Wednesday , 25 November 2026

ಜನರಲ್ ವಾರ್ಡ್ – ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಅದೊಂದು ಪ್ರತಿಷ್ಠಿತ ಆಸ್ಪತ್ರೆ. ಎಲ್ಲ ಆಸ್ಪತ್ರೆಗಳಲ್ಲಿರುವಂತೆ ಅಲ್ಲಿಯೂ ಸಾಮಾನ್ಯ ರೋಗಿಗಳಿಗೆ ಬೇಕಾದ ಜನರಲ್ ವಾರ್ಡ್ ಕೂಡ ಇತ್ತು. ನೂರಕ್ಕೂ ಮಿಕ್ಕಿದ ಹಾಸಿಗೆ ಇರುವ ಜನರಲ್ ವಾರ್ಡಲ್ಲಿ ಸಹಜವಾಗಿಯೇ ಜನ ಜಂಗುಳಿ ಇರುತ್ತದೆ. ಸಾಧಾರಣವಾಗಿ ಪ್ರತಿಯೊಂದು ರೋಗಿಯ ಹಾಸಿಗೆಯ ಪಕ್ಕದಲ್ಲೆ ರೋಗಿಯೊಡನೆ ಒಬ್ಬರಿಗೆ ಇರುವಂಥ ವ್ಯವಸ್ಥೆಯೂ ಇರುತ್ತದೆ. ವ್ಯವಸ್ಥೆ ಎಂದರೆ ಹೆಚ್ಚುವರಿ ಹಾಸಿಗೆಯಾಗಲಿ ಮಂಚವಾಗಲಿ ಇರುವುದಿಲ್ಲ. ಬದಲಾಗಿ ರೋಗಿಯ ಮಂಚದ ಪಕ್ಕದಲ್ಲಿ ಅಂದರೆ ಭಾಗಷಃ ಮಂಚದ ಅಡಿಯಲ್ಲಿ ಮಲಗಿಕೊಳ್ಳಬಹುದು. ಆದರೆ ರೋಗಿಯ ಅನಾರೋಗ್ಯದ ಮುಂದೆ ಇದೆಲ್ಲ ಗೌಣವೆ ಮಾತ್ರವಲ್ಲ ಸಹನೀಯ ಕೂಡ. ಅಂತೆಯೇ ರೋಗಿಗಳನ್ನು ಸಂದರ್ಶಿಸಲು ಬರುವವರು, ಹಿತೈಷಿಗಳು ಎಂದು ಏನಿಲ್ಲವೆಂದರೂ ಒಂದೊಂದು ಮಂಚದ ಬಳಿ ಎರಡು ಮೂರು ಜನರು ರೋಗಿಯ ಹೊರತಾಗಿ ಇರುತ್ತಾರೆ. ಅಂದರೆ ಒಂದು ವಾರ್ಡಲ್ಲಿ ಇಪ್ಪತ್ತೈದು ಮಂಚಗಳಿದ್ದರೆ ಅಲ್ಲಿ ಕನಿಷ್ಟ ಎಪ್ಫತ್ತೈದು ಜನರಾದರೂ ರೋಗಿಗಳ ಹೊರತಾಗಿರುತ್ತಾರೆ. ಇದೆಲ್ಲವೂ ಸಹಜವೆ ಇದರಲ್ಲೇನು ವಿಶೇಷವಿದೆ ಎಂದು ನಿಮಗನಿಸಬಹುದು. ಆದರೆ ನಾನು ಒಂದೆರಡು ದಿವಸ ಈ ವಾರ್ಡಿನಲ್ಲಿರಬೇಕಾದ ಪ್ರಸಂಗವೊಂದು ಬಂದಿತ್ತು. ಆಗ ನಡೆದ ಘಟನೆ ನನಗೆ ಯಾವಾಗ ಆಸ್ಪತ್ರೆಗೆ ಹೋದಾಗಲೂ ನೆನಪಾಗುತ್ತದೆ. ಇವತ್ತು ಕಾರಣಾಂತರದಿಂದ ಆಸ್ಪತ್ರೆಗೆ ನಮ್ಮ ಹಿತೈಷಿಯೊಬ್ಬರನ್ನು ಕರಕೊಂಡು ಬರಲು ಹೋಗಿರುವಾಗ ಅದರ ನೆನಪಾಯಿತು ಹಾಗೂ ಅದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು..

