Thursday , 24 September 2026

ಶತಚಂಡಿಕಾ ಹವನ ಕಾರ್ಯಕ್ರಮ – ಒಂದು ನೋಟ

ಬೆಂಗಳೂರು ಚಿತ್ತ ಪಾವನ ಸಮಾಜದಿಂದ ಆಯೋಜಿಸಿದ ಎರಡು ದಿನದ ಶತಚಂಡಿಕಾ ಹವನ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು
ಇದರ ಕೆಲವು ಭಾವಚಿತ್ರಗಳನ್ನು ಅಪ್ಲೋಡ್ ಮಾಡಿದ್ದೇವೆ. ಸವಿವರವಾದ ಸುದ್ದಿಗೆ ಶಂಕರ HD ಯೌಟ್ಯೂಬ್ ಚಾನೆಲ್ ನ ಲಿಂಕ್ ಅನ್ನು ಹಾಕಲಾಗಿದೆ

Details:

ಶತಚಂಡಿಕಾ ಯಾಗ

* ಚಿತ್ಪಾವನರ ಚಿತ್ತ ಪಾವನವಾಯಿತು.
* ಬೆಂಗಳೂರು ಚಿತ್ಪಾವನ ಸಮಾಜದ ಇತಿಹಾಸ ಪುಸ್ತಕದಲ್ಲಿ ಮತ್ತೊಂದು ಸುವರ್ಣಪುಟ ಸೇರ್ಪಡೆ.
* ಯಶಸ್ಸಿನಲ್ಲಿ ಎಲ್ಲರದ್ದೂ ಸಮಪಾಲು.
* ತನು-ಮನ-ಧನ ಸಹಕಾರ ನೀಡಿದವರೆಲ್ಲರಿಗೂ ಸಂತೃಪ್ತಿಯ ಸಮಯ.
* ಸಮಿತಿ ಸದಸ್ಯರ ಐದು ತಿಂಗಳ ಪರಿಶ್ರಮ ಫಲ ನೀಡಿತು.

* ಸಮಿತಿಯವರೆಲ್ಲರೆಲ್ಲರನ್ನು ಸೇರಿಸಿ, ಚಿತ್ಪಾವನ ಬಂಧುಗಳನ್ನು ಸಂಪರ್ಕಜಾಲಕ್ಕೆ ತಂದು, ಜನಬಲ ಧನಬಲ ಒದಗಿ ಬರಲು ವೇದಿಕೆ ಸಿದ್ಧಪಡಿಸಿದವರು ಶ್ರೀ ಸುನೀಲ್ ಬರ್ವೆಯವರು.
* ಪ್ರತಿ ತಿಂಗಳು ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತ ಸಮಿತಿ ಸದಸ್ಯರಿಗೆ ಉತ್ಸಾಹ ತುಂಬಿ, ಶತಚಂಡಿಕಾ ಹೋಮದ ಸಿದ್ಧತೆಗಳಿಗಾಗಿ ಹುರಿದುಂಬಿಸಿದವರು ಕಾರ್ಯದರ್ಶಿ ಶ್ರೀ ಗಜಾನನ ಎಂ.ಗೋಖಲೆಯವರು ಮತ್ತು ಕಾರ್ಯಾಧ್ಯಕ್ಷ ಶ್ರೀ ಎಂ.ಗಣಪತಿ ಜೋಶಿಯವರು.
* ಪ್ರಯತ್ನದ ಮೊದಲ ಹಂತದಲ್ಲೇ ಇಂ-ಧನ ತುಂಬಿಸಿ ಧೈರ್ಯ ತುಂಬಿಸಿದವರು ಶ್ರೀ ನಾರಾಯಣ ಹೆಬ್ಬಾರರು.
* ಎರಡನೆ ಹಂತದಲ್ಲಿ ಮತ್ತಷ್ಟು ಇ-ಪವರ್ ಒದಗಿಸಿದವರು ಶ್ರೀ ಅರುಣ್ ಮರಾಠೆಯವರು.

* ಫೋನ್ ಸಂಪರ್ಕ, ವಾಟ್ಸಾಪ್ ಸಂದೇಶಗಳು, ಭಾರ್ಗವಾಣಿಯಲ್ಲಿ ಪ್ರಕಟಣೆ, ಆಹ್ವಾನ ಪತ್ರಿಕೆ ಆಹ್ವಾನ, ಆನ್ಲೈನ್ ದೇಣಿಗೆ ವರ್ಗಾವಣೆ ಮತ್ತು ಆಮಂತ್ರಣಗಳಿಗೆ ಬಂಧುಗಳೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರು.
* ಶತಚಂಡಿಕಾ ಯಾಗದ ಎರಡು ದಿನಗಳು ಮತ್ತು ಪೂರ್ವಸಿದ್ಧತೆಯ ಹಿಂದಿನ ದಿನ ಗಂಡಸರು ಮತ್ತು ಮಹಿಳೆಯರು ಸ್ವಯಂಸೇವಕರಾಗಿ ಸಹಕರಿಸಿದರು.
* ಎರಡು ದಿನಗಳಲ್ಲೂ ಊರ ಪರವೂರ ಭಕ್ತಾದಿ ಬಂಧುಗಳು ಬಂದು ಭಾಗವಹಿಸಿದರು.
* ಚಿತ್ಪಾವನರಲ್ಲಿ ವೈದಿಕ ಸಂಪ್ರದಾಯ ಪೋಷಿಸಿ ರಕ್ಷಿಸುವ ಹಿರಿಯರ ಜತೆ ಅಧಿಕ ಸಂಖ್ಯೆಯಲ್ಲಿ ಯುವ ಋತ್ವಿಜವರ್ಗದವರು ಒಟ್ಟಾಗಿ
ಭಾಗವಹಿಸಿದ್ದು ವಿಶೇಷ.
* ತೇಜೋಮಯ ಶಾಂತ ಮುಖಮುದ್ರೆ, ಚತುರ್ವೇದ ಜ್ಞಾನ ಸಂಪತ್ತು, ಅನುಭವದಿಂದ ಮಾಗಿದ ಆಚಾರ್ಯತ್ವ ಲಕ್ಷಣಗಳಿಂದ ಮತ್ತು ಶಿಸ್ತು-ಸಂಯಮಗಳಿಂದ ಪ್ರಧಾನ ಆಚಾರ್ಯರಾಗಿ ಭಾಗವಹಿಸಿದ್ದ ಶ್ರೀ ಅನಂತ ಗೋಖಲೆಯವರ
ಉಪಸ್ಥಿತಿ ಶತಚಂಡಿಕಾ ಯಾಗದ ವೈಭವವನ್ನು ಎತ್ತರಕ್ಕೇರಿಸಿತು.
* ಋತ್ವಿಜರೆಲ್ಲರೂ ಸೇರಿ ಮಾಡಿದ ಶೃತಿ ಪಾರಾಯಣ, ಮಂತ್ರಘೋಷಗಳು ಇಡೀ ವಾತಾವರಣವನ್ನು ದೈವಿಕವಾಗಿಸಿದವು.
* ಶನಿವಾರ ಬೆಳಿಗ್ಗೆ ಮತ್ತು ಸಂಜೆ ಊರ ಪರವೂರ ಭಜನಸತಂಡಗಳು ಭಾಗವಹಿಸಿ ಗಾಯನ ಮತ್ತು ಕುಣಿತ ಭಜನೆಯ ಭಕ್ತಿರಸದಲ್ಲಿ ಎಲ್ಲರನ್ನು ಮನರಂಜಿಸಿದರು.
* ಹಿರಿಯರೂ ಜ್ಞಾನವೃದ್ಧರೂ ಶ್ರೀ ವಿಷ್ಣುಭಟ್ ಡೋಂಗ್ರೆ ದಂಪತಿಯನ್ನು ಗೌರವಿಸಿ ಸನ್ಮಾನಿಸಿದ್ದು ಸಂದರ್ಭೋಚಿತವಾಗಿತ್ತು.
* ಸಮಯಕ್ಕೆ ಸರಿಯಾಗಿ ಶುಚಿರುಚಿಯಾದ ಊಟ ತಿಂಡಿ ಪಾನೀಯ ಉಪಚಾರಗಳಲ್ಲಿ ಶ್ರೀ ದತ್ತಾತ್ರೇಯ ಗೋಖಲೆ ತಂಡ ಎಲ್ಲರ ಮೆಚ್ಚುಗೆ ಗಳಿಸಿತು.
* ಶತಚಂಡಿಕಾ ಹೋಮಕ್ಕೆ ಬಂದ ಬಂಧುಗಳೆಲ್ಲರೂ ದೇಣಿಗೆ ನೀಡಿದ್ದು ಮತ್ತು ಕೆಲವರು ಸಮಾಜದ ಕಾರ್ಯವೈಖರಿ ನೋಡಿ ಸದಸ್ಯರಾಗಿ ನೋಂದಾಯಿಸಿಕೊಂಡದ್ದು ಗಮನಾರ್ಹ.
* ಭಾಗವಹಿಸಿದ ಎಲ್ಲ ಬಂದು-ಭಗಿನಿಯರಿಗೆ ಕುಂಕುಮ ಪ್ರಸಾದ, ತೆಂಗಿನಕಾಯಿ, ಲಾಡು ಪ್ರಸಾದ ನೀಡಲಾಯಿತು. ಇದರ ಜತೆ ಶ್ರೀ ಧುಂಡಿರಾಜ್ ಹೆಬ್ಬಾರ್ ಅವರ ‘ಹೆಬ್ಬಾರ್ಝ್’ ಬ್ರಾಂಡ್ ನ ಮಾವಿನಕಾಯಿ ಮೊರಬ್ಬ ಹಂಚಿದ್ದು ಎಲ್ಲರಿಗೂ ಖುಷಿ ಕೊಟ್ಟಿತು.
* ಸರ್ವೆಜನಾ: ಸುಖಿನೋ ಭವಂತು.

ನಮಸ್ಕಾರ
ಸುದ್ಧಿಸುವಿಧಾ

Click the below PLAY button to watch total coverage of the event:

 

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 19 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 33 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 77 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 62 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 108 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 92 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 64 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 78 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 92 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 567 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 33 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 450 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 318 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 468 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 309 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts