ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಕೆರೆಪರಶುರಾಮ ದೇವಸ್ಥಾನದ ಹತ್ತಿರ ಇರುವ ಶ್ರೀ ಪ್ರಶಾಂತ ಗೋಖಲೆ(ಮೂಲದಿಡುಪೆ) ಇವರ ಸ್ವಗೃಹ ಶ್ರೀರಾಮನಿಲಯದಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿ ಸತತ ಐದು ದಿನಗಳ ಕಾಲ ನಡೆಯುತ್ತಿರುವ ಕೃಷ್ಣ ಯಜುರ್ವೇದ ಪಾರಾಯಣದ ಝಲಕ್.ಇದರಲ್ಲಿ ಶ್ರೀ ಅಂಶುಮಾನ್ ಅಭ್ಯಂಕರ್ ಹಾಗೂ ಅವರ ವಿಪ್ರವಟುಗಳ ಬಳಗ.ಶ್ರೀನಿಧಿ ಅಭ್ಯಂಕರ್ ಅಲ್ಲದೇ ಹಲವು ವೇದೋಪಾಸಕರು ಭಾಗಿಯಾಗಿ ಪಾರಾಯಣ ನಡೆಸುತ್ತಿದ್ದಾರೆ.ಇದೆಲ್ಲವನ್ನೂ ಕಣ್ಣಿನಿಂದ ಕಾಣಲು ಕಿವಿಯಿಂದ ಆಲಿಸಲು ಸಿಗುವ ಭಾಗ್ಯ ಬೇರೆಲ್ಲೂ ಸಿಗದು.ನಮ್ಮ ಮುಂಡಾಜೆಯ ಪ್ರಶಾಂತ ಗೋಖಲೆಯವರ ಮನೆಗೆ ಬಂದು ಒಮ್ಮೆ ಭೇಟಿ ನೀಡಿ ಈ ಪಾರಾಯಣದ ಸವಿಯನ್ನು ಆಸ್ವಾದಿಸಲು ಬನ್ನಿ.ಶ್ರೀಪ್ರಶಾಂತ ಗೋಖಲೆಯವರ ವಿನಮ್ರ ವಿನಂತಿಯೂ ಪಾರಾಯಣವನ್ನು ಆಸ್ವಾದಿಸಲು ಆಮಂತ್ರಣವೂ ಇದರ ಜೊತೆಗೆ ಇದೆ🙏
















