ದಿನಾಂಕ 19/04/2026, ಭಾನುವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು ವತಿಯಿಂದ ಮೖಸೂರಿನ ಬಿ. ಎಸ್. ಎಸ್. ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಂಜೆ 5-30 ರಿಂದ 8 ಗಂಟೆ ವರೇಗೆ ಪರಶುರಾಮ ಜಯಂತಿ ಆಚರಿಸಲಾಯಿತು.
ಸುಮಾರು 55 ಜನ ಚಿತ್ಪಾವನ ಬಂಧು, ಭಗಿನಿಯರು, ಚಿಣ್ಣರು ಭಾಗವಹಿಸಿದರು.
ಮೖಸೂರಿನ ಹಿರಿಯ ಬಂಧುಗಳಾದ ರಾಮನಾಥ್ ಭಟ್ ಗೋರೆಯವರು ರಚಿಸಿದ ಪರಶುರಾಮ ಸ್ತುತಿಯನ್ನು ಸಾಮೂಹಿಕವಾಗಿ ಬಂಧು ಭಗಿನಿಯರು ಹಾಡುವುದರೊಂದಿಗೆ ಪ್ರಾರಂಭವಾದ
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪರಶುರಾಮ ಚಿತ್ರ ರಚನೆ ಸ್ಪರ್ಧೆ, ದಶಾವತಾರ ಗಳಲ್ಲೊಂದು ಛದ್ಮವೇಷ ಧರಿಸಿ ಪ್ರದರ್ಶಿಸುವ ಸ್ಪರ್ಧೆ ಹಾಗೂ ಶ್ರೀ ಸುಹಾಸ್ ಕರ್ವೆಯವರಿಂದ ” ಪರಶುರಾಮ ಅವತಾರ ” ಎಂಬ ಹರಿಕಥಾ ಕಾಲಕ್ಷೇಪ ಏರ್ಪಡಿಸಲಾಯಿತು.
Advertisement:

ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ದಿನೇಶ್ ಚಿಪಳೂಣಕರ್, ಕಾರ್ಯದರ್ಶಿ ಕಿರಣ್ ಮರಾಠೆ ಹಾಗೂ ಕಾರ್ಯಕಾರೀ ಸಮಿತಿಯ ಎಲ್ಲ ಸದಸ್ಯರು ಆಯೋಜನೆಯ ನೇತೃತ್ವ ವಹಿಸಿದರು.
ಕುಮಾರಿ ವಿಧಾತ್ರಿ ದೇವಧರ್ ಪ್ರಾರ್ಥನೆ ಗೖದರು.
ಶ್ರೀಮತಿ ಸುಮಾ ದಾಮ್ಲೆ ಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಶ್ರೀ ಡಾ. ಪ್ರಶಾಂತ್ ಗೋಖಲೆಯವರು ವಂದನಾರ್ಪಣೆ ಸಲ್ಲಿಸಿದರು.
















