ಯೋಗ ಹಾಗೂ ಋತುಚಕ್ರದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಚಿತ್ಪಾವನ ಮಹಿಳಾ ಪ್ರತಿಭೆ.
ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ಪುತ್ತೂರಿನ ಸರಕಾರಿ ಪದವಿ ಕಾಲೇಜಿನಲ್ಲಿ (ಮಹಿಳಾ)ಇಂದು (15/10/2026) ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. “ಋತು-ಪ್ರಕೃತಿ – Role of Yoga in Honoring the natural rhythms of Womanhood” ಎಂಬ ವಿಷಯದ ಮೇಲೆ ಯೋಗ ಟ್ರೈನರ್, ತೆರಪಿಸ್ಟ್, ಮೆಂಟರ್ ಹಾಗೂ ವೆಲ್ ನೆಸ್ ಕೋಚ್ ಆಗಿರುವ ಹೊಸಮಠ ಮೂಲದ ಸೌಮ್ಯ (ದೀಪ್ತಿ) ಹೆಬ್ಬಾರ್ ಆಠವಲೆ ಇವರು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಇವರು ಹೊಸಮಠದ (ಪ್ರಸ್ತುತ ಬೆಂಗಳೂರಿನ ನಾಗರಭಾವಿ ನಿವಾಸಿ) ಶ್ರೀ ಪ್ರದೀಪ್ ಹೆಬ್ಬಾರ್ ಆಠವಲೆ ಇವರ ಪತ್ನಿ. ಹದಿಹರೆಯದ ಮಕ್ಕಳಲ್ಲಿ ಋತುಚಕ್ರದ ತೊಂದರೆಗಳು, ಮಾನಸಿಕ ಸಮಸ್ಯೆಗಳು, ಶಿಕ್ಷಣದ ಒತ್ತಡ, ಮೊಬೈಲ್ ದುಷ್ಪರಿಣಾಮ ಇತ್ಯಾದಿಗಳಿಗೆ ಪರಿಹಾರವಾಗಿ ಯೋಗದ ಮಹತ್ವ, ಶಿಸ್ತುಬದ್ಧ ಆಹಾರ ಪದ್ಧತಿ ಮುಂತಾದ ಹಲವಾರು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.
[ಶ್ರೀ ಪ್ರದೀಪ್ ಹೆಬ್ಬಾರ್ ಆಠವಲೆ ಇವರು ನಮ್ಮ ಈ ಗುಂಪಿನ ಸದಸ್ಯ ಡಾ. ಅಜಿತ್ ಹೆಬ್ಬಾರ್ ಆಠವಲೆ ಹೊಸಮಠ ಇವರ ಸಹೋದರ.]















