Post Views: 127
ಮುಂಡಾಜೆ ಭಿಡೆ ಮನೆಯ, ಪ್ರಸ್ತುತ ಅಮೆರಿಕದ ಫ್ಲೋರಿಡಾ ಯೂನಿವರ್ಸಿಟಿಯಲ್ಲಿ “ಮಕ್ಕಳಲ್ಲಿ ಗುರುತಿಸಲಾಗದ ಖಾಯಿಲೆಗಳ” ವಿಭಾಗದ ಮುಖ್ಯಸ್ಥರಾಗಿರುವ ಖ್ಯಾತ ವೈದ್ಯ,ವಿಜ್ಞಾನಿ ಪ್ರದೀಪ್ ಭಿಡೆಯವರು ಹುಟ್ಟೂರಿಗೆ ಆಗಮಿಸಿದ ಸಂದರ್ಭ ಮುಂಡಾಜೆಯ ಅಂಬುಧಿಯಲ್ಲಿ ಸೋಮವಾರ ಅವರನ್ನು ಗೌರವಿಸಲಾಯಿತು.
ಮಂಗಳೂರು ಚಿತ್ಪಾವನ ಸಂಘದ ಅಧ್ಯಕ್ಷ ಹೇಮಂತ್ ಭಿಡೆ, ಬೆಳ್ತಂಗಡಿ ಚಿತ್ಪಾವನ ಸಂಘಟನೆ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್,ಕಾರ್ಯದರ್ಶಿ ಸುಷ್ಮಾ ಎಸ್.ಭಿಡೆ,ಮಹಿಳಾ ವಿಭಾಗದ ಅಧ್ಯಕ್ಷೆ ಅಶ್ವಿನಿ ಎ.ಹೆಬ್ಬಾರ್,ಆರ್ಥಿಕ ತಜ್ಞ ಶಶಾಂಕ್ ಭಿಡೆ,ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ,ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಗೋಖಲೆ,ಪ್ರಮುಖರಾದ ಪ್ರಹ್ಲಾದ ಫಡಕೆ, ಸುನೀಲ್ ಭಿಡೆ, ಸಚಿನ್ ಭಿಡೆ,ಜಗದೀಶ್ ಫಡಕೆ,ರಾಮಚಂದ್ರ ಭಟ್ ಅರೆಕ್ಕಲು,ಶಶಿಧರ ಠೋಸರ್, ಯೋಗೀಶ್ ಭಿಡೆ
ಮತ್ತಿತರರು ಉಪಸ್ಥಿತರಿದ್ದರು.















