೂರ್ತಿ ಯಕ್ಷಗಾನ ಮಹಿಳೆಯರೇ ಪ್ರಸ್ತುತ ಪಡಿಸಿದ್ದು ಆಕರ್ಷಕವಾಗಿ ಜನ ಮನ್ನಣೆ / ಮೆಚ್ಚುಗೆ ಗಳಿಸಿತು.
ಎಲ್ಲ ಮುಮ್ಮೇಳದ ಕಲಾವಿದರ ಅಭಿನಯವೂ ಮನೋಜ್ನವಾಗಿತ್ತು.
ಸುಮಾರು 400 ಕ್ಕೂಹೆಚ್ಚಿನ ಸಂಖ್ಯೆಯಲ್ಲಿ ಮೂರೂ ಸಂಘಗಳ ಸದಸ್ಯರು, ಕುಟುಂಬ ವರ್ಗದವರು, ಮೖಸೂರಿನ ಗಣ್ಯರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಪ್ರೇಕ್ಷಕರೂ ಸೇರಿ ಎಲ್ಲರಿಗೂ ಮಧ್ಯಾಹ್ನ ಲಘು ಉಪಹಾರ ಮತ್ತು ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ನಮ್ಭ ಮೖಸೂರಿನ ಚಿತ್ಪಾವನ ಬ್ರಾಹ್ಮಣ ಸಂಘದ ಮುಂದಾಳತ್ವ ದಲ್ಲಿ ಜರುಗಿದ ಈ ಆಯೋಜನೆ ಯಲ್ಲಿ ಮೂರೂ ಸಂಘಗಳ ಕಾರ್ಯಕಾರೀ ಸಮಿತಿಯ ಸದಸ್ಯರು ಕಾರ್ಯಕ್ರಮದ ಏರ್ಪಡಿಸುವಲ್ಲಿ ಉತ್ತಮ ಸಹಕಾರ ನೀಡಿದರು.
ಕಾರ್ಯಕ್ರಮ ದ ಎರಡು ದಿನ ಮೊದಲು ಜಂಟೀ ಪತ್ರಿಕಾ ಗೋಷ್ಠಿ ನಡೆಸಿ ಪ್ರಚಾರ ಮಾಡಲಾಗಿತ್ತು. ಹಾಗೂ ಮೖಸೂರಿನ ಇತರ ಸಂಘ, ಸಂಸ್ಥೆ ಯವರನ್ನು, ಗಣ್ಯರನ್ನು ಆಹ್ವಾನಿಸಲಾಗಿತ್ತು.
















