Thursday , 24 September 2026

🕉️ ಉಪನಿಷತ್ ಭಾವ ಬಿಂದು (Upanishad Bhavabindu) 🕉️

🕉️ *ಉಪನಿಷತ್ ಭಾವ ಬಿಂದು260* 🕉️
ದಿನಾಂಕ 01/10/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ಜೀವಾತ್ಮನ ವಿಕಾಸದ ಪಥವು,ಹುಳಹುಪ್ಪಟೆ, ಕೀಟವೆ ಮೊದಲಾದ ಹಂತಗಳಲ್ಲಿ ಸಂಚರಿಸಿ ಮುಂದುವರಿಯುತ್ತಾ ಖಗವಾಗಿ, ಮೃಗವಾಗಿ, ನರನಾಗಿ ,ಈ ವಿಷಯ ಕಾನನದಲ್ಲಿ ಸುತ್ತಾಡಿ ಬಳಲಿ ಬೇಸತ್ತು ಹೋಗುವುದು,ಕೊನೆಗೆ ಈ ಪ್ರಪಂಚದಲ್ಲಿ ಪರಮಾತ್ಮನೊಬ್ಬನೇ ಸತ್ಯ ಎಂದು ತಿಳಿದುಕೊಂಡು ಅವನನ್ನು ಅನುಭವಿಸಿ ತಾನು ಬದುಕಿರುವ ಇತರರಿಗೆ ಹೇಳಿ ಕಣ್ಣು ಮುಚ್ಚಿಕೊಳ್ಳುವ ವ್ಯಕ್ತಿ ಭಗವಂತನ ದೃಷ್ಟಿಯಲ್ಲಿ ಶ್ರೇಷ್ಠತಮವಾದ ವಸ್ತು, ಸೃಷ್ಟಿಯ ತರುವಿನಲ್ಲಿ ಬಿಟ್ಟ ಹಲವು ಪುಷ್ಪಗಳಲ್ಲಿ ಸರ್ವ ಶ್ರೇಷ್ಠವಾದ ಪುಷ್ಪ ಇಂತಹ ವ್ಯಕ್ತಿ,

ಉಪನಿಷತ್ತು ಮತ್ತು ಭಗವದ್ಗೀತೆಯನ್ನು ಯಾರು ಅಧ್ಯಯನ ಮಾಡುತ್ತಾರೆಯೋ ಅವರು ಜ್ಞಾನ ಯಜ್ಞವನ್ನು ಮಾಡುತ್ತ ಇದ್ದಾರೆ, ಇಲ್ಲಿ ಅಧ್ಯಯನ ಎಂದರೆ ಸುಮ್ಮನೆ ಓದುವುದು ಮಾತ್ರ ಅಲ್ಲ, ಅದರಲ್ಲಿರುವ ಭಾವನೆಗಳನ್ನು ಮೆಲುಕು ಹಾಕುವುದು, ಧ್ಯಾನಿಸುವುದು ಎಲ್ಲವೂ ಸೇರಿದೆ, ಇಲ್ಲಿ ಬರುವ ಮೇರು ಸಂದೇಶಗಳು ಎಂದಿಗೂ ಹಳತ್ತಾಗುವುದಿಲ್ಲ, ನಾವು ಹೆಚ್ಚು ಹೆಚ್ಚು ಓದಿದಂತೆ ಅದರ ಆಳಕ್ಕೆ ಇಳಿಯುತ್ತೇವೆ, ಇದು ಭಗವಂತನಷ್ಟೇ ಆಳವಾಗಿರುವುದು, ಅವನಷ್ಟೇ ವಿಶಾಲವಾಗಿರುದು,

ಹಲವಾರು ವರ್ಷಗಳಿಂದ ಉಪನಿಷತ್ತು ಗೀತೆಯನ್ನು ಓದುತ್ತಿದ್ದರು ಪ್ರತಿಯೊಂದು ಸಲ ಅದನ್ನು ಓದಿದಾಗಲೂ ಹೊಸ ಹೊಸ ಭಾವನೆಗಳು ಸ್ಪುರಿಸುವವು, ಹೊಸ ಸ್ಪೂರ್ತಿಯ ಸೆಲೆ ಮೂಡಿ ಬರುವುದು, ನಾವೆಲ್ಲರೂ ನಿತ್ಯಾತ್ಮಶುದ್ಧರು, ಬಂದಮುಕ್ತರು, ಅಮೃತಾತ್ಮ ಸ್ವರೂಪಿಗಳು ಎಂಬುದನ್ನು ಮರೆಯದಿರೋಣ, ಮಾನವ ಜೀವನವು ವಿಕಾಸದ ತುತ್ತ ತುದಿಯನ್ನು ಮುಟ್ಟಲು, ಪರಿಪೂರ್ಣತೆಯನ್ನು ಹೊಂದಲು ನಮಗೂ ಸಾಧ್ಯವಿದೆ, ಅದು ನಮ್ಮಿಂದಲೂ ಸಾಧ್ಯ ಎಂಬ ಸತ್ಯದ ಅರಿವು ನಮ್ಮ ಹೃದಯದಲ್ಲಿ ದೃಢವಾಗಿ ನೆಲೆಯಾಗಲಿ,

ಜೀವನದ ಪಥ ಅದನ್ನು ಹೊಂದಿಸಿಕೊಳ್ಳುವ ಕಡೆಗೆ ಇರಲಿ ಎಂಬ ಭಗವದ್ಗೀತೆ ಉಪನಿಷತ್ತುಗಳ ಮೇರು ಸಂದೇಶಗಳು ನಮ್ಮೊಳಗೆ ಪ್ರತಿದಿನವೂ, ಪ್ರತಿ ಕ್ಷಣವೂ ಅಣುರಣಿತವಾಗಿರಲಿ,
*ಮುಕ್ತಾಯ*

ಪ್ರಿಯ ವಾಟ್ಸಪ್ ಓದುಗ ಬಂಧುಗಳೇ
ಉಪನಿಷತ್ತು ಭಾವ ಬಿಂದು ಎಂಬ ಅಂಕಣದಲ್ಲಿ ಇದುವರೆಗೆ 260 ಬರಹಗಳನ್ನು ತಮ್ಮ ಮುಂದೆ ಹಂಚಿಕೊಂಡಿರುತ್ತೇನೆ,ಸಂಗ್ರಹ ಸಮರ್ಪಣೆಯ ಮೂಲಕವಾಗಿ ಈ ತತ್ತ್ವಜ್ಞಾನದ ವಿಷಯಗಳನ್ನು ಓದುವ ಆಸಕ್ತಿ ನನ್ನೊಳಗೆ ಜಾಗ್ರತವಾಗಿ ನನಗೂ ಬಹಳಷ್ಟು ಪ್ರಯೋಜನವಾಗಿರುತ್ತದೆ, ಇದಕ್ಕೆ. ಕಾರಣ ಕರ್ತರಾದ ಎಲ್ಲ ವಾಟ್ಸಪ್ ಮಿತ್ರರಿಗೂ ನಾನು ಆಭಾರಿಯಾಗಿದ್ದೇನೆ,

ಈ ಪ್ರಸ್ಥಾನ ತ್ರಯಗಳಲ್ಲಿ ಬಂದಿರುವ ಉದಾತ್ತವಾದ ಚಿಂತನೆಗಳು ಮತ್ತು ಜೀವಾತ್ಮನ ಆತ್ಯಂತಿಕ ಗುರಿ ಹಾಗೂ ಸಾಧನಾ ಮಾರ್ಗದ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ನಾವು ನೀವೆಲ್ಲರೂ ಅರಿತುಕೊಂಡು ಮುನ್ನಡೆಯುವಂತಾಗಲಿ,ಅಲ್ಲಿ ಹಾಸುಹೊಕ್ಕಾಗಿರುವ ಜ್ಞಾನ ದೀವಿಗೆ ನಮ್ಮ ಹೃದಯಗಳನ್ನು ಬೆಳಗಲಿ ಎಂದು ಆಶಿಸುತ್ತಾ ಈ ಅಂಕಣಗಳನ್ನು ಮುಕ್ತಾಯಗೊಳಿಸುತ್ತಿದ್ದೆನೆ,ತಮ್ಮೆಲ್ಲರ ಸಹಕಾರ ಪ್ರೋತ್ಸಾಹ, ಶುಭಹಾರೈಕೆಗಳಿಗೆ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು,
=================================.

 *ಉಪನಿಷತ್ ಭಾವ ಬಿಂದು259* 🕉️
ದಿನಾಂಕ 30/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ಭಗವದ್ಗೀತೆಯ *ಜ್ಞಾನ ವಿಜ್ಞಾನ ಯೋಗ* ದ 21ನೇಯ ಶ್ಲೋಕಕ್ಕೆ ಸಂಬಂಧಪಟ್ಟ ವ್ಯಾಖ್ಯಾನ,

ಪ್ರತಿಯೊಬ್ಬ ಮಾನವರಲ್ಲಿಯೂ ಹಲವಾರು ಅಭಿಲಾಷೆಗಳಿರುತ್ತವೆ, ಯಾವುದನ್ನು ಕೂಡ ಭಗವಂತನು ಖಂಡಿಸುವುದಿಲ್ಲ, ತನ್ನ ಬೇಡಿಕೆಗಳನ್ನು ಈಡೇರಿಸುವ ಬೇರೆ ಬೇರೆ ದೇವರುಗಳ ಮೇಲೆ ಅವರಿಗೆ ಹೆಚ್ಚು ಶ್ರದ್ದೆ ಹುಟ್ಟುವಂತೆ ಮಾಡುತ್ತಾನೆ, ಯಾವಾಗ ಶ್ರದ್ಧೆ ಹುಟ್ಟುತ್ತ ಹೋಗುವುದು ಆಗ ಆಯಾ ದೇವ ದೇವಿಯ ಮೇಲೆ ಪ್ರೇಮವು ಹೆಚ್ಚುವುದು,

ತದನಂತರವೇ ತಾನು ಲೌಕಿಕವಾದ ವಸ್ತುಗಳನ್ನು ಕೇಳುವುದನ್ನು ಬಿಟ್ಟು ಶಾಶ್ವತವಾದ ಜ್ಞಾನಭಕ್ತಿಗಳನ್ನು ಬೇಡುತ್ತಾನೆ, ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿದಂತೆ ಒಬ್ಬನೇ ಪರಮಾತ್ಮ ಹಲವಾರು ನಾಮ ರೂಪಗಳನ್ನು ಧರಿಸಿ ಹಲವು ಪಾತ್ರಗಳಲ್ಲಿ ನಿರತವಾಗಿರುವುದು ಗೊತ್ತಾಗುತ್ತದೆ,ಇದಕ್ಕಾಗಿ ಶ್ರೀ ಕೃಷ್ಣ ಎಲ್ಲಿಯೂ ಯಾರನ್ನು ಖಂಡಿಸುವುದಕ್ಕೆ ಹೋಗುವುದಿಲ್ಲ, ಯಾರ ಶ್ರದ್ದೆಗೂ ಭಂಗ ತರುವುದಿಲ್ಲ, ವಿಕಾಸದ ಕಡೆಗೆ ಹೋಗಬೇಕು, ಮತ್ತಷ್ಟು ಆಳವಾಗಬೇಕು, ಅದಕ್ಕೆ ಏನು ಬೇಕೋ ಅದನ್ನೆಲ್ಲ ಮಾಡುವನು ,ಎಲ್ಲಿಯೂ ತಾತ್ಸಾರವಾಗಲಿ ಕುಹಕವಾಗಲಿ ಇಲ್ಲ, ಒಬ್ಬ ಯಾವುದನ್ನಾದರೂ ಪೂಜಿಸುತ್ತಿರಲಿ, ಕಲ್ಲು ಮಣ್ಣು, ಲೋಹ, ಶಿವ ಪಾರ್ವತಿ, ರಾಮ ಕೃಷ್ಣ, ಇತ್ಯಾದಿಯಾಗಿ ಎಲ್ಲರೂ ಬೇರೆ ಬೇರೆ ವಿಧವಾಗಿ ಕರೆಯುತ್ತಿರುವುದು ಒಬ್ಬನೇ ದೇವರನ್ನು,

ಮನೆಯಲ್ಲಿ ಎಳೆಯ ಮಗುವೊಂದು ಇದೆ ,ಅದಕ್ಕೆ ಅಪ್ಪ ಎಂದು ಕರೆಯುವುದಕ್ಕೆ ಬರುವುದಿಲ್ಲ, ಸುಮ್ಮನೆ ಪ ಎನ್ನುವುದು,ತಂದೆ ಬಂದು ಮಗುವನ್ನು ಎತ್ತಿಕೊಳ್ಳುವುದಿಲ್ಲವೇ? ಹಾಗೆ ಯಾವ ದೇವರ ಮೂಲಕ ಕರೆಯಲಿ ಯಾವ ಉದ್ದೇಶದಿಂದಲೇ ಕರೆಯಲಿ ಎಲ್ಲರಿಗೂ ಓ ಕೊಡುವವನು ದೇವರು, ಮುಖ್ಯವಾಗಿ ಬೇಕಾಗಿರುವುದು ನಮ್ಮ ಕರೆಯ ಹಿಂದೆ ಶ್ರದ್ಧೆ, ಈ ಶ್ರದ್ಧೆ ಮೊದಮೊದಲು ಅಲ್ಪವಾಗಿದ್ದರು ದೇವರೇ ಅದನ್ನು ಕ್ರಮೇಣವಾಗಿ ನಮ್ಮೊಳಗೆ ವೃದ್ಧಿಯಾಗುವಂತೆ ಮಾಡುವನು,
=================================.

🕉️ *ಉಪನಿಷತ್ ಭಾವ ಬಿಂದು258* 🕉️
ದಿನಾಂಕ 28/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
ಭಗವದ್ಗೀತೆಯ *ಜ್ಞಾನ ವಿಜ್ಞಾನ ಯೋಗ* ದ 20ನೇಯ ಶ್ಲೋಕಕ್ಕೆ ಸಂಬಂಧಪಟ್ಟ ವ್ಯಾಖ್ಯಾನ,

ಮಾನವರಲ್ಲಿ ಹಲವು ಬಗೆಯ ಕಾಮನೆಗಳಿರುತ್ತವೆ, ಅವುಗಳನ್ನು ತೃಪ್ತಿಪಡಿಸಕೊಳ್ಳಬೇಕು ಎಂಬ ಆಶೆ ಇರುತ್ತದೆ, ಅದನ್ನೆಲ್ಲ ಬಿಟ್ಟು ದೇವರ ಕಡೆಗೆ ಹೋಗಿ ಎಂದರೆ ಅವರು ಕೇಳುವುದಿಲ್ಲ, ಹಾಗಾಗಿ ಅನುಭವಿಸಿಯೇ ಮುಂದಕ್ಕೆ ಹೋಗಬೇಕಾಗಿದೆ,

ತಮ್ಮ ಆಸೆಗಳನ್ನು ಪೂರ್ಣಗೊಳಿಸಿಕೊಳ್ಳಲು ಅವರು ದೇವರುಗಳಿಗೆ ಮೊರೆ ಹೋಗುತ್ತಾರೆ, ಕೈಗೊಂಡ ದೊಡ್ಡ ಕೆಲಸವೊಂದು ನಿರ್ವಿಘ್ನವಾಗಿ ನಡೆಯಬೇಕಾಗಿ ಶ್ರೀ ಗಣೇಶನಿಗೆ ಮೊರೆ ಹೋಗುತ್ತಾರೆ, ಯಾರಿಗೂ ಒಬ್ಬನಿಗೆ ವಿದ್ಯೆ ಬೇಕಾಗಿದೆ,ಆ ಅಪೇಕ್ಷೆ ಉಳ್ಳವನುವಿದ್ಯಾಧಿ ದೇವತೆಯಾದ ಸರಸ್ವತಿಯ ಉಪಾಸನೆಯನ್ನು ಮಾಡುತ್ತಾನೆ, ಮತ್ತೊಬ್ಬನಿಗೆ ಸಂಪತ್ತಿನ ಮೇಲೆ ಇಚ್ಛೆ ಇರುತ್ತದೆ, ಅದಕ್ಕಾಗಿ ಅವನು ಲಕ್ಷ್ಮಿ ದೇವಿಯ ಉಪಾಸನೆ ಮಾಡುತ್ತಾನೆ, ಒಬ್ಬನಿಗೆ ಯಶಸ್ಸು ಬೇಕಾಗಿದೆ,ದೇವಿಭವಾನಿಯನ್ನು ಅದಕ್ಕಾಗಿ ಅವನು ಪೂಜಿಸುತ್ತಾನೆ,

ಹೀಗೆ ಮನುಷ್ಯರಲ್ಲಿ ಹಲವು ಬಗೆಯ ಕಾಮನೆಗಳಿರುತ್ತವೆ, ಅವನ್ನೆಲ್ಲ ಪೂರ್ಣಗೊಳಿಸಿಕೊಳ್ಳುವರೇ ಹರಕೆಯನ್ನು ಹೊರುತ್ತಾರೆ, ಉಪವಾಸ ವ್ರತಗಳನ್ನು ಮಾಡುತ್ತಾರೆ, ಹೋಮ ಹವನಗಳನ್ನು ಮಾಡುತ್ತಾರೆ, ಅನೇಕ ವಿಧದ ಪೂಜೆ ಪುನಸ್ಕಾರಗಳನ್ನು ಕೈಗೊಳ್ಳುತ್ತಾರೆ,

ಹಾಗಂತ ಶ್ರೀ ಕೃಷ್ಣ ಗೀತೆಯಲ್ಲಿ ಇದನ್ನು ಆಕ್ಷೇಪಿಸುವುದಿಲ್ಲ, ಬೇರೆ ಬೇರೆ ದೇವತೆಗಳ ಬಳಿ ಕಾಮನೆಗಳನ್ನು ಈಡೇರಿಸಿಕೊಳ್ಳಲು ಹೋಗುವವರ ನ್ನು ಶ್ರೀಕೃಷ್ಣ ತಿರಸ್ಕರಿಸುವುದಿಲ್ಲ, ತಾನೊಬ್ಬನೇ ನಿಜವಾದ ದೇವರು, ಉಳಿದವರೆಲ್ಲ ಸುಳ್ಳು ಎಂದು ಹೇಳುವುದಿಲ್ಲ, ಏಕೆಂದರೆ ಎಲ್ಲ ದೇವತೆಗಳಲ್ಲಿಯೂ ಇವನೇ ಇರುವನು,ಎಲ್ಲ ದೇವದೇವಿಯರಲ್ಲಿಯೂ ಅಂತಸ್ಥನಾಗಿದ್ದು ತನ್ಮೂಲಕವಾಗಿ ಕೆಲಸ ಮಾಡುವವನು ಕೂಡ ಇವನೆ,
=================================.

🕉️ *ಉಪನಿಷತ್ ಭಾವ ಬಿಂದು257* 🕉️
ದಿನಾಂಕ 26/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ಸೃಷ್ಟಿಯಲ್ಲಿ ಇಂತಹ ಪೂರ್ಣ ಅನುಭವವನ್ನು ಪಡೆದುಕೊಳ್ಳುವವರು ಬಹಳ ವಿರಳ, ಎಂದರೆ ಇಲ್ಲವೇ ಇಲ್ಲ ಎಂದಲ್ಲ, ಇಂಥವರು ಇರುವರು, ಆದರೆ ಅಲ್ಪ ಪ್ರಮಾಣದಲ್ಲಿ ಇರುವರು. ಇವರೇ ಈ ಪ್ರಪಂಚದ ಸಾರ ಸೃಷ್ಟಿಯ ಶ್ರೇಷ್ಠತಮ ಪುಷ್ಪಗಳು,

ಪಿರಮಿಡ್ದಿನ ಕೆಳಭಾಗ ಯಾವಾಗಲೂ ವಿಸ್ತಾರವಾಗಿರುವುದು, ಆದರೆ ಅದರ ಮೇಲೆ ಚೂಪಿನಲ್ಲಿ ಕೆಲವರಿಗಷ್ಟೇ ನಿಲ್ಲುವುದಕ್ಕೆ ಸ್ಥಳಾವಕಾಶವಿರುವುದು, ಹಾಗೆ ಎಲ್ಲವೂ ವಾಸುದೇವಮಯ ಎಂದು ಅರಿಯುವವನು ಜ್ಞಾನಿ, ಈ ಕೆಲವೇ ಕೆಲವು ಅಸಾಧಾರಣ ವ್ಯಕ್ತಿಗಳನ್ನು ಸೃಷ್ಟಿಸುವುದಕ್ಕೆ ಸೃಷ್ಟಿ ಕೋಟ್ಯಾಂತರ ಜೀವಿಗಳನ್ನು ಉಪಯೋಗಿಸಿಕೊಳ್ಳುತ್ತಿದೆ,

ಒಂದು ಅಂಶ ಚಿನ್ನ ತಯಾರಾಗಬೇಕಾದರೆ ನೂರಾರು ಟನ್ನುಗಳಷ್ಟು ಚಿನ್ನದ ಅದುರಿನ ಕಲ್ಲುಗಳನ್ನು ಕುಟ್ಟಿ ಪುಡಿ ಮಾಡಿ ಹಲವಾರು ರಾಸಾಯನಿಕ ದ್ರವ್ಯಗಳೊಂದಿಗೆ ಸೇರಿಸಿ ಕೆಲವು ಪ್ರಯೋಗಗಳನ್ನು ಮಾಡುತ್ತಾರೆ, ಅನಂತರ ಯಂತ್ರದ ಮತ್ತೊಂದು ಕಡೆಯಿಂದ ಪರಿಶುದ್ಧವಾದ ಚಿನ್ನ ಲಭಿಸುತ್ತದೆ,

ಹಾಗೆಯೇ ಸಾಧನ ಪಥದಲ್ಲಿ ಮುಂದುವರಿದು ಪೂರ್ಣತೆಯನ್ನು ಮುಟ್ಟಿದ ಜೀವಿಗಳು ಎಲ್ಲೋ ಕೆಲವು ಮಂದಿ ಇರಬಹುದು, ಆದರೆ ಇಡೀ ಮಾನವ ಕೋಟಿಯ ಮೇಲೆ ಅವರು ತಮ್ಮ ಪ್ರಭಾವವನ್ನು ಬೀರಬಲ್ಲರು, ಇದೇ ನಮ್ಮ ಪರಮಗುರಿಯಾಗಬೇಕು, ಇದೆ ಮಾನವ ಕೋಟಿಯ ವಿಕಾಸದ ತುತ್ತ ತುದಿ ಎಂಬುದನ್ನು ಭಗವದ್ಗೀತೆಯ ಈ ಶ್ಲೋಕವು ನಮ್ಮನ್ನು ನೆನಪಿಸುತ್ತದೆ, ಆ ಹಾದಿಯಲ್ಲಿ ಮುಂದುವರಿಯಲು ಅದು ನಮ್ಮನ್ನು ಪ್ರೇರೇಪಿಸುತ್ತದೆ,
=================================.

🕉️ *ಉಪನಿಷತ್ ಭಾವ ಬಿಂದು255* 🕉️
ದಿನಾಂಕ 22/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
*ಮುಂದುವರೆದಿದೆ*
ಐದು ಬಗೆಯ ಪ್ರಭುತ್ವ, ಈ ಆತ್ಮನು ಪಂಚಪ್ರಾಣಗಳಂತೆ ಈ ದೇಹದಲ್ಲಿ ಕೆಲಸ ಮಾಡುವವರನ್ನೆಲ್ಲಾ ಆಳುತ್ತಿರುವನು, ನಮ್ಮ ದೇಹದ ಎಲ್ಲಾ ಕೆಲಸಗಳನ್ನು ಮಾಡುತ್ತಿರುವ ಪಂಚಪ್ರಾಣಗಳು ಸ್ವತಂತ್ರರಲ್ಲ, ಇವೆಲ್ಲ ಬರಿ ಆಳುಗಳು, ಜೀವಾತ್ಮನಿಗಾಗಿ ಇವುಗಳೆಲ್ಲ ಸದಾಕಾಲ ದುಡಿಯುತ್ತವೆ,

ದೇಹದಲ್ಲಿರುವ ಜೀವಾತ್ಮನಿಗೂ ಮತ್ತು ಪರಮಾತ್ಮನಿಗೂ ಎಂತಹ ಸಂಬಂಧವಿದೆ ಎಂಬುದನ್ನು ಸಾಧಕನ್ನು ಮನಗಂಡಿರಬೇಕು, ಪರಮಾತ್ಮ ಒಂದು ವಸ್ತುವಾದರೆ ಜೀವಾತ್ಮ ಅದರ ನೆರಳಿನಂತೆ ಇರುವನು, ನೆರಳು ವಸ್ತುವನ್ನು ಆಶ್ರಯಿಸುವುದು, ಇದು ಸ್ವತಂತ್ರವಾಗಿರಲಾರದು ಅದರಂತೆ ಜೀವಿ ಈ ದೇಹದಲ್ಲಿ ಪರಮಾತ್ಮನ ನೆರಳಿನಂತೆ ಇರುವನು,

ಯಾರು ಇದನ್ನೆಲ್ಲಾ ತಿಳಿದುಕೊಂಡಿರುವನೋ ಅವನು ಅಮೃತತ್ವವನ್ನು ಪಡೆಯುತ್ತಾನೆ, ಅವನು ಕೇವಲ ಭೌತಿಕವಾಗಿ ತಿಳಿಯುವುದು ಮಾತ್ರವಲ್ಲ ಆತ್ಮ ಅನಾತ್ಮ ವಿಷಯಗಳನ್ನು ಚೆನ್ನಾಗಿ ವಿಭಜನೆ ಮಾಡಿ ಅನಾತ್ಮ ವಸ್ತುವನ್ನು ತೂರಿ ಆತ್ಮ ವಸ್ತುವನ್ನು ಮಾತ್ರ ಹಿಡಿದವನು ಅಮೃತನಾಗುತ್ತಾನೆ,
=================================.

🕉️ *ಉಪನಿಷತ್ ಭಾವ ಬಿಂದು253* 🕉️
ದಿನಾಂಕ 17/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
ಪ್ರಶ್ನೋಪನಿಷತ್ , ಪ್ರಶ್ನೆ ಮೂರು, ಹನ್ನೊಂದನೆಯ ಶ್ಲೋಕ,

ಈ ಪ್ರಾಣ ದೇಹವನ್ನು ಹೇಗೆ ಬಿಡುತ್ತದೆ,? ಹೇಗೆ ಇನ್ನೊಂದು ಕಡೆ ಏಳುತ್ತದೆ?, ಮತ್ತು ದೇಹದಲ್ಲಿರುವಾಗ ಹೇಗೆ ಇರುತ್ತದೆ ?ಇವುಗಳನ್ನೆಲ್ಲ ನಿನ್ನೆಯ ಭಾವ ಬಿಂದುವಿನಲ್ಲಿ ನೋಡಿರುವೆವು, ಈ ದೇಹವೇ ಪ್ರಾಣವಲ್ಲ, ಚೇತನ ಈ ದೇಹದ ಮೂಲಕ ವ್ಯಕ್ತವಾಗುತ್ತಿದೆ ಅಷ್ಟೇ, ದೇಹದ ಧರ್ಮವೇ ಬೇರೆ,ಪ್ರಾಣದ ಧರ್ಮವೇ ಬೇರೆ, ಎಂಬ ಅರಿವಿನೊಂದಿಗೆ ಇವುಗಳನ್ನೆಲ್ಲ ತಿಳಿದು ಆತ್ಮ ಜ್ಞಾನದ ಕಡೆಗೆ ಹೋಗುತ್ತಾನೆ, ದೇಹವೇ ಆತ್ಮ ಎಂಬ ಬುದ್ಧಿಯಿಂದ ಪಾರಾಗುತ್ತಾನೆ,

ಅವನ ಪುತ್ರ ಪೌತ್ರಾದಿಗಳು ನಾಶವಾಗುವುದಿಲ್ಲ, ಹಿಂದಿನ ಕಾಲದಲ್ಲಿ ವೇದಗಳ ಒಂದೊಂದು ಶಾಖೆಯನ್ನು ಒಂದೊಂದು ಗೋತ್ರದವರು ರಕ್ಷಿಸಿಕೊಂಡು ಬರುತ್ತಿದ್ದರು, ಅದನ್ನು ತಾವು ಕಲಿತುಕೊಂಡು ಇತರರಿಗೆ ಹೇಳಿಕೊಡುತ್ತಿದ್ದರು, ಅದಕ್ಕಾಗಿಯೇ ಆ ವಂಶ ಮುಂದುವರಿದುಕೊಂಡು ಬರುವುದು ಅತ್ಯಂತ ಮುಖ್ಯವಾಗಿತ್ತು, ಇಂತಹ ವಂಶ ನಾಶವಾಗದಂತೆ ವಿಶ್ವ ಚೈತನ್ಯವೇ ನೋಡಿಕೊಳ್ಳುವುದು, ಇದು ನಾಶವಾದರೆ ಯಾವುದೋ ಒಂದು ವ್ಯಕ್ತಿಗೆ ಆಗುವ ನಷ್ಟವಲ್ಲ, ಸಮಷ್ಟಿಗೆ ಇದರಿಂದ ನಷ್ಟವಾಗುವುದು, ವಿಶ್ವವನ್ನು ಕಾಪಾಡುತ್ತಿರುವ ಚೈತನ್ಯ ಹೀಗೆ ಆಗದಂತೆ ನೋಡಿಕೊಳ್ಳುವುದು

ಅವನೇನು ಅಮೃತಾತ್ಮನಾಗುತ್ತಾನೆ ,ಮೋಕ್ಷವನ್ನು ಪಡೆಯುತ್ತಾನೆ ಎಂದಲ್ಲ, ಅವನಿಗೆ ಒಳ್ಳೆಯ ಲೋಕ ಸಿಗುವುದು, ಏಕೆಂದರೆ ಅವನು ಬದುಕಿರುವಾಗ ಜ್ಞಾನವನ್ನು ಪ್ರಾಪ್ತಿಸಿಕೊಂಡು ಅದನ್ನು ಇತರರಿಗೆ ಹೇಳಿ ಕೊಟ್ಟಿರುವನು, ಅದನ್ನು ಮುಂದಿನವರಿಗೆ ಹೇಳಿಕೊಡುವುದಕ್ಕೆ ತನ್ನ ಸಂತತಿಯನ್ನು ಈ ಲೋಕದಲ್ಲಿ ಬಿಟ್ಟು ಹೋಗುತ್ತಾನೆ,
=================================.

 *ಉಪನಿಷತ್ ಭಾವ ಬಿಂದು252* 🕉️
ದಿನಾಂಕ 16/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

*ಪ್ರಶ್ನೋಪನಿಷತ್ ಮೂರನೇ ಪ್ರಶ್ನೆಯ ಹತ್ತನೆಯ ಶ್ಲೋಕ ಭಾವ ಬಿಂದು*

ಮರಣ ಸಮಯದಲ್ಲಿ ಜೀವನು ಯಾವ ಯಾವ ಆಸೆಗಳನ್ನು ಹೊಂದಿರುತ್ತಾನೆಯೋ ಅದಕ್ಕೆ ಅನುಸಾರವಾಗಿ ಮರುಜನ್ಮವನ್ನು ಪಡೆಯುತ್ತಾನೆ, ಕೊನೆಗಾಲದಲ್ಲಿ ನಾವು ಯಾವ ಚಿತ್ತದಿಂದ ಕೂಡಿರುವೆವೊ ಅದುವೆ ಮುಂದಿನದ್ದನ್ನು ನಿರ್ಣಯಿಸುತ್ತದೆ,

ನಾವು ಮುಂದಿರುವುದನ್ನು ಹಿಡಿದುಕೊಂಡು ಹಿಂದಿನದ್ದನ್ನು ಬಿಡುತ್ತೇವೆ. ನಾವು ಏಣಿಯಲ್ಲಿ ಹತ್ತುವಾಗ ಮುಂದಿನ ಮೆಟ್ಟಲಿಗೆ ಕಾಲಿಟ್ಟು ಹಿಂದಿನದ್ದನ್ನು ಬಿಡುವಂತೆ ಇದು, ಜೀವ ಆಗಲೇ ಮುಂದಿನದ್ದನ್ನು ನಿರ್ಣಯಿಸಿಕೊಂಡು ಹಿಂದಿನದನ್ನು ಬಿಡುವುದು,

ಪಂಚಪ್ರಾಣಗಳು ದೇಹದಲ್ಲೆಲ್ಲಾ ಹರಡಿಕೊಂಡು ಹಲವು ವಿಧವಾದ ಕ್ರಿಯೆಗಳನ್ನು ಮಾಡುತ್ತಿರುವವು, ಯಾವಾಗ ಅವಸಾನದ ಸಮಯ ಬರುವುದೋ ಆಗ ಚದುರಿನ ಪ್ರಾಣಗಳೆಲ್ಲ ಒಟ್ಟುಗೊಂಡು ಉದಾನದ ಮೂಲಕ ಈ ದೇಹದಿಂದ ಹೊರಡುವುದು, ಅನಂತರ ತನ್ನ ಸಂಕಲ್ಪಕ್ಕೆ ಅನುಸಾರವಾದ ದೇಹದಲ್ಲಿ ಇಳಿಯುವುದು ,ಇಲ್ಲಿ ಸಂಕಲ್ಪವು ಕೂಡ ನಾವು ಹಿಂದೆ ಯಾವ ರೀತಿ ಆಲೋಚನೆ ಮಾಡಿರುವೆವೋ, ಕರ್ಮ ಮಾಡಿರುವೆವೊ ಅದರ ಮೇಲೆ ನಿಂತಿದೆ,

ಬದುಕಿರುವ ತನಕ ಹಾಳು ಜೀವನ ನಡೆಸಿ ಸಾಯುವ ಸಮಯದಲ್ಲಿ ಉತ್ತಮ ಸಂಕಲ್ಪವನ್ನು ಮಾಡಿ ಬಿಡುವುದಕ್ಕೆ ಆಗುವುದಿಲ್ಲ, ನಾವು ಜೀವಂತವಿರುವಾಗ ಯಾವ ರೀತಿಯ ಜೀವನವನ್ನು ನಡೆಸಿರುವೆವೋ ಅಂತಹ ಸಂಕಲ್ಪವನ್ನು ಮಾತ್ರ ಮಾಡಲು ಸಾಧ್ಯವಾಗುವುದು,

ಸಾವು ಎಂದರೆ ಈಜುವುದಕ್ಕೆ ಮೇಲಿನಿಂದ ನೀರಿಗೆ ಬಿದ್ದಂತೆ, ಅನಂತರ ಬಿದ್ದವನು ಸ್ವಲ್ಪ ದೂರದಲ್ಲಿ ಮೇಲೆಳುವನು ,ಅದೇ ಜನನ, ಬಿದ್ದದ್ದು ಒಂದು ಕಡೆ,ಎದ್ದದ್ದು ಇನ್ನೊಂದು ಕಡೆ, ಹಾಗೆ ಏಳುವುದನ್ನು ಕೂಡ ನಾವೇ ನಿರ್ಣಯಿಸಿಕೊಳ್ಳುತ್ತೇವೆ,
=================================.

 *ಉಪನಿಷತ್ ಭಾವ ಬಿಂದು251* 🕉️
ದಿನಾಂಕ 14/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

*ಪ್ರಶ್ನೋಪನಿಷತ್ ಮೊದಲ ಪ್ರಶ್ನೆಯ ಏಳನೆಯ ಶ್ಲೋಕ* ಗದ್ಯಾನುವಾದ

ಎಲ್ಲರ ಆತ್ಮದ ಹಿಂದೆ ಇರುವವನು ಅವನೇ,ಹೇಗೆ ಸಾಗರದಲ್ಲಿ ಹಲವು ಅಲೆಗಳ ಹಿಂದೆ ಸಾಗರವೇ ಇರುವುದೋ ಘಟಗಳ ಒಳಗೆ ಆಕಾಶವೇ ಇದೆಯೋ, ನಮ್ಮ ಮನೆಯಲ್ಲಿ ಬೆಳಗುವ ಸಣ್ಣ ದೊಡ್ಡ ಬಲ್ಬಿನಲ್ಲೆಲ್ಲ ವಿದ್ಯುತ್ ಕಾಂತಿಯೇ ಇದೆಯೋ, ಹಾಗೆಯೇ ಸರ್ವಾತ್ಮ ಅಥವಾ ಪರಮೇಶ್ವರ ಎಲ್ಲ ಕಡೆಗಳಲ್ಲಿಯೂ ಇರುವನು,

ಇಲ್ಲಿ ಅವನು ಎಲ್ಲಾ ಆತ್ಮಗಳ ಸಮಷ್ಟಿ ರೂಪ, ಇದು ಮಾತ್ರ ಅಲ್ಲ, ಅವನು ಈ ಸಮಷ್ಟಿ ರೂಪವನ್ನು ದಾಟಿದ್ದಾನೆ, ಅವನ ಒಂದು ಭಾಗ ಸಮಷ್ಟಿಯಂತೆ ಕಾಣುವುದು, ಇನ್ನು ಬಹುಭಾಗ ಅದಕ್ಕೆ ಅತೀತವಾಗಿದೆ, ಸಾಗರದಲ್ಲಿ ತೇಲುತ್ತಿರುವ ಹಿಮದ ಗೆಡ್ಡೆಯ ಹಿಂದೆ ಸಾಗರದ ನೀರೇ ಇದೆ, ಆದರೆ ಸಾಗರದ ನೀರೆಲ್ಲ ಈ ಹಿಮದ ಗೆಡ್ಡೆಯಲ್ಲ, ಯಾವುದೋ ಸಣ್ಣ ಅಂಶ ಈ ರೂಪವನ್ನು ಧರಿಸಿದೆ,

ಶ್ರೀ ಕೃಷ್ಣನು ಗೀತೆಯಲ್ಲಿ ಕೂಡ “ನನ್ನ ಒಂದು ಅಂಶದಿಂದ ಈ ಬ್ರಹ್ಮಾಂಡವನ್ನೆಲ್ಲ ಸೃಷ್ಟಿ ಮಾಡಿದ್ದೇನೆ” ಎನ್ನುವುದರ ಹಿಂದೆಯೂ ಇದೆ ಭಾವನೆಯನ್ನು ನೋಡುತ್ತೇವೆ, ವಿಶ್ವರೂಪನು ಆಗಿದ್ದಾನೆ,ಅವನು ಬರೀ ಚೈತನ್ಯಾಂಶನಾಗಿ ಮಾತ್ರವಲ್ಲ ಇರುವುದು, ಅವನು ಈ ಪ್ರಪಂಚದಲ್ಲಿರುವ ಎಲ್ಲಾ ನಾಮ ರೂಪಗಳ ಹಿಂದೆಯೂ ಇದ್ದಾನೆ, ಇದು ಚೈತನ್ಯವಲ್ಲದ ವಸ್ತುವನ್ನು ಸೇರಿಕೊಳ್ಳುವುದು,

ಪಂಚಭೂತಗಳು ಈ ಪ್ರಪಂಚದಲ್ಲಿ ಹಲವು ರೂಪಗಳನ್ನು ತಾಳಿ ಬಿದ್ದಿವೆ, ಅವಕ್ಕೆ ಹಲವು ಹೆಸರುಗಳು ಇವೆ, ಅವುಗಳಲ್ಲಿ ಇನ್ನೂ ಚೈತನ್ಯ ಮೂಡಿಲ್ಲ, ಅವು ನಿರ್ಜೀವ ವಸ್ತುಗಳು, ಆದರೂ ಅವುಗಳ ಹಿಂದೆ ಇರುವವನು ಈ ಪರಮೇಶ್ವರನೆ, ನಾವೊಂದು ಕನಸು ಕಾಣುತ್ತೇವೆ, ಆ ಕನಸಿನಲ್ಲಿ ಹಲವು ಮನುಷ್ಯರನ್ನು ನೋಡುತ್ತೇವೆ. ಆ ಮನುಷ್ಯರ ಹಿಂದೆಲ್ಲ ನನ್ನ ಚೈತನ್ಯಾಂಶವೇ ಇದೆ,

ಅಲ್ಲಿ ಕಲ್ಲು ಮಣ್ಣು ನದಿ ಬೆಟ್ಟ ನಿರ್ಜಿವ ವಸ್ತುಗಳನ್ನು ನೋಡುತ್ತೇವೆ, ಅವುಗಳ ಹಿಂದೆಯೂ ಪರಮೇಶ್ವರನ ಚೈತನ್ಯಾಂಶವೇ ಇದೆ, ಹಾಗೆ ಈ ಬ್ರಹ್ಮಾಂಡದಲ್ಲಿ ಪರಮೇಶ್ವರ ಅಥವಾ ಹಿರಣ್ಯಗರ್ಭ ಇರುವನು,ಜಡ ಮತ್ತು ಚೇತನ ಎರಡರ ಹಿನ್ನೆಲೆಯೂ ಒಂದೇ ಆಗಿರುವುದು,
=================================.

🕉️ *ಉಪನಿಷತ್ ಭಾವ ಬಿಂದು250* 🕉️
ದಿನಾಂಕ 12/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ಯಾರು ಇಂತಹ ಅಕ್ಷಯವಾದ ಎಂದರೆ ನಾಶವಿಲ್ಲದ ಬ್ರಹ್ಮನನ್ನು ತಿಳಿದುಕೊಳ್ಳುತ್ತಾನೋ ಅವನು ಅದನ್ನೇ ಹೊಂದುತ್ತಾನೆ, ಬ್ರಹ್ಮ ನಾಶವಾಗುವುದಿಲ್ಲ ,

ಅದು ಯಾವ ಯಾವ ವಸ್ತುವನ್ನು ವ್ಯಾಪಿಸಿಕೊಂಡಿದೆಯೋ ಅದೆಲ್ಲ ನಾಶವಾಗಬಹುದು, ಭೂಮಿಯ ಮೇಲಿರುವ ನಾಮರೂಪಗಳೆಲ್ಲ ನಾಶವಾಗಬಹುದು, ಆದರೆ ಆಕಾಶ ಇದರಿಂದ ನಾಶವಾಗಲಾರದು,

ಹಾಗೆಯೇ ಬ್ರಹ್ಮವಸ್ತು ಎಂದೆಂದೂ ಇರುವುದು, ಪರಬ್ರಹ್ಮ ಅವಿನಾಶಿ, ಅವನಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ, ಯಾರು ಅವನನ್ನು ತಿಳಿದುಕೊಳ್ಳುತ್ತಾರೆಯೋ ಅವರು ಆದರಂತೆ ಆಗುತ್ತಾರೆ, ಅವನನ್ನು ತಿಳಿದುಕೊಂಡಾಗ ಅವನ ಸ್ವಭಾವವೇ ನಮಗೆ ಬರುವುದು,

ಅದನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ನಾವು ಒಂದು ದೇಹ, ಮನಸ್ಸು, ಬುದ್ಧಿ, ಇಂದ್ರಿಯ,ಇವುಗಳಿಂದ ಕೂಡಿದ ಒಂದು ಕಂತೆ ಎಂದು ಭಾವಿಸುತ್ತಿದ್ದೆವು,ಅವನನ್ನು ತಿಳಿದ ಮೇಲೆ ನಾನೊಂದು ಕಂತೆಯಲ್ಲ, ಆ ಕಂತೆಯ ಹಿಂದೆ ಇರುವ ಬ್ರಹ್ಮನೇ ನಮಗೆ ಅಸ್ತಿತ್ವವನ್ನು ಕೊಟ್ಟಿರುವುದು ಎಂದು ಗೊತ್ತಾಗುವುದು,

ಅವನನ್ನು ತಿಳಿದಾಗ ನಾವು ಅಲ್ಪವನ್ನು ಬಿಟ್ಟು ಭೂಮವನ್ನು ಹಿಡಿಯುತ್ತೇವೆ, ಒಂದು ಕಳಚಿಕೊಂಡಾಗ ಮತ್ತೊಂದು ಬರುವುದು, ಅಲ್ಪತೆ ಮತ್ತು ಅಜ್ಞಾನ ಹೋಗುವುದು, ಸರ್ವವ್ಯಾಪಿತ್ವ ಬರುವುದು, ಜ್ಞಾನ ಬರುವುದು, ನದಿ ಸಾಗರವನ್ನು ಸೇರಿದರೆ ಅದು ತನ್ನ ಅಲ್ಪ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು, ಆಗಲೇ ಅದಕ್ಕೆ ಭೂಮ ವ್ಯಕ್ತಿತ್ವ ಬರುವುದು, ಮತ್ತು ಅದು ಕೂಡ ಸಾಗರವೇ ಆಗುವುದು,
==================================

🕉️ *ಉಪನಿಷತ್ ಭಾವ ಬಿಂದು249* 🕉️
ದಿನಾಂಕ 11/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

*ಪ್ರಶ್ನೋಪನಿಷತ್ 4ನೇ ಪ್ರಶ್ನೆಯಲ್ಲಿ 11ನೇ ಶ್ಲೋಕ*

ಈ ಶ್ಲೋಕದಲ್ಲಿ ಪರಬ್ರಹ್ಮನ ಸ್ವರೂಪ ಏನೆಂಬುದನ್ನು ವಿವರಿಸುವರು, ಅಲೆಗೆ ಹಿಂದೆ ಸಾಗರ ಇರುವಂತೆ ಜೀವಕ್ಕೆ ಹಿನ್ನೆಲೆ ಪರಬ್ರಹ್ಮ, ಅದನ್ನು ಕುರಿತು ಚಿಂತಿಸಿದರೆ ಅದರಂತೆ ಆಗುತ್ತೇವೆ,

ಅವನಿಗೆ ನೆರಳಿಲ್ಲ, ಹೇಗೆ ಸೂರ್ಯನಲ್ಲಿ ಕತ್ತಲೆ ಇಲ್ಲವೋ ಅದರಂತೆ ಬ್ರಹ್ಮನಲ್ಲಿ ಅಜ್ಞಾನವಿಲ್ಲ, ಅವನು ಜ್ಞಾನ ಸ್ವರೂಪನೇ ಆಗಿದ್ದಾನೆ, ಎಲ್ಲವೂ ಅವನಿಗೆ ವೇದ್ಯ,ಏಕೆಂದರೆ ಎಲ್ಲವೂ ಅವನಿಂದಲೇ ಬಂದಿದೆ, ಬಂದಿರುವುದು ಮಾತ್ರವಲ್ಲ ಎಲ್ಲವೂ ಅವನಲ್ಲಿಯೇ ಇದೆ, ಆದಕಾರಣ ಎಲ್ಲವೂ ಅವನೊಬ್ಬನಿಗೆ ವೇದ್ಯ,

ಅವನಿಗೆ ಶರೀರವಿಲ್ಲ, ಶರೀರ ಒಂದು ವಸ್ತುವನ್ನು ಸಾಂತ ಮಾಡುವುದು, ಅದಕ್ಕೆ ನಾಮರೂಪಗಳನ್ನು ಕೊಡಬೇಕಾಗುತ್ತದೆ, ಅದನ್ನು ಸ್ಥೂಲ ಮಾಡುವುದು, ಶರೀರ ಇರಬೇಕಾದರೆ ದೇಶಕಾಲದಲ್ಲಿ ಮಾತ್ರ, ಯಾವುದು ದೇಶಕಾಲದಲ್ಲಿದೆಯೋ ಅದು ಬದಲಾಗಲೇಬೇಕು, ನಾಶವಾಗಲೇಬೇಕು, ಒಂದು ಶರೀರವನ್ನು ಧರಿಸಿ ನಾನು ಬದಲಾಯಿಸುತ್ತಿಲ್ಲ ಎಂದರೆ ಆಗುವುದಿಲ್ಲ, ಯಾವುದಕ್ಕೆ ಶರೀರವಿದೆಯೋ ಅದಕ್ಕೆ ಆದಿ ಇದೆ, ಅಂತ್ಯವೂ ಇದೆ,

ಆದ ಕಾರಣವೇ ಬ್ರಹ್ಮನಿಗೆ ಶರೀರವಿಲ್ಲ, ಆದರೆ ಅವನು ಇರಬೇಕಾದರೆ ಶರೀರ ಬೇಕಿಲ್ಲ, ಅವನು ಎಲ್ಲಾ ಕಡೆಯೂ ಇರುವನು, ಗಡಿಗೆ, ಮಡಿಕೆ ,ಕುಡಿಕೆ ಇರಬೇಕಾದರೆ ಆಕಾಶ ಬೇಕು, ಆದರೆ ಆಕಾಶ ಇರಬೇಕಾದರೆ ಅದಕ್ಕೆ ಯಾವುದು ಬೇಕಾಗಿಲ್ಲ, ಅದು ಸರ್ವ ವ್ಯಾಪಿಯಾಗಿರಬಲ್ಲದು, ಇಲ್ಲಿ ಶರೀರವಿಲ್ಲ ಎಂದರೆ ಇದೇ ದೃಷ್ಟಿಯಿಂದ, ಅವನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಸರ್ವವ್ಯಾಪಿಯಾಗಿರುವನು,
*ಸಶೇಷ*
=================================.

🕉️ *ಉಪನಿಷತ್ ಭಾವ ಬಿಂದು248* 🕉️
ದಿನಾಂಕ 10/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
*ಪ್ರಶ್ನೋಪನಿಷತ್ ಮೂರನೆಯ ಪ್ರಶ್ನೆಯ ಎಂಟನೇ ಶ್ಲೋಕದ ಭಾವಧಾರೆ*

ನಮ್ಮ ದೇಹದ ಒಳಗಿದ್ದುಕೊಂಡು ಕೆಲಸ ಮಾಡುವ ಪಂಚಪ್ರಾಣಗಳು ಮತ್ತು ಹೊರಗೆ ಇರುವ ಪಂಚಪ್ರಾಣಗಳು ಒಂದಕ್ಕೊಂದು ಸಂಬಂಧಿಸಿದ ವಿಷಯಗಳಾಗಿರುತ್ತವೆ, ಏಕೆಂದರೆ ಯಾವುದು ಪಿಂಡಾಂಡದಲ್ಲಿದೆಯೋ ಅದೇ ಬ್ರಹ್ಮಾಂಡದಲ್ಲಿಯೂ ಇರುವುದು, ಇದು ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಸತ್ಯವೆಂದು ನಿರೂಪಿಸಲ್ಪಟ್ಟಿದೆ,

ಯಾವುದು ವ್ಯಷ್ಟಿಯಲ್ಲಿದೆಯೋ ಅದು ಸಮಷ್ಟಿಯಲ್ಲಿಯೂ ಇದೆ, ಆದರೆ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಿರುವುದು, ಹೊರಗೆ ಇರುವ ಸೂರ್ಯನೇ ನಮ್ಮ ಒಳಗಿರುವ ಪ್ರಾಣನಿಗೆ ಸಮ, ಏಕೆಂದರೆ ನಾವು ನೋಡುವುದು ಸೂರ್ಯನಿಂದ, ಪ್ರಾಣದಲ್ಲಿರುವ ನಮ್ಮ ಗವಾಕ್ಷಕ್ಕೆ ಬೆಳಕು ಬರುವುದು ಸೂರ್ಯನಿಂದ,ಸೂರ್ಯನ ಒಂದು ಸಣ್ಣ ಅಂಶವೇ ನಮ್ಮ ಕಣ್ಣಿನಲ್ಲಿರುವುದು,

ಹಾಗೆ ಪೃಥ್ವಿಯಲ್ಲಿ ಇರುವ ದೇವತೆ ಎಂದರೆ ಈಗಿನ ಕಾಲದಲ್ಲಿ ನಾವು ಹೇಳುವ ಆಕರ್ಷಣ ಶಕ್ತಿ ಅಪಾನ, ಇದು ತನ್ನ ಕೇಂದ್ರದ ಕಡೆಗೆ ಎಲ್ಲವನ್ನು ಸೆಳೆಯುವುದು, ಮೇಲಿನಿಂದ ಕೆಳಗೆ ಬರುವಂತೆ ಮಾಡುವುದು, ನಮ್ಮ ದೇಹದಲ್ಲಿ ಇರುವ ಕೆಲಸಕ್ಕೆ ಬಾರದ ವಸ್ತುಗಳೆಲ್ಲವನ್ನು ಅಧೋ ದ್ವಾರಗಳ ಮೂಲಕ ಹೊರಗೆ ಹೋಗುವಂತೆ ಮಾಡುತ್ತದೆ, ಇಲ್ಲಿ ಕೆಲಸ ಮಾಡುವುದು ಕೂಡ ಆಕರ್ಷಣ ಶಕ್ತಿಯೇ,

ಮಧ್ಯದಲ್ಲಿರುವ ಆಕಾಶವೇ ಸಮಾನ, ಇದು ಎಲ್ಲಾ ಕಡೆಯಲ್ಲಿಯೂ ಹರಡಿದೆ, ಇವುಗಳಲ್ಲಿ ಆಕಾಶದಲ್ಲಿರುವುದೆಲ್ಲವೂ ಇದೆ, ಭೂಮಿಯ ಮೇಲೆ ಬೀಸುವ ಗಾಳಿಯು ವ್ಯಾನ, ಗಾಳಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತದೆ, ಹೋಗುವಾಗ ಒಂದು ಸ್ಥಳದಲ್ಲಿರುವುದನ್ನು ಮತ್ತೊಂದು ಸ್ಥಳಕ್ಕೆ ಒಯ್ಯುವುದು, ನಮ್ಮಲ್ಲಿ ರಕ್ತವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೇಗೆ ಚಲಿಸುವುದೋ ಹಾಗೆ ಗಾಳಿ ಯಾವಾಗಲೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೀಸುತ್ತಿರುವುದು,
=================================.

 *ಉಪನಿಷತ್ ಭಾವ ಬಿಂದು247* 🕉️
ದಿನಾಂಕ 08/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ಪ್ರಶ್ನೋಪನಿಷತ್ ಮೂರನೇ ಪ್ರಶ್ನೆಯ ಐದನೇ ಶ್ಲೋಕಕ್ಕೆ ಅನುವಾದ,

ಅಪಾನ ವಾಯು ನಾವು ತೆಗೆದುಕೊಂಡಿದ್ದನ್ನು ಜೀರ್ಣಿಸಿಕೊಂಡಾದ ಮೇಲೆ ಅದರಲ್ಲಿ ಇರುವ ಅನಾವಶ್ಯಕವಾದ ಭಾಗಗಳನ್ನು ಹೊರಗೆ ಎಸೆಯುತ್ತದೆ, ಮಲಮೂತ್ರಗಳನ್ನು ವಿಸರ್ಜಿಸುವ ಕಡೆ ಅಪಾನವಿದೆ,

ಪ್ರಾಣ ಮುಖದಲ್ಲಿ ಇರುವುದು,ಅದು ಅತ್ಯಂತ ಮುಖ್ಯವಾದ ಕೆಲಸಗಳನ್ನು ಮಾಡುತ್ತಿರುವುದು, ಮೂಗು, ಬಾಯಿ, ಕಣ್ಣು, ಕಿವಿ, ಇವುಗಳ ಮೂಲಕ ಕೆಲಸ ಮಾಡುವುದೇ ಪ್ರಾಣ, ಉಸಿರಾಡುವುದು ಅದರಿಂದ, ವಾಸನೆಯನ್ನು ಹೀರುವುದು ಅದರಿಂದ, ಮಾತನಾಡುವುದು ತಿನ್ನುವುದು, ರೂಪವನ್ನು ನೋಡುವುದು, ಶಬ್ದವನ್ನು ಕೇಳುವುದು, ಇವುಗಳನ್ನೆಲ್ಲ ಮಾಡುತ್ತಿರುವುದೇ ಪ್ರಾಣ,

ಮಧ್ಯದಲ್ಲಿ ಸಮಾನ ವಾಯುವಿದೆ, ಜಠರಾಗ್ನಿಯಂತೆ ಇರುವುದು ಇದೆ, ಅನ್ನವನ್ನು ಆರಗಿಸಿಕೊಂಡು ದೇಹದ ಭಾಗಗಳಿಗೆಲ್ಲ ಸಾರವನ್ನು ಹಂಚುವುದು, ಮುಖದಿಂದ ಏಳುವ ಏಳು ಉರಿಗಳೂ ಅವನೇ, ಎಂದರೆ ಎರಡು ಕಣ್ಣು, ಎರಡು ಕಿವಿ, ಎರಡು ಮೂಗಿನ ಹೊಳ್ಳೆಗಳು, ಮತ್ತು ಬಾಯಿ, ಇವುಗಳೆಲ್ಲ ಕೆಲಸ ಮಾಡಬೇಕಾದರೆ ಶಕ್ತಿ ತಿಂದ ಅನ್ನದಿಂದ ಬರಬೇಕು, ಹಿಂದೆ ಶಕ್ತಿ ಇದ್ದರೆ ಇವುಗಳೆಲ್ಲ ಕೆಲಸ ಮಾಡುವವು,
=================================.

🕉️ *ಉಪನಿಷತ್ ಭಾವ ಬಿಂದು246* 🕉️
ದಿನಾಂಕ 05/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

*ಪ್ರಶ್ನೋಪನಿಷತ್ ನಲ್ಲಿ ಎರಡನೇ ಪ್ರಶ್ನೆಯ ಮೂರನೇ ಶ್ಲೋಕಕ್ಕೆ ವ್ಯಾಖ್ಯಾನ*

ಜೀವಾತ್ಮ ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಅದು ಒಂದು ದೇಹವನ್ನು ಧರಿಸಬೇಕಾಗಿದೆ, ಆ ದೇಹದಲ್ಲಿರುವ ಇಂದ್ರಿಯಗಳ ಮೂಲಕ ತಾದಾತ್ರ್ಯಭಾವವನ್ನು ಪಡೆದುಕೊಂಡು ವಿಷಯ ವಸ್ತುಗಳನ್ನು ಅನುಭವಿಸಬಹುದು,

ನಾವು ಯಾವುದಾದರೂ ಹಗುರವಾದ ವಸ್ತುವನ್ನು ನೀರಿನಲ್ಲಿ ಮುಳುಗಿಸಬೇಕಾದರೆ ಅದಕ್ಕೆ ಏನಾದರೂ ಭಾರವನ್ನು ಕಟ್ಟಬೇಕು, ಇಲ್ಲದೆ ಇದ್ದರೆ ಅದು ಮುಳುಗುವುದಿಲ್ಲ, ಅದರಂತೆ ಆಶಯೆ ಭಾರ, ಅದು ಜೀವಿಯನ್ನು ದೇಹಕ್ಕೆ ಇಳಿಯುವಂತೆ ಮಾಡುವುದು, ನಾನು ವಿಷಯ ವಸ್ತುವನ್ನು ಅನುಭವಿಸಬೇಕೆಂಬ ಚಪಲದಿಂದ ಬೆಳೆಯಲ್ಪಟ್ಟು ಒಂದು ದೇಹಕ್ಕೆ ಇಳಿಯುತ್ತಾನೆ, ಅವನ ಹಿಂದಿನ ಕರ್ಮಾನುಸಾರ ಯಾವ ದೇಹವನ್ನು ಧರಿಸಬೇಕಾಗಿದೆಯೋ ಅದನ್ನು ಧರಿಸುತ್ತಾನೆ, ಸುಮ್ಮನೆ ತನಗೆ ಇಷ್ಟ ಬಂದ ದೇಹವನ್ನು ಪ್ರವೇಶಿಸುವುದಕ್ಕೆ ಆಗುವುದಿಲ್ಲ, ಅವನು ಧರಿಸುವ ದೇಹ ಪೂರ್ವ ನಿಶ್ಚಿತವಾಗಿದೆ, ಇದನ್ನು ನಿಶ್ಚಯಿಸುವುದೇ ಹಿಂದಿನ ನಮ್ಮ ಕರ್ಮಗಳು ಮತ್ತು ವಾಸನೆಗಳು,

ಜೀವಾತ್ಮ ಮುಂಚೆ ದೇಹಕ್ಕೆ ಪ್ರವೇಶ ಮಾಡುತ್ತಾನೆ, ಅನಂತರ ಪಂಚಪ್ರಾಣಗಳಿಗೆ ಆಯಾ ಕೆಲಸವನ್ನು ನೇಮಿಸುತ್ತಾನೆ, ಹೇಗೆ ರಾಜ ಗ್ರಾಮಗಳಿಗೆ ಅಧಿಕಾರಿಗಳನ್ನು ನೇಮಿಸುತ್ತಾನೆಯೋ ಹಾಗೆ ದೇಹದ ಬೇರೆ ಬೇರೆ ಕೆಲಸಗಳಿಗೆ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ಮುಂತಾದವುಗಳನ್ನು ಇವನು ನೇಮಿಸುವನು,ಇವನು ಹೇಳಿದಂತೆ ಪಂಚಪ್ರಾಣಗಳು ಕೆಲಸ ಮಾಡಬೇಕು, ಇವನಿಗಾಗಿ ಅವು ಕೆಲಸ ಮಾಡಬೇಕು,
=================================.

🕉️ *ಉಪನಿಷತ್ ಭಾವ ಬಿಂದು245* 🕉️
ದಿನಾಂಕ 04/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

*ಕೇನೋಪನಿಷತ್, ಎರಡನೇ ಖಂಡದ ಮೊದಲ ಶ್ಲೋಕದ ಭಾವ ಬಿಂದು*

ಸಾಧಕನಾದವನಿಗೆ ಪೂರ್ಣ ಸತ್ಯ ಅರಿವಾಗಬೇಕಾದರೆ ಒಳಗೆ ಅಹಂಕಾರವನ್ನು ಮೀರಿ ಹೋಗಬೇಕು, ಹೊರಗೆ ಸಗುಣವನ್ನು ಮೀರಿ ಹೋಗಬೇಕು, ಇವೆರಡು ಸಾಪೇಕ್ಷ ವಸ್ತುಗಳು,

ಎಲ್ಲಿಯವರೆಗೆ ನಾನು ಒಂದು ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವೆನೋ ಅಲ್ಲಿಯವರೆಗೆ ನನಗೆ ಸಿಕ್ಕುವುದು ಸಗುಣದ ಒಂದು ಭಾವನೆ ಮಾತ್ರ, ಇದು ಇನ್ನೂ ಮಿಶ್ರ, ಇದರಲ್ಲಿ ಬೆರಕೆ ಅಂಟಿಕೊಂಡಿದೆ, ಹೊರಗೆ ಈಶ್ವರನಿಗೆ ಜಗತ್ತನ್ನು ಸೃಷ್ಟಿಸುವುದು, ಆಳುವುದು, ಮುಂತಾದವುಗಳ ಉಪಾಧಿ ಅಂಟಿಕೊಂಡಿದೆ, ಒಳಗೆ ಆತ್ಮನಿಗೆ ದೇಹಾದಿಗಳ ಅಹಂಕಾರ ಅಂಟಿಕೊಂಡಿದೆ,

ಒಬ್ಬ ದೊರೆಯ ಪಾತ್ರದಲ್ಲಿರುವನು, ಇನ್ನೊಬ್ಬ ಆಳಿನ ಪಾತ್ರದಲ್ಲಿರುವನು, ನಾವು ಪರಮ ಸತ್ಯವನ್ನು ತಿಳಿದುಕೊಳ್ಳಬೇಕಾದರೆ ಈ ಎರಡು ಪಾತ್ರಗಳ ಹಿಂದೆ ಹೋಗಬೇಕಾಗಿದೆ, ಇಲ್ಲಿ ನಿರ್ಗುಣ ನಿರಾಕಾರ ಪರಬ್ರಹ್ಮ ವಸ್ತುವನ್ನೇ ನಾವು ಯಾವಾಗ ದೇಶಕಾಲ ನಿಮಿತ್ತದ ತ್ರಿಕೋಣದ ಗಾಜಿನ ಮೂಲಕ ನೋಡುತ್ತೇವೆಯೋ ಆಗ ಅದು ಜೀವ ಜಗತ್ತು ಈಶ್ವರ ಎಂದು ಕವಲೊಡೆದು ಕಾಣುವುದು,

ಒಂದು ಬಿಳಿಯ ಬೆಳಕನ್ನು ತ್ರಿಕೋಣದ ಗ್ಲಾಸಿನ ಮೂಲಕ {prism}ಹೋಗುವಂತೆ ಮಾಡಿದರೆ ಒಂದು ಬಣ್ಣ ಹಲವು ಬಣ್ಣಗಳಾಗಿ ಕವಲೊಡೆದು ಕಾಣುವುದು, ಇದಕ್ಕೆ ಕಾರಣ ತ್ರಿಕೋನದ ಗಾಜು, ನಾವು ಅದನ್ನು ತೆಗೆದು ಹಾಕಿದರೆ ಮಾತ್ರ ಪರಬ್ರಹ್ಮ ಸಿಕ್ಕುವನು,

ಸಗುಣ ಈಶ್ವರನನ್ನಾಗಲಿ, ಜೀವಾತ್ಮನನ್ನಾಗಲಿ, ತಪ್ಪು ಎಂದು ಹೇಳುವುದಲ್ಲ ,ಆದರೆ ಇದೇ ಪರಮ ಸತ್ಯವಲ್ಲ ಎಂದು ತಿಳಿಸುತ್ತದೆ ಉಪನಿಷತ್ತು,
=================================.

🕉️ *ಉಪನಿಷತ್ ಭಾವ ಬಿಂದು244* 🕉️
ದಿನಾಂಕ 03/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

*ಭಗವದ್ಗೀತೆಯ ಜ್ಞಾನ ವಿಜ್ಞಾನ ಯೋಗದ 18ನೆಯ ಶ್ಲೋಕ*
ಈ ಪ್ರಕಾರವಾಗಿ ನಾಲ್ಕು ವಿಧದ ಭಕ್ತರೆಲ್ಲರೂ ಉತ್ತಮರೇ ನಿಜ, ಆದರೆ ಜ್ಞಾನಿ ನನ್ನ ಆತ್ಮ, ಏಕೆಂದರೆ ನನ್ನನ್ನು ಪಡೆಯುವುದಕ್ಕಿಂತ ಶ್ರೇಷ್ಠ ಗತಿ ಮತ್ತೊಂದಿಲ್ಲವೆಂದು ತಿಳಿದು ಆ ಯೋಗಿ ನನ್ನ ಆಶ್ರಯವನ್ನೇ ಪಡೆಯುತ್ತಾನೆ,

ಈ ನಾಲ್ಕು ಬಗೆಯ ಭಕ್ತರರೆಲ್ಲರೂ ಉತ್ತಮರೆ ಎಂದು ಶ್ರೀಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ,ಏಕೆಂದರೆ ಬೇರೆ ಕೆಲಸಕ್ಕೆ ಬಾರದ ಮನುಷ್ಯರ ಹತ್ತಿರ ಹೋಗಿ ಬೇಡುವುದಕ್ಕಿಂತ ದೇವರ ಸಮೀಪಕ್ಕೆ ಬಂದಿರುವವರು ಇವರು, ಯಾವುದಾದರೂ ಉಪಾಯದಿಂದಲೇ ಬರಲಿ, ಅಂತೂ ತನ್ನ ಕಡೆಗೆ ಬರುತ್ತಿರುವರಲ್ಲ ಎಂದು ಭಗವಂತ ಮೆಚ್ಚಿಕೊಳ್ಳುತ್ತಾನೆ,

ಇವತ್ತು ದೇವರಿಂದ ಏನನ್ನೋ ಪಡೆಯಬೇಕೆಂದು ಬಂದಿರಬಹುದು, ಆದರೆ ಇವರು ಉದ್ದೇಶ ಕ್ರಮೇಣ ಪರಿಶುದ್ಧವಾಗುತ್ತಾ ಬರುವುದು,ಕೊನೆಗೆ ದೇವರಿಗಾಗಿ,ಅವನ ಪ್ರೇಮದ ರುಚಿ ನೋಡುವುದಕ್ಕಾಗಿ ಇವರು ಕೂಡ ಆಶಿಸುವ ಸಮಯ ಬರುವುದು,

ಜ್ಞಾನಿಯ ವಿನಹ ಉಳಿದವರಲ್ಲಿ ಇನ್ನು ಲೌಕಿಕ ವಾಸನೆ ಇದೆ, ಕಬ್ಬಿಣದ ಚೂರಿಗೂ ಅಯಸ್ಕಾಂತಕ್ಕೂ ಇರುವ ಆಕರ್ಷಣೆಯಂತೆ ಇದು, ಇವರಿಬ್ಬರ ಮಧ್ಯದಲ್ಲಿ ಒಂದು ಸ್ವಾಭಾವಿಕ ಆಕರ್ಷಣೆ ಇದೆ, ಹಾಗಾಗಿ ಒಂದಲ್ಲ ಒಂದು ದಿನ ಈ ಪ್ರಪಂಚದ ಆಶ್ರಯಗಳನ್ನೆಲ್ಲ ಪರಿತ್ಯಜಿಸಿ ಭಗವಂತನಲ್ಲಿ ಆಶ್ರಯವನ್ನು ಹೊಂದುವರು,
=================================.

🕉️ *ಉಪನಿಷತ್ ಭಾವ ಬಿಂದು243* 🕉️
ದಿನಾಂಕ 02/09/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
*ಜ್ಞಾನ ವಿಜ್ಞಾನ ಯೋಗದ 17 ನೇ ಶ್ಲೋಕ*

ಅವನ ಕಡೆಗೆ ಬರುವ ಈ ನಾಲ್ಕು ಜನರಲ್ಲಿ ಜ್ಞಾನಿಯೇ ಪರಮಾತ್ಮನಿಗೆ ಪರಮ ಪ್ರಿಯನಾಗಿರುವನು ಏಕೆಂದರೆ ಅವನು ದೇವರಿಂದ ಏನನ್ನು ವಸೂಲಿ ಮಾಡುವುದಕ್ಕೆ ಬರುವುದಿಲ್ಲ, ಕೇವಲ ಪ್ರೀತಿಯಿಂದ ಪ್ರೇರಿತನಾಗಿ ಬರುತ್ತಾನೆ, ಭಗವತ್ ತತ್ತ್ವವನ್ನು ಅರಿತ ಜ್ಞಾನಿ,

ಇನ್ನು ಮೇಲೆ ಅವನು ಈ ಸಂಸಾರದ ಅಂಧಕಾರದಲ್ಲಿ ಇರಲಾರ, ಅಲ್ಲಿಂದ ಭಗವಂತನೆಂಬ ಪ್ರೇಮ ಸಾಗರವನ್ನು ಬಂದು ಸೇರಿರುವನು, ಜ್ಞಾನಿಯೋ ಯಾವಾಗಲೂ ಭಗವಂತನ ಕಡೆಗೆ ನಿಷ್ಠೆಯುಳ್ಳವನು, ಅವನು ಸುಖವನ್ನು ಕೊಟ್ಟಾಗ ಮಾತ್ರವಲ್ಲ ಅವನು ದುಃಖವನ್ನು ಕೊಟ್ಟರು ಅವನೆಡೆಗೆ ಹೋಗುವನು, ಸೋಲು ಬರಲಿ ಕಷ್ಟ ಕಾರ್ಪಣ್ಯಗಳ ಸಮೂಹವೆ ಬರಲಿ ದೇವರನ್ನು ಪ್ರೀತಿಸುವುದನ್ನು ಮಾತ್ರ ಅವನು ಬಿಡುವುದಿಲ್ಲ,

ಜ್ಞಾನಿಗೆ ಅತ್ಯಂತ ಪ್ರಿಯನಾದವನು ದೇವರು, ಜ್ಞಾನಿಯಾದರೂ ಪ್ರಪಂಚವನ್ನೆಲ್ಲ ಚೆನ್ನಾಗಿ ಪರೀಕ್ಷೆ ಮಾಡಿ ನೋಡಿರುವನು, ಇಲ್ಲಿರುವ ಪ್ರೀತಿ, ಇಲ್ಲಿ ನಮಗಿರುವ ಐಶ್ವರ್ಯ, ನಮ್ಮ ಬುದ್ಧಿವಂತಿಕೆ, ಎಲ್ಲದರ ಮಿತಿಯನ್ನು ಅರಿತಿರುವನು,

ಹಾಗಾಗಿ ಭೂಮವಾದ ಅನಂತಾತ್ಮನಾದ ಪರಮಾತ್ಮನೊಬ್ಬನೇ ಪ್ರೀತಿಸುವುದಕ್ಕೆ ಯೋಗ್ಯವಾದ ವಸ್ತು ಎಂಬುದನ್ನು ಅವನು ಅರಿತಿರುವನು,
=================================.

 *ಉಪನಿಷತ್ ಭಾವ ಬಿಂದು242* 🕉️
ದಿನಾಂಕ 30/08/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
ಮೂರನೆಯವನೇ ಅರ್ಥಾರ್ಥಿ, ಜೀವನದಲ್ಲಿ ಅವನಿಗೆ ಹಣ ಬೇಕಾಗಿದೆ, ಅದಕ್ಕೆ ದೇವರಿಗೆ ಹರಕೆ ಹೊರುವನು, ಲಕ್ಷ್ಮಿ ಕುಬೇರರು ಕೇಳಿದ್ದನ್ನು ಕೊಡುವ ಕಲ್ಪವೃಕ್ಷ ಎಂದು ತಿಳಿದಿರುವನು, ಯಾರು ಏನು ಕೇಳಿದರೂ ದೇವರು ಇಲ್ಲ ಎನ್ನುವವನಲ್ಲ ಅಂತ ಭಾವಿಸಿರುವನು, ಅದಕ್ಕಾಗಿಯೇ ಬೇಡುವನು,

ಅರ್ಥಾರ್ಥಿಯು ದೇವರನ್ನು ಮಹಾ ಐಶ್ವರ್ಯವಂತ ಎಂದು ಭಾವಿಸುತ್ತಾನೆ, ಇವನಿಗೆ ದೇವರ ಖಜಾನೆಯ ಮೇಲೆ ಕಣ್ಣು ,ಇವನಿಗೆ ಬೇಕಾಗಿರುವುದು ಖಜಾನೆಯಲ್ಲಿರುವ ದ್ರವ್ಯ, ಅದಕ್ಕಾಗಿ ಭಿಕ್ಷುಕನಂತೆ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ದೇವರ ಸನ್ನಿಧಿಯಲ್ಲಿ ಶಂಖವನ್ನು ಊದುತ್ತಾನೆ, ಅವನಿಗೆ ಬೇಕಾಗಿರುವುದು ಹಣ ಮತ್ತು ದೇವರ ಬಳಿ ಇರುವ ಐಶ್ವರ್ಯ, ಇದನ್ನು ಹೊರತುಪಡಿಸಿ ಅವನಲ್ಲಿ ಶ್ರದ್ಧೆಯ ಭಕ್ತಿ ಇರುವುದಿಲ್ಲ, ಮುಕ್ತಿಯ ಆಕಾಂಕ್ಷೆಯು ಇರುವುದಿಲ್ಲ,

ನಾಲ್ಕನೆಯವನೆ ಜ್ಞಾನಿ, ಭಗವತ್ ತತ್ತ್ವವನ್ನು ಅರಿತವನು, ಅವನನ್ನು ಅನುಭವಿಸಿದವನು, ಅವನು ದೇವರ ಬಳಿಗೆ ಬರುತ್ತಾನೆ, ಅವನು ದೇವರಿಂದ ಏನನ್ನು ಯಾಚಿಸುವುದಿಲ್ಲ, ಅವನು ದೇವರೊಬ್ಬನೇ ಪರಮ ಪವಿತ್ರ ವಸ್ತು, ಪ್ರೀತಿಸುವುದಕ್ಕೆ ಯೋಗ್ಯವಾದ ವಸ್ತು ಎಂದು ತಿಳಿಯುವನು, ದೇವರ ಬಳಿ ಇರುವ ಅಷ್ಟೈಶ್ವರ್ಯಗಳ ಕಡೆಗೆ ಅವನ ಕಣ್ಣಿಲ್ಲ,

ಅವನು ಮಗು ತಾಯಿಯನ್ನು ಪ್ರೀತಿಸುವಂತೆ ದೇವರನ್ನು ಪ್ರೀತಿಸುತ್ತಾನೆ, ಇವನಿಗೆ ದೇವರೊಬ್ಬನೇ ಬೇಕು, ದೇವರ ಹತ್ತಿರ ಇರುವುದಾವುದು ಬೇಡ,
=================================.

🕉️ *ಉಪನಿಷತ್ ಭಾವ ಬಿಂದು241* 🕉️
ದಿನಾಂಕ 29/08/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ದೇವರ ಬಳಿಗೆ ಬರುವ ಎರಡನೆಯವನೇ ಜಿಜ್ಞಾಸು, ಇವನು ದೇವರು ಎಂದರೆ ಏನು ಎಂದು ತಿಳಿದುಕೊಳ್ಳಬೇಕೆಂದು ಬರುವನು,

ಇವನು ತತ್ತ್ವಜ್ಞಾನಿ ,ಪ್ರಪಂಚವನ್ನೆಲ್ಲ ವಿಚಾರದ ಮತ್ತು ತರ್ಕದ ಅನುಭವದಲ್ಲಿ ನೋಡುವ ಪ್ರಯತ್ನ ಮಾಡುವನು, ಇವನ ಕುತೂಹಲ ಬೌದ್ಧಿಕವಾಗಿರುವುದು, ದೇವರ ಸ್ವಭಾವಗಳೇನು? ಪ್ರಪಂಚಕ್ಕೂ ಇವನಿಗೂ ಇರುವ ಸಂಬಂಧ ಎಂತಹದು? ಜೀವರಾಶಿಗಳಿಗೂ ಇವನಿಗೂ ಇರುವ ಸಂಬಂಧ ಎಂತಹದು ?ಎಂಬುದನ್ನು ಅರಿಯಲು ಯತ್ನಿಸುವನು,

ಜೀವನದಲ್ಲಿ ಸರ್ವ ಶ್ರೇಷ್ಠವಾಗಿರುವುದು ಯಾವುದು ಎಂಬುದನ್ನು ಹುಡುಕುತ್ತಿರುವಾಗ ಎಲ್ಲ ವಸ್ತುಗಳನ್ನು ವಿಮರ್ಶಿಸಿ ಆದಮೇಲೆ ಕೊನೆಗೆ ಸಿಕ್ಕುವುದೇ ಪರಮಾತ್ಮ, ಅದನ್ನು ಮೀರಿರುವುದು ಮತ್ಯಾವುದೂ ಇಲ್ಲ, ವಿಚಾರದ ಹಾದಿಯಲ್ಲಿ ನಡೆಯುವಾಗ ಸಿಕ್ಕುವ ಕೊನೆಯ ಸ್ಥಳ ದೇವರೆಂಬುದು,

ಇನ್ನು ಅದನ್ನು ಅತಿಕ್ರಮಿಸಿ ಹೋಗುವುದಕ್ಕೆ ಆಗುವುದಿಲ್ಲ, ಮತ್ತು ಅದರ ಅವಶ್ಯಕತೆಯೂ ಇರುವುದಿಲ್ಲ, ಮೂರನೆಯವನೇ ಅರ್ಥಾರ್ಥಿ
*ಮುಂದುವರಿಯುವುದು*🕉️ *ಉಪನಿಷತ್ ಭಾವ ಬಿಂದು241* 🕉️
ದಿನಾಂಕ 29/08/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ದೇವರ ಬಳಿಗೆ ಬರುವ ಎರಡನೆಯವನೇ ಜಿಜ್ಞಾಸು, ಇವನು ದೇವರು ಎಂದರೆ ಏನು ಎಂದು ತಿಳಿದುಕೊಳ್ಳಬೇಕೆಂದು ಬರುವನು,

ಇವನು ತತ್ತ್ವಜ್ಞಾನಿ ,ಪ್ರಪಂಚವನ್ನೆಲ್ಲ ವಿಚಾರದ ಮತ್ತು ತರ್ಕದ ಅನುಭವದಲ್ಲಿ ನೋಡುವ ಪ್ರಯತ್ನ ಮಾಡುವನು, ಇವನ ಕುತೂಹಲ ಬೌದ್ಧಿಕವಾಗಿರುವುದು, ದೇವರ ಸ್ವಭಾವಗಳೇನು? ಪ್ರಪಂಚಕ್ಕೂ ಇವನಿಗೂ ಇರುವ ಸಂಬಂಧ ಎಂತಹದು? ಜೀವರಾಶಿಗಳಿಗೂ ಇವನಿಗೂ ಇರುವ ಸಂಬಂಧ ಎಂತಹದು ?ಎಂಬುದನ್ನು ಅರಿಯಲು ಯತ್ನಿಸುವನು,

ಜೀವನದಲ್ಲಿ ಸರ್ವ ಶ್ರೇಷ್ಠವಾಗಿರುವುದು ಯಾವುದು ಎಂಬುದನ್ನು ಹುಡುಕುತ್ತಿರುವಾಗ ಎಲ್ಲ ವಸ್ತುಗಳನ್ನು ವಿಮರ್ಶಿಸಿ ಆದಮೇಲೆ ಕೊನೆಗೆ ಸಿಕ್ಕುವುದೇ ಪರಮಾತ್ಮ, ಅದನ್ನು ಮೀರಿರುವುದು ಮತ್ಯಾವುದೂ ಇಲ್ಲ, ವಿಚಾರದ ಹಾದಿಯಲ್ಲಿ ನಡೆಯುವಾಗ ಸಿಕ್ಕುವ ಕೊನೆಯ ಸ್ಥಳ ದೇವರೆಂಬುದು,

ಇನ್ನು ಅದನ್ನು ಅತಿಕ್ರಮಿಸಿ ಹೋಗುವುದಕ್ಕೆ ಆಗುವುದಿಲ್ಲ, ಮತ್ತು ಅದರ ಅವಶ್ಯಕತೆಯೂ ಇರುವುದಿಲ್ಲ, ಮೂರನೆಯವನೇ ಅರ್ಥಾರ್ಥಿ
*ಮುಂದುವರಿಯುವುದು*

🕉️ *ಉಪನಿಷತ್ ಭಾವ ಬಿಂದು240* 🕉️
ದಿನಾಂಕ 27/08/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
ಭಗವದ್ಗೀತೆಯ *ಜ್ಞಾನ ವಿಜ್ಞಾನ ಯೋಗ* ದ 16 ನೇಯ ಶ್ಲೋಕಕ್ಕೆ ಸಂಬಂಧಿಸಿದ ವಿವರಣೆ,

ಈ ಶ್ಲೋಕವು ಸದಾಚಾರಿಗಳು ಯಾರು? ಎಂಬುದನ್ನು ವಿವರಿಸುತ್ತದೆ, ದುರಾಚಾರಿಗೆ ದೇವರ ಅವಶ್ಯಕತೆ ಇನ್ನೂ ಬಂದಿಲ್ಲ, ಅವನಿಗೆ ದೇವರು ಬೇಕಾಗಿಲ್ಲ, ಸುತ್ತಮುತ್ತಲಿನ ವಸ್ತುಗಳೇ ಸಾಕು ಅವನ ಜೀವನಕ್ಕೆ,

ಸದಾಚಾರಿಗೆ ದೇವರ ಅವಶ್ಯಕತೆ ಬೇಕಾಗಿದೆ, ಹಸಿದರೆ ಆಹಾರವನ್ನು ಹೇಗೆ ಹುಡುಕಿಕೊಂಡು ಹೋಗುವನೋ ಬಾಯಾರಿದ್ದರೆ ನೀರನ್ನು ಹೇಗೆ ಹುಡುಕಿಕೊಂಡು ಹೋಗುವನೋ ಹಾಗೆ ಸದಾಚಾರಿಗಳು ದೇವರನ್ನು ಹುಡುಕಿಕೊಂಡು ಹೋಗುವರು, ಹಾಗೆ ದೇವರ ಬಳಿಗೆ ಹೋಗುವವರಲ್ಲಿ ಒಬ್ಬೊಬ್ಬರು ಒಂದೊಂದು ಉದ್ದೇಶದಿಂದ ಪ್ರೇರಿತರಾಗಿರುವರು,ಅದರಲ್ಲಿ ಮೊದಲನೆಯವನೇ *ಅರ್ತ*

ಈ ಪ್ರಪಂಚದಲ್ಲಿ ಸಂಕಟಕ್ಕೆ ಸಿಕ್ಕಿ ನರಳುತ್ತಿರುವವನು, ಈ ಪ್ರಪಂಚದ ವಸ್ತುಗಳು ಅವನ ಸಂಕಟವನ್ನು ಪರಿಹರಿಸಲಾರವು, ಆ ಸಂಕಟ ಹಲವು ಕಾರಣಗಳಿಂದಾಗಿರಬಹುದು, ತಾನು ನೆಚ್ಚಿದವರನ್ನು ಪ್ರೀತಿಸಿದವರನ್ನು ಕಳೆದುಕೊಂಡಿರಬಹುದು, ಈ ನಷ್ಟವನ್ನು ಪ್ರಪಂಚದಲ್ಲಿ ಯಾರು ಭರ್ತಿ ಮಾಡಲಾರರು, ಇಂತಹ ಕಷ್ಟದ ಸಮಯದಲ್ಲಿಯೂ ನಮಗೆ ಸಹಾಯ ಮಾಡಲು ಕೆಲವು ವ್ಯಕ್ತಿಗಳು ಮುಂದೆ ಬರಬಹುದು, ಆದರೆ ಅದೊಂದೇ ಸಹಾಯ ನಮ್ಮನ್ನು ಬಹಳ ಮೇಲಕ್ಕೆ ಎತ್ತಲಾರದು, ಇನ್ನು ಯಾವ ಕಾಲದಲ್ಲಿ ದೇವರು ಬೇಕಾಗದೆ ಇದ್ದರೂ ಸಂಕಟಗಳು ಬಂದು ನಮ್ಮನ್ನು ಕಾಡುವಾಗ ವೆಂಕಟರಮಣನ ಅವಶ್ಯಕತೆ ಬರುವುದು,

ನಮ್ಮ ಸಂಕಟದ ಅರ್ಜಿಯನ್ನು ತೆಗೆದುಕೊಂಡು ಹೋಗಿ ದೇವರ ಮನೆಯ ಬಾಗಿಲಲ್ಲಿ ನಿಂತು ಅವನನ್ನು ಕರೆಯುತ್ತೇವೆ, ಅವನು ಹೊರಗೆ ಬಂದಾಗ ನಮ್ಮ ಅಹವಾಲನ್ನು ಅರ್ಪಿಸುತ್ತೇವೆ, ನಮ್ಮ ಸಂಕಟಗಳನ್ನು ಅವನು ನಿವಾರಿಸಬೇಕು, ಅವನಿಗೆ ನಮ್ಮ ಸಂಕಟವನ್ನು ಪರಿಹರಿಸುವ ಶಕ್ತಿ ಇದೆ ಎಂದು ಆ ಭಕ್ತ ತಿಳಿದಿರುವನು,

ಈ ಪ್ರಪಂಚದ ನೋವಿನ ಯಾತನೆಯಿಂದ ಪಾರಾಗಲು ದೇವರನ್ನು ಪ್ರೀತಿಸುವವನು ಅಂತಹವನನ್ನು ಆರ್ತ ಎಂದು ಕರೆಯುವರು
*ಸಶೇಷ*
=================================.

 *ಉಪನಿಷತ್ ಭಾವ ಬಿಂದು239* 🕉️
ದಿನಾಂಕ 26/08/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ಅಧಮ ತುಂಬಾ ಕೇಳ ಮಟ್ಟದಲ್ಲಿರುವ ಮನುಷ್ಯ, ಅವನು ಪ್ರಾಣಿಗಳಂತೆ ತಾತ್ಕಾಲಿಕ ತೃಪ್ತಿಯನ್ನು ಕೊಡುವುದನ್ನು ಮಾತ್ರ ಮಾಡುವನು ,ಅವನ ರುಚಿ ಯಾವಾಗಲೂ ಕೆಳಮಟ್ಟದ್ದು, ದೇವರು, ಸತ್ಯ, ಧರ್ಮ, ಕರ್ಮ, ಮುಂತಾದವುಗಳು ಅವನ ಮನಸ್ಸಿಗೆ ಹತ್ತುವುದೇ ಇಲ್ಲ, ಯಾರಾದರೂ ಅದನ್ನು ಹೇಳಿದರೆ ಕಿವಿಯ ಮೇಲೆ ಹಾಕಿಕೊಳ್ಳುವುದೇ ಇಲ್ಲ, ಹಿಂದೆ ಕಲ್ಲಿರುವ ಗೋಡೆಗೆ ಮೊಳೆ ಹೊಡೆದಂತೆ ಇದು, ಮೊಳೆಯೆ ಬಗ್ಗಿ ಹೋಗುವುದು, ಕಲ್ಲಿನೊಳಗೆ ಮೊಳೆ ಹೋಗುವುದಿಲ್ಲ,

ಈ ಪ್ರಪಂಚದಲ್ಲಿ ಇದೇ ಒಂದು ವಿಚಿತ್ರ ಕುಡಿಯುವುದಕ್ಕೆ ಅಮೃತವಿದೆ, ಅದನ್ನು ಬಿಟ್ಟು ಚರಂಡಿಯ ನೀರು ಕುಡಿಯುವರು, ತಪ್ಪಿಸಿಕೊಂಡು ಹೋಗುವುದಕ್ಕೆ ಬಾಗಿಲ ತೆಗೆದಿದೆ, ಅದರ ಹತ್ತಿರವೇ ಹೋಗುವುದಿಲ್ಲ ಮನುಷ್ಯ,

ತನ್ನ ಅದ್ಭುತವಾದ ಮಾಯೆಯಿಂದ ಈ ಪ್ರಪಂಚವನ್ನು ಸೃಷ್ಟಿಸಿ ಇದರಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಕೆಲವು ಬಾಗಿಲುಗಳನ್ನು ಭಗವಂತ ಇಟ್ಟಿರುವನು, ಆದರೂ ಈ ಬಾಗಿಲುಗಳನ್ನು ಬಡಿಯುವವರು ಬಹಳ ಅಪರೂಪ,

ಭಗವಂತನ ಮಾಯೆಯಲ್ಲಿ ಎರಡು ಸ್ವಭಾವಗಳಿವೆ, ಒಂದು ಅಸುರಿ ಸ್ವಭಾವ,ಮತ್ತೊಂದು ದೈವೀಸ್ವಭಾವ, ದೈವೀ ಸ್ವಭಾವ ನಮ್ಮನ್ನು ಪ್ರಪಂಚದಿಂದ ಬಿಡಿಸುವುದು, ಅಸುರಿ ಸ್ವಭಾವ ನಮ್ಮನ್ನು ಪ್ರಪಂಚಕ್ಕೆ ಕಟ್ಟಿ ಹಾಕುವುದು, ಅಸುರಿ ಸ್ವಭಾವದವರಲ್ಲಿ ಜ್ಞಾನ ಮುಚ್ಚಲ್ಪಟ್ಟ ಸ್ಥಿತಿಯಲ್ಲಿದ್ದರೆ, ದೈವೀ ಸ್ವಭಾವದವರಲ್ಲಿ ಅದು ಬೆಳಗುತ್ತಿರುವ ರೀತಿಯಲ್ಲಿ ಇರುವುದು,

ಅಸುರಿ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳು ನಾವು ಇಂತಹ ಕೆಟ್ಟ ಕೆಲಸ ಮಾಡಿದರೆ ಅದರಿಂದ ಬರುವ ಪರಿಣಾಮ ಎಷ್ಟು ಭೀಕರ ಎಂಬುದನ್ನು ಪರ್ಯಾಲೋಚಿಸುವುದೇ ಇಲ್ಲ,
=================================.

 *ಉಪನಿಷತ್ ಭಾವ ಬಿಂದು238* 🕉️
ದಿನಾಂಕ 25/08/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
ಭಗವದ್ಗೀತೆಯ ಜ್ಞಾನ ವಿಜ್ಞಾನ ಯೋಗದ 15 ನೇಯ ಶ್ಲೋಕಕ್ಕೆ ಸಂಬಂಧಿಸಿದ ವಿವರಣೆ,

ಮಾಯೆಯನ್ನು ದಾಟುವುದಕ್ಕೆ ಅಸಾಧ್ಯವೆಂದು ಹೇಳಿ ಶ್ರೀಕೃಷ್ಣ ಅದನ್ನು ದಾಟಲು ಒಂದು ಉಪಾಯವನ್ನು ಹೇಳುತ್ತಾನೆ, ಉಪಾಯ ಇದ್ದರೂ ಏತಕ್ಕೆ ಆ ಮನುಷ್ಯ ಪಾರಾಗುವುದಕ್ಕೆ ಯತ್ನಿಸುವುದಿಲ್ಲ ಎಂದು ನಾವು ಅಶ್ಚರ್ಯಪಡಬಹುದು,

ಆದರೆ ಮನುಷ್ಯರಲ್ಲಿ ಇರುವ ಸ್ವಭಾವ ಭಗವಂತನಲ್ಲಿ ಶರಣಾಗುವುದಕ್ಕೆ ಬಿಡುವುದಿಲ್ಲ, ಅವನಲ್ಲಿ ಶರಣಾದರೆ ಉದ್ಧಾರವಾಗುತ್ತೇವೆ ಎಂಬುದು ನಿಜವಾದರೂ ಶರಣಾಗಲು ಹೋಗದೆ ಇದ್ದರೆ ಏನು ಮಾಡುವುದು?

ನಮ್ಮನ್ನು ದೇವರ ಕಡೆಗೆ ಹೋಗಗೊಡದೆ ಇರುವುದೇ ದುರಾಚಾರ,ಮನುಷ್ಯರಿಗೆ ಕೆಟ್ಟ ಕೆಲಸ ಮಾಡುವುದರಲ್ಲಿಯೆ ಒಂದು ಆನಂದ, ಅದನ್ನು ಬಿಟ್ಟು ಬರಲು ಮನಸ್ಸಿಲ್ಲ, ಅವನ ಸ್ವಭಾವ ಯಾವಾಗಲೂ ಮಾಡಬಾರದನ್ನು ಮಾಡುವುದು, ಮಾಡಬೇಕಾದದ್ದು ಮಾಡದೇ ಇರುವುದು, ಕೆಟ್ಟ ಮಾತುಕತೆ ನಡವಳಿಕೆ ಅವನಿಗೆ ಒಗ್ಗಿಹೋಗಿದೆ, ಅದನ್ನು ಬಿಟ್ಟು ಬೇರೆ ಉತ್ತಮ ವಾತಾವರಣಕ್ಕೆ ಬಾ ಎಂದರೆ ಅವನಿಗಾಗುವುದಿಲ್ಲ,

ಚರಂಡಿಯಲ್ಲಿರುವ ಹುಳಕ್ಕೆ ಅಲ್ಲೇ ಇರಲು ಆಸೆ, ಅದನ್ನು ಬಿಟ್ಟು ಬರಲು ಅದು ಯತ್ನಿಸುವುದಿಲ್ಲ, ಮೂಢರು ಅಜ್ಞಾನಿಗಳು ಇವರಿಗೆ ಮುಂಚೆಯೇ ಗೊತ್ತಾಗುವುದಿಲ್ಲ, ಕೆಟ್ಟ ದಾರಿಯಲ್ಲಿ ಹೋದರೆ ಏನಾಗುವುದು ಎಂಬುದು, ಒಂದು ವೇಳೆ ಪೆಟ್ಟು ತಿಂದರೂ ಅದರಿಂದ ಬುದ್ಧಿ ಕಲಿಯುವುದಿಲ್ಲ, ಅವರ ಬುದ್ಧಿ ಇನ್ನೂ ಅಷ್ಟು ವಿಕಾಸವಾಗಿಲ್ಲ, ಇತರರಿಗೆ ಆಗಿರುವುದರಿಂದ ಬುದ್ಧಿ ಕಲಿಯುವುದಿಲ್ಲ, ಅಥವಾ ತಮಗೆ ಆದರೂ ಅದರಿಂದ ಬುದ್ಧಿ ಕಲಿಯುವುದಿಲ್ಲ,
*ಸಶೇಷ*
=================================.

🕉️ *ಉಪನಿಷತ್ ಭಾವ ಬಿಂದು237* 🕉️
ದಿನಾಂಕ 23/08/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,

ಎಷ್ಟೇ ಕಷ್ಟವಾದರೂ ಅದರಿಂದ ಪಾರಾಗುವುದಕ್ಕೆ ಉಪನಿಷತ್ತು ನಮಗೆ ದಾರಿಯನ್ನು ತೋರುವುದು, ಯಾರು ಇದನ್ನೆಲ್ಲ ಮಾಡಿರುವನೋ ಯಾರು ಈ ಜಗತ್ತಿನ ಸಂರಕ್ಷಕನೋ ಅವನಲ್ಲಿ ಶರಣಾಗುವುದು,

ದೇವರೇ ದಯವಿಟ್ಟು ನನ್ನನ್ನು ಕಾಡಬೇಡ ಎಂದು ಬೇಡುವುದು, ಮೊರೆ ಇಡುವುದು, ಅವನು ಕಾಡುವ ಮಾಯೆಗೆ ಸುಮ್ಮನಿರು ಎಂದರೆ ಅದು ಸುಮ್ಮನಾಗುವುದು, ನಾವು ಅದರೊಡನೆ ಎಷ್ಟು ಸೆಣಸಿದರೂ ಅದು ನಮ್ಮನ್ನು ಬಿಡುವುದಿಲ್ಲ

ಮನೆಯ ಮುಂದೆ ಇರುವ ದೊಡ್ಡದೊಂದು ನಾಯಿ ಒಳಗೆ ಯಾರನ್ನು ಬಿಡುವುದಿಲ್ಲ, ಅದು ಬೊಗಳಿ ಕಚ್ಚಿ ಬಿಡುವುದು, ಹೊರಗೆ ನಿಂತು ಮನೆಯ ಯಜಮಾನನನ್ನು ಕರೆದು,ನಾನು ನಿಮ್ಮೊಡನೆ ಮಾತನಾಡಬೇಕಾಗಿದೆ, ದಯವಿಟ್ಟು ನಿಮ್ಮ ನಾಯಿಯನ್ನು ಸುಮ್ಮನಿರಿಸಿ ಎಂದು ಕೇಳಿಕೊಂಡರೆ, ಯಜಮಾನ ಬಂದು ಆಜ್ಞೆ ಮಾಡಿದರೆ, ಆ ನಾಯಿ ಸುಮ್ಮನೆ ಗದ್ದಲವಿಲ್ಲದೆ ಅವನ ಮಾತನ್ನು ಕೇಳುವುದು, ಆದರೆ ಅದು ಅಪರಿಚಿತನ ಮಾತನ್ನು ಕೇಳುವುದಿಲ್ಲ,

ಹಾಗೆಯೇ ನಾವು ಭಗವಂತನಲ್ಲಿ ಶರಣಾದರೆ ನಮ್ಮನ್ನು ಅವನು ತನ್ನ ಮಾಯೆಯ ಉಪಟಳದಿಂದ ಪಾರು ಮಾಡುವನು, ಅದರಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಒಂದು ಉಪಾಯವನ್ನು ತಕ್ಷಣವೇ ಭಗವಂತ ಹೇಳುವನು, ಅವನಲ್ಲಿ ಶರಣಾದರೆ ಅವನು ಇಚ್ಛೆಪಟ್ಟರೆ ಬಾಗಿಲುಗಳೆಲ್ಲ ತಾನಾಗಿ ತೆರೆಯುವವು,
=================================.

🕉️ *ಉಪನಿಷತ್ ಭಾವ ಬಿಂದು-236* 🕉️
ದಿನಾಂಕ 22/08/2025
*ಸಂಗ್ರಹ ಸಮರ್ಪಣೆ* ಕೆ ಸುಬ್ರಾಯ ಲೊಂಢೆ,
ಭಗವದ್ಗೀತೆಯ ಜ್ಞಾನ ವಿಜ್ಞಾನ ಯೋಗದ 14 ನೇಯ ಶ್ಲೋಕಕ್ಕೆ ಸಂಬಂಧಿಸಿದ ವಿವರಣೆ,

ಹೇಗೆ ಭೂಮಿ ತನ್ನ ಗುರುತ್ವಾಕರ್ಷಣ ಶಕ್ತಿಯಿಂದ ತನ್ನ ಮೇಲಿರುವುದನ್ನು ಹಿಡಿದಿಟ್ಟುಕೊಂಡಿರುವುದೋ ಹಾಗೆ ಈ ಪ್ರಕೃತಿಯ ಮಾಯೆ ನಮ್ಮನ್ನು ಬಂಧಿಸಿದೆ, ಕೆಲವು ವೇಳೆ ನಾವು ಭೂಮಿಯಿಂದ ನೆಗೆಯಲು ಯತ್ನಿಸಬಹುದು, ಆದರೆ ತಕ್ಷಣವೇ ಭೂಮಿಯ ಮೇಲೆ ಬಂದು ಬೀಳುತ್ತೇವೆ,

ಎಲ್ಲಿಯವರೆಗೆ ಮಾಯೆ ಹೇಳಿದಂತೆ ಕೇಳಿಕೊಂಡಿರುವೆವೊ ಅಲ್ಲಿಯವರೆಗೆ ಅದು ನಮ್ಮನ್ನು ಅಷ್ಟು ಕಾಡುವುದಿಲ್ಲ, ನಾವು ಅದರ ನಿತ್ಯ ದಾಸರು, ಆದರೆ ಯಾವಾಗ ನಾವು ಈ ಪಾಶದಿಂದ ನುಸುಳಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತೇವೆಯೋ ಆಗ ಬಲವಾದ ಸರಪಳಿಯನ್ನು ಹಾಕಿ ಅದು ಬಿಗಿದಂತೆ ಕಾಣುವುದು,

ನಮ್ಮ ಕೆಲವು ಅಭ್ಯಾಸಗಳನ್ನು ಬಿಡಬೇಕೆಂದು ಯತ್ನಿಸಿದಾಗ ಇದು ನಮಗೆ ವೇದ್ಯವಾಗುವುದು, ಯಾವುದನ್ನು ಬಿಡಬೇಕೆಂದಿರುವೆವೋ ಅದನ್ನು ಎಂದಿಗಿಂತ ಹೆಚ್ಚಾಗಿ ಅವತ್ತು ಮಾಡುವೆವು ,ಮತ್ತು ಒಂದು ಪಾಶದಿಂದ ಕಿತ್ತುಕೊಂಡು ಹೋದರೆ ಇನ್ನೊಂದು ಪಾಶ ಕಾದಿದೆ ನಮ್ಮನ್ನು ಬಿಗಿಯುವುದಕ್ಕೆ, ಒಂದು ವೇಷದಲ್ಲಿ ನಮ್ಮ ಮನೋದೌರ್ಬಲ್ಯವನ್ನು ಕಂಡುಹಿಡಿದು ಆಚೆಗೆ ಅಟ್ಟಿದರೆ ಅದು ಹೊರಗೆ ಹೋಗಿ ಬೇರೊಂದು ವೇಷವನ್ನು ಹಾಕಿಕೊಂಡು ಬರುವುದು, ಅದು ನಮಗೆ ಗೊತ್ತೇ ಆಗುವುದಿಲ್ಲ, ನಾವು ಕಳುಹಿಸಿದ ಹಳೆ ಶತ್ರು ಎಂಬುದು,

ಸ್ವಲ್ಪ ಕಾಲ ಅದರ ಬಲೆಗೆ ಬಿದ್ದಾದ ಮೇಲೆಯೇ ಅದು ನಮಗೆ ಅರಿವಾಗುವುದು, ಆದರೆ ಹತಾಶರಾಗಬೇಕಾಗಿಲ್ಲ, ಎಷ್ಟೇ ಕಷ್ಟವಾದರೂ ಅದರಿಂದ ಪಾರಾಗುವುದಕ್ಕೆ ಪ್ರಸ್ಥಾನತ್ರಯಗಳು ನಮಗೆ ದಾರಿಯನ್ನು ತೋರುವುದು,
*ಸಶೇಷ*
=================================.

 ಉಪನಿಷತ್ ಭಾವ ಬಿಂದು235 🕉️
ದಿನಾಂಕ 21/08/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,
ಭಗವದ್ಗೀತೆಯ ಜ್ಞಾನ ವಿಜ್ಞಾನ ಯೋಗದ 7 ನೇಯ ಶ್ಲೋಕಕ್ಕೆ ಸಂಬಂಧಿಸಿದ ವಿವರಣೆ,

ಈ ಪ್ರಪಂಚದಲ್ಲಿ ಕಾಣುವ ಯಾವುದನ್ನು ವಿಭಜನೆ ಮಾಡಿದರೂ ಅದು ಕೊನೆಗೆ ದೇವರನ್ನು ತಲುಪುವುದನ್ನು ಕಾಣುತ್ತೇವೆ,ನಮ್ಮ ಕಣ್ಣೆದುರಿಗೆ ಕಾಣುವ ವಸ್ತುಗಳೆಲ್ಲವೂ ಪಂಚಭೂತಗಳಿಂದ ಆಗಿದೆ, ಈ ಪಂಚಭೂತಗಳಿಗೆ ಮೂಲ ಅದರ ತನ್ಮಾತ್ರ, ಅಂದರೆ ಸೂಕ್ಷ್ಮ ಪಂಚಭೂತಗಳು,

ಅದಕ್ಕೂ ಹಿಂದೆ ಹೋದರೆ, ದ್ರವ್ಯಗಳು ಸೂಕ್ಷ್ಮ ಸೂಕ್ಷ್ಮವಾಗುತ್ತಾ ಕೊನೆಗೆ ಮೂಲವಾದ ಭಗವಂತನಿಗೆ ಒಯ್ಯುವುದು, ಅದರಂತೆ ಯಾವ ಶಕ್ತಿಯನ್ನು ತೆಗೆದುಕೊಂಡರೂ ಅದು ಬೆಳಕಾಗಿರಬಹುದು, ವಿದ್ಯುತ್ ಆಗಿರಬಹುದು, ಮ್ಯಾಗ್ನೆಟಿಕ್ ಶಕ್ತಿ ಆಗಿರಬಹುದು, ಒಂದನ್ನು ಮತ್ತೊಂದಕ್ಕೆ ಪರಿವರ್ತನೆಗೊಳಿಸಲು ಸಾಧ್ಯವಾಗಬಹುದು, ಆ ಶಕ್ತಿ ಮತ್ತೆ ಸೂಕ್ಷ್ಮವಾಗಿ ಮೂಲವಾದ ಪರಮಾತ್ಮನ ಸಮೀಪಕ್ಕೆ ಒಯ್ಯುವುದು,

ಅದರಂತೆಯೇ ಜೀವರಾಶಿಗಳಲ್ಲಿರುವ ಚೈತನ್ಯಾಂಶ, ಈ ಚೈತನ್ಯಗಳನ್ನು ವಿಭಜನೆ ಮಾಡುತ್ತ ಹೋದರೆ ಅದರ ಮೂಲವಾದ ಪರಮಾತ್ಮನ ಬಳಿಗೆ ಹೋಗುವೆವು, ಮನೆಯೊಳಗೆ ಉರಿಯುವ ವಿದ್ಯುತ್ ದೀಪಕ್ಕೆ ಶಕ್ತಿ ಸರಬರಾಜು ಆಗುವುದು ವಿದ್ಯುತ್ ಉತ್ಪಾದನಾ ಘಟಕದಿಂದ, ಪ್ರತಿಯೊಂದು ವಸ್ತುವನ್ನೇ ಆಗಲಿ, ಶಕ್ತಿಯನ್ನೇ ಆಗಲಿ, ಚೈತನ್ಯವನ್ನೇ ಆಗಲಿ,ಕೊನೆಯ ತನಕ ವಿಭಜನೆ ಮಾಡಿಕೊಂಡು ಹೋದರೆ ಅದು ದೇವರ ಕಡೆ ನಮ್ಮನ್ನು ಒಯ್ಯುವುದು,

ಆದರೆ ಯಾವುದಾದರೂ ವಸ್ತುವಾಗಲಿ, ಅದರ ಅಂತರಾಳಕ್ಕೆ ಹೋಗಲು ಯತ್ನಿಸಿದರೆ ಅದರ ಹಿಂದೆ ಪರಮಾತ್ಮನ ಶಕ್ತಿ ಹರಿಯುತ್ತಿರುವುದು ವ್ಯಕ್ತವಾಗುವುದು

🕉️ ಉಪನಿಷತ್ ಭಾವ ಬಿಂದು234 🕉️
ದಿನಾಂಕ 20/08/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,
ಮುಂದುವರಿದಿದೆ
ಹೊಸದಾಗಿ ಹುಟ್ಟಿದ ಮಗುವು ಜಗತ್ತಿನ ಜ್ಞಾನವನ್ನು ಹಂತ ಹಂತವಾಗಿ ಪಡೆದುಕೊಳ್ಳುತ್ತದೆ, ಹುಟ್ಟಿದಾಗ ತನ್ನ ಸುತ್ತ ಇರುವ ವಸ್ತುಗಳು ಮತ್ತು ವ್ಯಕ್ತಿಗಳ ಜಗತ್ತು ಅದಕ್ಕೆ ಗುಯ್ಗುಡುವ ಗೊಂದಲವಾಗಿ ತೋರುತ್ತದೆ, ಈ ಅಸ್ಪಷ್ಟವಾದ ಗೊಂದಲಗಳಿಂದ ತುಂಬಿರುವ ಗೋದಾಮಿನಿಂದ ಒಂದೊಂದೇ ವಸ್ತುಗಳನ್ನು ಬೇರ್ಪಡಿಸುವ ಜ್ಞಾನವನ್ನು ಅದು ಕ್ರಮವಾಗಿ ಬೆಳೆಸಿಕೊಳ್ಳುತ್ತದೆ,

ಅದು ಮೊದಲು ಪ್ರತ್ಯೇಕಿಸುವುದು ಶಬ್ದವನ್ನು, ತನ್ನ ತಾಯಿ ಅಲ್ಲಿ ಇರುವುದನ್ನು, ಸುತ್ತಲಿನ ಸಾಮಾನ್ಯ ಗೊಂದಲದಿಂದ ಅವಳು ಬೇರೆಯಾಗಿ ನಿಲ್ಲುತ್ತಾಳೆ,ಕ್ರಮಕ್ರಮವಾಗಿ ಶಿಶುವು ಹೆಚ್ಚು ಹೆಚ್ಚು ಜ್ಞಾನವನ್ನು ಪಡೆಯುತ್ತದೆ , ಗೊಂದಲದಲ್ಲಿ ಸ್ಪಷ್ಟತೆ ಮತ್ತು ಕ್ರಮವನ್ನು ದೊರಕಿಸಿಕೊಳ್ಳುತ್ತದೆ,

ಹೀಗೆ ಮಗುವು ಜಗತ್ತನ್ನು ಅರಿಯಲು ಹಿಡಿತಕ್ಕೆ ತೆಗೆದುಕೊಳ್ಳಲು ನಿಯಂತ್ರಿಸಲು ಕಲಿಯುತ್ತದೆ, ಅಸ್ಪಷ್ಟವಾಗಿಯಾದರೂ ತನ್ನ ಬಗ್ಗೆ ಅರಿಯಲು ಕಲಿತು ಕೊನೆಗೆ ತಾಯಿಯ ನೆರವಿಲ್ಲದೆ ಬದುಕಲು ದಾರಿಯನ್ನು ಕಂಡುಕೊಳ್ಳುವುದನ್ನು ಕಲಿಯುತ್ತದೆ, ಮಗುವಿಗೆ ಇನ್ನೂ ಹೆಚ್ಚಿನ ಶಿಕ್ಷಣವು ದೊರಕುತ್ತದೆ,

ಜಗತ್ತಿನ ಕುರಿತ ಅದರ ಜ್ಞಾನ ಹೆಚ್ಚು ಸ್ಪಷ್ಟವಾಗುತ್ತದೆ, ಆದರೆ ತನ್ನನ್ನೇ ಕುರಿತ ಜ್ಞಾನ ಆ ಶಿಶುವಿನೊಳಗೆ ಅದೇ ವೇಗದಲ್ಲಿ ಪ್ರಗತಿಯನ್ನು ಹೊಂದುವುದಿಲ್ಲ,ಅದೊಂದು ಆತ್ಮ,ಅನಾತ್ಮಗಳ ಮಿಶ್ರಣವಾಗಿ ಉಳಿಯುತ್ತದೆ, ಬೆಳೆದು ದೊಡ್ಡವನಾದಾಗಲೂ ಅನಾತ್ಮದ್ದೇ ಪ್ರಾಬಲ್ಯ,

ಆದರೆ ಮುಂದೆ ಈ ಎಲ್ಲಾ ಅನಾತ್ಮ ವಸ್ತುಗಳನ್ನು ಕಳಚಿಕೊಂಡು ನಿಜವಾದ ಆತ್ಮವನ್ನು ಅರಿಯಲು ಶ್ರಮಿಸಬಹುದು, ಈ ಅವಕಾಶ ಬದುಕಿನುದ್ದಕ್ಕೂ ಅವನಿಗೆ ಇದ್ದೇ ಇರುತ್ತದೆ,

🕉️ ಉಪನಿಷತ್ ಭಾವ ಬಿಂದು229 🕉️
ದಿನಾಂಕ 13/08/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,
ಜ್ಞಾನ ವಿಜ್ಞಾನ ಯೋಗದ 8 ನೇಯ ಶ್ಲೋಕಕ್ಕೆ ಸಂಬಂಧಿಸಿದ ವಿವರಣೆಯ ಬಿಂದುರೂಪ*

ಭಗವಂತ ಈ ಪ್ರಪಂಚದಲ್ಲಿ ಎಲ್ಲಾ ಕಡೆಯಲ್ಲಿಯು ಹಾಸುಹೊಕ್ಕಾಗಿರುವನು,ಪ್ರಕೃತಿ ಧರ್ಮಗಳ ಹಿಂದೆಲ್ಲ ಅವನು ಇರುವನು, ನಾವೆಲ್ಲ ಕುಡಿಯುವ ನೀರಿನಲ್ಲಿ ರಸದಂತೆ ಇರುವನು, ನಮ್ಮ ಬಾಳಿಗೆ ನೀರು ಅತ್ಯಂತ ಅವಶ್ಯಕ,

ಮೀನಿನಂತೆ ನಾವು ನೀರಿನಲ್ಲಿ ಇಲ್ಲದೆ ಇರಬಹುದು,ಆದರೆ ಆ ನೀರನ್ನೆ ನಾವು ಹೊತ್ತು ತಿರುಗುತ್ತೇವೆ, ನಮ್ಮ ದೇಹವೆಲ್ಲ ಶೇಕಡ 90 ನೀರಿನಿಂದಲೇ ಆಗಿದೆ, ಪಂಚಭೂತಗಳಲ್ಲಿನೀರಿನ ಅಂಶವೇ ಜಾಸ್ತಿ ಇರುವುದು ನಮ್ಮ ದೇಹದಲ್ಲಿ,

ಸೂರ್ಯ ಮತ್ತು ಚಂದ್ರರಲ್ಲಿರುವ ಬೆಳಗುವ ಶಕ್ತಿಯ ಹಿಂದೆ ಇರುವುದೇ ಅವನ ಶಕ್ತಿ,ನಮ್ಮ ರಂಗ ಭೂಮಿಗೆ ಇರುವ ದೀಪದಂತಿದ್ದಾರೆ ಸೂರ್ಯ ಚಂದ್ರರು, ಅವರು ಬೆಳಗಿದರೆ ನಮಗೆ ಕಾಂತಿ,ಶಾಖ,ಮಳೆ ಬೆಳೆ, ನಾವು ಉಪಯೋಗಿಸುವ ಶಕ್ತಿಯ ಹಿಂದೆಲ್ಲ ಇರುವುದೇ ಸಂಗ್ರಹಿಸಿಟ್ಟ ಸೂರ್ಯನ ಶಕ್ತಿ,

ನಾವು ಉಪಯೋಗಿಸುವ ವಿದ್ಯುತ್ ಶಕ್ತಿಯ ಹಿಂದೆ ಸೂರ್ಯ ಶಕ್ತಿ ಇದೆ,ಅದು ಮೇಲಿನಿಂದ ಕೆಳಗೆ ಬೀಳುವ ನೀರಿನಿಂದ ತಯಾರಾದುದು, ಆ ನೀರನ್ನು ಮೇಲಕ್ಕೆ ತಳ್ಳಿದ್ದು ಸೂರ್ಯನ ಕಾಂತಿ, ಸೂರ್ಯ ಸಾಗರದ ಮೇಲೆ ತಪಿಸಿದಾಗಲೇ ಅಲ್ಲಿರುವ ನೀರು ಆವಿಯಂತೆ ಮೇಲೇರುವುದು, ಸೌದೆ ಅಥವಾ ಕಲ್ಲಿದ್ದಲು ಉರಿಯುವುದರಿಂದ ತಯಾರಾದ ವಿದ್ಯುತ್ ಶಕ್ತಿಯಾದರೆ ಆ ಕಲ್ಲಿದ್ದಲು ಮತ್ತು ಸೌದೆಗೆ ಕಾರಣ ಸೂರ್ಯನ ಕಾಂತಿ,

ಸೂರ್ಯ ಬೆಳಗಿದರೆ ಸಸ್ಯ ರಾಶಿ, ಸಸ್ಯರಾಶಿ ಬೆಳೆದರೆ ಊಟ,ಬಟ್ಟೆ,ಇದೆಲ್ಲ ಸಿಗುವುದು,ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸೂರ್ಯನಿಂದ ಬರುವ ಶಕ್ತಿಯನ್ನು ಹೀರುತ್ತಿರುವನು,ಪರೋಕ್ಷವಾಗಿ ಭಗವಂತನನ್ನು ನಾವುಗಳೆಲ್ಲ ಹೀರುತ್ತಿರುತ್ತೇವೆ,ಅವನೇ ಎಲ್ಲದಕ್ಕೂ ಆಧಾರವಾಗಿರುವನು,

🕉️ ಉಪನಿಷತ್ ಭಾವ ಬಿಂದು226 🕉️
ದಿನಾಂಕ 07/08/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,

ಸಹಸ್ರಾರು ಮನುಷ್ಯರಲ್ಲಿ ಯಾರೋ ಒಬ್ಬ ಮಾತ್ರವೇ ಸಿದ್ದಿಗಾಗಿ ಪ್ರಯತ್ನಿಸುತ್ತಾನೆ, ಹಾಗೆ ಪ್ರಯತ್ನಿಸುವ ಸಿದ್ಧರಲ್ಲಿ ಕೂಡ ಯಾವನೋ ಒಬ್ಬ ನನ್ನನ್ನು ಯಥಾರ್ಥವಾಗಿ ಅರಿಯುತ್ತಾನೆ,

ಭಗವದ್ಗೀತೆಯ ಜ್ಞಾನವಿಜ್ಞಾನ ಯೋಗದ ಮೂರನೇ ಶ್ಲೋಕದಲ್ಲಿ ಶ್ರೀ ಕೃಷ್ಣನು ಈ ವಿವರಣೆಯನ್ನು ಕೊಡುತ್ತಾನೆ, ಈ ಪ್ರಪಂಚದಲ್ಲಿ ದೇವರ ಕಡೆ ಹೋಗುವವರ ಸಂಖ್ಯೆ ಅತಿ ವಿರಳ, ಎಲ್ಲ ಜಗದ ಸಂತೆಯ ಕಡೆಗೆ ಹೋಗುವವರೇ ಹೆಚ್ಚು,

ದೇವರು ಸೂಕ್ಷ್ಮ , ಚರ್ಮಚಕ್ಷುಗಳಿಗೆ ಕಾಣಲಾರ,
ಅತೀಂದ್ರಿಯ ವಸ್ತು ,ಬಲು ಬೇಗ ಸಿಗುವುದಿಲ್ಲ, ಇಂದ್ರಿಯ ವಸ್ತುಗಳು ನಮ್ಮ ಕಣ್ಣೆದುರಿಗೆ ಬಿದ್ದಿವೆ, ಅದನ್ನು ನಾವು ತೆಗೆದುಕೊಳ್ಳಬೇಕು ಅಷ್ಟೇ. ಅದಕ್ಕಾಗಿ ನಾವು ಅಷ್ಟೊಂದು ಕಷ್ಟಪಡಬೇಕಾಗಿಲ್ಲ, ಸ್ವಲ್ಪ ಪ್ರಯತ್ನ ಮಾಡಿದೊಡನೆಯೇ ಅದು ನಮಗೆ ದೊರಕುವುದು, ಎಲ್ಲಕ್ಕಿಂತ ಹೆಚ್ಚಾಗಿ ವಿಷಯ ವಸ್ತುವನ್ನು ಅನುಭವಿಸಬೇಕು ಎಂಬ ಆಸೆ ಇನ್ನು ನಮ್ಮಲ್ಲಿದೆ,

ಪರಮಾತ್ಮನನ್ನು ಅನುಭವಿಸಬೇಕೆಂಬ ಆಸೆ ಇನ್ನು ನಮ್ಮಲ್ಲಿ ಹುಟ್ಟಿಲ್ಲ, ಎದುರಿಗೆ ಕಾಣುವ ಮನೋಹರವಾದ ಇಂದ್ರಿಯ ಸುಖಗಳು ತಾತ್ಕಾಲಿಕ ಕ್ಷಣಿಕ, ಇವು ನಮಗೆ ಪರಮಶಾಂತಿಯನ್ನು ಕೊಡಲಾರವು ಎಂಬುದು ಇನ್ನು ನಮಗೆ ಹೃದ್ಗತವಾಗಿಲ್ಲ, ಈ ಪ್ರಪಂಚದ ಮೇಲಿನ ವ್ಯಾಮೋಹ ಹೋದಲ್ಲದೆ ಯಾರು ದೇವರ ಕಡೆ ತಿರುಗುವುದಿಲ್ಲ, ಒಂದು ವೇಳೆ ದೇವರ ಹತ್ತಿರ ಅಕಸ್ಮಾತಾಗಿ ಬಂದರೂ ಅವನಿಂದ ಲೌಕಿಕವಾದ ಏನನ್ನೋ ವಸೂಲಿ ಮಾಡುವನೇ ಹೊರತು ನಿಜವಾದ ಆನಂದ ಮತ್ತು ಪರಮಶಾಂತಿಯನ್ನು ಅವನು ಬಯಸಲಾರನು, ಅವನಿಗೆ ದೇವರು ಬೇಕಾಗಿಲ್ಲ ,

ಆದ ಕಾರಣವೇ ಸಹಸ್ರಾರು ಜನ ಪ್ರಪಂಚದ ಕಡೆಗೆ ಧಾವಿಸುತ್ತಾರೆ, ದೇವರ ಕಡೆಗೆ ಹೋಗುವವರು ಬಹಳ ಅಪರೂಪ,ಈ ಹಾದಿಯಲ್ಲಿ ಯಾವ ಗಲಾಟೆಯೂ ಇಲ್ಲ, ಇಲ್ಲಿ ಯಾವ ಜನಜಂಗುಳಿಯೂ ಇಲ್ಲ, ಆದರೆ ಪ್ರಯಾಣಿಸುವರು ಬಹಳ ಅಲ್ಪ ಮಂದಿ ಮಾತ್ರ,

(ಮುಂದುವರಿಯುವುದು)

🕉️ ಉಪನಿಷತ್ ಭಾವ ಬಿಂದು224 🕉️
ದಿನಾಂಕ 05/08/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,
ಭಗವದ್ಗೀತೆಯ ಜ್ಞಾನ ವಿಜ್ಞಾನ ಯೋಗದ ಎರಡನೆಯ ಶ್ಲೋಕಕ್ಕೆ ಸಂಬಂಧಿಸಿದ ವಿವರಣೆಯ ಬಿಂದುರೂಪ

ಯಾವುದನ್ನು ತಿಳಿದುಕೊಂಡ ಮೇಲೆ ಇನ್ನು ತಿಳಿದುಕೊಳ್ಳಬೇಕಾಗಿರುವುದು ಯಾವುದು ಇಲ್ಲವೋ, ಎಂದರೆ ಪರಮಾತ್ಮನನ್ನು ತಿಳಿದುಕೊಂಡ ಮೇಲೆ ಇನ್ನು ಉಳಿದವುಗಳೆಲ್ಲವೂ ವೇದ್ಯವಾಗುವುದು,ಎಲ್ಲವೂ ಈ ಪ್ರಪಂಚದ ಚರಾಚರ ವಸ್ತುಗಳ ಹಿಂದೆ ಸತ್ಯವಾಗಿರುವವನು ಅವನು,

ಮಿಕ್ಕಿರುವ ಜ್ಞಾನಗಳಾದರೊ ಆ ಸತ್ಯದ ಯಾವುದೋ ಒಂದು ದೃಷ್ಟಿಕೋನದ ಅಸ್ಪಷ್ಟ ಭಾಗ,ಹಾಗಾದರೆ ದೇವರನ್ನು ತಿಳಿದವನಿಗೆ ಫಿಸಿಕ್ಸ್ ,ಕೆಮಿಸ್ಟ್ರಿ, ಅಸ್ತ್ರಾನಮಿ, ಚರಿತ್ರೆ, ಭೂಗೋಳ,ಇದೆಲ್ಲ ಗೊತ್ತಾಗುವುದೇ ? ಇವುಗಳ ಸತ್ಯವೆಲ್ಲ ಅವನಿಗೆ ಹೊಳೆಯುವುದೇ ? ಎಂದರೆ ಇತರ ಜ್ಞಾನಗಳ ವಿವರಗಳು ಅವನಿಗೆ ಗೋಚರಿಸುವುದಿಲ್ಲ, ಅದನ್ನು ಕೂಡ ಮನಸ್ಸು ಮಾಡಿದರೆ ಬಹಳ ಅಲ್ಪ ಕಾಲದಲ್ಲಿ ತಿಳಿದುಕೊಳ್ಳಬಲ್ಲ,

ಆದರೆ ಎಲ್ಲ ಜ್ಞಾನಗಳ ಹಿಂದೆ ಇರುವ ಏಕ ಮಾತ್ರ ಅವಿಕಾರಿಯಾದ ಸತ್ಯವನ್ನು ಅವನು ಬಲ್ಲನು, ಅದೇ ಪರಮಾತ್ಮ, ಎಲ್ಲಾ ಶಕ್ತಿಯ ಹಿಂದೆ ,ವಸ್ತುವಿನ ಹಿಂದೆ ಎಲ್ಲ ನಾಮ ರೂಪಗಳ ಹಿಂದೆ ಇರುವುದೊಂದೇ ಪರಮಾತ್ಮ ಶಕ್ತಿ, ಈ ಪ್ರಪಂಚವೆಲ್ಲ ಅದರ ಆವಿರ್ಭಾವ, ಈ ಪ್ರಪಂಚದಲ್ಲಿ ಪರಮಾತ್ಮನನ್ನು ಅರಿಯುವುದೊಂದೇ ಪರಾ ವಿದ್ಯೆ,ಉಳಿದವುಗಳೆಲ್ಲ ಅಪರಾವಿದ್ಯೆ,

🕉️ ಉಪನಿಷತ್ ಭಾವ ಬಿಂದು223 🕉️
ದಿನಾಂಕ 03/08/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,
ಕಠ ಉಪನಿಷತ್ತು,ಐದನೇ ಅಧ್ಯಾಯ,ಮೊದಲ ಶ್ಲೋಕ

ಅಜನು ವಕ್ರಬುದ್ಧಿಯಾಗಿರದವನು, 11 ದ್ವಾರಗಳಿರುವ ಪುರಗಳನ್ನಳುತ್ತಾ ಅದರಲ್ಲಿ ನೆಲೆಸಿರುವನು, ಅದನ್ನು ಅರಿತೇ ಒಬ್ಬನು ಇನ್ನೆಂದಿಗೂ ದುಃಖಿಸನು,ಹೀಗೆ ಸ್ವತಂತ್ರನಾಗುವ ಅವನು ವಾಸ್ತವದಲ್ಲಿ ಮುಕ್ತನೇ ಆಗಿಬಿಡುವನು, ಇದೇ ಆ ಪರಮಾತ್ಮ,

ನಮ್ಮಲ್ಲಿ ಬಹುತೇಕರು ನವದ್ವಾರಗಳ ಪುರ ಅಂದರೆ ಶಿರಭಾಗದಲ್ಲಿರುವ ಏಳು, ಕೆಳಭಾಗದಲ್ಲಿರುವ ಎರಡು ಒಟ್ಟು ಒಂಬತ್ತು ರಂಧ್ರಗಳನ್ನು ಹೊಂದಿರುವ ಶರೀರದ ಬಗ್ಗೆ ಕೇಳಿರುವೆವು, ಇಲ್ಲಿ ಯೋಗದ ಪ್ರಾಯೋಗಿಕ ಅನ್ವಯಕ್ಕೆಂದೇ ಬದಲಾವಣೆಯನ್ನು ತೋರಿಸುವ ಇನ್ನು ಎರಡನ್ನು ಸೇರಿಸಲಾಗಿದೆ,

ಯೌಗಿಕ ಪರಿಭಾಷೆಯಲ್ಲಿ ಶರೀರದಲ್ಲಿ 11 ದ್ವಾರಗಳಿವೆ. ಈ ನವದ್ವಾರಗಳಲ್ಲದೆ ಇನ್ನೂ ಎರಡು ಮುಖ್ಯವಾದ ದ್ವಾರಗಳಿವೆ, ಒಂದು ನಾಭಿ ಅಥವಾ ಹೊಕ್ಕಳು,ಎಲ್ಲಿಂದ ಸೃಷ್ಟಿಯ ಆರಂಭವಾಗುತ್ತದೋ ಅದು,ಇನ್ನೊಂದು ಶಿರದ ಮೇಲಿರುವ ರಂದ್ರ, ಇದನ್ನು ಬ್ರಹ್ಮರಂದ್ರ ಎಂದು ಕರೆಯಲಾಗುತ್ತದೆ, ಆಗ ತಾನೆ ಹುಟ್ಟಿರುವ ಮಗುವಿನ ನೆತ್ತಿಯನ್ನು ಮುಟ್ಟಿ ನೀವು ಅದನ್ನು ಅನುಭವಿಸಬಹುದು, ನಾಡಿಮಿಡಿತವಿರುವ ಆ ಸ್ಥಳದಲ್ಲಿ ಮೃದುವಾಗಿರುತ್ತದೆ, ಕೆಲವು ದಿನಗಳ ಬಳಿಕ ಅದು ಗಟ್ಟಿಯಾಗಿ ಬಿಡುತ್ತದೆ,

ಯೋಗಿಗಳು ಇದನ್ನೇ ಬ್ರಹ್ಮರಂದ್ರವೆಂದು ಕರೆಯುವುದು, ಇದರಿಂದಲೇ ಪ್ರಾಣವು ಉತ್ರ್ಕಾಂತವಾಗುವುದು, ಅಂದರೆ ಈ ಕ್ರಿಯೆಯು ಮಹಾನ್ ಆತ್ಮಗಳಿಗೆ ಮಾತ್ರ ಅನ್ವಯಿಸುತ್ತದೆ, ಪ್ರತಿಯೊಬ್ಬರಿಗೂ ಅಲ್ಲ,

🕉️ ಉಪನಿಷತ್ ಭಾವ ಬಿಂದು222 🕉️
ದಿನಾಂಕ 02/08/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,

ಈ ದೇಹವೆಂಬ ಗೂಡಿನಲ್ಲಿ ಹಕ್ಕಿಯಂತೆ ಬಂದು ಕುಳಿತುಕೊಂಡಿರುವವನು ಜೀವ,ಈ ದೇಹದ ಮೂಲಕ ಹಲವು ಕರ್ಮಗಳನ್ನು ಮಾಡಿ ಸಿಹಿ ಕಹಿ ಅನುಭವಗಳನ್ನು ಉಂಡು ದೇಹ ನಾಶವಾದ ಮೇಲೆ ಪುನಃ ಹಾರಿ ಹೋಗುವ ಹಕ್ಕಿಯಂತೆ ಇರುವವನೇ ಜೀವ,

ಈ ದೇಹವೇ ಜೀವವಲ್ಲ, ಜೀವ ವಾಸಿಸುವ ಗೂಡು, ಈ ದೇಹ ಜೀವವನ್ನು ಪ್ರತಿಬಿಂಬಿಸುತ್ತಿರುವುದು,ಜೀವವಿದ್ದರೆ ಅಂಗಗಳೆಲ್ಲವೂ ಕೆಲಸ ಮಾಡುವವು,ಅದಿಲ್ಲದೆ ಇದ್ದರೆ ಅಂಗಗಳೆಲ್ಲ ಇರುವವು, ಆದರೆ ಏನನ್ನು ಮಾಡಲಾರವು,

ದೊಡ್ಡದೊಂದು ಫ್ಯಾಕ್ಟರಿ ಕೆಲಸ ಮಾಡಬೇಕಾದರೆ ಅದನ್ನು ಚಲಿಸುವಂತೆ ಮಾಡುವುದು ವಿದ್ಯುತ್ ಶಕ್ತಿ, ಯಾವಾಗ ವಿದ್ಯುತ್ ಶಕ್ತಿ ನಿಲ್ಲುವುದೋ ಆಗ ಅಲ್ಲಿರುವ ಯಂತ್ರಗಳು ಏನನ್ನು ಮಾಡಲಾರವು,

ಜೀವಕ್ಕೆ ದೇಹ ಸಂಬಂಧವಾದರೆ ದೇಹ ವಿದ್ಯುತ್ ಶಕ್ತಿಗೆ ಹಾಕಿದ ಬಲ್ಪಿನಂತೆ ಹೊಳೆಯುವುದು, ಯಾವಾಗ ಜೀವ ಅದರಿಂದ ಬೇರೆ ಆಯಿತೋ ಆಗ ಬಲ್ಬ್ ಇದ್ದರೂ ಯಾವ ಪ್ರಯೋಜನವೂ ಬರುವುದಿಲ್ಲ,

ಅದರಂತೆ ಎಲ್ಲ ಜೀವರಾಶಿಗಳ ಹಿಂದೆಯೂ ಸರ್ವಾಂತರ್ಯಾಮಿಯಾದ ದೇವರು ಇರುವನು,
=================================.

🕉️ ಉಪನಿಷತ್ ಭಾವ ಬಿಂದು221 🕉️
ದಿನಾಂಕ 31/07/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,

ಬ್ರಹ್ಮವೇ ಈ ವಿಶ್ವದಲ್ಲೆಲ್ಲಾ ಸರ್ವೋತ್ತಮವಾದದ್ದು, ಸರ್ವ ಶ್ರೇಷ್ಠವಾದದ್ದು, ಉಳಿದಿರುವುದೆಲ್ಲ ಅದರ ಆಧಾರದ ಮೇಲೆ ನಿಂತಿರುವುದು, ಈ ಪ್ರಪಂಚದಲ್ಲಿ ಬ್ರಹ್ಮನ ವಿನಃ ಉಳಿದಿರುವುದೆಲ್ಲ ಹುಟ್ಟು ಸಾವಿನ ಚಕ್ರದಲ್ಲಿ ಸಿಕ್ಕಿ ನರಳುತ್ತಿರುವುದು,

ಬ್ರಹ್ಮ ಮಾತ್ರ ಅದಕ್ಕೆ ಸಿಕ್ಕಿಲ್ಲ, ಅದು ಎಂದೆಂದೂ ಇರುವುದು, ಅದು ಇಲ್ಲದ ಕಾಲವೇ ಇಲ್ಲ, ಅದನ್ನು ಯಾರು ಇಲ್ಲದಂತೆ ಮಾಡಲಾಗುವುದಿಲ್ಲ, ಆಕಾಶ ಹೇಗೆ ಏನು ಮಾಡಿದರು ನಾಶ ಮಾಡಲಾಗುವುದಿಲ್ಲವೋ ಹಾಗೆ ಬ್ರಹ್ಮ, ಆದರೆ ಆಕಾಶ ಜಡ, ಬ್ರಹ್ಮನಾದರೋ ಚೈತನ್ಯ ಸ್ವರೂಪ, ಅವನು ಸೃಷ್ಟಿಸಿದ ಈ ವಿಶ್ವದಲ್ಲೆಲ್ಲಾ ಅವನೆ ಹಾಸು ಹೊಕ್ಕಾಗಿರುವನು,ಆದರೆ ಇಲ್ಲಿಯೇ ಅವನು ಖರ್ಚಾಗಿ ಹೋಗಿಲ್ಲ,

ಅವನ ಅನಂತ ರೂಪದಲ್ಲಿ ಯಾವುದೋ ಒಂದು ಅಂಶ ಈ ಪ್ರಪಂಚದ ರೂಪವನ್ನು ತಾಳಿರುವುದು, ಸಾಗರದಲ್ಲಿ ಯಾವುದೋ ಸ್ವಲ್ಪ ಭಾಗ ಘನಿಭೂತವಾಗಿ ನೀರ್ಕಲ್ಲಿನಂತೆ ನೀರಿನ ಮೇಲೆ ತೇಲುವಂತಿದೆ, ಯಾವುದು ಜೀವಿಯಲ್ಲಿ ಸ್ವಭಾವದಂತೆ ಇದೆಯೋ ಅದೇ ಆಧ್ಯಾತ್ಮ,

ಪ್ರತಿ ಜೀವರಾಶಿಯಲ್ಲೂ ಅದರ ವ್ಯಕ್ತಿತ್ವದ ಕೇಂದ್ರವೇ ಅದರ ಸ್ವಭಾವ, ನಾವೆಲ್ಲ ಕೆಲವು ಸ್ವಭಾವದೊಡನೆ ಹುಟ್ಟುವೆವು, ಸ್ವಭಾವವನ್ನು ನಾವು ಬದಲಾಯಿಸಿಕೊಳ್ಳಬಹುದು, ಆದರೆ ಯಾರೂ ಖಾಲಿ ಬರುವುದಿಲ್ಲ, ಸ್ವಭಾವಕ್ಕೆ ತಕ್ಕಂತೆ ನಾವು ಬಾಳಿ ಬದುಕುತ್ತೇವೆ, ಕರ್ಮವನ್ನು ಮಾಡುತ್ತೇವೆ, ಮನುಷ್ಯ ಎಂದರೆ ಸ್ವಭಾವದ ಒಂದು ಕಂತೆಯಲ್ಲದೆ ಬೇರೆಲ್ಲ, ನಮ್ಮ ವ್ಯಕ್ತಿತ್ವದ ಸಾರವೇ ಸ್ವಭಾವ,

🕉️ ಉಪನಿಷತ್ ಭಾವ ಬಿಂದು219 🕉️
ದಿನಾಂಕ 29/07/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,

ಯಾವ ಯೋಗಿ ಪ್ರಶಾಂತ ಚಿತ್ತನಾಗಿರುವನೋ ಎಂದರೆ ಮನಸ್ಸನ್ನು ಸ್ಥಿರ ಮಾಡಿಕೊಂಡಿರುವನೋ ಅಲ್ಲಿ ಯಾವ ವಿಧವಾದ ಉದ್ವಿಗ್ನತೆಗೂ ಅವಕಾಶವಿರುವುದಿಲ್ಲ, ಅಲ್ಲಿ ರಜೋಗುಣವಿಲ್ಲ,

ಅವನು ಕರ್ಮದ ಸುಂಟರಗಾಳಿಯಲ್ಲಿ ಸಿಕ್ಕಿಕೊಂಡಿರುವುದಿಲ್ಲ, ರಜೋಗುಣವಿದ್ದರೆ ಅವನನ್ನು ಯಾವಾಗಲೂ ಅದು ತಿವಿಯುತ್ತಿರುವುದು, ಯಾವಾಗ ಅದು ನಾಶವಾಗಿದೆಯೋ ಆಗ ಅವನು ಶಾಂತನಾಗಿರುವನು, ಅವನ ಮನಸ್ಸಿನಲ್ಲಿ ಯಾವ ಕಶ್ಮಲವೂ ಇರುವುದಿಲ್ಲ ಯಾವ ಅಸೂಯೆಯಾಗಲಿ ಆಸೆಯಾಗಲಿ ಇಲ್ಲ,ಇವುಗಳೆಲ್ಲ ಮನಸ್ಸನ್ನು ಮುತ್ತಿರುವ ಕಿಲುಬುಗಳು,

ಯೋಗಿ ಇವುಗಳ ಕೊಳೆಯಿಂದ ಪಾರಾಗಿರುವನು, ಪರಿಶುದ್ಧವಾದ ಚಿನ್ನದಲ್ಲಿ ಬೆರಕೆ ಯಾವುದು ಹೇಗೆ ಇಲ್ಲವೋ ಅದರಂತೆ ಯೋಗಿಯು ಕಶ್ಮಲರಹಿತವಾಗಿರುವನು, ಅವನ ಮನಸ್ಸು ಬ್ರಹ್ಮಭಾವವನ್ನು ಹೊಂದುವುದು, ಇದ್ದಿಲನ್ನು ಬೆಂಕಿಗೆ ಹಾಕಿದರೆ ಅದು ಕೂಡ ಬೆಂಕಿಯೆ ಆಗುವಂತೆ ಪರಮಾತ್ಮನನ್ನು ಧ್ಯಾನಿಸುತ್ತಿರುವ ಯೋಗಿಯ ಮನಸ್ಸು ಆಗುವುದು, ಅವನ ಬಳಿಗೆ ಶ್ರೇಷ್ಠವಾದ ಸುಖ ತಾನಾಗಿಯೇ ಬರುವುದು, ಇವನು ಸುಖವನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ, ಆನಂದವೇ ಇವನನ್ನು ಹುಡುಕಿಕೊಂಡು ಬರುವುದು,

ನಾವು ಮನಸ್ಸನ್ನು ಅಣಿ ಮಾಡಿಕೊಂಡರೆ ಆ ಆನಂದವು ಎಲ್ಲ ಜೀವರಾಶಿಗಳಲ್ಲಿಯೂ ಹರಿಯುತ್ತಿರುವುದು ಗೊತ್ತಾಗುತ್ತದೆ, ನದಿ ಮುಖದಲ್ಲಿ ಮೇಲೆ ಮುಚ್ಚಿರುವ ಮರಳನ್ನು ತೆಗೆದರೆ ಹೇಗೆ ಕೆಳಗೆ ನೀರು ಹಳ್ಳದಲ್ಲಿ ಬಂದು ಸಂಗ್ರಹಿಸುತ್ತದೆಯೊ ಹಾಗೆ ಪರಮ ಸುಖ ಯೋಗಿಯ ಮನಸ್ಸನ್ನು ಪ್ರವೇಶಿಸುವುದು.

ಪರಮ ಸುಖವೆಂಬ ಪರಮಾತ್ಮನ ಆನಂದ ಸಾಗರದಿಂದ ಪ್ರತಿಯೊಂದು ಜೀವರಾಶಿಗೂ ಒಂದು ನಾಲೆ ಇದೆ, ಆ ನಾಲೆಯಲ್ಲಿ ಅಡೆತಡೆಗಳಿದ್ದರೆ ಮಾತ್ರವೇ ನೀರು ಬರುವುದಿಲ್ಲ ,ಯಾವಾಗ ಅಡಚಣೆಯನ್ನು ತೆರೆಯುವೆವೊ ಆಗ ನೀರು ಪ್ರತಿಯೊಂದು ಜೀವಿಯ ಕ್ಷೇತ್ರಕ್ಕೂ ಹರಿದು ಬರುವುದು,

🕉️ ಉಪನಿಷತ್ ಭಾವ ಬಿಂದು218 🕉️
ದಿನಾಂಕ 27/07/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,

ಸಂಕಲ್ಪ ಎಂಬುದು ಬೇರು, ಅದರಿಂದ ಆಸೆಗಳ ಚಿಗುರುಗಳೆಲ್ಲ ಬರುವವು, ಅವು ಕಾರ್ಯರೂಪಕ್ಕೆ ಬರುವುದಕ್ಕೆ ಮುಂಚೆಯೇ ಅದರ ಸುಳಿವು ಗೊತ್ತಾದಾಗಲೆ ಅವುಗಳನ್ನು ನಿಗ್ರಹಿಸಬೇಕು, ಮೊದಲಲ್ಲಿ ನಿಗ್ರಹಿಸುವುದು ಸುಲಭ, ಆಗ ತಾನೇ ಚಿಗುರಿದ ಗಿಡವನ್ನು ಉಗುರಿನಿಂದ ಕಿತ್ತು ಬಿಡಬಹುದು, ಆದರೆ ಅದು ಚೆನ್ನಾಗಿ ಬೆಳೆದರೆ ಕೊಡಲಿಯೇ ಬೇಕಾಗುವುದು, ಅದಕ್ಕಾಗಿ ಕಾಮನೆಗಳನ್ನು ಪ್ರಾರಂಭದಲ್ಲಿ ನಿಗ್ರಹಿಸಬೇಕು ಎನ್ನುವುದು,

ಮೊದಲು ಅದು ಸಣ್ಣ ತರಂಗದಂತೆ ಕಾಣುವುದು ಕೊನೆಗೆ ಅದೊಂದು ಸಮುದ್ರವಾಗುವುದು, ಎಲ್ಲ ಕಾಮನೆಗಳನ್ನು ತ್ಯಜಿಸಬೇಕೆಂದು ಉಪನಿಷತ್ತು ಹೇಳುವುದು,

ಕಾಮನೆಗಳಲ್ಲಿ ಒಳ್ಳೆಯವು ಕೆಟ್ಟವುಗಳೆಲ್ಲ ಇರುವವು, ಕೆಟ್ಟ ಕಾಮನೆ ನಮ್ಮನ್ನು ಎಷ್ಟರಮಟ್ಟಿಗೆ ಪ್ರಪಂಚಕ್ಕೆ ಕಟ್ಟಿ ಹಾಕುವುದೋ ಅಷ್ಟೆ ಒಳ್ಳೆಯ ಕಾಮನೆಯು ಕಟ್ಟಿ ಹಾಕುವುದು, ಒಳ್ಳೆಯದು ಚಿನ್ನದ ಸರಪಳಿ ಎಂದು ಕೊಂಡರೆ ಕೆಟ್ಟದ್ದು ಕಬ್ಬಿಣದ ಸರಪಳಿ, ಕಟ್ಟಿನ ದೃಷ್ಟಿಯಿಂದ ಎಲ್ಲಾ ಒಂದೇ,

ಯೋಗಿಯಾಗ ಬಯಸುವನು ನಿರ್ದಯವಾಗಿ ಇವುಗಳಿಂದ ಪಾರಾಗಬೇಕು, ಸಂಪೂರ್ಣವಾಗಿ ಆಸೆಯನ್ನು ತ್ಯಜಿಸಬೇಕು, ಎಲ್ಲಾ ಜಯಿಸಿ ಎಲ್ಲೋ ಸ್ವಲ್ಪ ಬಿಟ್ಟರು ಆ ಕಿಡಿ ಅನಂತರ ಕಾಡ್ಗಿಚ್ಚಾಗುವುದು,

🕉️ ಉಪನಿಷತ್ ಭಾವ ಬಿಂದು217 🕉️
ದಿನಾಂಕ 26/07/2025
ಸಂಗ್ರಹ ಸಮರ್ಪಣೆ ಕೆ ಸುಬ್ರಾಯ ಲೊಂಢೆ,

ಮನಸ್ಸಿನ ಸ್ವಭಾವವೇ ಅತ್ಯಂತ ಚಂಚಲ ಮತ್ತು ಅಸ್ಥಿರವಾದದು, ಒಮ್ಮೆ ಒಂದು ಶಪಥ ಮಾಡುವುದು, ಇನ್ನು ಸ್ವಲ್ಪ ಹೊತ್ತಿನಲ್ಲಿ ಆ ಶಪಥವನ್ನು ಮುರಿಯುವುದು, ನಮ್ಮ ಜೀವನವೇ ಮುರಿದ ಶಪಥಗಳ ರಾಶಿ, ಒಂದೊಂದು ಸಲ ಒಂದೊಂದು ನಿರ್ಧಾರಕ್ಕೆ ಬರುವುದು, ಯಾವುದನ್ನು ಕೂಡ ಸ್ಥಿರವಾಗಿ ಅನುಸರಿಸುವುದಿಲ್ಲ,ನಮ್ಮ ಮನಸ್ಸಿಗೆ ಒಂದು ಕಡೆ ಹೋಗಬೇಡ ಎಂದು ಬಾಗಿಲು ಹಾಕಿದರೆ ಅದು ಮತ್ತೊಂದು ಬಾಗಿಲಿನ ಮೂಲಕ ಹೋಗುವುದು, ಅದು ಕೆಟ್ಟದ್ದು ಅದರ ಹತ್ತಿರ ಹೋಗಬೇಡ ಎಂದರೆ ಅದು ಒಳ್ಳೆಯದರಂತೆ ತೋರುವುದು ಎಂದು ಹಲವಾರು ಕಾರಣಗಳನ್ನು ಕೊಡುವುದು,

ವಿಷಯ ವಸ್ತುವಿನ ನಿರಂತರವಾದ ಆಶ್ವಾದನೆಯ ಕಾರಣವಾಗಿ ವಿಷಯ ವಸ್ತುವಿನ ಸಹವಾಸವನ್ನು ಒಂದೇ ಸಲ ಬಿಟ್ಟು ಹೋಗು ಎಂದರೆ ಅದು ಬಿಟ್ಟು ಹೋಗುವುದಿಲ್ಲ, ನಮ್ಮ ಮನಸ್ಸು ಪದೇಪದೇ ವಿಷಯ ವಸ್ತುವಿನ ಕಡೆಗೆ ಬರುತ್ತಿರುವುದು, ಪ್ರತಿಸಲ ಬಂದಾಗಲೂ ಅದಕ್ಕೆ ಬುದ್ಧಿ ಹೇಳಿ, ಛೀಮಾರಿ ಮಾಡಿ ಹಿಂದಕ್ಕೆ ತೆಗೆದುಕೊಂಡು ಹೋಗಿ ದೇವರ ಸನ್ನಿಧಿಯಲ್ಲಿ ಬಿಡಬೇಕು, ನಿರಂತರವಾದ ಅಭ್ಯಾಸ ಬಲದಿಂದ ಮಾತ್ರ ನಮಗೆ ಏಕಾಗ್ರತೆ ಸ್ವಾಧೀನವಾಗುವುದು, ಇದ್ದಕ್ಕಿದ್ದಂತೆ ಇದು ಯಾರಿಗೂ ಬರುವುದಿಲ್ಲ,

ಜೀವನದಲ್ಲಿ ಕ್ಷುದ್ರ ವಸ್ತುಗಳೆ ನಮಗೆ ಸುಲಭವಾಗಿ ಸಿಗುವುದಿಲ್ಲ, ಅದಕ್ಕಾಗಿ ಏಷ್ಟೊಂದು ಹೋರಾಡುತ್ತೇವೆ? ಪಡಬಾರದ ಯಾತನೆ ಪಡುತ್ತೇವೆ, ಕೇಳಬಾರದ ಮಾತು ಕೇಳುತ್ತೇವೆ, ಕಣ್ಣೀರಿನ ಕೋಡಿ ಯಲ್ಲಿ ಈಜುತ್ತೇವೆ, ಆದರೂ ನಾವು ಅದನ್ನು ಹಿಡಿಯಲು ಬೆನ್ನಟ್ಟುವುದನ್ನು ಬಿಡುವುದಿಲ್ಲ,

ಯಾವ ಸಾಧನೆ ನಮ್ಮನ್ನು ಪಾವನರನ್ನಾಗಿ ಮಾಡುವುದೊ ನಮ್ಮನ್ನು ಕೃತಕೃತ್ಯರನ್ನಾಗಿ ಮಾಡುವುದೊ ಜನನ ಮರಣಗಳು ಚಕ್ರದಿಂದ ತಪ್ಪಿಸಿಕೊಂಡು ಹೋಗುವಂತೆ ಮಾಡುವುದೋ ಅದೆಲ್ಲವೂ ಸಾಧ್ಯವಾಗಬಲ್ಲ ಭಗವತ್ ಸಾಕ್ಷಾತ್ಕಾರವನ್ನು ಪಡೆಯಬೇಕಾದರೆ ನಾವು ಶ್ರದ್ಧೆಯನ್ನು ತೋರಬೇಕು, ಯೋಗ ಜೀವನದ ಪ್ರಯಾಣದಲ್ಲಿ ಮುಖ್ಯವಾಗಿ ಬೇಕಾಗಿರುವುದು ಉತ್ಸಾಹ, ನಿರಂತರ ಶ್ರಮ ಮತ್ತು ಶ್ರದ್ಧೆ,
=================================.

Episode-216

ನಾವು ಭಗವಂತನನ್ನು ಮರೆತಿರುವುದೇ ನಮ್ಮ ಎಲ್ಲ ಸಂಕಷ್ಟಗಳಿಗೆ ಮತ್ತು ದುಃಖಗಳಿಗೆ ಕಾರಣವಾಗಿದೆ ,ಈ ದೇಹ ಮನಸ್ಸು ಇಂದ್ರಿಯಗಳನ್ನು ಸತ್ಯ ಎಂದು ಭಾವಿಸಿರುವುದು ಕಾರಣ, ಯಾವಾಗ ಇದನ್ನು ಸತ್ಯವೆಂದು ಭಾವಿಸುವೆವೊ ಇದಕ್ಕೆ ಪ್ರಿಯವಾದ ವಸ್ತುವನ್ನು ವಿಷಯ ಪ್ರಪಂಚದಿಂದ ತರುವೆವು, ಯಾವುದರ ಮೂಲಕ ಸುಖದ ಅನುಭವಗಳು ಬರುವವೊ ಅದರ ಮೂಲಕವೇ ದುಃಖದ ವೇದನೆಗಳು ಬರುವವು,

ಒಂದು ಟೆಲಿಗ್ರಾಮಿನ ತಂತಿ ಸುಖದ ಸಮಾಚಾರವನ್ನು ತರುವ ಹಾಗೆಯೇ ದುಃಖದ ಸಮಾಚಾರವನ್ನು ತರುವುದು,ಅದು ಸುಖ-ದುಃಖಗಳಲ್ಲಿ ಯಾವ ವ್ಯತ್ಯಾಸವನ್ನು ಮಾಡುವುದಿಲ್ಲ, ಯಾವ ದೇಹದ ಮೂಲಕ ನಾವು ಸುಖದ ಅನುಭವವನ್ನು ಅನುಭವಿಸುವೆವೊ, ಅದೇ ದೇಹದ ಮೂಲಕ ದಾರುಣವಾದ ಯಾತನೆಯನ್ನು ನಾವು ಅನುಭವಿಸಬೇಕಾಗಿದೆ,ಯೋಗ ಏನು ಮಾಡುವುದು ಎಂದರೆ ಈ ದೇಹದ ಮೇಲೆ ನಮಗಿರುವ ಮಮತೆಯನ್ನು ದೂರ ಮಾಡುವುದು, ಆನಂತರ ಅದಕ್ಕೆ ಆಗುವ ಸುಖ ದುಃಖಗಳು ನಮಗೆ ಏನು ಮಾಡಲಾರವು,

ಒಮ್ಮೆ ನಮ್ಮ ಮನಸ್ಸು ನಿರಾತಂಕವಾಗಿ ಭಗವಂತನ ಕಡೆಗೆ ಹರಿದು ಹೋಗುವುದು ಅಭ್ಯಾಸವಾದರೆ ಅವನಿಗೆ ಪ್ರಪಂಚದ ದುಃಖಗಳು ಚಕ್ಕಳುಗುಳಿಯನ್ನು ಇಡಲಾರವು, ಅವನು ಈ ಪ್ರಪಂಚವನ್ನು ನೋಡುವ ದೃಷ್ಟಿಯೇ ಬದಲಾಗುವುದು,ದೇವರನ್ನು ಬಿಗಿಯಾಗಿ ಹಿಡಿದವನಿಗೆ ಅವನ ಬೇರುಗಳು ಈ ಪ್ರಪಂಚದಲ್ಲಿ ಇರುವುದಿಲ್ಲ, ಯಾವ ದುಃಖವಾದರೂ, ಯಾವ ವಿಯೋಗವಾದರೂ ಅವನನ್ನು ಏನು ಮಾಡಲಾರವು,

 

ಯೋಗ ಏನು ಮಾಡುವುದು ಎಂದರೆ ಈ ದೇಹದ ಮೇಲೆ ನಮಗಿರುವ ಮಮತೆಯನ್ನು ದೂರ ಮಾಡುವುದು, ಆನಂತರ ಅದಕ್ಕೆ ಆಗುವ ಸುಖ ದುಃಖಗಳು ನಮಗೆ ಏನು ಮಾಡಲಾರವು,

Episode-215

ಈ ಪ್ರಪಂಚದಲ್ಲಿ ಅಥವಾ ಬ್ರಹ್ಮಾಂಡದಲ್ಲಿ ಪರಮಾತ್ಮನೊಬ್ಬನೇ ಸತ್ಯ, ಅವನೊಬ್ಬನೆ ಹಿಂದೆ ಇದ್ದವನು, ಅವನೆ ಈಗ ಇರುವವನು,ಎಲ್ಲ ನಾಶವಾದರೂ ಮುಂದೆಯೂ ಇರುವವನು,

ಈ ಪ್ರಪಂಚದಲ್ಲಿ ಎಲ್ಲವೂ ಬದಲಾಗುತ್ತಿದೆ, ಕೆಲವು ವೇಗವಾಗಿ ಮತ್ತೆ ಕೆಲವು ನಿಧಾನವಾಗಿ, ಆದರೆ ಯಾವುದೇ ಬದಲಾವಣೆಯ ಚಕ್ರಕ್ಕೆ ಸಿಕ್ಕದೆ ಬದಲಾವಣೆಗಳಿಗೆ ಬದಲಾಗದೆ ಎಲ್ಲದಕ್ಕೂ ಕಾರಣನಾಗಿರುವವನು ಪರಮಾತ್ಮನೊಬ್ಬನೆ,

ಈ ಪರಮ ಸತ್ಯವನ್ನು ಧ್ಯಾನಯೋಗಿಯು ತನ್ನೊಳಗೆ ಅರಿತುಕೊಳ್ಳುವನು ,ಧ್ಯಾನದಲ್ಲಿರುವಾಗ ಮನಸ್ಸು, ಪರಮಾತ್ಮನಲ್ಲಿ ನೆಲೆಸಿರುವುದು ,ಯಾವಾಗ ಪರಮಾತ್ಮನಲ್ಲಿ ನೆಲೆಸಿರುವನೊ ಆಗ ಆ ವ್ಯಕ್ತಿಗೆ ಪ್ರಪಂಚದ ದ್ವಂದ್ವ ಅನುಭವಗಳು ಇರುವುದಿಲ್ಲ,

ಕಂಬವನ್ನು ಹಿಡಿದುಕೊಂಡು ಹುಡುಗ ಸುತ್ತುತ್ತಿದ್ದರೆ ಹೇಗೆ ಬೀಳುವುದಿಲ್ಲವೋ ಹಾಗೆ ಭಗವಂತನನ್ನು ಹಿಡಿದುಕೊಂಡವನು ಈ ಪ್ರಪಂಚಕ್ಕೆ ಇನ್ನುಮೇಲೆ ಬೀಳುವುದಿಲ್ಲ, ಸಾಧಾರಣವಾದ ಮನೆಗಳನ್ನು ಕ್ಷಣ ಕಾಲದಲ್ಲಿ ಪುಡಿ ಪುಡಿ ಮಾಡುವ ಭೂಕಂಪವು ಆಕಾಶದಲ್ಲಿರುವುದನ್ನು ಏನು ಮಾಡಲಾರದು,

ಅದರಂತೆಯೆ ಭಗವಂತನನ್ನು ಬಿಗಿಯಾಗಿ ಹಿಡಿದಿರುವವನು ಯಾವುದೇ ಘಟನೆಗಳಿಂದ ವಿಚಲಿತನಾಗುವುದಿಲ್ಲ, ಯಾಕೆಂದರೆ ಅವನು ಇಂದ್ರಿಯ ಪ್ರಪಂಚಕ್ಕೆ ಸೇರಿದವನಲ್ಲ, ಭಗವಂತನನ್ನು ರುಚಿ ನೋಡಿದವನಿಗೆ ಈ ಪ್ರಪಂಚ ಸಪ್ಪೆಯಾಗುವುದು, ದೇವರ ಸಾನಿಧ್ಯವೇ ಯೋಗಿಗೆ ಕೇಂದ್ರವಾಗುವುದು,
=================================.

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 19 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 33 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 76 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 62 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 108 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 91 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 64 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 78 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 92 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 567 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 33 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 209 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 450 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 318 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 468 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 309 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts