Post Views: 90
ಕೊಡು ಪ್ಲೇಟೊಂದಿಡ್ಲಿ…
******************
ಹೋಟ್ಲಿಗ್ಹೋದ್ರೆ ಕೇಳತಾನ್ ವೈಟರ್
ತಿನ್ನೊಕ್ಕೇನ್ ಕೊಡ್ಲಿ..?
ಹತ್ತಾರ್ ತಿಂಡಿ ಇದ್ರೂ ಹೇಳ್ತೆವ್
ಕೊಡು ಪ್ಲೇಟೊಂದಿಡ್ಲಿ.
ಒಂದೆರಡ್ಹೆಚ್ಚು ತಿಂದ್ಬಿಟ್ರೂನು
ಪರ್ವಾಗಿಲ್ಕಣ್ರೀ
ಜೇಬಿಗ್ಕತ್ರಿ ಬೀಳಾಕ್ಕಿಲ್ಲ
ಹೊಟ್ಟೆನ್ತುಂಬ್ಸ್ಕೊಳ್ರಿ.
ಮದ್ವೆ ಮುಂಜಿ ಸೋಬ್ನ ಇರ್ಲಿ
ಜನ ಕೇಳ್ತಾರ್ನೋಡ್ರಿ
ತಿಂಡಿಗ್ಮಾತ್ರ ಇಡ್ಲಿಯೆ ಬೇಕು
ಬಿಡಾಂಗಿಲ್ಕಣ್ರಿ.
ಆರೋಗ್ಯ್ ದಾಗೆ ಏರ್ಪೇರಾದ್ರು
ನಾಲ್ಗೆಗ್ರುಚಿ ಇಡ್ಲಿ
ಸಾಂಬಾರ್ತೋವೆ ಚಟ್ನಿಗ್ಸೇರ್ಸಿ
ತಿನ್ಬೌದ್ನಾಕಣ್ರಿ.
ವಯ್ಸಾದಾಂಗ್ಹೆ ಹಲ್ಬಿದ್ಹೋದ್ರು
ಬೇಡ್ವೆಂದನ್ಸಲ್ರಿ
ಬಾಯ್ನಾಗ್ ಆಚೀಚ್ಹೊರಳಾಡಿಸ್ಕೊಂಡು
ನುಂಗ್ಬೌದು ಕಣ್ರಿ.
ಪ್ರಪಂಚದಾಗೆ ಎಲ್ಹೊದ್ರುನು
ಸಿಗ್ತೈತೇ ಇಡ್ಲಿ
ಸಾವಿರ್ತರದ ತಿಂಡಿಗು ರಾಜನೆ
ಅಕ್ಕಿರವೆ ಇಡ್ಲಿ…
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ















