ಪ್ರಿಯರೇ,
ಈ ದಿನದ ಒಂದು ಸಂತೋಷದ ಕಾರ್ಯಕ್ರಮದ ಬಗ್ಗೆ ನಿಮಗೆ ತಿಳಿಸುತ್ತಿದ್ದೇನೆ.
ನಮ್ಮ ಸಂಘಟನೆಯ ಕಾರ್ಯಕಾರಿ ಸಮಿತಿಯು ಹಿಂದಿನ ತಿಂಗಳ ಸಭೆಯಲ್ಲಿ ನಿರ್ಧರಿಸಿದಂತೆ 3ತಿಂಗಳಿಗೊಮ್ಮೆ ನಮ್ಮ ಚಿತ್ಪಾವನ ಮನೆಗಳಲ್ಲಿ ಗೋವು ಪಾಲನೆ ಮಾಡುವವರಿಗೆ ಗೋಗ್ರಾಸ ಕೊಡುವುದೆಂದು ತೀರ್ಮಾನಿಸಲಾಗಿತ್ತು.
ಅದರಂತೆ ಈ ಸಲ ನಾವು ಕಾರ್ಯಕಾರಿ ಸಮಿತಿಯವರು ಒಟ್ಟಾಗಿ ಪ್ರಥಮವಾಗಿ ನಮ್ಮ ಮಜಲು ವಾಳ್ಯದ
ಶ್ರೀ ಕೃಷ್ಣ ಫಡಕೆ ಯವರ ಗೋಮಾತೆಗೆ ಪೂಜೆ ಗೈದು ಒಂದು ಚೀಲ ಹಿಂಡಿಯನ್ನು ಅರ್ಪಿಸಲಾಯಿತು.👍ಅವರು ಅದನ್ನು ಪ್ರೀತಿಯಿಂದ ಸ್ವೀಕರಿಸಿ ನಮಗೆ ಆಶೀರ್ವದಿಸಿದರು.ಇದರಲ್ಲಿ ಅಧ್ಯಕ್ಷರು ಹಾಗೂ ನಮ್ಮ ಸದಸ್ಯರಾದ ಶ್ರೀಮತಿ ಅಶ್ವಿನಿ ಮತ್ತು ಅರವಿಂದ ಹೆಬ್ಬಾರ್,ಶ್ರೀಮತಿ ಲತಾ ಪ್ರಹ್ಲಾದ ಫಡಕೆ ಹಾಗೂ ಶ್ರೀ ರಂಗನಾಥ ಹೆಬ್ಬಾರ್ ಪಾಲ್ಗೊಂಡಿದ್ದರು.
ಇನ್ನೂ ಮುಂದಿನ ಸಲ ಗೋಗ್ರಾಸ ಸಲ್ಲಿಸುವ ಬಗ್ಗೆ ಎಲ್ಲಾ ಸದಸ್ಯರಿಗೆ ತಿಳಿಸಬೇಕೆಂದು ನನ್ನ ಅಭಿಪ್ರಾಯ. ಆಗಬಹುದೇ?
ಧನ್ಯವಾದಗಳು,
ಸುಷ್ಮಾ ಶಶಾಂಕ ಭಿಡೆ,
ಅಧ್ಯಕ್ಷರು
ಚಿ.ಸಂಘ ಮುಂಡಾಜೆ.















