Friday , 25 September 2026

ಅಶ್ವಮೇಧ-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಅಶ್ವಮೇಧ
*********
ಬೆಂಗಳೂರಿಗೆ ಬಸ್ಸಲ್ಲಿ ಹೋಗುವುದೆಂದರೆ ನನಗೆ ಬಹಳ ಇಷ್ಟ. ಅದರಲ್ಲೂ ಕೆಂಪು ಬಸ್ಸು, ಹಗಲಿನ ಪಯಣ, ಚಾಲಕನ ಎಡ ಬದಿಯ ಕಿಟಕಿಯ ಸೀಟು, ಅರ್ಧ ತೆರೆದ ಕಿಟಕಿ. ಇಷ್ಟೊಂದು ಸೌಕರ್ಯವಿದ್ದರೆ ಸಾಕು ಪಯಣ ಆನಂದಕರ. ಅದಕ್ಕೆ ಪೂರಕವಾಗಿ ಚಾಲಕನ ಚಾಲನೆಯೂ ಹಿತವಾಗಿದ್ದರೆ ಅದೊಂದು ಸುಖಾನುಭವ ನೀಡುವ ವ್ಯವಹಾರವೆನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೆ ಈ ಹಿನ್ನೆಲೆಯಿಂದ ನಾನೊಂದು ಬಾರಿ ಬೆಂಗಳೂರಿಗೆ ಹೋಗಿದ್ದೆ. ಒಂದೆರಡು ದಿನವಿದ್ದು ವಾಪಸು ಊರಿಗೆ ಬರಬೇಕಾದರೆ ಅನಿವಾರ್ಯವಾಗಿ ರಾತ್ರಿ ಬಸ್ಸಿಗೆ ಬರಬೇಕಾಯಿತು. ರಾತ್ರಿ ಬಸ್ಸಾದರೂ ನನಗೆ ಕೆಂಪು ಬಸ್ಸುಗಳೇ ಇಷ್ಟ. ಹಾಗೆಯೇ ಅಶ್ವಮೇಧ ಎಂಬ ಹೊಸ ಬಸ್ಸಿನಲ್ಲಿ ಪ್ರಯಾಣಿಸಬೇಕೆಂಬ ಹಂಬಲವೂ ಇತ್ತು. ಆ ರಾತ್ರಿ ಅಶ್ವಮೇಧ ಬಸ್ಸು ಹುಡುಕಿಕೊಂಡು ನನ್ನ ನೆಚ್ಚಿನ ಮುಂದಿನ ಸೀಟಲ್ಲಿ ಟಿಕೇಟು ಪಡಕೊಂಡು ಕೂತುಕೊಂಡೆ. ಬಹಳ ಸುಂದರವಾದ, ಹೊಸತಾದ, ಜಗಮಗಿಸುವ ಬಸ್ಸು ಸರಿಯಾದ ವೇಳೆಗೆ ಹೊರಟಿತು. ಚಾಲಕನೂ ಯುವಕನಾಗಿದ್ದ ಅಂತೆಯೆ ಚಾಲನೆಯೂ ವಿಶ್ವಾಸದಾಯಕವಾಗಿತ್ತು. ಬೆಂಗಳೂರು ಕೆಂಪೆಗೌಡ ನಿಲ್ದಾಣದಿಂದ ಹೊರಟಾಗ ಹತ್ತರಷ್ಟಿದ್ದ ಜನ ನೆಲಮಂಗಲಕ್ಕೆ ಬಂದಾಗ ಸಾಧಾರಣ ಮುಕ್ಕಾಲಂಶದಷ್ಟು ತುಂಬಿ ಆಗಿತ್ತು. ಅದರಲ್ಲೂ ಹೆಚ್ಚಿನವರು ಮಹಿಳೆಯರೇ ಆಗಿದ್ದರು. ರಜಾದಿನಗಳಾದ್ದರಿಂದ ಎಲ್ಲರೂ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಹೊರಟಿದ್ದರು. ಮುಂದೆ ಬಸ್ಸು ಅದರದ್ದೇ ವೇಗದಲ್ಲಿ ಹೋಗುತ್ತಿರುವಾಗ ಚಾಲಕನಿಗೆ ಅದೇನೋ ಲಹರಿ ಬಂದಂತೆ ವಾಹನದೊಳಗಿದ್ದ ಆಡಿಯೊ ಸಿಸ್ಟಮನ್ನು ಚಾಲು ಮಾಡಿದ. ಎಲ್ಲರೂ ಧರ್ಮಸ್ಥಳದ ಮಂಜುನಾಥನ ಭಕ್ತರಾದ್ದರಿಂದ ದೇವರ ನಾಮಗಳನ್ನು ಹಾಕಿದಾಗ ಒಂದು ರೀತಿಯ ಸುಖವುಂಟಾಗಿತ್ತು. ಅಂತೆಯೇ ಸರಕಾರಿ ಬಸ್ಸಲ್ಲಿ ಇಂಥ ವ್ಯವಸ್ಥೆಯನ್ನು ನಾನು ಇದೇ ಪ್ರಥಮವಾಗಿ ನೋಡಿ ಖುಷಿಯಾಗಿತ್ತು.

ಹೆಂಗಸರೇ ಹೆಚ್ಚಾಗಿದ್ದ ಈ ಬಸ್ಸಲ್ಲಿ ಚಾಲಕನ ಹಿಂದಿನ ಸೀಟಲ್ಲಿ ಕೂತಿರುವ ಇಬ್ಬರು ಯುವತಿಯರಿಗೆ ಮಾತ್ರ ಈ ಭಕ್ತಿ ಗೀತೆಗಳು ಹಿಡಿಸಲಿಲ್ಲ. ಅಷ್ಟರಲ್ಲಿ ಆಕೆಯಲ್ಲೊಬ್ಬಳು ಎದ್ದು ನಿಂತು “ಡಿ.ಜೆ. ಹಾಕೋಣ ಯಾರೆಲ್ಲ ಡ್ಯಾನ್ಸ್ ಮಾಡಲು ಸಿದ್ದರಿದ್ದೀರಿ” ಎಂದು ಗಟ್ಟಿಯಾಗಿ ಕೇಳಿದಳು. ಬಹುಷ ಇದರಿಂದ ಸ್ಪೂರ್ತಿ ಪಡೆದಂಥ ಇತರ ಪ್ರಯಾಣಿಕರಿಗೆ ಕೂಡ ಇಂತಹ ಕುಣಿತ ಬೇಕಿತ್ತು ಎನ್ನುವಂತೆ ಎಲ್ಲರೂ ಅನುಮೋದಿಸಿದರು. ಅಲ್ಲಿಗೆ ಭಕ್ತಿಯ ಭಾವವಿದ್ದವರಲ್ಲಿ ವಿಕೃತಿಯ ಭಾವ ಆವೀರ್ಭವಿಸಿತು. ಅಷ್ಟರಲ್ಲಿ ಯುವತಿಯ ಮೊಬೈಲ್ ಡಿ.ಜೆ. ಪದ್ಯಗಳ ಹುಡುಕಾಟದಲ್ಲಿ ತೊಡಗಿತು. ಒಂದಷ್ಟು ಪದ್ಯಗಳ ಶೇಖರಣೆಯಾದ ಮೇಲೆ ಆ ಯುವತಿ ಬಸ್ಸಿನಲ್ಲಿದ್ದ ಮ್ಯೂಸಿಕ್ ಪ್ಲೇಯರ್ನಲ್ಲಿದ್ದಂದ ಬ್ಲ್ಯೂ ಟೂತ್ಗೆ ತನ್ನ ಮೊಬೈಲ್ ಕನೆಕ್ಷನ್ ಮಾಡಿ ಹಾಡುಗಳನ್ನು ಕೇಳಿಸತೊಡಗಿದಳು. ಅಲ್ಲಿವರೆಗೆ ಇದ್ದಂಥ ಬಸ್ಸಿನೊಳಗಿನ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ಪದ್ಯಗಳ ಕರ್ಣ ಕಠೋರವಾದಂಥ ಶಬ್ದವು ತಾರಕಕ್ಕೇರತೊಡಗಿತು. ಅದಕ್ಕೆ ಸಾಥ್ ನೀಡುವಂತಿದ್ದ ಚಾಲಕನ ಮನಸ್ಥಿತಿ ಕೂಡ ಬಹಳ ಜೋಷ್ ನಲ್ಲಿತ್ತು. ಅಷ್ಟರಲ್ಲಿ ಡಿ.ಜೆ. ಪಂದ್ಯಗಳಿಗೆ ಹೆಜ್ಜೆ ಹಾಕಲು ಪ್ರಾರಂಭ ಮಾಡಿದ ಯುವತಿಯರೊಡನೆ ಬಸ್ಸಲ್ಲಿದ್ದಂಥ ಇತರ ಮಹಿಳೆಯರು ಕೂಡ ಜತೆಯಾಗತೊಡಗಿದರು. ಒಂದರ ನಂತರ ಒಂದರಂತೆ ಈ ಆರ್ಭಟದ ಪದ್ಯಗಳು ಮುಂದುವರೆದಾಗ ನನಗೆ ಈ ಬಸ್ಸಲ್ಲಿ ಯಾಕಪ್ಪ ಬಂದೆ ಎಂಬ ಭಾವ ಬಲಿಯತೊಡಗಿತು. ಇದರ ನಡುವೆ ಮೊಬೈಲಿನ ಪದ್ಯಗಳ ಬದಲಾವಣೆಗೆ ಅಥವಾ ಹೊಸ ಪದ್ಯ ಹುಡುಕಲು ಚಾಲಕ ಬಸ್ಸನ್ನು ಚಲಾಯಿಸುತ್ತಿರುವಾಗಲೇ ಪ್ರಯತ್ನಿಸುತ್ತಿದ್ದುದರಿಂದ ಯಾವುದೇ ಕ್ಷಣದಲ್ಲಾದರು ಅಪಘಾತವಾದೀತೆಂಬುದೂ ಸತ್ಯವೆ. ಅದಕ್ಕನುಗುಣವಾಗಿ ಬಸ್ಸು ಕೂಡ ನೂರರ ಆಸುಪಾಸಿನಲ್ಲಿ ಓಡುತ್ತಿರುವಾಗ ನನಗೆ ಅಪಾಯದ ಭೀತಿಯೂ ಆವರಿಸತೊಡಗಿತು. ಬಹುಷ ಇದು ಧರ್ಮಸ್ಥಳಕ್ಕೆ ಹೋಗುವಲ್ಲಿವರೆಗೂ ಮುಂದುವರಿದರೆ ಪ್ರಾಯದವರ, ಅನಾರೋಗ್ಯದಲ್ಲಿರುವವರ, ಮಕ್ಕಳ ಗತಿ ಏನು ಎಂಬುದೂ ಪ್ರಶ್ನೆಯಾಗಿತ್ತು. ವಿಪರ್ಯಾಸವೆಂದರೆ ಪರಸ್ಪರ ಗುರುತು ಪರಿಚಯವಿಲ್ಲದೆಯೂ ಮಹಿಳೆಯರು ಈ ಕುಣಿತದಲ್ಲಿ ಬಸ್ಸು ಚಲಿಸುತ್ತಿರುವಾಗಲೇ ಪಾಲ್ಗೊಂಡಿದ್ದು.

Advertisement:

ಸಾಧಾರಣ ಈ ಚಿತ್ರಣ ಸುಮಾರು ಒಂದು ಗಂಟೆಯಷ್ಟು ಕಾಲ ಮುಂದುವರಿದಾಗ ಹಿಂದಿನ ಸೀಟಲ್ಲಿ ಯಾಕೋ ಅಸಹಜವಾದಂಥ ಶಬ್ದಗಳು ಕೇಳಿಸತೊಡಗಿದವು. ನಾನಾದರೊ ಅದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಅವರವರೊಳಗೇ ಏನಾದರು ಇರಬಹುದೆಂದು ಸುಮ್ಮನಿದ್ದರೆ ಕೇಳುತ್ತಿದ್ದ ಶಬ್ದಗಳು ಜೋರಾಗತೊಡಗಿ ಜಗಳ ಪ್ರಾರಂಭವಾಗಿತ್ತು. ಹಿಂತಿರುಗಿ ನೋಡುವಾಗ ಪದ್ಯಗಳ ಜತೆಗೆ, ಕುಣಿತದ ಜತೆಗೆ, ಜಗಳವೂ ತಾರಕಕ್ಕೇರಿ ಪರಸ್ಪರ ಕೈ ಕೈ ಮಿಲಾಯಿಸುವಲ್ಲಿ ಮುಂದುವರೆಯಿತು. ಅಷ್ಟರಲ್ಲಿ ಚಾಲಕನಿಗೂ ಈ ವಿಚಾರ ಗೊತ್ತಾಗಿ ಒಂದಷ್ಟು ಹೊತ್ತು ಅದೇ ವೇಗದಲ್ಲಿ ಬಸ್ಸನ್ನು ಚಲಾಯಿಸುತ್ತಿದ್ದ. ನಾನಾದರೊ ಈ ಜಗಳ, ಡಿ.ಜೆ.ಯ ಕರ್ಕಶ ಶಬ್ದಗಳಿಂದ ಒಂದು ಸಲ ಮುಕ್ತಿ ಸಿಕ್ಕರೆ ಸಾಕೆಂದುಕೊಂಡೆ. ಈ ನಡುವೆ ಗಲಾಟೆಯ ಕಾರಣವಾದರು ಏನೆಂದು ನನ್ನ ಪಕ್ಕದಲ್ಲಿರುವವರನ್ನು ವಿಚಾರಿಸಿದರೆ ಅದು ಅವರಿಗೂ ತಿಳಿಯದ ವಿಚಾರವಾಗಿತ್ತು. ಅಂತು ಆ ಹೊತ್ತಿಗೆ ಬಸ್ಸು ಕುಡುಕರ ಸಂತೆಯಂತೆ ನನಗನ್ನಿಸಿದ್ದು ಮಾತ್ರ ಸತ್ಯ. ಮಾತ್ರವಲ್ಲ ಇದರಿಂದ ಹೊರ ಬರುವ ದಾರಿಯೂ ನನಗೆ ಕಾಣಲಿಲ್ಲ. ಅಷ್ಟರಲ್ಲಿ ಚಾಲಕ ಬಸ್ಸನ್ನು ಬದಿಗೆ ನಿಲ್ಲಿಸಿ ಗಲಾಟೆಯ ಕಾರಣವನ್ನು ತಿಳಿದು ಕೊಳ್ಳಲು ಹೋದರೆ ಮಹಿಳೆಯರ ಕುಣಿತದಲ್ಲಿ ಯಾವುದೊ ಪ್ರಯಾಣಿಕನು ಅಸಹಜ ನಡವಳಿಕೆ ಪ್ರದರ್ಶಿಸಿದ ಎಂಬ ಕಾರಣದಿಂದ ಗಲಾಟೆ ಪ್ರಾರಂಭವಾಗಿ ಎರಡು ಪಂಗಡಗಳೊಳಗಿನ ಜಗಳಕ್ಕೆ ತಿರುಗಿ ಅದರ ಪರಿಹಾರ ಹೇಗೆಂದೇ ತಿಳಿಯದಂತಾಗಿ ಕೊನೆಗೂ ಬಸ್ ಚಾಲಕ ಬಸ್ಸನ್ನು ಪೋಲಿಸ್ ಸ್ಟೇಶನಿಗೆ ಕೊಂಡು ಹೋಗುತ್ತೇನೆ ಎಂದಾಗ ಒಂದಷ್ಟು ಹೊತ್ತು ಗಲಾಟೆ ಕಡಿಮೆಯಾಗತೊಡಗಿತು. ಆದರೆ ಡಿ.ಜೆ. ಚಾಲು ಇತ್ತು. ಮತ್ತೊಮ್ಮೆ ಬಸ್ ಹೊರಟಿತು ಆದರೆ ಯಥಾ ಪ್ರಕಾರ ಕುಣಿತ ಮುಂದುವರಿದಿತ್ತು. ಅಷ್ಟರಲ್ಲಿ ನಾನು ಪೂರ್ತಿ ತಾಳಮೆಯನ್ನು ಕಳಕೊಂಡಿದ್ದೆ. ಇದಕ್ಕೇನಾದರು ಉಪಾಯ ಮಾಡಬೇಕೆಂದು ಯೋಚಿಸತೊಡಗಿದಾಗ ಒಂದು ಉಪಾಯ ಹೊಳೆಯಿತು.

ಕೊನೆಯ ಪ್ರಯತ್ನವೆಂಬಂತೆ ಚಾಲಕ ಬಸ್ಸನ್ನು ಚಲಾಯಿಸುತ್ತಿದ್ದಾಗಲೆ ನನ್ನ ಸೀಟಿನಿಂದ ಎದ್ದು ಬಸ್ಸಿನ ಮುಂಭಾಗದಲ್ಲಿದ್ದಂಥ ಬಸ್ಸಿನ ನಂಬರಿನ ಫೋಟೊವೊಂದನ್ನು ನನ್ನ ಮೊಬೈಲಲ್ಲಿ ಕ್ಲಿಕ್ಕಿಸಿ ವಾಪಸು ನನ್ನ ಸೀಟಲ್ಲಿ ಕುಳಿತು ಮೊಬೈಲಲ್ಲಿ ಏನೊ ಬರೆದಂತೆ ನಟಿಸಿದೆ. ಮತ್ತು ಇದನ್ನು ಚಾಲಕ ಗಮನಿಸಬೇಕೆಂದು ಆತನನ್ನೆ ನೋಡುತ್ತಿದ್ದೆ. ಅಲ್ಲಿಗೆ ನನ್ನ ಯೋಜನೆ ಫಲಿಸಿತ್ತು. ಆ ಕ್ಷಣವೆ ಚಾಲಕ ಬಸ್ಸಿನೊಳಗೆ ಆರ್ಭಟಿಸುತ್ತಿದ್ದ ಪದ್ಯಗಳನ್ನು ಹಟಾತ್ತನೆ ನಿಲ್ಲಿಸಿದ. ಹಾಗೂ ತನ್ನ ಹಿಂದಿನ ಸೀಟಲ್ಲಿ ಕುಳಿತಿದ್ದ ಯುವತಿಯನ್ನು ಉದ್ದೇಶಿಸಿ ‘ ಮೇಡಂ ಇನ್ನು ಪದ್ಯಗಳು ಸಾಕು. ಸುಮ್ಮನೆ ಗಲಾಟೆಗೆ ಕಾರಣವಾಗುತ್ತದೆ.’ ಎಂದು ಹೇಳಿ ಅಲ್ಲಿವರೆಗಿನ ಅಸಹಜ ಸ್ಥಿತಿಗೆ ಅಂತ್ಯ ಹಾಡಿದ. ನಂತರದ ಪ್ರಯಾಣ ಬಹಳಷ್ಟು ಹಿತವಾಗಿತ್ತು. ಹಾಗೆಯೇ ಮುಂದೆ ಸ್ವಲ್ಪ ದೂರ ಹೋದೊಡನೆ ಒಂದು ಹೋಟೆಲಿನಲ್ಲಿ ಚಾಯ ಕುಡಿಯಲು ಚಾಲಕ ನಿಲ್ಲಿಸಿದರೆ ನನಗೆ ಅಲ್ಲಿ ಇನ್ನೊಂದು ಅಚ್ಚರಿ ಕಂಡಿತ್ತು. ಅದೇನೆಂದರೆ ಬಸ್ಸಿನೊಳಗೆ ಯಾವ ಎರಡು ಪಂಗಡಗಳು ಜಗಳವಾಡುತ್ತಿದ್ದವೋ ಅವೆ ಎರಡು ಪಂಗಡಗಳು ಏನೂ ಆಗಲಿಲ್ಲವೊ ಎಂಬಂತೆ ಜತೆ ಜತೆಯಾಗಿಯೇ ಚಾಯ ಕುಡಿದು ಬಿಸ್ಕತ್ ತಿಂದು ಮತ್ತೆ ಅದೇ ಬಸ್ಸಲ್ಲಿ ಬೆಳಗ್ಗಿನ ಜಾವದವರೆಗೆ ನಿದ್ದೆ ಮಾಡಿ ಧರ್ಮಸ್ಥಳದಲ್ಲಿಳಿದು ಜನಸಂದಣಿಯಲ್ಲಿ ಮಾಯವಾಗಿ ಹೋದಾಗ ಇಂತಹದ್ದೊಂದು ಪ್ರಪಂಚವೂ ಇದೆ ಎಂದು ಅರಿವಾಗಿತ್ತು. ಇದರ ನಡುವೆ ನನ್ನ ಯೋಜನೆ ಸಫಲವಾಗಿದ್ದಕ್ಕೂ ನನಗೆ ಖುಷಿಯಾಗಿತ್ತು. ನನ್ನೆಣಿಕೆಯೂ ಅದೇ ಇದ್ದದ್ದು. ನಾನು ಯಾರೆಂದು ಚಾಲಕನಿಗೆ ಗೊತ್ತಿಲ್ಲದ್ದರಿಂದ ನನ್ನ ಕರ್ತೃತ್ವ ಚಾಲಕನಿಗೆ ನಾನು ಪತ್ರಕರ್ತನೆಂದು ಅನ್ನಿಸಬೇಕು. ಇಲ್ಲಿನ ಘಟನೆಗಳನ್ನು ನಾನು ವರದಿ ಮಾಡಬಹುದೆಂದು ಆತ ಹೆದರಬೇಕು. ಇದರಿಂದ ಆತ ಈ ಅಪಸವ್ಯಗಳನ್ನು ನಿಲ್ಲಿಸಬೇಕು ಎಂದು. ನನ್ನ ಪುಣ್ಯ ಅದು ಸಾಧ್ಯವಾಯಿತು. ಇದು ಎಲ್ಲ ಕಾಲದಲ್ಲೂ ಎಲ್ಲ ಕಡೆಯಲ್ಲೂ ಕೆಲಸಕ್ಕೆ ಬಾರದು. ಆದರೆ ಆ ಕ್ಷಣದಲ್ಲಿ ನನಗೆ ಇದು ಬ್ರಹ್ಮಾಸ್ತ್ರವಾದದ್ದು ಮಾತ್ರ ಸುಳ್ಳಲ್ಲ.
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 22 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 79 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 63 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 109 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 93 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 66 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 80 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 97 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 570 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 297 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 453 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 320 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 471 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 303 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 288 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 310 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 227 Courtesy: Scholarspace with Anubhav

Watch our latest podcasts