Thursday , 24 September 2026

ಹಿಮಾಲಯ ಪರ್ವತ ಶ್ರೇಣಿಯಲ್ಲೊಂದು ಚಾರಣ – ವಿಭಾ ಡೋಂಗ್ರೆ ಫಡ್ಕೆ

*ಹಿಮಾಲಯ ಪರ್ವತ ಶ್ರೇಣಿಯಲ್ಲೊಂದು ಚಾರಣ*
***********
ಅಂದು ದಿನಾಂಕ ಫೆಬ್ರವರಿ 1, 2026. ನನ್ನ ಬಹು ನಿರೀಕ್ಷಿತ ಚಾರಣದ ಮೊದಲನೆಯ ದಿನ. ನಾನು ಮತ್ತು ನನ್ನ ಗೆಳತಿ ಬೆಳ್ಳಂಬೆಳಗ್ಗೆ ತಯಾರಾಗಿ ರಿಷಿಕೇಶದ Live free ಹಾಸ್ಟೆಲಿನ ಬಳಿ ನಮ್ಮ ಇಂಡಿಯಾ ಹೈಕ್ಸ್ ನ pick-up ವಾಹನಕ್ಕಾಗಿ ಕಾಯುತ್ತಿದ್ದೆವು. ಬಹುದಿನಗಳ ಆಸೆ ನೆರವೇರುತ್ತಿರುವ ಖುಷಿ, ಮು೦ದಿನ ಆರು ದಿನಗಳೆಂತಿರಬಹುದೆಂಬ ಕಾತುರದೊಂದಿಗೆ ನಮ್ಮ ಪ್ರಯಾಣ ಶುರುವಾಯಿತು, ದೇವ್ರಿಯಾತಾಲ್ ಚಂದ್ರಶಿಲಾ ಎಂಬ ಚಾರಣದ ಕಡೆ.

ದೇವ್ರಿಯಾತಾಲ್ ಎಂಬುದು ಉತ್ತರಾಖಂಡದಲ್ಲಿರುವ ಒಂದು ಸುಂದರವಾದ ಸರೋವರ. ಚಂದ್ರಶಿಲಾ ಶಿಖರವು ಹಿಮಾಲಯದ ಸುಮಾರು 12,೦೦೦ ಅಡಿ ಎತ್ತರದಲ್ಲಿರುವ ಪ್ರಸಿದ್ಧ ಚಾರಣ ತಾಣ. ಇಂಡಿಯಾ ಹೈಕ್ಸ್ ಎಂಬ ಟ್ರೆಕ್ಕಿಂಗ್ ಸಂಸ್ಥೆಯು ಇವೆರಡು ಜಾಗಗಳನ್ನು ನಯನ ಮನೋಹರ ಕಾಡಿನ ಹಾದಿಯಲ್ಲಿ ಕ್ರಮಿಸುವ ಏರ್ಪಾಡು ಮಾಡುತ್ತದೆ.

ಮೊದಲನೆಯ ದಿನ ನಾವು ಸಾರಿ ಎಂಬ ಹಳ್ಳಿಯಲ್ಲಿರುವ ನಮ್ಮ base campಗೆ ತಲುಪಿ, ವಿಶ್ರಮಿಸಿದೆವು. ದೇವ ಪ್ರಯಾಗ, ರುದ್ರಪ್ರಯಾಗಗಳ ರಮಣೀಯ ದೃಶ್ಯಾವಳಿಯಲ್ಲಿ ಸಾರಿ ತಲುಪಿದ್ದೇ ತಿಳಿಯಲಿಲ್ಲ. ವೃತ್ತಿಪರ ಇಂಡಿಯಾ ಹೈಕ್ಸ್ ತಂಡವು ಮುಂದಿನ ಐದು ದಿನಗಳ ಕಾರ್ಯಸೂಚಿಯನ್ನು ಬಹಳ ವಿವರವಾಗಿ ತಿಳಿಸಿ ನಮ್ಮನ್ನು ಮಾನಸಿಕವಾಗಿ prepare ಮಾಡಿದರು.
ಮರುದಿನ, black tea ಮತ್ತು oxygen, BP check-upನೊ೦ದಿಗೆ ನಮ್ಮ ದಿನ ಶುರುವಾಯಿತು. ನಮ್ಮ ತಂಡದಲ್ಲಿ ಒಟ್ಟು 14 ಚಾರಣಿಗರಿದ್ದರು. ನಮ್ಮೊಂದಿಗೆ ಒಬ್ಬ ಟ್ರೆಕ್ ಲೀಡರ್ ಮತ್ತು ಇಬ್ಬರು ಸ್ಥಳೀಯ ಗೈಡ್‌ಗಳಿದ್ದರು. ಸಾರಿ ಹಳ್ಳಿಯ ಜನಜೀವನದ ಮಧ್ಯೆ ನಮ್ಮ ಚಾರಣ ಶುರುವಾಯಿತು. ಸ್ವಲ್ಪ ದೂರ ಸಾಗುತ್ತಿದ್ದಂತೆ, ಹಿಮದ ರಾಶಿ ಕಾಣತೊಡಗಿತು. “Snow trek” ಎಂದು ಬ೦ದಿದ್ದರೂ, ಮೊದಲನೇ ದಿನವೇ ಹಿಮದ ದರ್ಶನವಾಗುತ್ತದೆಂದು expect ಮಾಡಿರಲಿಲ್ಲ. ಮನಸ್ಸಿನಲ್ಲಿದ್ದ ಕಾತುರ ಇಮ್ಮಡಿಗೊಂಡಿತು. ಬಹು ಸುಂದರವಾದ ಕಾಡುಮೇಡಿನಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ನಷ್ಟು ಅಲೆಯುತ್ತಾ, ನಾವು ನಮ್ಮ ಮೊದಲನೇ campsiteಗೆ ಮಧ್ಯಾಹ್ನ ತಲುಪಿದೆವು. ಊಟ ಮಾಡಿ, ಸ್ವಲ್ಪ ವಿಶ್ರಮಿಸಿ, ಇದೀಗ ದೇವ್ರಿಯಾತಾಲ್ ಗೆ ಹೋಗುವ ಸಮಯ. ತುಂಬಾ ಚಳಿಯಿರುತ್ತದೆಂದು ನಮ್ಮ ಗೈಡ್ ಗಳು ಎಚ್ಚರಿಸಿದ್ದರಿಂದ ನಾವೆಲ್ಲರೂ layer-up ಆಗಿ ಹೊರಟೆವು. ಸುಮಾರು ಒಂದು ಕಿಲೋಮೀಟರ್ ಕ್ರಮಿಸಿದಾಗ ನಮ್ಮ ಮುಂದಿತ್ತು ದೇವ್ರಿಯಾತಾಲ್ ಎಂಬ ಪ್ರಶಾಂತವಾದ, ಸುಂದರವಾದ ಸರೋವರ. ಸೂರ್ಯನ ಸಾಥ್ ಸಿಗದೇ, ಅಂದು ನಾವು ಚೌಖಂಬ ಶಿಖರದ ಪ್ರತಿಫಲನ ಕಾಣದಾದೆವು. ಆದರೆ ಸರೋವರದ ಪ್ರಶಾಂತತೆ, ಸುತ್ತಲಿನ ಹಿಮದ ರಾಶಿ ಕಂಡು ಮನಸ್ಸು ಹಿಗ್ಗಿತ್ತು. ಅಲ್ಲಿಂದ campsite ತಲುಪುವಾಗ ರಾತ್ರಿಯಾಗಿದ್ದು, ಇಂಡಿಯಾ ಹೈಕ್ಸ್ ನ ರುಚಿಕರವಾದ ಭೋಜನವು ನಮ್ಮ ಬರಮಾಡಿತು. camping tentನಲ್ಲಿ, sleeping bagನಲ್ಲಿ ಮಲಗುವ ಹೊಸ ಅನುಭವದೊಂದಿಗೆ ಈ ದಿನದ ಸಂಭ್ರಮ ಸಂಪೂರ್ಣವಾಯಿತು.


Advertisement:


ಮರುದಿನ, ನಮ್ಮ ಚಾರಣದ ದೀರ್ಘವಾದ ದಿನ. ಸುಮಾರು 9 ಕಿ.ಮೀ. ದೂರವನ್ನು ಕ್ರಮಿಸಿ ಸಾಯಂಕಾಲದೊಳಗೆ ನಮ್ಮ ಎರಡನೇ campsite (Syalmi campsite)ನ್ನು ತಲುಪಬೇಕಿತ್ತು. ಈ ದಿನದ ಚಾರಣದ ಹಾದಿ ಬಹುಸುಂದರ ಮತ್ತು ಸ್ಮರಣೀಯ. ಹಿಮಾವೃತವಾದ ಕಾಡುಗಳು, ಹುಲ್ಲುಗಾವಲುಗಳು – ನೋಡಲೆರಡು ಕಣ್ಣುಗಳು ಸಾಲದು. ಝಂಡಿ ಟಾಪ್‌ನಲ್ಲಿ ಮಧ್ಯಾಹ್ನದ ಭೋಜನ, ರೋಹಿಣಿ ಬುಗ್ಯಾಲ್ನಲ್ಲಿ ಹಿಮಚೆಂಡಾಟ, ಸಂಜೆಯ ರಂಗೇರಿಸಲು ಲಘು ಹಿಮಪಾತ. We could not have asked for more!

ಮರುದಿನದ ಚಾರಣ “ಬನಿಯಾ ಕುಂಡ್” Campsite ಕಡೆಗೆ. ಈ ದಿನವನ್ನು ಮತ್ತಷ್ಟು ಸ್ವಾರಸ್ಯಮಯಗೊಳಿಸಲು ಬಂತು DIY trek concept. ಈ ದಿನ, 14 ಚಾರಣಿಗರಲ್ಲೇ, ಒಬ್ಬರು ಟ್ರೆಕ್ ಲೀಡರ್, ಇನ್ನಿಬ್ಬರು ಟ್ರೆಕ್ ಗೈಡ್ ಗಳು, ಮತ್ತಿಬ್ಬರು kitchen team ಸದಸ್ಯರು, ಇತ್ಯಾದಿ. ನಮ್ಮ ಕೈಯಲ್ಲಿ compass ಕೊಟ್ಟು, ತಮ್ಮ ಕೈಗಳನ್ನು ತಲೆದಿಂಬಾಗಿಸಿ ವಿಶ್ರಾಮಾವಸ್ಥೆಗೆ ಜಾರಿಬಿಟ್ಟರು ನಮ್ಮ ಟ್ರೆಕ್‌ಲೀಡರ್ ಮತ್ತು ಗೈಡ್‌ಗಳು. ನಾವೂ ಕೂಡ ಸೋಲೊಪ್ಪಿಕೊಳ್ಳದೇ, ಸಕಾಲಕ್ಕೆ campsite ತಲುಪಿ ನಮ್ಮ ಟ್ರೆಕ್‌ಲೀಡರ್ ಮತ್ತು ಗೈಡ್ ಗಳನ್ನು ಅವರ ಪರಿಯಲ್ಲೇ ಸ್ವಾಗತಿಸಿದೆವು. ಈ ದಿನವೂ ಕೂಡ ಪ್ರಕೃತಿ ಸೌಂದರ್ಯ ತನ್ನ ಮತ್ತೊಂದು doseನೊ೦ದಿಗೆ ನಮ್ಮನ್ನು ಬೆರಗುಗೊಳಿಸಿತ್ತು. ತರಹೇವಾರಿ ಕಾಡುಗಳು, ಹರಿಯುವ ನದಿಗಳು, ಬದಲಾಗುತ್ತಿದ್ದ ಭೂವಿನ್ಯಾಸಗಳು ಮೈಮನಸ್ಸನ್ನು ಸಂತೈಸಿದ್ದವು. ಬನಿಯಾ ಕುಂಡ್ campsite ತಲುಪುತ್ತಿದ್ದಂತೆ, ಎಲ್ಲರ ಮೊಗದಲ್ಲೂ ಮಂದಹಾಸ, ಎಲ್ಲೆಲ್ಲೂ ಹಿಮರಾಶಿ ಮತ್ತು ಕೊರೆಯುವ ಚಳಿ. ಇoಡಿಯಾ ಹೈಕ್ಸ್ ನ kitchen team ಆ ಕೊರೆಯುವ ಚಳಿಗೇ ಸವಾಲೊಡ್ಡುವಂತೆ ಬಿಸಿ ಬಿಸಿಯಾದ “soupy noodles” ಮಾಡಿಕೊಟ್ಟು ನಮ್ಮೆಲ್ಲರ ಪುಣ್ಯ ಕಟ್ಟಿಕೊಂಡರು. ಮರುದಿನದ ಚಾರಣ ಸ್ವಲ್ಪ challenging ಹಾಗೂ ಮಧ್ಯರಾತ್ರಿಯೇ ಶುರುವಾಗಬೇಕಿದ್ದರಿಂದ, ನಮ್ಮೆಲ್ಲರನ್ನೂ ಹುರಿದುಂಬಿಸಲು, ಹಿಂದಿನ ರಾತ್ರಿಯೇ ಒಬ್ಬ motivational speaker ಆಗಮಿಸಿದರು. ಚಾರಣ ಎಂದರೇನು, ಒಬ್ಬ ಚಾರಣಿಗನ ಶಿಸ್ತು ಎಂತಿರಬೇಕು, ಚಾರಣಿಗನ ಜವಾಬ್ದಾರಿಗಳೇನು ಎಂಬುದನ್ನು ಬಹಳ ಸೊಗಸಾಗಿ ತಿಳಿಸಿಕೊಟ್ಟ ಈ ಪುಣ್ಯಾತ್ಮ ಯಾರು ಎಂಬ ಪ್ರಶ್ನೆಗೆ, ಉತ್ತರವೂ ಅಷ್ಟೇ ರೋಚಕವಾಗಿತ್ತು. “Snow leopard” ಎಂದು ಕರೆಯಲ್ಪಡುವ ಇವರು, ಹಿಮಪರ್ವತಗಳ expert. ಚಾರಣದಲ್ಲೆಲ್ಲಾದರೂ ಅಪಾಯಕಾರಿ ಜಾಗಗಳಿದ್ದರೆ, risk mitigationಗೆ ಇವರು ಹಾಜರ್. ಹಿಮಪರ್ವತ ಚಾರಣಗಳಲ್ಲಿ ಉಪಯೋಗಿಸಲ್ಪಡುವ gaiters, snow spikes ಇತ್ಯಾದಿಗಳನ್ನು ಬಳಸುವುದು ಹೇಗೆ೦ದು ನಮಗೊಂದು demo ಕೂಡ ನೀಡಿ ಮರುದಿನದ ಸಾಹಸಕ್ಕೆ ನಮ್ಮೆಲ್ಲರನ್ನೂ ಅಣಿಗೊಳಿಸಿದರು.

   

ಕೊನೆಯ ದಿನದ ಚಾರಣ, ಚಂದ್ರಶಿಲಾ ಶಿಖರದ ಉತ್ತುಂಗ. ಸುಮಾರು ಆರು ಕಿಲೋಮೀಟರ್ ಗಳಷ್ಟು ಕಡಿದಾದ ಆರೋಹಣ. ಒಟ್ಟು ಕ್ರಮಿಸಬೇಕಾಗಿರುವ ದೂರ 13 ಕಿಮೀಗಳಾದರೂ, 3,000+ ft elevation gain, ಈ ಚಾರಣವನ್ನು ಕಠಿಣಕರವಾಗಿಸುತ್ತದೆ. ಬೆಳಗ್ಗಿನ ಜಾವ 3 ಗ೦ಟೆಗೆ, -5 ಡಿಗ್ರಿಗಳ ತಾಪಮಾನದಲ್ಲಿ ಚಾರಣಿಗರೆಲ್ಲರೂ ಎದ್ದು ತಯಾರಾದರು. ಡ್ರಮ್ ನಲ್ಲಿದ್ದ ನೀರು ಮಂಜುಗಡ್ಡೆಯಾಗಿದ್ದು, ಅದನ್ನು ಕುಟ್ಟಿ ಕುಟ್ಟಿ ನೀರಾಗಿಸಿ ತಯಾರಾಗುವಷ್ಟರಲ್ಲಿ 4 ಗಂಟೆ ಆಗಿಯೇ ಹೋಯಿತು. ಬೆಳದಿಂಗಳೊಡನೆ, ನಮ್ಮ head lampಗಳೂ ಸೇರಿ, ನಮ್ಮ ಪಯಣಕ್ಕೆ ಜ್ಯೋತಿ ಬೆಳಗಿದವು. ಇಂದಿನ ದಿನ ಎಂದೂ ಇರದ ಗಂಭೀರತೆ ಎಲ್ಲರಲ್ಲಿ. ಕಾರಣ, ಶಿಖರವನ್ನು ಎಂಟು ಗಂಟೆಗೆ ತಲುಪಿ, ಒಂಬತ್ತು ಗಂಟೆಗೆ ಮರಳಬೇಕಾದ ಸಮಯದ ಮಿತಿ, ಕ್ಲಿಷ್ಟಕರ ಹಾದಿ ಮತ್ತು ತೀವ್ರವಾದ ಚಳಿ. ಈ ಕಠಿಣತೆಗಳೆಲ್ಲ ಒಂದೆಡೆಯಾದರೆ,ಬೆಳದಿಂಗಳನಿಂದಾವೃತವಾದ ಹಿಮಪರ್ವತಗಳು, ಕ್ಯಾಲೆಂಡರಿನಲ್ಲಿ ಕಂಡಿದ್ದ ಹಿಮಾಲಯದ ಪರ್ವತ ಶ್ರೇಣಿಗಳು ಇನ್ನೊಂದೆಡೆ. ಸುತ್ತಲಿನ ಅವಿಸ್ಮರಣೀಯ ದೃಶ್ಯವನ್ನು ಸವಿಯುತ್ತಾ ಮುನ್ನಡೆದಾಗ, ಬಹು ನಿರಾಶಾದಾಯಕ ಸಂಗತಿಯೊಂದು ಕಂಡುಬಂತು. ನಾವು ಚೋಪ್ತಾ ಎಂಬ ಪ್ರವಾಸಿತಾಣಕ್ಕೆ ಬಂದು ತಲುಪಿದ್ದೆವು ಮತ್ತು ಎಲ್ಲೆಂದರಲ್ಲಿ ಕಸದ ರಾಶಿ ಮತ್ತು ಪ್ಲಾಸ್ಟಿಕ್‌ ಬಾಟಲ್‌ಗಳು ಬಿದ್ದಿದ್ದವು. ಕಳೆದ ನಾಲ್ಕು ದಿನಗಳಿಂದ ಪ್ರಕೃತಿಯ “untouched beauty” ನೋಡುತ್ತಾ ಬಂದಿದ್ದ ನಮ್ಮ ಮನಸ್ಸಿಗೆ ಬಹಳ ನೋವಾಯಿತು. ಇಂಡಿಯಾ ಹೈಕ್ಸ್ ನವರು ನಮಗೆ ನೀಡಿದ್ದ eco bagಗಳನ್ನು ಇಂದು ನಾವು ಉಪಯೋಗಿಸಬೇಕಾಯಿತು. “Leave the mountains cleaner than we found them” ಎಂಬ ಇಂಡಿಯಾ ಹೈಕ್ಸ್‌ನ ಧ್ಯೇಯದೊಂದಿಗೆ, ಪ್ಲಾಸ್ಮಿಕ್ ತ್ಯಾಜ್ಯಗಳು ನಮ್ಮ eco bag ಮಡಿಲೇರಿದವು. ಒಂದೇ ಗತಿಯಲ್ಲಿ ಮು೦ದೆ ಸಾಗುತ್ತಿದ್ದರಿ೦ದ ಶ್ವಾಸಕೋಶಗಳೇನೋ ಹಾಯಾಗೇ ಇದ್ದವು, ಆದರೆ ಚಳಿರಾಯ ಮಾತ್ರ ತನ್ನ ವರಸೆಯನ್ನು ತೋರಿಸಿಯೇ ಬಿಟ್ಟ. ಸ್ವಲ್ಪ ದೂರ ಸಾಗುತ್ತಿದ್ದಂತೆ ಕೈ-ಕಾಲ ಬೆರಳುಗಳು ಮರಗಟ್ಟಲಾರಂಭಿಸಿದವು. ಸೂರ್ಯನ ಶಾಖವು ದೊರೆಯಲು ಶಿಖರದ ಉತ್ತುಂಗವನ್ನು ತಲುಪಬೇಕೆಂಬ ಕಟುಸತ್ಯ ಅರಿವಾದಾಗ ಮನಸ್ಸು ಹಿಂಜರಿಯತೊಡಗಿತು. ಆದರೂ ಛಲಬಿಡದ ತ್ರಿವಿಕ್ರಮನಂತೆ ಕಾಲುಗಳು ಚಲಿಸುತ್ತಲೇ ಇದ್ದವು. ಇದೀಗ ಸೂರ್ಯನ ಕಿರಣಗಳು ಕೆಲವೊಂದು ಶಿಖರಗಳ ಮೇಲೆ ಮೂಡಿ ಬಹಳ ಅದ್ಭುತವಾದ ಕಲಾಕೃತಿ ಸೃಷ್ಟಿಯಾಗಿತ್ತು. ಮನೋವೇಗ, physical discomfortನ್ನು ಮೀರಿದಾಗ ಪಯಣ ಸಲೀಸಾಯಿತು. ತುಂಗನಾಥ ದೇವಾಲಯ ತಲುಪುತ್ತಿದ್ದಂತೆ ಗುರಿ ಮುಟ್ಟುವ ಕನಸು ನನಸಾಗುವುದೆಂಬ ಭರವಸೆ ಮೂಡಿತು. ಇನ್ನಿದ್ದ ಒಂದು ಕಿಲೋಮೀಟರ್ ಇಡೀ ಚಾರಣದ ಕಠಿಣಕರ ಹಾದಿ. ಪ್ರತಿ ಐದು ಹೆಜ್ಜೆಗೊಂದು break ತೆಗೆದುಕೊಂಡು ಶಿಖರದ ಉತ್ತುಂಗವನ್ನು ತಲುಪಿದಾಗ ಜಗವನ್ನೇ ಜಯಿಸಿದ ಸಂಭ್ರಮ. ಮರಗಟ್ಟಿದ ಬೆರಳುಗಳು, ಸೋತ ಕೈ ಕಾಲುಗಳು, ಅದ್ಯಾವುದೋ ಭೂತಕಾಲದ ಸಂಗತಿಗಳಂತೆ ಗೋಚರಿಸಿದವು. ಕಣ್ಣು ಹಾಯಿಸಿದಷ್ಟು ಮುಗಿಯದ ಬೆಟ್ಟ ಗುಡ್ಡಗಳ ಸಾಲುಗಳು, ಈಗ ತಾನೇ ಉದಯಿಸಿರುವ ಸೂರ್ಯ, ಸೂರ್ಯನ ಕಿರಣಗಳಿಂದ ಕಂಗೊಳಿಸುತ್ತಿರುವ ಪರ್ವತಗಳನ್ನು ನೋಡಿ ಮೈನವಿರೇಳಿತು. ಪ್ರಕೃತಿಯ ಸೌಂದರ್ಯದಲ್ಲಿ ಮೈಮರೆತು ಕುಳಿತಿದ್ದಾಗ “time to get down” ಎಂಬ ಟ್ರೆಕ್ ಲೀಡರ್ ನ ಮಾತುಗಳು ಬಹು ಕಠೋರವೆನಿಸಿದವು. ಮನಸ್ಸಿಲ್ಲದ ಮನಸ್ಸಿನಿಂದ ಇಳಿಯಲಾರಂಭಿಸಿದಾಗ ಮತ್ತೊಂದು ಸತ್ಯದ ಅರಿವಾಯಿತು. ಅವರೋಹಣವೂ ಆರೋಹಣದಷ್ಟೇ ಕಷ್ಟಕರ ಎಂದು. ಅಷ್ಟರಲ್ಲಿ ನಮ್ಮ “snow leopard” ಪ್ರತ್ಯಕ್ಷರಾಗಿ, ತಮ್ಮಲ್ಲಿದ್ದ ಸಲಕರಣೆಯಿ೦ದ ನಮ್ಮ ದಾರಿಯನ್ನು ಸುಗಮವಾಗಿಸಿ ಮಾಯವಾದರು. ಇಲ್ಲಿಂದ ಮುಂದಿನ ನಮ್ಮ ಪಯಣ ನಿರಾಳವಾಗಿ ಸಾಗಿತು. ಬನಿಯಾ ಕುಂಡ್ campsite ತಲುಪಿ, ಊಟ ಮುಗಿಸಿದಾಗ ಸಾರಿ basecampಗೆ ನಮ್ಮನ್ನು ರವಾನಿಸಲು ವಾಹನವು ಸಿದ್ಧವಾಗಿತ್ತು. ಸಂಜೆ debriefing sessionನಲ್ಲಿ ಎಲ್ಲರೂ ತಮ್ಮ ಮನಸ್ಸಿನಾಳದ ಮಾತುಗಳನ್ನು, ಅನುಭವವನ್ನು ಹಂಚಿಕೊಂಡಾಗ ಕಳೆದ ಐದು ದಿನಗಳನ್ನು ಪುನಃ ಜೀವಿಸಿದಂತೆ ಭಾಸವಾಯಿತು. ಮರುದಿನ, ಕಣ್ತುಂಬ ವಿಹಂಗಮ ನೋಟ, ಮನಸ್ಸು ತು೦ಬಾ ಅನುಭವದ ಬುತ್ತಿ ಕಟ್ಟಿಕೊಂಡು ನಮ್ಮ ಪಯಣ ರಿಷಿಕೇಶದೆಡೆಗೆ ಸಾಗಿತು.
*ವಿಭಾ ಡೋಂಗ್ರೆ ಫಡ್ಕೆ*

 

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 19 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 33 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 76 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 62 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 108 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 91 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 64 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 78 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 92 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 567 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 33 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 209 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 450 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 318 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 468 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 309 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts