ಚಿತ್ಪಾವನ ಸಮಾಜ (ರಿ) ಬೆಂಗಳೂರು
ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026
ಪ್ರಿಯ ಸಮಾಜ ಬಾಂಧವರೇ,
ಸಪ್ರೇಮ ನಮಸ್ಕಾರಗಳು.
ಕಳೆದ ವರ್ಷ (2025 ) ಚಾತುರ್ಮಾಸ್ಯ ಸಂದರ್ಭದಲ್ಲಿ ಚಿತ್ಪಾವನ ಸಮಾಜದ ಬಂಧುಗಳು ಶ್ರೀ ಕ್ಷೇತ್ರ ಶೃಂಗೇರಿಗೆ ತೆರಳಿ, ಶ್ರೀ ಶಾರದಾಂಬೆಯ ದರ್ಶನ ಪಡೆದು, ಶ್ರೀ ಜಗದ್ಗುರುಗಳು ದಿವ್ಯಸಾನ್ನಿಧ್ಯದಲ್ಲಿ ಆಶೀರ್ವಚನ ನೀಡಿ ಹರಸಿದ್ದು ಮರೆಯಲಾಗದ ಅನುಭವ . ಕರ್ನಾಟಕದ ವಿವಿಧ ಊರುಗಳಿಂದ ಸುಮಾರು 400 ಕ್ಕೂ ಮಿಕ್ಕಿ ಬಂಧುಗಳು ಆಗಮಿಸಿದ್ದನ್ನು ತಿಳಿದು ಗುರುಗಳು ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದರು . ಬೆಂಗಳೂರಿನಿಂದ ಸುಮಾರು 50 ಕ್ಕೂ ಹೆಚ್ಚು ಮಂದಿ ತೆರಳಿದ್ದರು .
ಅದೇ ಪರಂಪರೆಯನ್ನು ಮುಂದುವರಿಸುತ್ತಾ, ಈ ವರ್ಷವೂ ಚಾತುರ್ಮಾಸ್ಯ ಸಂದರ್ಭದಲ್ಲಿ ಸಮಾಜದ ಬಾಂಧವರೆಲ್ಲರೂ ಒಟ್ಟಾಗಿ ಶೃಂಗೇರಿ ಕ್ಷೇತ್ರಕ್ಕೆ ತೆರಳಿ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ ಪಡೆಯಲು ಶ್ರೀ ಮಠದಿಂದ ಅವಕಾಶ ಕಲ್ಪಿಸಲಾಗಿದೆ .
ಯಾತ್ರೆಯ ಮುಖ್ಯ ವಿವರಗಳು:
ಯಾತ್ರೆಯ ದಿನಾಂಕ: ಬೆಂಗಳೂರಿನಿಂದ
11 ಸೆಪ್ಟೆಂಬರ್ 2026 (ಶುಕ್ರವಾರ) ಬೆಳಗ್ಗೆ 8 ಗಂಟೆಗೆ ಹೊರಟು ಸಾಯಂಕಾಲ ಶೃಂಗೇರಿ ತಲುಪುವುದು.
ದರ್ಶನ ಆಶೀರ್ವಾದ –
12 ಸೆಪ್ಟೆಂಬರ್ 2026
ಶೃಂಗೇರಿಯಿಂದ 12 ಸೆಪ್ಟೆಂಬರ್ 2026 ರಾತ್ರೆ ಹೊರಟು 13 ಸೆಪ್ಟೆಂಬರ್ 26 ಬೆಳಗ್ಗೆ ಬೆಂಗಳೂರು ತಲುಪುವುದು .
ಬೆಂಗಳೂರಿನ ಚಿತ್ಪಾವನ ಸಮಾಜದ ಸದಸ್ಯರು ಹಾಗೂ ಅವರ ಕುಟುಂಬದವರಿಗೆ ಆಹ್ವಾನ
*ಆಸಕ್ತರಲ್ಲಿ ವಿನಂತಿ:*
ಕಳೆದ ಬಾರಿಯಂತೆ ಈ ಬಾರಿಯೂ ಯಾತ್ರೆಯು ಅತ್ಯಂತ ಶಿಸ್ತು ಹಾಗೂ ಭಕ್ತಿಪೂರ್ವಕವಾಗಿ ನೆರವೇರಲಿದ್ದು, ಸಮಾಜದ ಬಾಂಧವರು ಈ ದಿವ್ಯ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.
ಪ್ರಯಾಣ , ವಸತಿ ಹಾಗೂ ಇತರ ವ್ಯವಸ್ಥೆಗಳನ್ನು ಮುಂಚಿತವಾಗಿಯೇ ಯೋಜಿಸಬೇಕಾಗಿರುವುದರಿಂದ,
ಆಸಕ್ತರು ತಮ್ಮ ಹೆಸರನ್ನು ಆದಷ್ಟು ಬೇಗ ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಹಾಗೂ ನೋಂದಣಿಗೆ ಸಂಪರ್ಕಿಸಿ:**
ಗಜಾನನ ಎಂ ಗೋಖಲೆ
9591988199
ನಿತ್ಯಾನಂದ ಭಿಡೆ
9845952982
ನೋಂದಣಿಗೆ ಕೊನೆಯ ದಿನ :
ಭಾನುವಾರ 16.08.2026
ಪ್ರಯಾಣ , ವಸತಿ , ಗುರುದಕ್ಷಿಣೆ ವೆಚ್ಚ ಅಂದಾಜು – ₹ 3500/ (ಪ್ರಯಾಣದ ವೇಳೆಯ ಊಟ ತಿಂಡಿ ಪಾನೀಯ ಇದರಲ್ಲಿ ಸೇರಿಲ್ಲ)
ವಿ. ಸೂ : ಈ ಸಂದೇಶ ಬೆಂಗಳೂರಿನಿಂದ ಪ್ರಯಾಣಿಸುವ ಆಸಕ್ತಿಯುಳ್ಳವರಿಗೆ ಮಾತ್ರ
ಶುಭಾಶಯಗಳೊಂದಿಗೆ
ಚಿತ್ಪಾವನ ಸಮಾಜ(ರಿ) , ಬೆಂಗಳೂರು
(ಕಾರ್ಯಕಾರಿ ಸಮಿತಿ)
Please register here
https://docs.google.com/spreadsheets/d/1l7u778NDexQo1p4dyxWzAc6agLjTdjW3/edit?usp=sharing&ouid=104759152454313720264&rtpof=true&sd=true














