ಶ್ರೀಗುರುಭ್ಯೋ ನಮಃ.
ಗುರುವಾರ, ಜುಲೈ 10, 2025 ರಂದು ಪ್ರಾರಂಭವಾಗುವ ಈ ವರ್ಷದ ಚಾತುರ್ಮಾಸ್ಯದಲ್ಲಿ ನಿರತರಾಗುವ ಶೃಂಗೇರಿ ಶ್ರೀ ಶ್ರೀ ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆಯುವ ಕುರಿತು.
ಸುಮಾರು ಎರಡು ವರ್ಷಗಳ ಹಿಂದೆ ಕೆಲವು ಚಿತ್ಪಾವನ ಬಾಂಧವರು ಶೃಂಗೇರಿ ಶ್ರೀ ಶ್ರೀ ಜಗದ್ಗುರುಗಳ ಸನ್ನಿಧಾನದ ಭೇಟಿಯ ಸಂದರ್ಭ, ಚಾತುರ್ಮಾಸ್ಯ ಸಮಯದಲ್ಲಿ ಚಿತ್ಪಾವನ ಸಮುದಾಯಕ್ಕೆ ಪೂಜ್ಯ ಗುರುಗಳ ದರ್ಶನ ಪಡೆಯಲು ನಿರ್ದಿಷ್ಟ ದಿನ ನಿಗದಿಪಡಿಸುವಂತೆ ನಿವೇದನೆ ಮಾಡಿಕೊಳ್ಳಲಾಗಿತ್ತು. ಈ ಕುರಿತಂತೆ, ಈ ವರ್ಷದ ಚಾತುರ್ಮಾಸ್ಯದ, ಬರುವ ಜುಲೈ 31, 2025 ರ ಗುರುವಾರದಂದು ಚಿತ್ಪಾವನ ಸಮುದಾಯಕ್ಕೆ ಪೂಜ್ಯ ಗುರುಗಳ ದರ್ಶನಕ್ಕೆ ಶ್ರೀ ಮಠದಿಂದ ಅವಕಾಶ ಕಲ್ಪಿಸಿ ಮಾಹಿತಿ ನೀಡಿದ್ದಾರೆ
ಆದುದರಿಂದ ಜುಲೈ 31, 2025 ಗುರುವಾರದಂದು ಶೃಂಗೇರಿ ಚಿತ್ಪಾವನ ಸಮಾಜದ ಮುಂದಾಳತ್ವದಲ್ಲಿ, ಕರ್ನಾಟಕದ ಎಲ್ಲ ಚಿತ್ಪಾವನ ಘಟಕಗಳ ಸಹಕಾರದೊಂದಿಗೆ, ರಾಜ್ಯದಾದ್ಯಂತ ಇರುವ ಚಿತ್ಪಾವನ ಸಮಾಜದ ಬಾಂಧವರು ಕುಟುಂಬ ಸಮೇತರಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪೂಜ್ಯ ಗುರುಗಳ ದರ್ಶನಾಶೀರ್ವಾದ ಪಡೆದು ಕೃತಾರ್ಥರಾಗೋಣ.
ಆ ಪ್ರಯುಕ್ತ ರಾಜಾನಗರದಲ್ಲಿರುವ ಶೃಂಗೇರಿ ತಾಲೂಕು ಬ್ರಾಹಣಮಹಾಸಭಾದ ವಿದ್ಯಾಭಾರತೀ ಭವನದಲ್ಲಿ ಅದೇ ದಿನ ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಸಮಾಜ ಬಾಂಧವರು ಒಗ್ಗೂಡಿ ನಮ್ಮ ಸಂಘಟನೆಯ ಬಗ್ಗೆ ಪರಸ್ಪರ ವಿಚಾರವಿನಿಮಯ ಮಾಡಿಕೊಂಡು, ಅಲ್ಲಿಂದ ನೇರವಾಗಿ 11:00 ಘಂಟೆಗೆ ಶ್ರೀಶ್ರೀಗಳವರ ದರ್ಶನ ಪಡೆದು, ಅಮ್ಮನವರ ಪ್ರಸಾದವನ್ನು ಸ್ವೀಕರಿಸಿ ಅನುಗ್ರಹಕ್ಕೆ ಪಾತ್ರರಾಗೋಣ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುನ್ನಾ ದಿನವೇ ಶೃಂಗೇರಿಗೆ ಬರುವವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಶೃಂಗೇರಿ ಚಿತ್ಪಾವನ ಸಂಘದ ಅಧ್ಯಕ್ಷರಾದ ಶ್ರೀ ಮಹಾಬಲ ಭಿಡೆ ಅಥವಾ ಶ್ರೀ ಹರೀಶ್ ಡೋಂಗ್ರೆ ಯವರನ್ನು ಸಂಪರ್ಕಿಸಬೇಕಾಗಿ ವಿನಂತಿ.
ಸಂಪರ್ಕ ಸಂಖ್ಯೆ:
ಶ್ರೀ ಮಹಾಬಲ ಭಿಡೆ – 9448503400, 7975404993
ಶ್ರೀ ಹರೀಶ್ ಡೋಂಗ್ರೆ – 9480753385

















