ಸರಕಾರಿ ಪ್ರೌಢಶಾಲೆ ಹಂಡ್ಲಿ ಶಿಕ್ಷಕರಾದ ಶ್ರೀ ವಿಕ್ರಾಂತ್ ಕೇಳ್ಕರ್ ರವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಕಲಿಕೆಯಲ್ಲಿ ಆಗುತ್ತಿರುವ ಕ್ಲಿಷ್ಟತೆ ನಿವಾರಿಸಲು ಪಾಠಗಳು ಸುಲಭವಾಗಿ ಅರ್ಥವಾಗುವಂತೆ ಮಾಡಲು ಚಿತ್ರಗಳ ಮೂಲಕ ಒಂದು ಸುಂದರ ಮತ್ತು ಪ್ರಭಾವಶಾಲಿ ಪುಸ್ತಕವನ್ನು ಹೊರ ತಂದಿರುತ್ತಾರೆ. *I-mage-nated lessons* ಅನ್ನುವ ಶೀರ್ಷಿಕೆಯನ್ನು ಈ ಪುಸ್ತಕಕ್ಕೆ ಕೊಟ್ಟಿರುತ್ತಾರೆ. ಪಠ್ಯ ಪುಸ್ತಕ ನನ್ನ ಕಲ್ಪನೆಯಲ್ಲಿ ಎಂಬ ಭಾವ ಇದರದು.
ಸುಲಭ ಕಲಿಕೆ ಜೊತೆಗೆ, ಚಿತ್ರಗಳನ್ನು ಮೂಲಕ ಓದಿದ ಅಂಶಗಳನ್ನು ಹೆಚ್ಚು ಕಾಲ ನೆನಪಿಟ್ಟುಕೊಳ್ಳುವಲ್ಲಿಯೂ ಈ ಪುಸ್ತಕ ಮಹತ್ವದ ಕೆಲಸ ಮಾಡುತ್ತದೆ.
ಈ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವಲ್ಲಿಯೂ ಇದು ಬಹಳ ಸಹಕರಿಯಾಗಲಿದೆ.
ನಿಧಾನಗತಿ ಕಲಿಕೆ ಇರುವ ವಿದ್ಯಾರ್ಥಿಗಳಿಗಂತೂ ಇದೊಂದು ದೊಡ್ಡ ವರದಾನವಾಗಲಿದೆ. ಶಿಕ್ಷಕರು ಬೋಧನೆ ಮಾಡುವಾಗಲೂ ಇದನ್ನು ಪೂರಕ ಸಂಪನ್ಮೂಲದಂತೆ ಬಳಸಿಕೊಂಡು ಪಾಠ ಮಾಡಬಹುದಾಗಿದೆ.
ಈ ಪುಸ್ತಕವನ್ನು ಜಿಲ್ಲಾ ಶಿಕ್ಷಣ ಸಂಸ್ಥೆ ಕೂಡಿಗೆ ಕುಶಾಲನಗರ ಇಲ್ಲಿ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಪ್ರಾ0ಶುಪಾಲರು ಮತ್ತು ಉಪನಿರ್ದೇಶಕರು (ಅಭಿವೃದ್ಧಿ ), ಶ್ರೀ ರಾಮಚಂದ್ರರಾಜೇ ಅರಸು ಇವರು ಪುಸ್ತಕ ಬಿಡುಗಡೆ ಮಾಡಿ ಶುಭ ಹಾರೈಸಿದರು. ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಕೃಷ್ಣಪ್ಪ ರವರು ಕೂಡ ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿ ಶುಭ ಕೋರಿದರು ಮತ್ತು ಇಂತಹ ಇನ್ನಷ್ಟು ಸೃಜನಶೀಲ ಪ್ರಯೋಗಳನ್ನು ಮಾಡುವಂತೆ ಪ್ರೆರೇಪಿಸಿದರು.















