Friday , 25 September 2026

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

ಆಯುರ್ವೇದ ವೈದ್ಯ
ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ
ಶಿರಸಿ – 581401

ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ ಪರಿಣಾಮದಿಂದ ಕಾಲಗಳಲ್ಲಿ ಅನಿಯಮಿತತೆ ಕಂಡುಬರುತ್ತಿದೆ. ಇದಕ್ಕೆ ಮಾನವ ಚಟುವಟಿಕೆಗಳು ಪ್ರಮುಖ ಕಾರಣ. ಈ ವರ್ಷ ಮಳೆಗಾಲ ವಿಸ್ತರಿಸಿದಂತೆ ವಾತಾವರಣ ಬದಲಾವಣೆಗಳು ಮುಂದುವರಿಯುತ್ತಿವೆ. ಪರಿಸರ ನಾಶವನ್ನು ತಡೆಯಲು ಸಾಮೂಹಿಕ ಪ್ರಯತ್ನ ಈಗಲೇ ಪ್ರಾರಂಭವಾಗಬೇಕು.

ಪ್ರಸ್ತುತ ಚಳಿ ಸ್ವಲ್ಪ ಮಟ್ಟಿಗೆ ಬಿದ್ದಿದ್ದರೂ, ಮುಂದಿನ ದಿನಗಳಲ್ಲಿ ಉತ್ತಮ ಚಳಿಗಾಲ ಬರುವ ನಿರೀಕ್ಷೆಯಿದೆ. ಈ ಋತುವಿನಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ. ಸರ್ಕಾರದ ಮಾಹಿತಿ ಅನುಮಾನದಂತೆ ಈ ವರ್ಷ ಸ್ವಲ್ಪ ಚಳಿಯ ಪ್ರಮಾಣ ಹೆಚ್ಚಾಗಬಹುದು ಎಂಬ ಅನುಮಾನ ಈಗಾಗಲೇ ಇದ್ದೇ ಇದೆ.

❀ ಚಳಿಗಾಲದ ಸಾಮಾನ್ಯ ಸಮಸ್ಯೆಗಳು
1. ಚರ್ಮದ ಸಮಸ್ಯೆಗಳು
ಚರ್ಮವು ತೇವಾಂಶ ಕಳೆದುಕೊಂಡು ಒಣಗುವುದು.ಕೈ-ಕಾಲುಗಳು ಒಡೆಯುವುದು ಮತ್ತು ನೋವು.
ತುಟಿಗಳು ಒಡೆಯುವುದು.
2. ಇತರ ತೊಂದರೆಗಳು
ಕೀಲು ನೋವು ಹೆಚ್ಚಾಗುವುದು.ಹಸಿವು ಹೆಚ್ಚಾಗುವುದು.ಕೂದಲು ಒರಟಾಗುವುದು.ನೆಗಡಿ, ಶೀತ, ಕೆಮ್ಮು.
✺ ಆಹಾರ ಮತ್ತು ಪೋಷಣೆ ✺
⬥ ಎಳ್ಳು-ಬೆಲ್ಲ ಸೇವನೆ
ಏಕೆ ಮುಖ್ಯ?
ಸಂಕ್ರಾಂತಿ ಸಮಯದಲ್ಲಿ ಎಳ್ಳು-ಬೆಲ್ಲ ಹಂಚುವ ಸಂಪ್ರದಾಯವು ಕಾಲಕ್ಕೆ ತಕ್ಕ ಆಯುರ್ವೇದದ ಆರೋಗ್ಯ ಪದ್ಧತಿಯ ಭಾಗ.
ಹೇಗೆ ಸೇವಿಸಬೇಕು?
ಪ್ರತಿದಿನ ಸ್ವಲ್ಪ ಪ್ರಮಾಣದ ಎಳ್ಳು-ಬೆಲ್ಲ ಅಥವಾ ಎಳ್ಳು-ಸಕ್ಕರೆ ಸೇವನೆ.ಮಧುಮೇಹ ರೋಗಿಗಳು ಕೇವಲ ಎಳ್ಳು ಮಾತ್ರ ಸೇವಿಸಬೇಕು

ಪ್ರಯೋಜನಗಳು:
ಚರ್ಮದ ತೇವಾಂಶ ಕಾಪಾಡುತ್ತದೆ.ದೇಹಕ್ಕೆ ಶಾಖ ನೀಡುತ್ತದೆ.
ಚಳಿಗಾಲದ ಅನೇಕ ತೊಂದರೆಗಳಿಗೆ ಪರಿಹಾರ‌
⬥ ಚಳಿಗಾಲಕ್ಕೆ ಸೂಕ್ತ ಆಹಾರಗಳು
ಹಾಲು, ತುಪ್ಪ
ಮೆಂತ್ಯೆ, ಶುಂಠಿ, ಮೆಣಸಿನಕಾಯಿ,ಗೋಧಿ, ಜೋಳ, ನವಣೆ,ಬಿಸಿ ಸೂಪುಗಳು, ಲಘು ಆಹಾರ,ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಹಣ್ಣುಗಳು (ಡ್ರೈ ಫ್ರೂಟ್ಸ್)
⬥ ನೀರಿನ ಸೇವನೆ
ಪ್ರಮುಖ ಸೂಚನೆ: ಚಳಿಗಾಲದಲ್ಲಿ ನೀರು ಕುಡಿಯುವ ಇಚ್ಛೆ ಕಡಿಮೆಯಾದರೂ, ರೂಢಿಯಷ್ಟು ನೀರು ಕುಡಿಯುವುದು ಅತ್ಯಗತ್ಯ.

ಏಕೆ?
ವಾತಾವರಣದಿಂದ ದೇಹದ ತೇವಾಂಶ ಕಡಿಮೆಯಾಗುತ್ತದೆ.ತೀಕ್ಷ್ಣ, ಉಷ್ಣ ಆಹಾರ ಸೇವನೆ ಹೆಚ್ಚಾಗುತ್ತದೆ.ನೀರು ಕಡಿಮೆಯಾದರೆ ರಕ್ತಸಂಚಾರ ಮತ್ತು ಪೋಷಕಾಂಶ ಶೋಷಣೆ ಕುಸಿಯುತ್ತದೆ

❉ ಚರ್ಮ ರಕ್ಷಣೆ ❉
⬥ ಎಣ್ಣೆ ಅಭ್ಯಂಗ (ತೈಲ ಮಾಲಿಶ್)
ವಿಧಾನ:
1. ಸಂಪೂರ್ಣ ದೇಹಕ್ಕೆ ಎಣ್ಣೆ ಹಚ್ಚಿ
2. ಬಿಸಿ ನೀರಿನಿಂದ ಸ್ನಾನ ಮಾಡಿ
ಯಾವ ಎಣ್ಣೆ ಬಳಸಬೇಕು?
ಉತ್ತಮ ಎಣ್ಣೆ: ಎಳ್ಳೆಣ್ಣೆ (ಆಹಾರ ದರ್ಜೆಯದು)

ಇತ್ತೀಚಿನ ದಿನಗಳಲ್ಲಿ ಎಣ್ಣೆ ತುಪ್ಪಗಳ ಬಗ್ಗೆ
ಅತ್ಯಂತ ಕಡಿಮೆ ದರದ ಉತ್ಪನ್ನ ನಮ್ಮದು ಎನ್ನುವುದು ಹಲವು ಸೂಪರ್ ಮಾರ್ಕೆಟ್ಗಳ ಮಾರಾಟದ ಧೋರಣೆಯಾಗಿದೆ. ಆಕಾರಣಕ್ಕೆ ಸರಿಯಾಗಿ ಗಮನಿಸಿ ಖರೀದಿಸಿ.

ಬಾಟಲಿ ಮೇಲೆ “ಆಹಾರ ದರ್ಜೆ” ಎಂದು ಬರೆದಿರುವುದನ್ನು ಪರೀಕ್ಷಿಸಿ.“ಹೊರಗಿನ ಉಪಯೋಗಕ್ಕೆ ಮಾತ್ರ” ಎಂದಿರುವ ಎಣ್ಣೆ ಬಳಸಬೇಡಿ.

⬥ ಸಾಬೂನು ಆಯ್ಕೆ
ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಗಳ ಆಫರ್ಗಳಿಗೆ ಮರುಳಾಗದೆ, ಈ ಮುಂದಿನ ಅಂಶಗಳನ್ನು ಗಮನಿಸಿ ಖರೀದಿಸಿ :
ಗ್ರೇಡ್ 1 (ಪ್ರಥಮ ದರ್ಜೆ) ಸಾಬೂನು
TFM 76% ಅಥವಾ ಅದಕ್ಕಿಂತ ಹೆಚ್ಚು

TFM ಎಂದರೇನು?
TFM (Total Fatty Matter) ಅಂದರೆ ಸಾಬೂನಿನಲ್ಲಿರುವ ಸ್ನಿಗ್ಧತ್ವದ ಪ್ರಮಾಣ — ಹೆಚ್ಚು ಇದ್ದರೆ ಗುಣಮಟ್ಟ ಉತ್ತಮ.

ಸೂಚನೆ:
ಟಿವಿ ಜಾಹೀರಾತುಗಳಿಗೆ ಮಾತ್ರ ಅವಲಂಬಿಸಬೇಡಿ.ಆಯುರ್ವೇದ ಸಾಬೂನುಗಳಲ್ಲಿಯೂ ಈ ಮಾಹಿತಿಯನ್ನು ಪರೀಕ್ಷಿಸಿ.

⬥ ಚರ್ಮಕ್ಕೆ ಲೇಪ (ಮಾಯ್ಸ್ಚರೈಸರ್)
🪔 ಪೇಟೆಯ ಉತ್ಪನ್ನಗಳು
ಪೆಟ್ರೋಲಿಯಂ ಜೆಲ್ಲಿ ಆಧಾರಿತ ಲೇಪಗಳು ಚರ್ಮದ ಮೇಲ್ಭಾಗದಲ್ಲಿ ಪದರವಾಗಿ ಕೆಲಸಮಾಡುತ್ತವೆ.

🌸 ಮನೆಯಲ್ಲಿ ತಯಾರಿಸುವ ನೈಸರ್ಗಿಕ ಲೇಪ

ಪದಾರ್ಥಗಳು:
500 ಗ್ರಾಂ ಎಣ್ಣೆ (ತುಪ್ಪ / ಕೊಬ್ಬರಿ ಎಣ್ಣೆ / ಎಳ್ಳೆಣ್ಣೆ),150 ಗ್ರಾಂ ಶುದ್ಧ ಜೇನುಮೇಣ

ವಿಧಾನ:
1. ಎಣ್ಣೆ ಮತ್ತು ಜೇನುಮೇಣವನ್ನು ಒಟ್ಟಿಗೆ ಬಿಸಿ ಮಾಡಿ
2. ಕರಗಿದ ನಂತರ ಚೆನ್ನಾಗಿ ಬೆರೆಸಿ
3. ತಣ್ಣಗಾದ ಮೇಲೆ ಸಂಗ್ರಹಿಸಿ

ಉಪಯೋಗ:
ಕೈ, ಕಾಲು, ತುಟಿ, ಮುಖಕ್ಕೆ ಬಳಸಬಹುದು,ಕೆಲವೇ ದಿನಗಳ ಅಗತ್ಯಕ್ಕೆ ತಯಾರಿಸಿ.
ವಿಶೇಷತೆ:
ಈ ಲೇಪವು ಪೆಟ್ರೋಲಿಯಂ ಜೆಲ್ಲಿಯಂತೆ ಮೇಲ್ಭಾಗದಲ್ಲೇ ಉಳಿಯದೆ, ಚರ್ಮದೊಳಗೆ ಹೋಗಿ ನಿಜವಾದ ಪೋಷಣೆ ನೀಡುತ್ತದೆ.

❀ ಬಟ್ಟೆ ಮತ್ತು ರಕ್ಷಣೆ ❀

⬥ ಬಟ್ಟೆ ಆಯ್ಕೆ
ಮನೆಯೊಳಗೆ ಬೆಚ್ಚಗಿನ ಬಟ್ಟೆ ಧರಿಸಿ
ಹೊರಗೆ ಹೋಗುವಾಗ ಸಂಪೂರ್ಣ ಮೈ ಮುಚ್ಚುವ ಬಟ್ಟೆ ಕಡ್ಡಾಯ.ಕಿವಿಗೆ ಹತ್ತಿ, ಸ್ಕಾರ್ಫ್ ಅಥವಾ ಕಿವಿ ಮುಚ್ಚುವ ಟೋಪಿ ಉಪಯೋಗಿಸಿ

⬥ ಟೋಪಿ ಆಯ್ಕೆ
ಕೇವಲ ಫ್ಯಾಷನ್‌ಗಾಗಿ ಅಲ್ಲ — ಕಿವಿಯನ್ನು ಸಂಪೂರ್ಣ ಮುಚ್ಚುವ ಟೋಪಿ ಆಯ್ಕೆ ಮಾಡಬೇಕು

⬥ ಪಾದರಕ್ಷೆ
ಚಪ್ಪಲಿಗಿಂತ ಬೂಟು ಉತ್ತಮ.
ಪ್ರತಿದಿನ ಸಾಕ್ಸ್ ತೊಳೆಯಿರಿ.
ದುರ್ವಾಸನೆಯುಳ್ಳ ಸಾಕ್ಸ್ ಬಳಕೆ ಚರ್ಮರೋಗಗಳಿಗೆ ಕಾರಣವಾಗಬಹುದು.

✦ ಹಿರಿಯರು ಮತ್ತು ಮಕ್ಕಳಿಗೆ ವಿಶೇಷ ಜಾಗೃತಿ ✦
ಹಿರಿಯರು ಮತ್ತು ಮಕ್ಕಳು ಚಳಿ ತಾಳುವ ಶಕ್ತಿ ಕಡಿಮೆ ಇರುತ್ತದೆ.ಬೆಚ್ಚಗಿನ ಹಾಸಿಗೆ, ಬಿಸಿ ನೀರಿನ ಚೀಲ ಉಪಯೋಗಿಸಬೇಕು
ರಾತ್ರಿ ತಡವಾಗಿ ಹೊರ ಹೋಗುವುದನ್ನು ತಪ್ಪಿಸಬೇಕು.
ಸೂರ್ಯನ ಬೆಳಕಿನಲ್ಲಿ ದಿನಕ್ಕೆ ಕನಿಷ್ಠ 15 ನಿಮಿಷ ಕುಳಿತುಕೊಳ್ಳುವುದು — ವಿಟಮಿನ್ D ನ ನೈಸರ್ಗಿಕ ಮೂಲ

❉ ವ್ಯಾಯಾಮ ಮತ್ತು ಜೀವನಶೈಲಿ ❉
⬥ ನಿಯಮಿತ ವ್ಯಾಯಾಮಏಕೆ ಮುಖ್ಯ?
ಚಳಿಗಾಲದಲ್ಲಿ ಮಲಗುವ ಆಕರ್ಷಣೆ ಹೆಚ್ಚಾದರೂ, ವ್ಯಾಯಾಮ ತಪ್ಪಬಾರದು.

ಅಭ್ಯಾಸಗಳು:
ಯೋಗಾಸನ, ಪ್ರಾಣಾಯಾಮ, ಸೂರ್ಯನಮಸ್ಕಾರ.ಬೆಳಿಗ್ಗೆ ಎದ್ದು ಬಿಸಿ ನೀರಿನ ಕುಟುಕು ಕುಡಿಯಿರಿ

ಧ್ಯಾನದಿಂದ ಮನಸ್ಸಿಗೆ ಶಾಂತಿ
ಪ್ರಯೋಜನ:
ರಕ್ತಸಂಚಾರ ಸುಧಾರಣೆ, ದೇಹದ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿ.

❀ ಮುಖ್ಯ ಎಚ್ಚರಿಕೆಗಳು ❀
1. ಇತಿಮಿತಿಯಲ್ಲಿ ಬಳಕೆ: ಯಾವುದೇ ವಸ್ತುವಿನ ಅತಿ ಬಳಕೆ ಹಾನಿಕಾರಕ
2. ಋತು ಪ್ರಕಾರ ಬದಲಾವಣೆ: ಚಳಿಗಾಲದ ಪದ್ಧತಿಗಳನ್ನು ಬೇಸಿಗೆಯಲ್ಲಿ ಅನುಸರಿಸಬೇಡಿ
3. ಜಾಗೃತಿ: ಉತ್ಪನ್ನ ಖರೀದಿಸುವಾಗ ಮಾಹಿತಿಯನ್ನು ಓದಿ, ಜಾಹೀರಾತುಗಳಿಗೆ ನಂಬಿಕೆ ಇಡಬೇಡಿ.

ಸಾರಾಂಶ
✓ ಆಹಾರ: ಎಳ್ಳು-ಬೆಲ್ಲ, ಉಷ್ಣ ಆಹಾರ, ಸಾಕಷ್ಟು ನೀರು
✓ ಚರ್ಮ: ಎಳ್ಳೆಣ್ಣೆ ಅಭ್ಯಂಗ, ಉತ್ತಮ ಸಾಬೂನು, ನೈಸರ್ಗಿಕ ಲೇಪ
✓ ಬಟ್ಟೆ: ಸಂಪೂರ್ಣ ಮೈ ಮುಚ್ಚುವ ಬೆಚ್ಚಗಿನ ಬಟ್ಟೆ, ಕಿವಿ ರಕ್ಷಣೆ
✓ ಪಾದರಕ್ಷೆ: ಬೂಟು ಮತ್ತು ಸ್ವಚ್ಛ ಸಾಕ್ಸ್
✓ ವ್ಯಾಯಾಮ: ಯೋಗ, ಸೂರ್ಯನಮಸ್ಕಾರ, ಧ್ಯಾನ
✓ ಸೂರ್ಯನ ಬೆಳಕು: ದಿನಕ್ಕೆ ಕನಿಷ್ಠ 15 ನಿಮಿಷ ವಿಟಮಿನ್ D ಗಾಗಿ
✓ ಎಚ್ಚರಿಕೆ: ಇತಿಮಿತಿಯಲ್ಲಿ ಬಳಕೆ, ಋತು ಪ್ರಕಾರ ಬದಲಾವಣೆ.

—————————-
ಈ ಮಾಹಿತಿಯು ಸಾಮಾನ್ಯ ಮಾರ್ಗದರ್ಶನಕ್ಕಾಗಿ ಮಾತ್ರ. ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸಿ.
—————————–

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 22 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 79 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 63 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 109 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 93 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 66 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 79 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 96 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 570 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 453 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 320 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 470 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 310 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts