Thursday , 24 September 2026

ತರ್ಕಕ್ಕೆ ನಿಲುಕದ್ದು (ಸತ್ಯ ಕಥೆ) – ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

***********************
ಈ ಜಗತ್ತು ಬಹಳ ವಿಚಿತ್ರ. ನಾವಿಂದು ವೈಜ್ಞಾನಿಕವಾಗಿ ಬಹಳ ಮುಂದುವರಿದಿದ್ದೇವೆ ಎನ್ನುವ ಭ್ರಮೆಯಲ್ಲಿದ್ದೇವೆ. ಆದರೆ ನಾವು ಕಲಿತದ್ದು ಬರಿದೆ ಒಂದು ಭಾಗವಿರಬಹುದು. ಕಲಿಯಬೇಕಾದದ್ದು ತೊಂಭತ್ತೊಭತ್ತು ಭಾಗವಿದೆ. ನಾವು ಯಾವ ದೃಷ್ಟಿಕೋನದಿಂದ ನೋಡಿದರೂ ನಮಗೆ ಒಂದಿಂಚೂ ರಹಸ್ಯವನ್ನು ಭೇದಿಸಲಾಗದ ಲಕ್ಷಾಂತರ ವಿಷಯಗಳು ಈ ಪ್ರಕೃತಿಯಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಮುಂದೆಯೂ ನಡೆಯುತ್ತಲೇ ಇರುತ್ತವೆ. ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ನಾವು ರಹಸ್ಯವನ್ನು ಭೇದಿಸಿದ್ದೇವೆ ಎಂದು ನಾವಂದುಕೊಂಡರೆ ಪ್ರಕೃತಿ ಮನಸ್ಸಿನೊಳಗೆ ನಗುತ್ತಲೇ ಇರುತ್ತದೆ ನಮ್ಮ ಮುಗ್ಧತನಕ್ಕೆ. ಏನೇ ಇರಲಿ ಇಲ್ಲಿ ನನಗಾದ ವಿಚಿತ್ರ ಅನುಭವವನ್ನು ಮಾತ್ರ ನಾನು ನಿಮ್ಮ ಮುಂದಿಡಬಲ್ಲೆ ಹೊರತು ಅದಕ್ಕೆ ತಾರ್ಕಿಕವಾಗಿ ಉತ್ತರಿಸಲಾರೆ. ನಿಮಗೇನಾದರು ಉತ್ತರ ಸಿಕ್ಕರೆ ಸಿಗಲೂಬಹುದು.

ಸಾಧಾರಣ ಐದು ವರ್ಷದಷ್ಟು ಹಿಂದೆ ಹೋಗೋಣ. ನನ್ನ ಪತ್ನಿಯಾದ ಮಹಾಲಕ್ಷ್ಮಿಯ ಅನಾರೋಗ್ಯದ ಕಾರಣ ನಮಗೆ ಅಂದು ಆಸ್ಪತ್ರೆ ಮತ್ತು ಮನೆಯ ಹೊರತಾದ ಇನ್ನೊಂದು ಪ್ರಪಂಚವಿರಲಿಲ್ಲ. ಆದ್ದರಿಂದ ಸಮಾಜದಲ್ಲಿ ಆಗುವಂಥ ಯಾವುದೇ ಸಾವು ನೋವುಗಳು, ಸಂಭ್ರಮಗಳು, ರಾಜಕೀಯ ಚಟುವಟಿಕೆಗಳು, ಮನೋರಂಜನೆಗಳು ನಮ್ಮ ಹತ್ತಿರಕ್ಕೂ ಬರುತ್ತಿರಲಿಲ್ಲ. ವಾರ್ತಾ ಪತ್ರಿಕೆ, ಟಿ.ವಿ. ಮಾಧ್ಯಮವಂತು ನೇಪಥ್ಯಕ್ಕೇ ಸೇರಿಹೋಗಿತ್ತು.
ಮಹಾಲಕ್ಷ್ಮಿಗೆ ತಲೆಯ ಶಸ್ತ್ರಚಿಕಿತ್ಸೆಯಾಗಿ ಎರಡು ತಿಂಗಳು ಆಸ್ಪತ್ರೆಯಲ್ಲಿದ್ದು ಗುಣಮುಖವಾಗುತ್ತಿದ್ದಂತೆ ವೈದ್ಯರು ಹೇಳಿದ್ದರು ಸ್ವಲ್ಪ ದಿವಸ ಮನೆಗೆ ಕರಕೊಂಡು ಹೋಗಿ ವಾತಾವರಣ ಬದಲಾದಾಗ ಬೇಗನೆ ಗುಣಮುಖಳಾಗಬಹುದು ಎಂದು. ಅಂತೆಯೇ ಅವಳನ್ನು ಮನೆಗೆ ಕರಕೊಂಡು ಬಂದೆವು. ಆದರೆ ಯಾವ ಅಂಗಾಂಗವೂ ಸ್ವಾಧೀನವಿಲ್ಲದ್ದರಿಂದ ಪ್ರತಿಯೊಂದು ಕ್ಷಣದಲ್ಲೂ ಹತ್ತಿರ ಒಬ್ಬರು ಬೇಕಾಗಿರುತ್ತಿತ್ತು. ಹಾಗೆಂದು ತಲೆಯ ಒಳಗಿನ ಬುದ್ಧಿ, ಪ್ರಜ್ಞೆ, ವ್ಯವಹಾರ ಜ್ಞಾನ ಚೆನ್ನಾಗಿಯೇ ಇತ್ತು. ಓದಲು ಬರೆಯಲು ಸಾಧ್ಯವಾಗದಿದ್ದರೂ ಯಾರಾದರು ಓದಿ ಹೇಳಿದರೆ ಒಂದೆರಡು ನಿಮಿಷ ಕೇಳುವಷ್ಟು ತಾಳ್ಮೆಯೂ ಇತ್ತು. ಆದರೆ ಬರಬರುತ್ತ ಬರಬರುತ್ತ ಇವೆಲ್ಲ ಕ್ರಿಯೆಗಳೂ ದಿವಸದಿಂದ ದಿವಸಕ್ಕೆ ಕ್ಷೀಣವಾಗುತ್ತಿದ್ದವು. ಮಾತು ಅಸ್ಪಷ್ಟವಾಗಿ ಇದ್ದರೂ ನಮಗೆ ಅರ್ಥವಾಗುವಂತಿತ್ತು. ಈ ಸ್ಥಿತಿಯಲ್ಲಿರುವಾಗ

ಒಂದು ದಿನ ಬೆಳಗ್ಗೆ ಅವಳಿಗೆ ಕಾಫಿ ಕುಡಿಸುತ್ತಿರುವಾಗ ‘ಇವತ್ತು ಬೆಳಗ್ಗಿನ ಜಾವ ಬನ್ನಂಜೆ ಗೋವಿಂದಾಚಾರ್ಯರು ತೀರಿ ಹೋದರೆಂದು ಕನಸು ಬಿತ್ತು’ ಎಂದಳು. ಕನಸುಗಳೆಂದರೆ ಅದು ಹೀಗೇ. ಅದಕ್ಕೆ ಯಾವ ವಿಶೇಷಾರ್ಥಗಳಿಲ್ಲವೆಂದು ನಾನು ಪರಿಗಣಿಸಿದ್ದರಿಂದ ನನಗಿದು ವಿಶೇಷವೆಂದು ಕಾಣಲಿಲ್ಲ. ‘ಇರಲಿ ಬಿಡು ಈಗ ಕಾಫಿ ಕುಡಿ’ ಎಂದು ಹೇಳಿ ಆ ವಿಷಯವನ್ನು ಮರೆ ಮಾಚಲು ಯತ್ನಿಸಿದೆ. ಆದರೆ ಮಹಾಲಕ್ಷ್ಮಿ ಮಹಾಲಕ್ಷ್ಮಿ ‘ಇಲ್ಲ ನನಗೆ ಈಗಲೂ ಆ ಚಿತ್ರಣ ನೆನಪಿದೆ. ಬನ್ನಂಜೆಯವರ ಹೆಣವನ್ನು ಮಲಗಿಸಿದ್ದರು. ಸುತ್ತ ಮುತ್ತ ಪಾಣಿ ಪಂಚೆಯನ್ನ ಧರಿಸಿಕೊಂಡು ಪುರೋಹಿತರು ಹಿಂದೆ ಮುಂದೆ ತಿರುಗುತ್ತಿದ್ದರು. ಬಾಯಲ್ಲೇನೋ ಮಂತ್ರ ಹೇಳುತ್ತಿದ್ದರು. ಮಾತ್ರವಲ್ಲ ಅವರ ಮನೆಯ ಹೆಸರು ಕೂಡಾ ನೆನಪಿದೆ’ ಎಂದಾಗ ‘ಏನು ಹೆಸರು ಹೇಳು’ ಎಂದೆ. ಕೂಡಲೆ ಆಕೆ ‘ಈಶಾವಾಸ್ಯ’ ಎಂದು ಹೇಳಿದರು. ಅಲ್ಲಿಗೆ ನನಗೆ ಏನೋ ಒಂದು ಸತ್ಯವಿದೆ ಎಂಬ ಅರಿವಾಗತೊಡಗಿತ್ತು. ಯಾಕೆಂದರೆ ಮಹಾಲಕ್ಷ್ಮಿ ಬನ್ನಂಜೆಯವರ ಮನೆಗೆ ಒಂದು ಬಾರಿಯೂ ಹೋಗಿರಲಿಲ್ಲ. ಆದ್ದರಿಂದ ಅವರ ಮನೆಯ ಹೆಸರು ಗೊತ್ತಿರಲು ಸಾಧ್ಯವೇ ಇಲ್ಲ. ನಾನಾದರೊ ಹಲವಾರು ಬಾರಿ ಬನ್ನಂಜೆಯವರ ಮನೆಗೆ ಹೋಗಿದ್ದರು ಅವರ ಮನೆಯ ಹೆಸರು ಜ್ಞಾಪಕದಲ್ಲಿರಲಿಲ್ಲ. ಅದಲ್ಲದೆ ನಮ್ಮ ಮನೆಗೂ ಅವರ ಮನೆಗೂ ಯಾವುದೇ ಸಂಪರ್ಕವೂ ಇರಲಿಲ್ಲ. ಅಂಥದ್ದರಲ್ಲಿ ಆಕೆ ಏಕಾಏಕಿ ಬನ್ನಂಜೆಯವರ ಸಾವಿನ ಕನಸು ಹೇಳುವಾಗ ಒಂದು ವೇಳೆ ಹೌದಾದರೂ ಅಲ್ಲಿಗೂ ಇಲ್ಲಿಗೂ ಅದ್ಯಾವ ಸಂಬಂಧವೆಂದೇ ತಿಳಿಯಲಿಲ್ಲ. ಏನೆ ಇರಲಿ ಇದು ಕನಸು ಎಂದು ಸುಮ್ಮನಾದೆ. ಅಲ್ಲಿಗೆ ಅವಳು ಕೂಡಾ ಅದನ್ನು ಗಂಭೀರವಾಗಿ ತೆಗೆದು ಕೊಳ್ಳುವಂಥ ಮನಸ್ಥಿತಿಯನ್ನು ಹೊಂದಿರಲಿಲ್ಲ.

ಆದರೂ ನನ್ನ ಮನಸ್ಸಿನೊಳಗೊಂದು ಹುಳ ಸೇರಿದ್ದು ಸುಳ್ಳಲ್ಲ. ಹಾಗೆಯೆ ಅಂಗಡಿಗೆ ಹೋದವನು ಅಂದಿನ ವಾರ್ತಾ ಪತ್ರಿಕೆಯೊಂದನ್ನು ಪಡಕೊಂಡೆ. ಓದುವಾಗ ನನಗೆ ವಿಸ್ಮಯವೇ ಆಗಿತ್ತು. ಯಾಕೆಂದರೆ ಬನ್ನಂಜೆಯವರ ಸಾವಿನ ಸುದ್ದಿಯ ಬದಲಿಗೆ ಅವರ ಮಗನ ಸಾವಿನ ಸುದ್ದಿ ಆ ಪತ್ರಿಕೆಯಲ್ಲಿತ್ತು. ಸೀದಾ ಮನೆಗೆ ಬಂದು ಮಹಾಲಕ್ಷ್ಮಿಗೆ ‘ನಿನ್ನ ಕನಸಿನಂತೆ ಬನ್ನಂಜೆಯಲ್ಲಿ ಒಂದು ಮರಣವಾಗಿದೆ. ಆದರೆ ಅದು ಬನ್ನಂಜೆಯವರ ಮಗನದ್ದು’ ಎಂದು ಸುದ್ದಿಯನ್ನು ಓದಿ ಹೇಳಿದೆ. ಅದಕ್ಕವಳು ಶುಷ್ಕ ಭಾವದಿಂದ ‘ಅದಲ್ಲ ಗೋವಿಂದಾಚಾರ್ಯರೇ ತೀರಿದ ಕನಸು ಬಿತ್ತು’ ಎಂದು ಸುಮ್ಮನಾದಳು. ಆದರೆ ನಿಜವಾಗಿ ಗೊಂದಲ ಉಂಟಾದದ್ದು ಮಾತ್ರ ನನಗೆ. ಇರಲಿ ಇದಕ್ಕೆ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲವೆಂಬ ಭಾವದಿಂದ ಅದನ್ನು ಅಲ್ಲಿಗೇ ಬಿಟ್ಟುಬಿಟ್ಟೆ. ಈ ಘಟನೆಯಾಗಿ ಕೆಲವೇ ದಿನಗಳಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಎರಡು ಸಾವಿರದ ಇಪ್ಪತ್ತನೇ ದಶಂಬರ್ ಹದಿಮೂರನೇ ತಾರೀಕಿನಂದು ತೀರಿದರೆಂಬ ಅಸಲಿ ಸುದ್ದಿ ಬಂದಾಗ ಅಂತು ನಾವು ಮನೆಯವರೆಲ್ಲರೂ ಆಶ್ಚರ್ಯಚಕಿತರಾದದ್ದಂತು ಸತ್ಯವೆ.

ನನಗೆ ಈ ಘಟನೆ ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ. ನಾನೊಬ್ಬನೇ ಇದ್ದಿದ್ದರೆ ಇದೊಂದು ಭ್ರಮೆ ಎನ್ನಬಹದಿತ್ತೋ ಏನೊ. ಆದರೆ ನನ್ನ ಜತೆ ಮಕ್ಕಳಾದ ನವಮಿ ಮತ್ತು ಶಾರ್ವರಿಯೂ ಇವಳು ಹೇಳುತ್ತಿದ್ದ ಕನಸನ್ನು ಕೇಳಿದ್ದರಿಂದ ಭ್ರಮೆಯಾಗಲು ಸಾಧ್ಯವೇ ಇಲ್ಲ. ಹಾಗೆಂದು ಮಹಾಲಕ್ಷ್ಮಿ ಜ್ಯೋತಿಷ್ಯ ಅಥವಾ ಭವಿಷ್ಯವನ್ನು ತಿಳಿದಿರಲಿಲ್ಲ. ಅಚಾನಕ್ಕಾಗಿ ಆಕೆಗೆ ಬಿದ್ದ ಕನಸಿನ ಹಿಂದೆ ಅದ್ಯಾವ ಲೆಕ್ಕಾಚಾರವಿತ್ತೋ ಆ ದೇವರೇ ಬಲ್ಲ. ಹಾಗಾದರೆ ಇದು ತರ್ಕಕ್ಕೆ ನಿಲುಕದ್ದು ಎಂದೇ ಹೇಳಬೇಕಾಗುತ್ತದೆ. ನೀವೇನಂತೀರಿ..?
***************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 18 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 32 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 75 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 61 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 107 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 90 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 64 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 78 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 91 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 567 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 32 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 209 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 450 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 318 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 468 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 309 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts