ದಿನಾಂಕ 1.11.2025 ಶನಿವಾರ ಶ್ರೀ ಕಾಲಕಾಲ ಪರಶುರಾಮ ದೇವಸ್ಥಾನ ದರ್ಬೆತಡ್ಕದ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದಿಂದ ಮೂರನೇ ಚಿತ್ಪಾವನಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಸಮಯಕ್ಕೆ ಸರಿಯಾಗಿ ಮಧ್ಯಾಹ್ನ 2.15 ಕ್ಕೆ ಪರಶುರಾಮ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಆರಂಭವಾಯಿತು.ದೀಪ ಬೆಳಗಿಸಿ ವೇದ ಘೋಷವನ್ನು ಉದ್ಘೋಷಿಸಿ ದೇವಳದ ಆಡಳಿತ ಮೊಕ್ತೇಸರರಾದ ಉದಯಕುಮಾರ್ ಅಭ್ಯಂಕರ್ ಇವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು.ತಾಲೂಕು ಸಂಘದ ಅಧ್ಯಕ್ಷರಾದ ತ್ರಿವಿಕ್ರಮ್ ಹೆಬ್ಬಾರ್ ಅವರು ಎಲ್ಲರನ್ನು ಸ್ವಾಗತಿಸಿದರು . ನಿಯಮಗಳ ಬಗ್ಗೆ ಗೋಪು ಗೋಖಲೆ ತಿಳಿಸಿದರು.ಕುಮಾರಿ ಪ್ರಣವಿ ತುಳುಪುಳೆ ಮತ್ತು ಅಭ್ಯಾಗತರಿಂದ ಚೀಟಿ ಎತ್ತುವ ಮೂಲಕ ಕವಿತಾ ವಾಚನ ಓದುವವರ ಕ್ರಮ ಸಂಖ್ಯೆಯನ್ನು ಆರಿಸಿ ಕವಿಗೋಷ್ಠಿ ಪ್ರಾರಂಭವಾಯಿತು. ಊರ ಪರ ಊರ 15 ಮಹನೀಯರು ಮತ್ತು 15 ಮಹಿಳೆಯರು ಒಟ್ಟು 30 ಮಂದಿ ತಮ್ಮ ಸ್ವರಚಿತ ಕವನವನ್ನು ಚಿತ್ಪಾವನಿ ಭಾಷೆಯಲ್ಲಿ ವಾಚಿಸಿದರು. ಚುಟುಕು, ಶ್ಲೋಕ, ತಮ್ಮದೇ ಆದ ಶೃತಿ, ರಾಗ ಲಯಬದ್ಧತೆ, ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಶಂಕರ್ ತಾಮನ್ಕರ್ ಎಲ್ಲ ಕವನಗಳ ಬಗ್ಗೆ ಸ್ವ ಅನುಭವದ ಮೂಲಕ ಸಂಕ್ಷಿಪ್ತವಾಗಿ ವಿಮರ್ಶಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿದಂಬರ ಕಾಕತ್ಕರ್ ಅಂತ್ಯ ಪ್ರಾಸದಂತೆ ಆದಿಪ್ರಾಸವು ಕವನದಲ್ಲಿ ಬರುವ ಬಗ್ಗೆ ತಿಳಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಕವಿ ಗೋಷ್ಠಿ ಬೆಳೆದು ಬಂದ ದಾರಿ ತಿಳಿಸಿ ಎಲ್ಲರ ಸಹಕಾರ ಸ್ಮರಿಸಿ ದರು. ವರದಶಂಕರ ದಾಮ್ಲೆ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮವನ್ನು ವೃಷಾಂಕ ಖಾಡಿಲ್ಕರ್, ಶರತ್ ಕುಮಾರ್ ತುಳುಪುಳೆ ಮತ್ತು ಗೋಪು ಗೋಖಲೆ ಉತ್ತಮವಾಗಿ ನಿರ್ವಹಿಸಿದರು. ಕಾರ್ಯಕ್ರಮದ ವಿಡಿಯೋ ಚಿತ್ರೀಕರಣವನ್ನು ವೆಂಕಟೇಶ ಬೆಂಡೆಯವರು ಚಿತ್ರಿಸಿದರು. ವರದಶಂಕರ ದಾಮಲೆ, ಗೋಪು ಗೋಖಲೆ ನರಸಿಂಹ ಪಾಳಂದೆ, ಮತ್ತು ಸಂಘದ ಸದಸ್ಯರು ಸಹಕರಿಸಿದರು. ತಾಲೂಕು ಸಂಘದ ಕಾರ್ಯಕಾರಿ ಸದಸ್ಯರಾದ ವಾಸುದೇವ ಗೋಖಲೆ, ಉಷಾ ಮೆಹೆಂದಳೆ, ಪ್ರಭಾಕರ ಹೆಬ್ಬಾರ್, ಅಶ್ವಿನಿ ಹೆಬ್ಬಾರ್, ವಿವೇಕ್ ಕೇಳ್ಕರ್ ಆಸಕ್ತಿಯಿಂದ ಭಾಗವಹಿಸಿದ್ದರು.
ಶಿಶಿಲ ಅಲ್ಲದೆ ಮುಂಡಾಜೆ, ಬೆಳ್ತಂಗಡಿ ದುರ್ಗ ಮಾಳ ಬೆಂಗಳೂರು, ಮೈಸೂರು, ಮಂಗಳೂರು ಕಡೆಯಿಂದಲೂ ಕವಿಗಳು ಭಾಗವಹಿಸಿದ್ದರು.
ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಒಟ್ಟಿನಲ್ಲಿ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿತು. ಸಮಯ ಪಾಲನೆಯ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಬೇರೆ ಬೇರೆ ವಲಯಗಳಲ್ಲಿ ಇಂತಹ ಕಾರ್ಯಕ್ರಮವನ್ನು ಸಂಘಟಿಸುವ ತ್ರಿವಿಕ್ರಮ ಹೆಬ್ಬಾರ್ ರವರ ಕಾರ್ಯ ವೈಖರಿ ಮೆಚ್ಚುಗೆಗೆ ಪಾತ್ರವಾಯಿತು. ಸಂಪೂರ್ಣ ಕಾರ್ಯಕ್ರಮ ಚಿತ್ಪಾವನಿ ಭಾಷೆ ಯಲ್ಲಿ ನಡೆಯಿತು ವಿಶೇಷ.

Advertisement:
