ಅಂದು ನಾನು ರೋಗಿಯೊಡನೆ ಇರುವಾಗ ನಾನೊಬ್ಬನೇ ಇದ್ದೆ. ಆದರೆ ಇತರ ರೋಗಿಗಳೊಡನೆ ಮೂರು ನಾಲ್ಕು ಜನರಷ್ಟು ಇರುತ್ತಿದ್ದರು. ಆದರೆ ಒಂದು ಮಂಚದಲ್ಲಿ ಮಾತ್ರ ಮಕ್ಕಳು, ಹೆಂಗಸರು ಸೇರಿ ಹತ್ತಾರು ಜನರು ಕುರ್ಚಿ, ಹಾಸಿಗೆ, ನೆಲದ ಮೇಲೆ ಅಸ್ತವ್ಯಸ್ತವಾಗಿ ನಾವು ಮನೆಯೊಳಗಿನ ಬೆಡ್ ರೂಮಲ್ಲಿರುವಂತೆ ಗುಂಪು ಗುಂಪಾಗಿ ಇರುವುದರ ಜತೆ ತಮಾಷೆ ಮಾತಾಡಿಕೊಂಡು ಆಸ್ಪತ್ರೆಯೊಳಗೆ ಕೂಡ ಈ ರೀತಿಯಲ್ಲಿರಬಹುದು ಎಂದು ತೋರಿಸಿಕೊಟ್ಟಿದ್ದರು. ಇದನ್ನೆಲ್ಲ ನಾನು ಪಕ್ಕದಿಂದ ನೋಡುತ್ತಲಿದ್ದೆ. ಆಗ ನನಗೆ ಸಂಶಯವೊಂದು ಮೂಡಿತು. ಇಲ್ಲಿ ರೋಗಿ ಯಾರು.. ರೋಗಿಯನ್ನು ನೋಡಲೆಂದು ಬಂದವರು ಯಾರು.. ರೋಗಿಯೊಡನೆ ಇರುವವರು ಯಾರು.. ಒಂದೂ ಅರ್ಥವಾಗಿಲ್ಲ. ಇರಲಿ ನನಗ್ಯಾಕೆ ಅದೆಲ್ಲವೆಂದು ಸುಮ್ಮನಿದ್ದರೂ ಅವರ ಗಲಾಟೆ, ಮಾತು, ನಗು, ಮಕ್ಕಳ ಮೊಬೈಲಿನಿಂದ ಬರುವ ಕರ್ಕಶ ಧ್ವನಿ ಇದೆಲ್ಲ ಒಂದು ಹಂತದಲ್ಲಿ ಕಿರಿ ಕಿರಿ ಮಾಡುತ್ತಿದ್ದುದು ಅಂತು ಸುಳ್ಳಲ್ಲ. ಆದರೂ ನನಗೆ ರೋಗಿ ಯಾರೆಂದು ಇದ್ದ ಕುತೂಹಲ ಮಾತ್ರ ಕೊನೆಯಾಗಲಿಲ್ಲ.

ಅಷ್ಟರಲ್ಲಿ ಮುಖ್ಯ ವೈದ್ಯಾಧಿಕಾರಿ ರೌಂಡ್ಸಿಗೆ ಬರುವ ವೇಳೆಯಾಗಿತ್ತು. ನಾನು ಕೂಡ ಮಧ್ಯೆ ಮಧ್ಯೆ ವೈದ್ಯರ ಬರುವಿಕೆಯ ನಿರೀಕ್ಷೆಯಿಂದ ಹೊರಗೆ ನೋಡುತ್ತಲೆ ಇದ್ದೆ. ಅಂತೆಯೆ ನನ್ನೆದರಿನ ಮಂಚದಲ್ಲಿರುವ ಹತ್ತಾರು ಮಂದಿಗಳ ಕುಟುಂಬವೂ ವೈದ್ಯರ ನಿರೀಕ್ಷೆಯಲ್ಲಿ ಇಣುಕುತ್ತಲೇ ಇದ್ದರು. ಒಂದರ್ಧ ಗಂಟೆಯಾದ ಮೇಲೆ ವೈದ್ಯರು ಬರುವ ಲಕ್ಷಣ ಗೋಚರಿಸತೊಡಗಿತು. ಅದು ಹೇಗೆ ಲಕ್ಷಣ ಮೊದಲು ಗೋಚರಿಸುವುದು ಎಂಬ ಕುತೂಹಲ ನಿಮಗಿರಬಹುದು. ಮಳೆ ಬರುವ ಮೊದಲು ಗಾಳಿ, ಗುಡುಗು, ಮಿಂಚುಗಳು ಬರುವಂತೆ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಹಾಗೆಯೇ ಎನ್ನಬಹುದು. ಅದು ಈ ರೀತಿ ಇರುತ್ತದೆ. ಆಸ್ಪತ್ರೆಯ ಸಿಬ್ಬಂಧಿ ಏಕಾಏಕಿ ನಿಶ್ಶಬ್ಧರಾಗುತ್ತಾರೆ. ಅದೇನೊ ಘಟಿಸುತ್ತದೆ ಎಂಬ ತರಾತುರಿಯಲ್ಲಿ ನರ್ಸ್ಗಳೆಲ್ಲ ಹಿಂದೆ ಮುಂದೆ ಗಡಿಬಿಡಿಯಿಂದ ತಿರುಗಲಾರಂಭಿಸುತ್ತಾರೆ. ಅದರ ಮಧ್ಯೆ ಯಾರೋ ಒಂದಷ್ಟು ಜನ ಡಾಕ್ಟ್ರು ಬಂದ್ರು ಡಾಕ್ಟ್ರು ಬಂದ್ರು ಎಂದು ಗಾಭರಿಯೋ ಎಂಬಂತೆ ವಿಧೇಯತೆಯತ್ತ ಹೊರಳುತ್ತಾರೆ. ಸ್ವಚ್ಛತೆಯ ಕಾಯಕದಲ್ಲಿ ತೊಡಗಿರುವವರು ಸ್ವಲ್ಪ ಬದಿಗೆ ಸರಿದು ನಿಲ್ಲುತ್ತಾರೆ.. ಇಂಥ ಲಕ್ಷಣಗಳು ಕಂಡಾಗ ತುಂಬಾ ಜನರಿದ್ದ ಮಂಚದ ಕಡೆಯಿಂದ ಒಬ್ಬೊಬ್ಬರೆ ಹೊರಗೆ ಬರಲಾರಂಭಿಸುತ್ತಾರೆ. ಆಗ ನನ್ನ ಕುತೂಹಲಕ್ಕೆ ಉತ್ತರ ಸಿಗುವ ಸಮಯ ಬಂತೆಂದು ಅಂದಕೊಂಡೆ. ಅಂದರೆ ಕೊನೆಯಲ್ಲಿ ಯಾರು ಹಾಸಿಗೆಯಲ್ಲಿರುತ್ತಾನೊ ಆತನೇ ರೋಗಿ ಇರಬಹುದೆಂದು ಅಂದುಕೊಂಡೆ. ಹಾಗೆಯೇ ಆಯಿತೇ.. ಇಲ್ಲ. ಅಂದರೆ ಅಲ್ಲಿವರೆಗೆ ಹಾಸಿಗೆಯಲ್ಲಿ ತೆವಳಿಕೊಂಡಿದ್ದಂಥ ಯಾರೂ ರೋಗಿಗಳಲ್ಲ. ಪಕ್ಕದಲ್ಲಿ ಕುರ್ಚಿಯ ಮೇಲೆ ಮೊಬೈಲ್ ನೋಡಿಕೊಂಡಿದ್ದಂಥ ನಡುವಯಸ್ಸಿನ ಮಹಿಳೆಯೊಬ್ಬರು ಉಳಿದವರ ಚಡಪಡಿಕೆಯನ್ನು ಕಂಡು ಕೂಡಲೆ ಮೊಬೈಲನ್ನು ಹತ್ತಿರವಿದ್ದವರಲ್ಲಿ ಕೊಟ್ಟು ಬೇಗ ಬೇಗನೆ ಹೋಗಿ ಹಾಸಿಗೆಯಲ್ಲಿ ಮಲಗಿ ಕೊಂಡರು. ಅಲ್ಲಿಗೆ ನನಗೆ ಇದ್ದಂಥ ಕುತೂಹಲ ಹೊರಟು ಹೋಗುವುದರ ಜತೆಗೆ ಹೀಗೂ ಒಂದು ವಿಚಾರವಿದೆ ಎಂದು ಅರಗಿಸಿಕೊಳ್ಳಲು ಒಂದು ಕ್ಷಣವೇ ಬೇಕಾಯಿತು. ಮಾತ್ರವಲ್ಲ ಇದೊಂದು ತಮಾಷೆಯಾಗಿಯೂ ಕಂಡಿತು… ಅಂದರೆ ಆಸ್ಪತ್ರೆಯಲ್ಲಾದರು ಕೂಡ ಮಂಚದಲ್ಲಿ ಮಲಗಿದ್ದವನೇ ರೋಗಿಯಾಗಬೇಕಿಲ್ಲ. ಅಥವಾ ರೋಗಿಯಾದವನು ಮಂಚದಲ್ಲಿ ಮಲಗಬೇಕೆಂದಿಲ್ಲ ಎಂಬ ಸತ್ಯದ ಅನಾವರಣವಾಗಿತ್ತು… ಈ ಜಗತ್ತೇ ಒಂದು ವಿಶ್ವ ವಿದ್ಯಾಲಯ ಎಂದು ಇದಕ್ಕೇ ಹೇಳುವುದು..

Events/Announcements

Advertisement

ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಆಡಲು ಆಯ್ಕೆ – ಅವನಿ ಎನ್ ಗೋಗಟೆ

Post Views: 101 ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಹೊಸದೆಹಲಿ ಇವರು ನಡೆಸುವ ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಆಡಲು ನಟರಾಜ್ ಗೋಗಟೆ, ಚಿಕ್ಕಮಗಳೂರು ಜಿಲ್ಲೆ, ರವರ ಮಗಳು ಅವನಿ ಎನ್...

ಯೋಗ ಹಾಗೂ ಋತುಚಕ್ರದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಚಿತ್ಪಾವನ ಮಹಿಳಾ ಪ್ರತಿಭೆ.

Post Views: 92 ಯೋಗ ಹಾಗೂ ಋತುಚಕ್ರದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಚಿತ್ಪಾವನ ಮಹಿಳಾ ಪ್ರತಿಭೆ. ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ಪುತ್ತೂರಿನ ಸರಕಾರಿ ಪದವಿ ಕಾಲೇಜಿನಲ್ಲಿ...

*ಕಾರ್ಕಳ ಶ್ರೀ ಭಾರ್ಗವ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ*

Post Views: 107 ಕಾರ್ಕಳ ತಾಲೂಕು ಶ್ರೀ ಭಾರ್ಗವ ಸೌಹಾರ್ದ ಸಹಕಾರಿ ಸಂಘದ 16 ನೇ ವರ್ಷದ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 19 ರಂದು ಶನಿವಾರ ಕಾರ್ಕಳದ ಚಿತ್ಪಾವನ ಸಂಘದ ಶ್ರೀ...

ಉಜಿರೆಯಲ್ಲಿ ಚಿತ್ಪಾವನ ಭಾಷಾ ಕವಿಗೋಷ್ಠಿ

Post Views: 93 Update: ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ರ ಸಂಘ ಬೆಳ್ತಂಗಡಿ. ** ನಿನ್ನೆ ನಡೆದ ಚಿತ್ಪಾವನಿ ಭಾಷಾ ಕವಿಗೋಷ್ಠಿ ಚೆನ್ನಾಗಿ ನಡೆಯಿತು. ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ...

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 97 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 121 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 151 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 136 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 183 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 170 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 121 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 274 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 368 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 539 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 385 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 546 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 342 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 328 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 348 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 264 Courtesy: Scholarspace with Anubhav

Watch our latest podcasts