ನಿನ್ನೆ ನಡೆದ ಬಾಲ ಕೃಷ್ಣ ಸಹಸ್ರಬುದ್ಧ ಅವರ ನಾಲ್ಕು ಪುಸ್ತಕಗಳು
1) ಚಿತ್ಪಾವನಿ ಭಾಷೆಯ ಬಾಳುಚಿ ಮಾಳಿ
2)ಬಾಳಪ್ಪನ ಬರಹಗಳು
3) ಬದುಕು ಕಟ್ಟಿದ ಕವನ
4) ವಿಟ್ಟು ಅಜ್ಜ ಮತ್ತು ಇತರ ಕವನಗಳು
ಇದರ ಬಿಡುಗಡೆ ಸಮಾರಂಭ ತುಂಬಾ ಸೊಗಸಾಗಿ ಅದ್ದೂರಿಯಾಗಿ ನಡೆಯಿತು. ತುಂಬಾ ಅಚ್ಚು ಕಟ್ಟಾಗಿ ನಡೆದ ಕಾರ್ಯಕ್ರಮ. ಸಹಸ್ರಬುದ್ಧೆ ಕುಟುಂಬಸ್ಥರು ಮುಖ್ಯವಾಗಿ ಮಕ್ಕಳು ಶಾರ್ವರಿ ಮತ್ತು ನವಮಿ ಎಲ್ಲೂ ಚುತಿ ಬಾರದಂತೆ ಕಾರ್ಯಕ್ರಮ ನಡೆಯುಲು ಪೂರ್ವ ತಯಾರಿ ಮಾಡಿ ತುಂಬಾ ಶ್ರಮಪಟ್ಟದ್ದು ಗೋಚರವಾ ಗುತಿತ್ತು.
ಸಭಾ ವೇದಿಕೆ ಮತ್ತು ನಿರ್ವಹಣೆ, ದ್ವನಿ ವರ್ಧಕ ಚೆನ್ನಾಗಿತ್ತು. ಪುಸ್ತಕ ವಿಮರ್ಶೆಯನ್ನು ಶ್ರೀ ದಿನಕರ ಗೋಖಲೆ, ಶ್ರೀಕರ ಮರಾಠೆ, ಅನಂತ ತಾಮನ್ಕಾರ್ ಮತ್ತು ಚಂದ್ರಕಾಂತ ಗೋರೆ ಯವರು ಸುಂದರ ವಾಗಿ ಮಾಡಿದರು. ಶ್ರೀಧರ ಭಿಡೆ ಯವರು ಚಿಕ್ಕ ಆದರೆ ಅಷ್ಟೆ ಚೊಕ್ಕ ಭಾಷಣ ಮಾಡಿದರು. ಶ್ರೀ ಪ್ರಭಾಕರ ಜೋಶಿ ಯವರ ಮಾತು ಮಾಹಿತಿ ಪೂರ್ಣವಾಗಿತ್ತು.
ಶ್ರೀ ಬಾಳ ಕೃಷ್ಣ ಸಹಸ್ರಬುದ್ಧೆಯವರು ಪ್ರಾಸ್ತವಿಕ ಭಾಷಣ ದಲ್ಲಿ ತಮ್ಮ ಮನ ದಾಳದ ವಿಷಯ ಗಳನ್ನು ಸೊಗಸಾಗಿ ವಿವರಿಸಿದರು ನಾರಾಯಣ ಫಡಕೆಯವರ ನಿರ್ವಹಣೆ ಚೊಕ್ಕವಾಗಿತ್ತು.
ಸಾಮಾನ್ಯ ವಾಗಿ ಸಾಹಿತ್ಯ ಸಭೆ ಗಳಿಗೆ ಜನ ಬರುವುದು ಕಮ್ಮಿ ಆದರೆ ನಿನ್ನೆ ಆಧಿಕ ಸಂಖ್ಯೆ ಯಲ್ಲಿಜನರು ಬಂದದ್ದು ಖುಷಿ ಕೊಡುತಿತ್ತು. ನಂತರ ಉಪಾಹಾರ ಗಡದ್ದು ಆಗಿದ್ದು,ಉಪ ಆಹಾರ ವಾಗದೆ ಊಟದ ಹಾಗೆ ಇತ್ತು.
ಒಂದು ಪುಸ್ತ ಕ ಬರೆಯುವುದು, ಪ್ರಕಾಶನ ಮಾಡುವುದು ಕಷ್ಟ ಹಾಗಿರುವಾಗ ಬಾಲಕೃಷ್ಣ ಸಹಸ್ರಬುದ್ಧೆಯವರು 4 ಪುಸ್ತಕ ಬಿಡುಗಡೆ ಮಾಡಿದ್ದು ದೊಡ್ಡ ಸಾಹಸ.
ಎಲ್ಲರೂ ನಾಲ್ಕೂ ಪುಸ್ತಕ ಕೊಂಡು ಲೇಖಕರನ್ನು ಪ್ರೋತ್ಸಾಹಿಸ ಬೇಕಾಗಿ ವಿನಂತಿ.
















