Update:
ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ರ ಸಂಘ ಬೆಳ್ತಂಗಡಿ.
**
ನಿನ್ನೆ ನಡೆದ ಚಿತ್ಪಾವನಿ ಭಾಷಾ ಕವಿಗೋಷ್ಠಿ ಚೆನ್ನಾಗಿ ನಡೆಯಿತು. ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ನಡೆಯಲು ಅಧ್ಯಕ್ಷರು, ಮುಖ್ಯ ಅತಿಥಿಗಳು, ಕವಿ/ಕವಯತ್ರಿ ಗಳು ಆಗಮಿಸಿ , ನಿಗದಿತ ಸಮಯಕ್ಕೆ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಕಾರ್ಯಕ್ರಮ ನಡೆಯಲು ಸಹಕರಿಸಿದರು. ಹೆಸರು ಕೊಟ್ಟ ಎಲ್ಲರೂ ಕವಿ ಗೋಷ್ಠಿ ಯಲ್ಲಿ ಭಾಗವಹಿಸಿ ಸುಂದರವಾದ, ಅರ್ಥಪೂರ್ಣವಾದ ಕವನ ಗಳನ್ನು ವಾಚಿಸಿ ಕಾರ್ಯಕ್ರಮ ಸುಂದರವಾಗಿ ಮೂಡಿಬರಲು ಸಾಧ್ಯವಾಯಿತು. 31 ಜನ ಕವಿ /ಕವಿಯತ್ರಿ ಗಳು ಕವನ ವಾಚನ ಮಾಡಿದರು.ನಿಗದಿತ ಸಮಯ 5.30 ಕ್ಕೆ ಸಮಾರಂಭ ಮುಗಿಯಿತು.
ಶ್ರೀ ಪ್ರವೀಣ್ ಗೋರೆ ಸಂದೀಪ್ ಪಟವರ್ಧನ್, ವಿವೇಕ್ ಕೇಳ್ಕರ್ ಕಾರ್ಯಕ್ರಮ ವನ್ನು ಸುಂದರ ವಾಗಿ ನಿರೂಪಿಸಿದರು. ಅಧ್ಯಕ್ಷ ತೆ ವಹಿಸಿದ ಬಾಲಕೃಷ್ಣ ಸಹಸ್ರಬುದ್ಧೆ ಮತ್ತು ಮುಖ್ಯ ಅತಿಥಿ ವಾಣಿ ಗೋಖಲೆ ಉತ್ತಮವಾಗಿ ಕಾವ್ಯ ವಿಮರ್ಶೆ ಮಾಡಿದರು.ಕಾರ್ಯದರ್ಶಿ ಸುಷ್ಮಾ ಭಿಡೆ, ಮಹಿಳಾ ಘಟಕ ಅಧ್ಯಕ್ಷೆ ಅಶ್ವಿನಿ ಹೆಬ್ಬಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸಹಕರಿಸಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಗೀತಾ ಬೆಂಡೆ ಮತ್ತು ವಾಮನಬೆಂಡೆ ಪ್ರಾಯೋಜಿಸಿದ ಉಪಹಾರ ಅತ್ಯುತ್ತಮ ವಾಗಿತ್ತು.
ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
ಶ್ರೀ ತ್ರಿವಿಕ್ರಮ ಹೆಬ್ಬಾರ್
ಅಧ್ಯಕ್ಷರು
ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘ
Original msg:
ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿಗಳು ಗಣ್ಯರೊಂದಿಗೆ.
ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬಳಗದ ಸಹಯೋಗದಲ್ಲಿ ನಾಲ್ಕನೇ ಚಿತ್ಪಾವನ ಭಾಷಾ ಕವಿಗೋಷ್ಠಿ ಭಾನುವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಹಿರಿಯ ಕವಿ, ಸಾಹಿತಿ ಬಾಲಕೃಷ್ಣ ಸಹಸ್ರಬುದ್ಧೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ವಾಣಿ ಗೋಖಲೆ, ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ಕಾರ್ಯದರ್ಶಿ ಸುಷ್ಮಾ ಭಿಡೆ, ಬೆಳ್ತಂಗಡಿ- ಉಜಿರೆ ಚಿತ್ಪಾವನ ಬಳಗದ ಅಧ್ಯಕ್ಷ ಪಾಂಡುರಂಗ ಮುರಾತೆ, ಕಾರ್ಯದರ್ಶಿ ಆದರ್ಶ ಡೋಂಗ್ರೆ, ಕಾರ್ಯಕ್ರಮ ನಿರ್ವಾಹಕ ಪ್ರವೀಣ್ ಗೋರೆ, ಸಂದೀಪ್ ಪಟವರ್ಧನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿವೇಕ್ ಕೇಳ್ಕರ್ ಸಹಕರಿಸಿದರು.
ಸ್ವರಚಿತ ಕವನ ವಾಚನ: ಅನ್ನಪೂರ್ಣಾ ಅಭ್ಯಂಕರ್, ಅನುಪಮಾ ಭಿಡೆ, ಅಶ್ವಿನಿ ಎ.ಹೆಬ್ಬಾರ್, ಕರುಣಾಕರ ಗೋಗಟೆ, ಗಾಯತ್ರಿ ಮೆಹೆಂದಳೆ, ಗೋಪು ಗೋಖಲೆ, ಗೋವಿಂದ ದಾಮಲೆ, ಚಂದ್ರಕಾಂತ ಗೋರೆ, ನಾರಾಯಣ ಫಡಕೆ, ನಾರಾಯಣ ಗೋಖಲೆ, ನಾರಾಯಣ ಹೆಬ್ಬಾರ್, ಪದ್ಮಾ ಬೇಡೇಕರ್, ಪ್ರಜ್ಞಾ ಮೆಹೆಂದಳೆ, ಪುರುಷೋತ್ತಮ ತುಳಪುಳೆ, ಬಾಲಕೃಷ್ಣ ಸಹಸ್ರಬುದ್ಧೆ, ಭಾರತಿ ತಾಮ್ಮಣ್ಣರ್, ರತ್ನಾಕರ ಹೆಬ್ಬಾರ್, ಲತಾ ಗೋರೆ, ವನಜಾ ಜೋಶಿ, ವಾಣಿ ಗೋಖಲೆ, ವಿನಯಾ ರಾನಡೆ, ವಸುಧೇಶ ಫಾಟಕ್, ವಿಶ್ವೇಶ್ ಭಿಡೆ, ವೀಣಾ ಬೆಂಡೆ, ವೃಂದಾ ಬೋಠಸ್, ವೈಶಾಂಕ ಖಾಡಿಲ್ಕರ್, ಶಕುಂತಲಾ ನಾತು, ಸವಿತಾ ಹೆಬ್ಬಾರ್, ಸಂಧ್ಯಾ ಪಾಳಂದ್ಯೆ, ಸುಪ್ರಾ ಶಶಾಂಕ ಭಿಡೆ, ನಾಗಶ್ರೀ ದಾತೆ, ರಾಜಾರಾಮ ಸಹಸ್ರಬುದ್ಧೆ ಸ್ವರಚಿತ ಕವನಗಳನ್ನು ವಾಚಿಸಿದರು.
Source: ■ ವಿಕ ಸುದ್ದಿಲೋಕ ಬೆಳ್ತಂಗಡಿ















