Friday , 25 September 2026

ವಾಸುದೇವ ಬಲವಂತ ಫಡ್ಕೆ

ವಾಸುದೇವ ಬಲವಂತ ಫಡ್ಕೆ

೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩
ಒಬ್ಬ ಸ್ವಾತಂತ್ರ್ಯ ಹೋರಾಟಗಾರರು

ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಪನ್ವೇಲ್ ತಾಲೂಕಿನ ಶಿರ್ಧಾನ್ ಗ್ರಾಮದಲ್ಲಿ 1845 ನವಂಬರ್ 4 ರಂದು ಜನಿಸಿದರು. ಬಾಲ್ಯದಲ್ಲಿ ಅವರು ಪ್ರೌಢಶಾಲಾ ಶಿಕ್ಷಣಕ್ಕಿಂತ ಕುದುರೆ ಸವಾರಿ, ಕುಸ್ತಿ ಮುಂತಾದ ಕಲಿಕಾ ಕೌಶಲಗಳಿಗೆ ಆದ್ಯತೆ ಕೊಟ್ಟು ಶಾಲೆಯನ್ನು ಬಿಟ್ಟರು. ಕೊನೆಗೆ ಪುಣೆಗೆ ತೆರಳಿದರು ಮತ್ತು 15 ವರ್ಷಗಳ ಕಾಲ ಪುಣೆಯಲ್ಲಿ ಮಿಲಿಟರಿ ಖಾತೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ನಡೆಸಿದರು. ಕ್ರಾಂತಿವೀರ ಲಹುಜಿ ವಸ್ತದ್ ಸಾಳ್ವೆ, ಆಗಿನ ಕಾಲದ ಪುಣೆ ಮೂಲದ ಪ್ರಮುಖ ಸಾಮಾಜಿಕ ವ್ಯಕ್ತಿಯಾಗಿದ್ದವರು, ಫಡ್ಕೆಯವರ ಗುರುಗಳು. ಸಾಳ್ವೆ, ಪರಿಣಿತ ಕುಸ್ತಿಪಟು, ಒಂದು ಕುಸ್ತಿ ತರಬೇತಿ ಕೇಂದ್ರ ನಿರ್ವಹಿಸುತ್ತಿದ್ದರು. ಸಾಳ್ವೆ ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಫಡ್ಕೆಯವರಿಗೆ ವಿವರಿಸಿದರು. ಮಾಂಗ್ ಒಂದು ಅಸ್ಪೃಶ್ಯ ಸಮುದಾಯದವರಾಗಿದ್ದ ಸಾಳ್ವೆಯವರು,ಫಡ್ಕೆಯವರಿಗೆ ಹಿಂದುಳಿದ ವರ್ಗಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವಿಕೆಯ ಮಹತ್ವವನ್ನು ತಿಳಿಸಿದರು. ಈ ಅವಧಿಯಲ್ಲಿ ಫಡ್ಕೆಯವರು ಮಹಾದೇವ ಗೋವಿಂದ ರಾನಡೆಯವರ ಉಪನ್ಯಾಸಕ್ಕೆ ಹೋಗಲು ಪ್ರಾರಂಭಿಸಿದರು. ಈ ಉಪನ್ಯಾಸಗಳು ಮುಖ್ಯವಾಗಿ ಬ್ರಿಟಿಷರ ನೀತಿಗಳು ಭಾರತೀಯ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುವುದರ ಕುರಿತಾಗಿತ್ತು. ಈ ನೀತಿ ಯಾವರೀತಿ ಈ ಸಮಾಜದಲ್ಲಿ ವ್ಯಾಪಕ ನೋವು ಹಾಗೂ ಹಾನಿಗೆ ಕಾರಣವಾಗುತ್ತಿದೆ ಎಂದು ಕಂಡುಕೊಂಡ ಫಡ್ಕೆಯವರು ಬಹಳವಾಗಿ ನೊಂದುಕೊಂಡರು. ೧೮೭೦ರಲ್ಲಿ ಅವರು ಪುಣೆಯಲ್ಲಿ ಜನರ ಕುಂದುಕೊರತೆಗಳ ನಿವಾರಣೆಗಳಿಗಾಗಿ ಇರುವ ಸಾಮಾಜಿಕ ಆಂದೋಲನವೊಂದಕ್ಕೆ ಸೇರಿಕೊಂಡರು. ಫಡ್ಕೆಯವರು ಐಕ್ಯ ವರ್ಧಿನಿ ಸಭಾ ಎಂಬ ಸಂಸ್ಠೆಯೊಂದನ್ನು, ಯುವಕರಿಗೆ ಶಿಕ್ಷಣ ಕೊಡುವ ಸಲುವಾಗಿ ಪ್ರಾರಂಭಿಸಿದರು. ಇವರು ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾಗ, ರಜೆ ಅನುಮೋದನೆ ವಿಳಂಬದ ಕಾರಣದಿಂದ ತನ್ನ ಸಾಯುತ್ತಿರುವ ತಾಯಿಯವರನ್ನು ನೋಡಲು ಸಾಧ್ಯವಾಗಲಿಲ್ಲ. ಈ ಘಟನೆ ಫಡ್ಕೆಯವರನ್ನು ಕೆರಳಿಸಿತು ಮತ್ತು ಅವರ ಜೀವನ ಪ್ರಮುಖ ತಿರುವು ಪಡೆಯಲು ಕಾರಣವಾಯಿತು.
೧೮೭೫ರಲ್ಲಿ, ಆಗಿನ ಬರೋಡಾದ ಗಾಯಕ್ವಾಡ್ ರಾಜನನ್ನು ಬ್ರಿಟೀಷರು ಪದಚ್ಯುತಗೊಳಿಸಿದ ನಂತರ, ಫಡ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆ ಭಾಷಣಗಳನ್ನು ಬಿಡುಗಡೆ ಮಾಡಿದರು. ಭೀಕರ ಬರಗಾಲ ಹಾಗೂ ಬ್ರಿಟಿಷ್ ಆಡಳಿತದ ಸ್ಪಷ್ಟವಾದ ನಿರಾಸಕ್ತಿ ಇವರನ್ನು ಒಂದು ಸ್ವತಂತ್ರ ಗಣರಾಜ್ಯಕ್ಕಾಗಿ ಶ್ರಮಿಸಬೇಕೆಂದು ಪ್ರೇರೇಪಿಸಿತು. ಇದಕ್ಕಾಗಿ ಅವರು ಡೆಕ್ಕನ್ ಪ್ರದೇಶದ ಪ್ರವಾಸ ಕೈಗೊಂಡರು. ಸುಶಿಕ್ಷಿತರ ಬೆಂಬಲವನ್ನು ಪಡೆಯಲು ಸಾಧ್ಯವಾಗದೇ, ರಮೋಶಿ ಜಾತಿ ಜನರ ಗುಂಪನ್ನು ಕಟ್ಟಿದರು. ಕೋಲಿಸ್, ಭಿಲ್ ಯೋಧರು ಮತ್ತು ಧಾಂಗರ್ ಜನರನ್ನು ಈ ಗುಂಪಿಗೆ ನಂತರ ಸೇರಿಸಲಾಯಿತು. ಅವರು, ಸವಾರಿ, ಕತ್ತಿವರಸೆ ಮತ್ತು ಶೂಟಿಂಗ್ ಗಳನ್ನು ತಾವೇ ಸ್ವತಃ ಕಲಿತುಕೊಂಡಿದ್ದರು. ಅವರು ಬ್ರಿಟಿಶ್ ಆಡಳಿತದಿಂದ ಭಾರತದ ವಿಮೋಚನೆಯನ್ನು ಗುರಿಯಾಗಿಟ್ಟುಕೊಂಡು, ೩೦೦ ಪುರುಷರ ಬಂಡಾಯಗಾರರ ಗುಂಪನ್ನು ಆಯೋಜಿಸಿದರು. ಫಡ್ಕೆಯವರಿಗೆ ತಮ್ಮದೇ ಆದ ಸೈನ್ಯವೊಂದನ್ನು ಕಟ್ಟುವ ಯೊಜನೆಯಿತ್ತು. ಆದರೆ ಹಣದ ಕೊರತೆಯಿಂದಾಗಿ ಸರ್ಕಾರಿ ಖಜಾನೆಗಳನ್ನು ಲೂಟಿ ಮಾಡುವ ಕಾರ್ಯ ಪ್ರಾರಂಭಿಸಿದರು ಹಾಗೂ ಹೀಗೆ ಸಂಗ್ರಹವಾದ ಹಣವನ್ನು ಬರ ಪೀಡಿತ ಹಳ್ಳಿಗಳ ಸಹಾಯಕ್ಕಾಗಿ ವಿನಿಯೋಗಿಸುತ್ತಿದ್ದರು. ಅವರ ಈ ಕಾರ್ಯ ಅವರಿಗೆ ಡಕಾಯಿತ ಎಂಬ ಹಣೆಪಟ್ಟಿ ಬರಲು ಕಾರಣವಾಯಿತು ಹಾಗೂ ತಲೆಮರೆಸಿಕೊಂಡು ಹಳ್ಳಿ ಹಳ್ಳಿ ತಿರುಗುವಂತಾಯಿತು. ಅದಾಗ್ಯೂ ಇವರಿಗೆ ಸವಾಜದ ಕೆಳವರ್ಗದ ಜನರ ಸಹಕಾರ ಹಾಗೂ ಆಶ್ರಯ ದೊರಕಿತು.

ಏತನ್ಮಧ್ಯೆ. ಫಡ್ಕೆಯವರ ಮುಖ್ಯ ಬೆಂಬಲಿಗರಾಗಿದ್ದ ರಾಮೋಶಿ ನಾಯಕ, ದೌಲತ್ರಾವ್ ನಾಯಕ್, ಕೊಂಕಣ ಪ್ರದೇಶಕ್ಕೆ ತೆರಳಿದರು. ಅಲ್ಲಿ ಅವರು ಪಲಾಪ್ಸೆ ಮತ್ತು ಚಿಕಲಿಯಲ್ಲಿ ಧಾಳಿ ಮಾಡಿ ಸುಮಾರು ೧.೫ ಲಕ್ಷ ರೂ ಗಳನ್ನು ಲೂಟಿ ಮಾಡಿದರು. ಆದರೆ ಘಾಟ್ ಮಾತಾ ಕಡೆಗೆ ಹಿಂದಿರುಗುತ್ತಿರುವಾಗ, ಮೇಜರ್ ಡೇನಿಯಲ್ ನಾಯಕ್ ರನ್ನು ಗುಂಡಿಕ್ಕಿ ಕೊಂದನು. ಈ ಘಟನೆ ಫಡ್ಕೆ ಯವರ ಹೋರಾಟವನ್ನು ಹಿಮ್ಮೆಟ್ಟಿಸಿತು. ಬೆಂಬಲ ನಷ್ಟದಿಂದಾಗಿ ಫಡ್ಕೆಯವರು ದಕ್ಷಿಣದ ಶ್ರೀ ಶೈಲ ಮಲ್ಲಿಕಾರ್ಜುನ ಕ್ಷೇತ್ರದ ಕಡೆಗೆ ಹೋಗುವಂತಾಯಿತು. ನಂತರ, ಫಡ್ಕೆ ಒಂದು ತಾಜಾ ಹೋರಾಟವನ್ನು ಪ್ರಾರಂಭಿಸುವುದಕ್ಕಾಗಿ ೫೦೦ ರೋಹಿಲ್ ಜನರನ್ನು ನಿಯವಿಸಿದರು.
ಫಡ್ಕೆಯವರ ಬ್ರಿಟೀಷರ ವಿರುದ್ದ್ರ ಏಕಕಾಲದಲ್ಲಿ ಹಲವಾರು ರಾಷ್ಟ್ರವ್ಯಾಪಿ ಧಾಳಿಗಳನ್ನು ಮಾಡುವ ಯೋಜನೆ ಬಹಳ ಸೀಮಿತ ಯಶಸ್ಸು ಕಂಡಿತು. ಸರ್ಕಾರವೂ ಇವರನ್ನು ಹಿಡಿದು ಕೊಡುವವರಿಗೆ ಬಹುಮಾನ ಕೊಡುವುದಾಗಿಯೂ ಘೊಷಿಸಿತು. ಇದಕ್ಕೆ ಪ್ರತಿಯಾಗಿ ಫಡ್ಕೆಯವರು ಬಾಂಬೆ ಗವರ್ನರ್ ರನ್ನು ಹಿಡಿದು ತಂದರೆ ತಾವೂ ಬಹುವಾನ ಕೊಡುವುದಾಗಿ ಘೊಷಿಸಿದರು. ಇದಲ್ಲದೇ ಪ್ರತಿ ಯೂರೋಪಿಯನ್ನರನ್ನು ಕೊಂದರೂ, ಬಹುವಾನ ಕೊಡುವುದಾಗಿ ಘೊಷಿಸಿದರು ಇದಲ್ಲದೇ ಸರ್ಕಾರಕ್ಕೆ ಇತರ ಬೆದರಿಕೆಗಳನ್ನು ಹೊರಡಿಸಿದರು. ಅವರು ನಂತರ ತಮ್ಮ ಸಂಘಟನೆಗೆ ರೋಹಿಲ್ಲ ಮತ್ತು ಅರಬ್ಬರನ್ನು ಸೇರಿಸಿಕೊಳ್ಳಲು ಹೈದರಾಬಾದ್ ರಾಜ್ಯಕ್ಕೆ ಪಲಾಯನ ಮಾಡಿದರು. ಬಹುಮಾನದ ಅಸೆಗಾಗಿ ಯಾರೋ ದ್ರೋಹ ಬಗೆದಿದ್ದರಿಂದ ಪಡ್ಕೆಯವರು ಪಂಢರಪುರಕ್ಕೆ ಹೊರಟಿರುವಾಗ ಸೆರೆ ಸಿಗುವಂತಾಯಿತು. ಇಲ್ಲಿಂದ ಅವರನ್ನು ಪುಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಯಿತು. ಗಣೇಶ್ ವಾಸುದೇವ ಜೋಶಿ ಇವರ ಪರವಾದ ವಕೀಲರಾಗಿದ್ದರು. ಫಡ್ಕೆಯವರು ಹಾಗೂ ಇವರ ಸೆರೆಸಿಕ್ಕ ಸಹಚರರನ್ನು ಜಿಲ್ಲಾ ಅಧಿವೇಶನ ನ್ಯಾಯಾಲಯದ ಜೈಲು ಕಟ್ಟಡದಲ್ಲಿ ಬಂಧಿಸಿಡಲಾಗಿತ್ತು. ಫಡ್ಕೆ ಯವರ ಡೈರಿಯಲ್ಲಿ ಅವರೇ ತಮಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತೆಂದು ಉಲ್ಲೇಖಿಸಿದ್ದಾರೆ. ಫಡ್ಕೆಯವರನ್ನು ಅಡೆನ್ ನ ಜೈಲಿಗೆ ಸಾಗಿಸಲಾಯಿತು. ಆದರೆ ಜೈಲಿನಿಂದ ಇವರು ತಪ್ಪಿಸಿಕೊಂಡರೂ, ಅಲ್ಪಕಾಲದಲ್ಲೇ ಪುನಹ ಸೆರೆಸಿಕ್ಕಿದರು. ಇವರನ್ನು ಪುನಹ ಜೈಲಿಗೆ ಹಾಕಲಾಯಿತು. ನಂತರ ಇವರು ಪ್ರತಿಭಟನೆ ಉಪವಾಸ ಪ್ರಾರಂಭಿಸಿದ್ದರ ಪರಿಣಾಮವಾಗಿ 17 ಫೆಬ್ರವರಿ 1883 ರಂದು ತಮ್ಮ ಕೊನೆಯ ಉಸಿರನ್ನೆಳೆದರು.

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 22 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 79 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 63 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 109 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 93 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 66 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 80 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 97 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 570 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 297 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 453 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 320 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 471 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 303 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 288 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 310 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 227 Courtesy: Scholarspace with Anubhav

Watch our latest podcasts