, *ಶ್ರೀ ಗೋಪಾಲಕೃಷ್ಣ ದೇವಸ್ಥಾನ* ಸೂಳಬೆಟ್ಪು ಇಲ್ಲಿ ನಿನ್ನೆ ನಡೆದ,
*ಕೃಷಿ ವಿಚಾರ ವಿನಿಮಯ* ದ ಬಗ್ಗೆ
ಸಂಪನ್ಮೂಲ ವ್ಯಕ್ತಿಗಳಿಂದ ತಮ್ಮ ಅನಿಸಿಕೆ ಗಳು.
ಶ್ರೀ ಪ್ರಕಾಶ್ ಜೋಶಿ, ಯವರು ಜೇನು ಕೃಷಿ ಯ ಬಗ್ಗೆ, ಅತ್ಯುತ್ತಮ ಮಾಹಿತಿ ಕೊಟ್ಟರು.
ನಮ್ಮ ಚಿತ್ಪಾವನರಲ್ಲಿ ಈಗಲೂ ಗದ್ದೆ ಕೃಷಿ ಮಾಡುವ ಹುಮ್ಮಸ್ಸು. ಸಂಪೂರ್ಣ ಸಾವಯವ ಕೃಷಿಯತ್ತ ಶ್ರೀಮತಿ ಉಷಾ ಮೆಹಂದಳೆ.
ಇನ್ನಿತರರು.
ನಲವತ್ತು ವರ್ಷದಿಂದ ತಮ್ಮ ತೋಟದಲ್ಲಿ ಸ್ವತಃ ಸ್ರೈ ಮಾಡುವ, ಶ್ರೀ ಸುರೇಶ್ ಗೋಖಲೆ,, ಪ್ರಕಾಶ ಜೋಶಿ,ಅರುಣ ಮೆಹಂದಳೆ, ಫಡ್ಕೆ.ಯವರು ಅಂಗಳದಲ್ಲಿ ತರಕಾರಿ ಬೆಳೆಯ ಬಗ್ಗೆ ವಿವರಿಸಿದರು.
ದೋಟಿ ಕೃಷಿಯ ಬಗ್ಗೆ ವಿಮರ್ಶೆ. ಕೆಲಸದವರನ್ನು ಬೇಕಷ್ಟೇ ಅವಲಂಭಿಸುವ ಇವರು ಮಾದರಿ.
ಸುಣ್ಣ @ಮೈಲ್ತುತ್ತು ಬೆರೆಸುವ ಪ್ರಮಾಣ.ಕೆಲವು ಕಡೆ ಅಂಟು (ಗಂ) ಬೆರೆಸುವವರಿದ್ದಾರೆ ನಮ್ಮಲ್ಲಿ ಇಲ್ಲಾ.
ಶ್ರೀ, ಚಂದ್ರಕಾಂತ ಗೋರೆ ಯವರು. ಉದ್ಯೋಗ ದೊಡನೆ
ಹಲವು ಭತ್ತದ ತಳಿಗಳನ್ನು ಪ್ರಾಯೋಗಿಕ ವಾಗಿ ಬೆಳೆಸಿದ ಮಾದರಿಗಳು, ರಕ್ತ ಸಾಲಿ ಭತ್ತ ಮಹತ್ವ, ಇದರ ಗಂಜಿ,ತೆಲಿ,ಅನ್ನ, ತಿಂಡಿಗಳು ,ರಕ್ತ ದ ಹಿಮೋಗ್ಲೋಬಿನ್ ನ ಕೊರತೆಯನ್ನು ನೀಗಿಸುವ ಔಷಧೀಯ ಗುಣದ ಬಗ್ಗೆ ವಿವರಿಸಿದರು.
ಹಿಂದೆ ಅತ್ಯಾರೆ ತಳಿ ತುಂಬಾ ಔಷಧೀಯ ಎನ್ನುವ ಮಾತಿತ್ತು.ಇದು *ಕರ್ಗೊಲು ಸಂದಿಯಲ್ಲಿ ಇದೆ*
ಇತೀಚೆಗೆ ಪ್ರಚಲಿತ ಡ್ರಿಪ್ ಇರಿಗೇಷನ್ ಅದರ ಮುಲಕ ರಸ ಗೊಬ್ಬರ, ಇದು *ಐಸೀಯು* ಇದ್ದಂತೆ, ಎಂಬ ವಿಮರ್ಶೆ ನಡೆಯಿತು.
ಶ್ರೀ ಡಾ ಅಜಿತ್ ಹೆಬ್ಬಾರ್, ಇವರು ಮಣ್ಣು, ಅದರ ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅಂದರೆ ತುಂಬಾ ಅಗಾಧ,ಎಷ್ಟು ವಿಮರ್ಶೆ, ಮಾಡಿದರೂ ಕೊನೆ ಇರಲ್ಲಾ.
*ಕಲಿತಷ್ಟು ಇದೆ* ಕೃಷಿತೊ ನಾಸ್ತಿ ದುರ್ಭಿಕ್ಷಂ, ನಮಗೆ ಅನ್ನ,ವಿದ್ಯೆ, ನೆಮ್ಮದಿ ಯ ಜೀವನ ಕೊಟ್ಟದ್ದೆ ಕೃಷಿ.
ಒಬ್ಬೊಬರು ಅವರವರ ರೀತಿಯಲ್ಲಿ, ಮಣ್ಣು, ಗೊಬ್ಬರ ಕ್ಕೆ ಅನುಗುಣವಾಗಿ ಹೊಂದಿಕೊಂಡಿರುವ ಪದ್ದತಿ ಗಳು.
ಹಿಂದೆ ಹೆಚ್ಚಿನ ತೋಟದಲ್ಲಿ ಬುಡ ಬಿಡಿಸಿ,ಸೊಪ್ಪು, ಗೊಬ್ಬರ, ಬೂದಿ ಹಾಕಿ ಹೊಯ್ಮಣ್ಣು ಹಾಕುತ್ತಿದ್ದೆವು.
ಕಾಲ ಬದಲಾದಂತೆ,ರಸ ಗೋಬ್ಬರ, ಕೀಟ ನಾಶಕ ಅಧಿಕ ಬೆಳೆಗಾಗಿ ಹೈಬ್ರಿಡ್ ತಳಿಗಳ ಬಳಸುವಲ್ಲಿ ನಾವುಇದ್ದೇವೆ.ಎಲ್ಲರೂ ದೂರ ಸರಿಯುತ್ತಿರು ಕೃಷಿ ಮೂಲ -ಹೈನುಗಾರಿಕೆ , ಆದರೆ ಒಂದೆರಡಾದರೂ ದನ,ಕರು ಇರಲಿ ಎಂಬ ಹಂಬಲ, ಏನೂ ಇಲ್ಲದೆ ಗುಡ್ಡ ದಲ್ಲಿ ದನ ಸಾಕಿ,ಬೇರೆ ಕಡೆಯಿಂದ ಹುಲ್ಲು ತಂದು ಜೀವನ ಸಾಗಿಸುವ ಇತರರನ್ನು ನೋಡುವಾಗ ಅಯ್ಯೊ ನಮ್ಮ ಪರಿಸ್ಥಿತಿ ಯೆ ಅನಿಸಿದ್ದುಂಟು!! ಅನಿವಾರ್ಯ ವೂ ಹೌದು.
ಎರೆಗೊಬ್ಬರದ ನನ್ನ ಅನುಭವ,
ಗಿಡಗಳಿಗೆ ಸ್ಲರೀ ವಿತರಣೆಯ ವಿವಿಧ ಪ್ರಯೋಗ ಗಳು.
ಕಾಳು ಮೆಣಸಿನ ಪಣಿಯೂರ ತಳಿ,ಅದಕ್ಕೆ ಈಗ ಕಸಿ ವಿಧಾನ, ಸಾಧಕ,ಬಾಧಕಗಳು. ಇನ್ನೂ ಹಲವು ವಿಷಯಗಳು ಬಾಕಿ ಇವೆ!!
*ಔಷಧೀಯ ಸಸ್ಯಗಳು* ಅಳಿವಿನಂಚಿನಲ್ಲಿರುವ
ಪರಿಸರಕ್ಕೆ ಪೂರಕ,ಮರಗಿಡನ್ನು ಬೆಳೆಸಿ ಉಳಿಸಿ ಎಂಬ ಸಲಹೆಯೊಂದಿಗೆ ಮುಕ್ತಾಯ ವಾಯಿತು.
ಇತಿ ಸಣ್ಣ ಕೃಷಿಕ.
*ಶಂಕರ ಹೆಬ್ಬಾರ್✍️*
















