Thursday , 24 September 2026

ವಾರದ ಹರಟೆ : ಇಂಜಿನಿಯರಿಂಗ್ ಕಾಲೇಜಿನಲ್ಲಿ “ರಿವರ್ಸ್” ಪಾಠ

ಹೆಡಿಂಗ್ ನೋಡಿ ಇದು ಯಾವುದಾದರೂ ವಾಹನದ ರಿವರ್ಸ್ ಗೇರ್ ಮೆಕಾನಿಸಂ ಬಗ್ಗೆ ಏನಾದರೂ ವಿಷಯವೋ ಅಂತ ತಿಳಿಯಬೇಡಿ🤣. ವಿಷಯ ಬೇರೆ. ಇದೊಂದು ನನ್ನ ಅಧ್ಯಾಪಕ ವೃತ್ತಿಯ ಬಗ್ಗೆ/ ಅಸಾಂಪ್ರದಾಯಿಕ ಪಾಠದ ವಿಧಾನವನ್ನು ಪ್ರಯೋಗಿಸಿ ನೋಡಿದ್ದರ ಬಗ್ಗೆ. ಹಾಗಂತ ಹೊಸ ವಿಷಯವೇನಲ್ಲ. ನನ್ನ ಗಣಿತ, ವಿಜ್ಞಾನ ಅಧ್ಯಾಪಕರೂ ಇಂತಹ ಕೆಲವು ವಿಧಾನಗಳನ್ನು ಉಪಯೋಗಿಸಿಲ್ಲವೆಂದೇನಿಲ್ಲ…
ಕೆಲವೊಂದು ವರ್ಷಗಳ ಹಿಂದಿನ ಮಾತು. ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠಪ್ರವಚನ. ನನಗೆ ಸಾಮಾನ್ಯವಾಗಿ ಸಿಗ್ತಾ ಇದ್ದದ್ದು ಹೈಡ್ರಾಲಿಕ್ಸ್ ಹಾಗೂ ಹೈಡ್ರಾಲಿಕ್ ಮೆಷೀನ್ಸ್ ಎಂಬ ವಿಷಯ (ಈ ಮೊದಲು ಇದರ ಬಗ್ಗೆ ಹೇಳಿದ್ದೆ, ಆದರೆ ಇವತ್ತು context ಬೇರೆ). ಇದರಲ್ಲಿ ಮೊದಲ 30% ಸ್ವಲ್ಪ ಸುಲಭದ ವಿಚಾರಗಳು, ಉಳಿದ 70% ಸಂಪೂರ್ಣ ಯಂತ್ರಗಳ ಬಗ್ಗೆ. ಇದರಲ್ಲಿ ಗಣಿತ, ಭೌತಶಾಸ್ತ್ರದ ದ್ರವಗಳ ಚಲನೆಯ ವಿಚಾರಗಳು, ಶಕ್ತಿ, ಇಂಜಿನಿಯರಿಂಗ್ ತತ್ವಗಳು, ನೂರಾರು ಸಮೀಕರಣಗಳ ಡಿರೈವೇಶನ್, ಟರ್ಬೈನಿನ ಒಳರಚನೆ, ಹೊರರಚನೆ, ಹತ್ತಾರು ಡ್ರಾಯಿಂಗ್‌ಗಳು, ಟರ್ಬೈನ್ ಡಿಸೈನ್ ಮಾಡುವುದು, ಮೆಷಿನ್ ಪಾರ್ಟ್, ಹೈಡ್ರೋ ಪವರ್ ಪ್ಲಾಂಟ್, ಪಂಪು ಡಿಸೈನ್, ಹತ್ತಾರು ನ್ಯುಮರಿಕಲ್ ಪ್ರಾಬ್ಲೆಮ್ (ಸಂಖ್ಯಾತ್ಮಕ ಸಮಸ್ಯೆಗಳು, ಶಾಲೆಯಲ್ಲಿ ಹೇಳುವುದಾದರೆ ಪ್ರ.ಪ್ರ. ಲೆಕ್ಕಗಳು) ಹೀಗೆ ಸಾಕಪ್ಪಾ ಸಾಕು ಅನ್ನಿಸುವಷ್ಟು ವಿಚಾರಗಳು. ವಿದ್ಯಾರ್ಥಿಗಳಿಗೂ ಈ ಸಬ್ಜೆಕ್ಟನ್ನು ಸಂಪೂರ್ಣ ಇಮ್ಯಾಜಿನ್ ಮಾಡಿ ಅರ್ಥೈಸಿಕೊಳ್ಳುವ ದೊಡ್ಡ ಚಾಲೆಂಜ್, ಸದ್ಯ ಸೆಮಿಸ್ಟರ್ ಮುಗಿದು ಪಾಸಾದ್ರೆ ಸಾಕು ಅಂತ ಹೆಚ್ಚಿನವರದ್ದು ಮಾನಸಿಕ ಸ್ಥಿತಿ. “ಬಾಯಿಪಾಠ ಕಲಿಕೆ” ಮಾಡಿದ್ರೆ ಇಲ್ಲಿ ವರ್ಕ್ ಔಟ್ ಆಗೋದಿಲ್ಲ ಅಂತ ಅವರಿಗೂ ಗೊತ್ತು. ಟರ್ಬೈನಿನ ಬ್ಲೇಡನ್ನೇ ಜಗಿಯಲಿಕ್ಕೆ ಕೊಟ್ಟಷ್ಟು ಕಷ್ಟ (ಕಬ್ಬಿಣದ ಕಡ್ಲೆ). ಪಾಪ ಇದರ ಮೇಲೆ ಎಸೈನ್‌ಮೆಂಟ್ ಬರೆ ಬೇರೆ…ಇದೆಲ್ಲಾ ಸ್ವಲ್ಪ ಉತ್ಪ್ರೇಕ್ಷೆಯಾದರೂ, ಕೆಲವು ಖುಷಿ ಪಟ್ಟು ಓದಿ ಉತ್ತಮ ಅಂಕ ತೆಗೆದ ವಿದ್ಯಾರ್ಥಿಗಳಿಲ್ಲವೆಂದಿಲ್ಲ. ಇದು ವಿದ್ಯಾರ್ಥಿಗಳ ಬವಣೆಯಾದರೆ ಇತ್ತ ಮಾಷ್ಟ್ರ ಗತಿಯೇನು? ನಾನಂತೂ ವಿದ್ಯಾರ್ಥಿಗಳಿಗಿಂತ ಜಾಸ್ತಿ ಹೋಂ ವರ್ಕ್ ಮಾಡಿ ಸುಸ್ತೋ ಸುಸ್ತು. ದಪ್ಪ ದಪ್ಪದ ಮಣಭಾರದ ಪುಸ್ತಕಗಳನ್ನು ನೋಡಿಯೇ ಮಕ್ಕಳಿಗೆ ಹಾರ್ಟ್ ಬೀಟ್ ರೈಸ್. ಫಲಿತಾಂಶದ ದಿನವಂತೂ ಅಧ್ಯಾಪಕರ “ಬೀಟ್” ನೂರರ ಮೇಲೆ😜. ಇವತ್ತಿನ ಮೈನ್ ಟಾಪಿಕ್ ಬಗ್ಗೆ ಹೇಳಲಿಕ್ಕೆ ಇಷ್ಟು ಪೀಠಿಕೆ ಅಗತ್ಯ ಇತ್ತಾ ಅಂತ ನಿಮಗೆ ಅನ್ನಿಸುತ್ತಾ ಇರಬಹುದು. ಈಗ ಮುಖ್ಯ ವಿಷಯಕ್ಕೆ ಬರುವಾ.
*ಮೇಲೆ ಹೇಳಿದ ಯಂತ್ರಗಳ ಪಾಠ ಮಾಡಲು ಅಧ್ಯಾಪಕ ಸರಿಯಾದ ಪಾಠದ ಸಿಕ್ವೆಂಸ್ ಅನುಸರಿಸ ಬೇಕು. ಇದು ಕ್ಲಿಷ್ಟಕರ ವಿಷಯಗಳ ಪಾಠ ಮಾಡುವಾಗ ಯಾವುದೇ ಅಧ್ಯಾಪಕನು ಅನುಸರಿಸಬೇಕಾದ ವಿಧಾನ. ಹೇಗೆ ಹಂತ ಹಂತವಾಗಿ ಮಾಡಬೇಕು ಅಂತ ನೋಡುವಾ…

  1. ಅಗತ್ಯ ಇರುವ ಗಣಿತ, ಭೌತ ಶಾಸ್ತ್ರದ ಟಾಪಿಕ್ ಗಳ ಸಂಪೂರ್ಣ ಅರಿವು ಮೂಡಿಸ ಬೇಕು
  2. ಟರ್ಬೈನ್ ಬಗ್ಗೆ ನಿಧಾನವಾಗಿ ಪರಿಚಯ ಮಾಡಿಸಬೇಕು
  3. ಟರ್ಬೈನ್ ವರ್ಕಿಂಗ್ ಪ್ರಿನ್ಸಿಪಲ್ ಬಗ್ಗೆ ವಿವರಿಸ ಬೇಕು
  4. ಸಮೀಕರಣಗಳ ಡಿರೈವೇಶನ್ ಮಾಡಬೇಕು ( ಅಂದರೆ ಮೂಲದಿಂದ ಸಮೀಕರಣಗಳನ್ನು ರಚಿಸುವುದು).
  5. ಒಳ ರಚನೆ, ಹೊರ ರಚನೆ ಬಗ್ಗೆ ಚಿತ್ರದ ಮೂಲಕ ತಿಳಿಸಿಕೊಡಬೇಕು.
  6. ಅತ್ಯಂತ ಕ್ಲಿಷ್ಟಕರ ಡಿಸೈನ್ ವಿನ್ಯಾಸದ ಬಗ್ಗೆ ವಿವರಣೆ ಕೊಡಬೆಕು.
  7. ಕೊನೆಯಲ್ಲಿ ಪಕ್ಕಾ ಟರ್ಬೈನ್ “ಡಿಸೈನ್ ಹಂತ”- ಹಲವಾರು ಸಂಖ್ಯಾತ್ಮಕ ಸಮಸ್ಯೆಗಳನ್ನು (ನ್ಯುಮರಿಕಲ್ಸ್) ಸಾಲ್ವ್ ಮಾಡಬೇಕು..ಯುನಿವರ್ಸಿಟಿ ಪ್ರಶ್ನೆ ಪತ್ರಿಕೆಯ ಸಮಸ್ಯೆಗಳನ್ನು ಬಿಡಿಸಬೇಕು…ಹೀಗೆ ಹಲವಾರು ವಿಚಾರಗಳು.

ಹೌದು, ಎಲ್ಲ ಸರಿ ಹೋದ್ರೆ ಇದು ಸರಿಯಾದ ವಿಧಾನ. ಆದರೆ ನಾನು ಅಂದುಕೊಂಡಂತೆ ಆಗುತ್ತಿರಲಿಲ್ಲ..ಕ್ಲಿಷ್ಟಕರ ಡಿಸೈನ್ ಯಾವಾಗಲೂ ವಿದ್ಯಾರ್ಥಿಗಳಿಗೆ ಬಗೆಹರಿಯದ ಸಮಸ್ಯೆಯಾಗುತ್ತಿತ್ತು. ಹೆಚ್ಚಿನ ಮಕ್ಕಳು ಎಡವುತ್ತಿದ್ದೇ ಇಲ್ಲಿ. ನನಗೂ ನನ್ನ ಪಾಠದ ವೀಕ್ ನೆಸ್ ಇರಬಹುದೇನೋ ಅನ್ನಿಸಿ ಕಿರಿ ಕಿರಿಯಾಗುತ್ತಿತ್ತು. ಒಂದು ಪ್ರಾಬ್ಲೆಮ್ ಸಾಲ್ವ್ ಮಾಡಲು ಒಂದು ಗಂಟೆ ಸಾಲದ ಎಷ್ಟೋ ಸನ್ನಿವೇಶಗಳೂ ಇತ್ತು. ಹೀಗೊಂದು ದಿನ ಒಂದು ಐಡಿಯಾ ಮಂಡೆಗೆ ಬಂತು..ಸಾಂಪ್ರದಾಯಿಕ ಶೈಲಿ ವರ್ಕ್ ಆಗದಿದ್ದರೆ ಅಸಾಂಪ್ರಾದಾಯಿಕವಾಗಿ ಹೋದ್ರೆ ಹೇಗೆ?…ಮೇಲೆ ಹೇಳಿದ ಆರ್ಡರ್ 1,2,3,4,5,6,7 ಬದಲು ಸಿಕ್ವೆನ್ಸ್ ಬದಲಾಯಿಸಿದ್ರೆ ಹೇಗೆ ????…ಈ 1,2,7,1,2,3,4,5,6,7 ಆರ್ಡರ್ ನಲ್ಲಿ ಹೇಳಿ ಕೊಟ್ರೆ ಹೇಗೆ ?? ಅಂದರೆ ಬೇಸಿಕ್ಸ್ ಸ್ವಲ್ಪ ಹೇಳಿ ಕೊಟ್ಟು (1,2) ನೇರವಾಗಿ ಕೊನೆಯ ಹಂತಕ್ಕೆ ಜಂಪ್ (7). ಅಲ್ಲಿ ನ್ಯುಮರಿಕಲ್ ಪ್ರಾಬ್ಲೆಮ್ ಗಳನ್ನು ಮಾಡಿಸಿ ಮಾಡಿಸಿ ಮಕ್ಕಳ ತಲೆಗೆ ಅರ್ಥವಾಗದಿದ್ದರೂ “ಯಾಂತ್ರಿಕವಾಗಿ” ತಲೆಗೆ ಹೊಕ್ಕುವಂತೆ ಮಾಡುವುದು. (ಯಂತ್ರದ ಬಗ್ಗೆ ಯಾಂತ್ರಿಕವಾಗಿ ಪಾಠ ಮಾಡುವುದು!!!)..ಇದಕ್ಕೂ, ಭಜನೆ ಮಾಷ್ಟ್ರುಗಳು ಸ್ವಲ್ಪವೂ ಸಂಗೀತ ಜ್ಞಾನವಿಲ್ಲದ ಮಕ್ಕಳಿಗೆ ಭಜನೆ ಹೇಳಿಕೊಡುವ ಪಾಠಕ್ಕೂ ಹೋಲಿಕೆ ಇದೆ. ಮಕ್ಕಳಲ್ಲಿ ಯಾವುದೋ ಒಂದು ಭಜನೆಯನ್ನು ನೇರವಾಗಿ ಹಾಡಿಸಿ ಹಾಡಿಸಿ, ಒಟ್ಟೊಟ್ಟಿಗೆ ಹೇಳಿಸಿ ತಲೆಗೆ ತುರುಕಿಸುವುದು (ಬೊಗಳಿ ಬೊಗಳಿ ರಾಗ😜). ಮತ್ತೆ ಹಿಂದೆ ಹೋಗಿ ಮೂಲ ಪಾಠವನ್ನು ಹೇಳಿ ಕೊಡುವುದು. ನನ್ನದೂ ಇದೇ ಉದ್ದೆಶ. 7 ರಿಂದ ಮತ್ತೆ 1ಕ್ಕೆ ಬಂದು ಸರಿಯಾದ ಏರಿಕೆ ಕ್ರಮದಲ್ಲಿ ಹೊಗುವುದು. ಇದೇ ರಿವರ್ಸ್ ಮೆಥಡ್…
ಹಾಗಾದ್ರೆ ಇದರಿಂದ ಪ್ರಯೋಜನ ಆಯಿತಾ ಇಲ್ವಾ ಎಂಬ ಪ್ರಶ್ನೆ ಬರಲೇ ಬೇಕು… ಇಲ್ಲಿ, ಈ ಮೆಥಡ್ ನಲ್ಲಿ ಸ್ವಲ್ಪ ಸಮಯ ಹೆಚ್ಚು ಬೇಕು..ಹಲವಾರು ವರ್ಷಗಳಿಂದ ಈ ಟೆಕ್ನಿಕ್ ಬಳಸಿದ್ದೇನೆ. ನನಗೆ ತಿಳಿದಂತೆ ಉತ್ತಮ ಪರಿಣಾಮ ನೋಡಿದ್ದೇನೆ. ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದಕ್ಕಿಂತಲೂ ಕಷ್ಟದ ಇನ್ನೊಂದು ವಿಷಯಕ್ಕೂ ಅಳವಡಿಸಿದ್ದೇನೆ.ಇದನ್ನು ಬೇರೆ ಅಧ್ಯಾಪಕರು (ಇಂಜಿನಿಯರಿಂಗ್ ಮಾತ್ರವಲ್ಲ) ಬೇರೆ ಬೇರೆ ಕ್ಲಾಸುಗಳಿಗೆ ಪ್ರಯೋಗಿಸಿ ನೋಡಿ ಸಕ್ಸೆಸ್/ಫೈಲ್ ಆಗಿರಲೂ ಬಹುದು. ಅದು ಅವರವರ situation ಗೆ ಬಿಟ್ಟದ್ದು. ನಿಮ್ಮದೂ ಇಂತಹ ಸ್ಟೋರಿಗಳಿದ್ದರೆ ನನಗೂ ತಿಳಿಸಿ😁.
ಹೀಗೊಂದು ನನ್ನ ಇಂಜಿನಿಯರಿಂಗ್ ಅಧ್ಯಾಪಕ ವೃತ್ತಿಯ ಸಣ್ಣದೊಂದು ಅನುಭವ🙏🏻🙏🏻….
ಡಾ. ಅಜಿತ್ ಹೆಬ್ಬಾರ್ ಹೊಸಮಠ.
*

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 19 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 33 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 76 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 62 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 108 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 91 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 64 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 78 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 92 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 567 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 33 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 209 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 450 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 318 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 468 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 309 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts