Friday , 25 September 2026

ಚಿತ್ಪಾವನಿ ಭಾಷೆ (ಆಮ್ಚಿ ಭಾಸ)

ಮಹಾರಾಷ್ಟ್ರದ ಪ್ರಾಕೃತ ಭಾಷೆಯ ಒಂದು ಕವಲಾಗಿರುವಂತಹ ಒಂದು ಭಾಷೆ ಎಂದರೆ ಅದು ಚಿತ್ಪಾವನರ ಮನೆ ಮಾತು. ಅದೇ ಚಿತ್ಪಾವನಿ ಭಾಷೆ , ಮಹಾರಷ್ಟ್ರದ ಮರಾಠಿಯ ಹಳೆಯ ಪ್ರಬೇಧ.

ಇಂದಿಗೂ ಕೂಡ ಕರ್ನಾಟಕದ ದಕ್ಷಿಣದ ಕರಾವಳಿಯಂಚಿನಲ್ಲಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಚಿತ್ಪಾವನ ಸಮಾಜದಲ್ಲಿ ಮನೆ ಮಾತಾಗಿದೆ ಈ ಚಿತ್ಪಾವನಿ ಭಾಷೆ.

ಇತ್ತೀಚಿಗೆ ನಮ್ಮ  ಈ ಚಿತ್ಪಾವನಿ ಭಾಷೆಗೆ ಆಂಗ್ಲ  ಭಾಷೆಯನ್ನು ಮಿಶ್ರಿತಗೊಳಿಸಿ, ಭಾಷೆಯನ್ನು ಸರಳೀಕೃತಗೊಳಿಸಲಾಗುತ್ತಿದೆ. ಉದಾಹರಣೆಗೆ ಕಿತಂರೆ ಉಶ್ಶೀರು? – ಕಿತಂರೇ ಲೇಟ?

ಚಿತ್ಪಾವನಿ ಭಾಷೆಯನ್ನು ಬರೆಯಲು ಕನ್ನಡ ಹಾಗೂ ದೇವನಾಗರಿ ಲಿಪಿಯನ್ನು ಬಳಸಲಾಗುತ್ತದೆ.

ಚಿತ್ಪಾವನಿ ಭಾಷಾತಜ್ಞರಾಗಿರುವಂತಹ ಡಾ.ಎಂ.ಪ್ರಭಾಕರ ಜೋಶಿಯವರು ಚಿತ್ಪಾವನಿ ಭಾಷೆಯ ಉಗಮ ಹಾಗೂ ಮೂಲದ ಬಗ್ಗೆ ಹೀಗೆ ಹೇಳುತ್ತಾರೆ,

“ಮಹಾರಾಷ್ಟ್ರೀ ಪ್ರಾಕೃತವು ಸಾ.ಶ.ಪೂ. 3ನೇ ಶತಮಾನದಿಂದ 8ನೇ ಶತಮಾನದವರೆಗೆ ಆಡುಭಾಷೆಯಾಗಿತ್ತು. ಚಿತ್ಪಾವನಿಯು ಸುಮಾರು 1850ರ ಬಳಿಕ ರೂಪುಗೊಂಡಂತಹ ಹೊಸ ಮರಾಠಿ ಮಾನಕಭಾಷೆಯ ಹಳೆಯ ರೂಪವೇ ಹೊರತು ಮರಾಠಿಯ ಪರಿವರ್ತಿತ ರೂಪವಲ್ಲ”

 ಸುಲಭ ಚಿತ್ಪಾವನಿ ಎನ್ನುವ ಪುಸ್ತಕವನ್ನು ಅಸ್ನೋಡಾ, ಗೋವಾ ಇಲ್ಲಿಯ ಶ್ರೀಯುತ ಶ್ರೀಧರ ಕೇಶವ ಬರ್ವೆಯವರು 2001ನೇ ಇಸವಿಯಲ್ಲಿ ಪ್ರಕಟಣೆಗೊಳಿಸಿದ್ದಾರೆ.

ಚಿತ್ಪಾವನಿ ಭಾಷಾ ವ್ಯಾಕರಣ

  • ನಮ್ಮ ಚಿತ್ಪಾವನಿ ಭಾಷೆಯಲ್ಲಿರುವಂತಹ ವ್ಯಂಜನಗಳು ವಿಶಿಷ್ಟ ಉಚ್ಚಾರಗಳನ್ನು ಹೊಂದಿವೆ. ಅದರಲ್ಲಿಯೂ ‘ಚ’ ವರ್ಗದ ವ್ಯಂಜನಗಳಿಗೆ ಇನ್ನೂ ವಿಶಿಷ್ಟವಾದಂತಹ ಉಚ್ಚಾರವಿದೆ.

(*ಈಗ ಚಿತ್ಪಾವನಿ ಭಾಷೆಯನ್ನು ಬರೆಯಲು ಹೆಚ್ಚಿನವರು ದೇವನಾಗರಿ ಅಥವಾ ಕನ್ನಡ ಲಿಪಿಯನ್ನು ಬಳಸುತ್ತಾರೆ. ಅದೇ ರೀತಿ ಕೆಲವರು ಚಿಂಗ್ಲೀಷ್ ಅಂದರೆ ರೋಮನ್ ಲಿಪಿಯನ್ನು ಬಳಸುತ್ತಾರೆ.)

  • ವರ್ಗೀಯ ವ್ಯಂಜನಗಳ ವೈಜ್ಞಾನಿಕ ವರ್ಗೀಕರಣ:
  • ಕಂಠ್ಯ : ಕಿರುನಾಲಗೆಯ ಸಹಾಯದೊಂದಿಗೆ ಕಂಠದಿಂದ ಅಥವಾ ಗಂಟಲಿನಿಂದ ಉತ್ಪನ್ನವಾಗುವ ‘ಕ’ ವರ್ಗದ ಅಕ್ಷರಗಳು. ( ಕ,ಖ,ಗ,ಘ,ಙ)
  • ತಾಲವ್ಯ : ತಾಲುವಿನ ಅಂದರೆ ಬಾಯಿಯೊಳಗಿನ ಮೇಲ್ಭಾಗದ( ಟಾಟ್ಟಾರೊ) ಮೃದು ಭಾಗಕ್ಕೆ ನಾಲಿಗೆಯ ಮಧ್ಯಭಾಗ ಸ್ಪರ್ಶಿಸಿ ಉತ್ಪನ್ನವಾಗುವ ‘ಚ’ ವರ್ಗ ವ್ಯಂಜನಗಳು.(ಚ,ಛ,ಜ,ಝ,ಞ)
  • ಮೂರ್ಧನ್ಯ: ತಾಲುವಿನ ಗಟ್ಟಿ ಭಾಗಕ್ಕೆ ನಾಲಗೆಯ ತುದಿ ತಾಗಿ ಉತ್ಪನ್ನವಾಗುವ ‘ಟ’ ವರ್ಗ ವ್ಯಂಜನಗಳು( ಟ,ಠ,ಡ,ಢ,ಣ)
  • ದಂತ್ಯ: ಹಲ್ಲುಗಳ ಒಳಭಾಗಕ್ಕೆ ನಾಲಗೆಯ ತುದಿ ತಾಗಿ ಉತ್ಪನ್ನವಾಗುವ ‘ತ’ ವರ್ಗ ವ್ಯಂಜನಗಳು( ತ,ಥ,ದ,ಧ,ನ)
  • ಓಷ್ಠ್ಯ: ನಾಲಗೆಯ ಅಗತ್ಯ ಇಲ್ಲದೆ ತುಟಿಗಳ ಸಹಾಯದಿಂದ ಉತ್ಪನ್ನವಾಗುವ ‘ಪ’ ವರ್ಗ ವ್ಯಂಜನಗಳು( ಪ,ಫ,ಬ,ಭ,ಮ)

ಅದೇ ರೀತಿ ಯ,ರ,ಲ,ವ ಇತ್ಯಾದಿ ಅವರ್ಗೀಯ ವ್ಯಂಜನಗಳು ವಿವಿಧ ವರ್ಗಗಳಲ್ಲಿ ಹಂಚಿ ಹೋಗಿವೆ.

  • ಅನುನಾಸಿಕಕ್ಕೆ ಅನುಸ್ವಾರದ ಪ್ರಯೋಗ:

ನಮ್ಮ ಚಿತ್ಪಾವನಿ ಭಾಷೆಯಲ್ಲಿ ಕಿತಂ, ಬರಂ ಎನ್ನುವ ಅನುನಾಸಿಕ ಉಚ್ಚಾರಗಳು ಬಳಸಲ್ಪಡುವ ಅಕ್ಷರಗಳು ಹಲವಾರಿವೆ. ಹಾಗೆಯೇ ಈ ಅನುನಾಸಿಕ ಅಕ್ಷರಗಳನ್ನು ಉಚ್ಚರಿಸಲು ಅನುಸ್ವಾರಗಳನ್ನು ಬಳಸಲಾಗುತ್ತದೆ.

ಅನುಸ್ವಾರದ ಅಕ್ಷರಕ್ಕೆ ಉಚ್ಚಾರವಾಗಿ ಯಾವಾಗಲೂ ‘ಮ್’ ಎಂದೇ ಬರುವುದಿಲ್ಲ. ಬದಲಾಗಿ, ವ್ಯಂಜನಗಳ ಯಾವ ಅಕ್ಷರದ ಅಥವಾ ಯಾವ ವರ್ಗದ ಅಕ್ಷರದ ಮೊದಲು ಅನುಸ್ವಾರ ಬರುತ್ತದೋ ಆ ಪ್ರಕಾರದಲ್ಲಿ ಉಚ್ಚರಿಸಲಾಗುತ್ತದೆ.

ಕ ವರ್ಗಕ್ಕೆ ಙ    (ಅಂಕುಡಿ – ಅಙಕುಡಿ)

ಚ ವರ್ಗಕ್ಕೆ ಞ   ( ಕುಂಚಿ – ಕುಞಚಿ )

ಟ ವರ್ಗಕ್ಕೆ ಣ    (ಮಾಂಡೋವು – ಮಾಣ್ ಡೋವು )

ತ ವರ್ಗಕ್ಕೆ ನ    ( ಸಾಂದಣ – ಸಾನ್ ದಣ)

ಪ ವರ್ಗಕ್ಕೆ ಮ   ( ಆಂಬಟ – ಆಮ್ ಬಟ)

  • ಅಕಾರಂತ ಅಕ್ಷರಗಳ ದೀರ್ಘ ಉಚ್ಚಾರ

ಚಿತ್ಪಾವನಿ ಭಾಷೆಯಲ್ಲಿ ಹ್ರಸ್ವ ಅಕ್ಷರಗಳು ದೀರ್ಘ ಉಚ್ಚಾರ ಹೊಂದುವ ಶಬ್ದಗಳು ಬಹಳಷ್ಟಿವೆ. ಕೊನೆಯ ಅಕ್ಷರಕ್ಕಿಂತ ಹಿಂದಿನ ಹೃಸ್ವಾಕ್ಷರ ಹೆಚ್ಚಾಗಿ ದೀರ್ಘವಾಗಿ ಉಚ್ಚರಿಸಲಾಗುತ್ತದೆ.

ಉದಾ: ಬಽರಂ , ಅಽಳುಂ, ಶಽಳ ಇತ್ಯಾದಿ.

  • ಅಕಾರಂತ ಅಕ್ಷರಗಳ ಹ್ರಸ್ವ ಉಚ್ಚಾರ

ಚಿತ್ಪಾವನಿ ಭಾಷೆಯಲ್ಲಿ ಹ್ರಸ್ವ ಅಕ್ಷರಗಳ ಉಚ್ಚಾರವನ್ನು ಹೊಂದುವ ದೀರ್ಘ ಅಕ್ಷರಗಳ ಉದಾಹರಣೆಗಳು ಬಹಳಷ್ಟಿವೆ. ಆಜ್ಜೋಳ, ಆಪ್ಪದಾ,ಆಯ್ಯೆ ಮುಂತಾದ ಶಬ್ದಗಳಲ್ಲಿ ಎರಡು ಮಾತ್ರಾ ಕಾಲದ ದೀರ್ಘಾಕ್ಷರಗಳ ಉಚ್ಚಾರ ಹ್ರಸ್ವವಾಗಿ ಒಂದು ಮಾತ್ರಾಕಾಲದ್ದಾಗಿ ಬದಲಾಗುತ್ತದೆ.

ಇತರೆ ಭಾಷೆಗಳಂತೆ ಪ್ರಾದೇಶಿಕವಾಗಿ ನಮ್ಮ ಈ ಚಿತ್ಪಾವನಿ ಭಾಷೆಯೂ ಬದಲಾಗುತ್ತಾ ಹೋಗುತ್ತದೆ.

ಹಾಗೆಯೇ ಚಿತ್ಪಾವನಿಯಲ್ಲಿ ಕರ್ತೃ, ಕರ್ಮ, ಕ್ರಿಯಾ ಪದಗಳು, ಲಿಂಗ, ವಚನ, ಕಾಲಗಳು, ಪುರುಷಗಳು , ವಿಭಕ್ತಿ ಪ್ರತ್ಯಯಗಳು ಇವೆ.

ಮಾಹಿತಿ : ಕರ್ನಾಟಕ ಚಿತ್ಪಾವನ ವೃತ್ತಾಂತ ಪುಸ್ತಕ

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 22 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 79 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 63 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 109 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 93 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 67 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 80 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 98 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 570 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 297 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 453 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 321 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 471 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 303 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 288 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 310 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 227 Courtesy: Scholarspace with Anubhav

Watch our latest podcasts