ದಿನಾಂಕ: ೨೦-೦೭-೨೦೨೫,ರವಿವಾರ
ಸ್ಥಳ: ಶ್ರೀ ದಿನಕರ್ ಮತ್ತು ರಶ್ಮಿ ಮರಾಠೆ ಯವರ ನಿವಾಸ, ನಾಚಣೆ, ರತ್ನಾಗಿರಿ
ರತ್ನಾಗಿರಿಯಲ್ಲಿ “ಕರ್ನಾಟಕದ ಚಿತ್ಪಾವನರ ಸ್ನೇಹಕೂಟ”ವು ಬಹಳ ಚೆನ್ನಾಗಿ ಜರುಗಿತು. ಈ ಸಾಂಸ್ಕೃತಿಕ ಹಾಗೂ ಆತ್ಮೀಯ ಸಮಾವೇಶ ದಿನಕರ್ ಮರಾಠೆ ಅವರ ನಿವಾಸದಲ್ಲಿ, ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ವಿವರ:
ಕಾರ್ಯಕ್ರಮದ ಆರಂಭದಲ್ಲಿ, ಹಾಜರಾದ ಪ್ರತಿಯೊಬ್ಬರೂ ತಮ್ಮ ತಮ್ಮ ಪರಿಚಯವನ್ನು ಹಂಚಿಕೊಂಡರು.
ನಂತರ ಪ್ರತಿಭಾ ಪ್ರದರ್ಶನ, ವಿಶೇಷ ಆಟಗಳು ಹಾಗೂ ಚಿತ್ಪಾವನಿ ಭಾಷೆ – ಪರಂಪರೆ ಬಗ್ಗೆ ವಿಚಾರ ವಿನಿಮಯ ನಡೆಯಿತು. ಮಧ್ಯಾಹ್ನ ಮಧುರವಾದ ಹೋಳಿಗೆ ಭೋಜನದ ನಂತರ ಶ್ರೀ ದಿನೇಶ್ ಮರಾಠೆ
(ಮೂಲ ಸೋಂದಾ) ಮತ್ತು ಅವರ ಪತ್ನಿ ದಿವ್ಯಾ ಮರಾಠೆ (ಮೂಲ ಸಾಗರ) ಇವರನ್ನು ರತ್ನಗಿರಿಯ ಪ್ರಸಿದ್ಧ Cement ಕಂಪನಿಯಿಂದ ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ರತ್ನಗಿರಿಯ ಪ್ರಸಿದ್ಧ ಪುರೋಹಿತರಾದ ಪ್ರಭಾಕರ್ ಜೋಗಳೇಕರ್ ಅವರು ಸನ್ಮಾನಿಸಿ ಗೌರವಿಸಿದರು. ಸ್ಮರಣಾರ್ಥವಾಗಿ ಛಾಯಾಚಿತ್ರವನ್ನು ಕ್ಲಿಕ್ಕಿಸಲಾಯಿತು.
ಅಂತಿಮವಾಗಿ, ಚಹಾ ಪಾನದೊಂದಿಗೆ ಸುಂದರ ಸಂಗೀತ ಕಾರ್ಯಕ್ರಮವೂ ಜರುಗಿತು. ಆತ್ಮೀಯತೆ, ನೆನಪುಗಳ ದೋಣಿಯಲ್ಲಿ ಈ ಸ್ನೇಹ ಕೂಟವು ಸಂತೋಷಭರಿತವಾಗಿ ಮುಕ್ತಾಯವಾಯಿತು.
ಸ್ನೇಹ ಕೂಟದಲ್ಲಿ ಭಾಗವಹಿಸಿದವರು
- ಪ್ರಭಾಕರ್ ಜೋಗಳೇಕರ್ ಮತ್ತು ಪತ್ನಿ ಅನಘಾ ಜೋಗಳೇಕರ ಪುತ್ರಿ ಕಲ್ಪಜಾ ಜೋಗಳೇಕರ್
- ಪುಷ್ಪಾ ಭಾವೆ, ಸೊಸೆ: ಬೃಂದಾ ಭಾವೆ, ಪುತ್ರಿ: ಅವನಿ ಭಾವೆ
- ವೀಣಾ ಸಹಸ್ರಬುದ್ಧೆ ಚಿಪ್ಲುಣ್ ,ಪತಿ ಕಪಿಲ್ ಸಹಸ್ರಬುದ್ಧೇ, ಮಗ ನಿನಾದ್ ಮತ್ತು ಮಗಳು ಸುರಭಿ.
- ಅಮೃತ, ಅಂಕಿತ್ ಕಾಳೆ ಅಬ್ಲೋಲಿ
- ರಶ್ಮಿ ಆನಂದ ಭಿಡೆ (ಆರೆವಾರೆ), ಪತಿ ಆನಂದ್ ಭಿಡೆ
- ಉಮಾ ಉದಯ್ ಗೋರೆ, ಪತಿ ಉದಯ್ ಗೋರೆ
- ದೀಪಾ ದಿನಕರ ಶಿತೂತ್
- ಮಧುರಾ ವೈಶಂಪಾಯನ ಹಾಗೂ ಪುತ್ರ ಶ್ರೇಯಸ್
- ಗೀತಾ ಜೋಶಿ ಹಾಗೂ ಪುತ್ರ ಆದಿತ್ಯ ಜೋಶಿ
- ಮಂಗಳಾ ಫಡ್ಕೆ
- ಸುಖದಾ ಲಿಮಯೇ (ಸೋಮೇಶ್ವರ)
- ವಂದನಾ ಘಾಣೆಕರ್
- ರಾಧಿಕಾ ರಮಣ ಪಾಧ್ಯೆ
- ಭುವನಾ ಶ್ರೀಕಾಂತ್ ಮುಕಾದಮ್
- ಪ್ರತಿಭಾ ಪಿ. ಮುಕಾದಮ್
- ದಿನಕರ ಮತ್ತು ರಶ್ಮಿ ಮರಾಠೆ ಮಕ್ಕಳು ಸಿದ್ಧಾಂತ ಮತ್ತು ಸರ್ವೇಶ.
ಈ ಸ್ನೇಹ ಕೂಟವು ಭಾವನೆ, ಸಂಸ್ಕೃತಿ ಮತ್ತು ಪರಸ್ಪರ ಸ್ನೇಹಕ್ಕೆ ಪ್ರೇರಣೆಯಾಯಿತು ಮತ್ತು ಮುಂದಿನ ದಿನಗಳಲ್ಲಿ ಇಂತಹ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಆಶಯದೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು..

Courtesy: 14 amhi chitpavana whats app group















