ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ.
ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ
C/O ಡಾ. ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.
ಸಮುದಾಯ ಸೇವಾ ಉಪಕ್ರಮ
ತಮ್ಮವರಿಗಾಗಿ ಅನಾರೋಗ್ಯದ ವೇಳೆ ಖರೀದಿಸಿದ್ದು ಈಗ ಅವಶ್ಯವಿಲ್ಲದ ವೈದ್ಯಕೀಯ ಸಲಕರಣೆಗಳು (ವಾಟರ್ ಬೆಡ್, ವೀಲ್ ಚೇರ್, ವಾಕರ್ ಇತ್ಯಾದಿ) ತಮ್ಮಲ್ಲಿ ಸುಸ್ಥಿತಿಯಲ್ಲಿ ಇದ್ದಲ್ಲಿ, ತಮ್ಮ ವಿಳಾಸ, ಸಲಕರಣೆಯ ಹೆಸರು, ಸಂಪರ್ಕದ ದೂರವಾಣಿ ಸಂಖ್ಯೆಯನ್ನು ನಮ್ಮ ಕ್ಲಿನಿಕ್ ನಲ್ಲಿ ಇಟ್ಟ ನೊಂದಣಿ ಪುಸ್ತಕದಲ್ಲಿ ನೊಂದಾಯಿಸಬಹುದು.
ಗಮನಿಸಿ: ಈ ಸಲಕರಣೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಿರಿ. ಬೇರೆ ಎಲ್ಲಿಯೂ ತಾವು ತಲುಪಿಸುವ ಅವಶ್ಯಕತೆ ಇಲ್ಲ. ಈ ಸಲಕರಣೆಗಳನ್ನು ತರುವ ಅವಶ್ಯಕತೆ ಇಲ್ಲ. ನಮ್ಮಲ್ಲಿ ಇರಿಸಿಕೊಳ್ಳಲು ಸ್ಥಳವು ಇಲ್ಲ.
ಅದನ್ನು ಅವಶ್ಯವಿರುವ ರೋಗಿಗಳಿಗೆ ಆ ಸಲಕರಣೆ ಬೇಕಾದಾಗ ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ಅವರು ಕ್ಲಿನಿಕ್ ಸಮಯದಲ್ಲಿ ಬಂದು ಮಾಹಿತಿಯನ್ನು ಸಂಗ್ರಹಿಸಬಹುದು.
ಈ ಉಪಕ್ರಮದ ವಿಶೇಷತೆಗಳು
✅ ಸಂಪನ್ಮೂಲಗಳ ಸದುಪಯೋಗ – ಮೂಲೆಗುಂಪಾದ ಸಲಕರಣೆಗಳು ಅವಶ್ಯವಿರುವವರಿಗೆ ಸಿಗುತ್ತವೆ
✅ ಸಮುದಾಯದಲ್ಲಿ ಪರಸ್ಪರ ಸಹಾಯ – ನೆರೆಹೊರೆಯವರಿಗೆ ನೇರವಾಗಿ ಸಹಾಯ
✅ ಆರ್ಥಿಕ ಭಾರ ಕಡಿಮೆ – ದುಬಾರಿ ಸಲಕರಣೆಗಳನ್ನು ಮರುಖರೀದಿ ಮಾಡುವ ಅವಶ್ಯಕತೆ ಇಲ್ಲ
✅ ಪರಿಸರ ಸ್ನೇಹಿ – ಮರುಬಳಕೆ ಮೂಲಕ ಪರಿಸರ ಸಂರಕ್ಷಣೆ
ಮಹತ್ವದ ಸೂಚನೆಗಳು
ಉದ್ದೇಶ: ಯಾವುದೇ ರೀತಿಯಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ಅವಶ್ಯವಿರುವ ರೋಗಿಗಳಿಗೆ ಮೂಲೆಗುಂಪಾದ ಸಲಕರಣೆ ಉಪಯೋಗವಾಗಲಿ ಎಂಬ ಉದ್ದೇಶದೊಂದಿಗೆ ಈ ಸಲಕರಣೆಗಳು ಇರುವ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ಪರಿವಿಡಿಯನ್ನು (Index) ಇಡಲಾಗುತ್ತಿದೆ.
ದಾನ ಮತ್ತು ಧನ ಸಹಾಯದ ಅವಶ್ಯಕತೆ ಇಲ್ಲ.
ಶ್ರೀಮತಿ ರಕ್ಷಾ ಪಟವರ್ಧನ
ಅಧ್ಯಕ್ಷರು
ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ
ಗಮನಿಸಬೇಕಾದ ಷರತ್ತುಗಳು:
⚠️ ದೂರವಾಣಿಯ ಮೂಲಕ ಸಲಕರಣೆಯ ಮಾಹಿತಿ ನೀಡುವ ವ್ಯವಸ್ಥೆ ಇರುವುದಿಲ್ಲ
⚠️ ತಾತ್ಕಾಲಿಕ ಬಳಕೆಗಾಗಿ ಮಾತ್ರ – ಸಲಕರಣೆ ಮಾಹಿತಿ ಅಗತ್ಯವಿದ್ದವರಿಗೆ ತಿಳಿಸಿ ಮರುಬಳಕೆ ಮಾಡಿ
⚠️ ಸಲಕರಣೆಗೆ ಯಾವುದೇ ರೀತಿ ಹಾನಿಯಾದಲ್ಲಿ, ರಿಪೇರಿಗೆ, ಹಾನಿಗೆ ನಾವು ಜವಾಬ್ದಾರರಲ್ಲ
⚠️ ಸಲಕರಣೆ ಕೊಟ್ಟವರು ಹಾಗೂ ಪಡೆದುಕೊಂಡವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಲ್ಲಿ ನಾವು ಜವಾಬ್ದಾರರಲ್ಲ
⚠️ ಈ ವ್ಯವಸ್ಥೆ ಶಿರಸಿಗೆ ಮಾತ್ರ ಸೀಮಿತವಾಗಿರುತ್ತದೆ
ಕ್ಲಿನಿಕ್ ಸಮಯದಲ್ಲಿ ನೋಂದಾಯಿಸಿ
ಸಮುದಾಯದ ಕಲ್ಯಾಣಕ್ಕಾಗಿ – ಒಟ್ಟಿಗೆ ಸಹಾಯ ಹಸ್ತ ಚಾಚೋಣ 🙏















