Friday , 25 September 2026

ಜನರಲ್ ವಾರ್ಡ್ – ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಅದೊಂದು ಪ್ರತಿಷ್ಠಿತ ಆಸ್ಪತ್ರೆ. ಎಲ್ಲ ಆಸ್ಪತ್ರೆಗಳಲ್ಲಿರುವಂತೆ ಅಲ್ಲಿಯೂ ಸಾಮಾನ್ಯ ರೋಗಿಗಳಿಗೆ ಬೇಕಾದ ಜನರಲ್ ವಾರ್ಡ್ ಕೂಡ ಇತ್ತು. ನೂರಕ್ಕೂ ಮಿಕ್ಕಿದ ಹಾಸಿಗೆ ಇರುವ ಜನರಲ್ ವಾರ್ಡಲ್ಲಿ ಸಹಜವಾಗಿಯೇ ಜನ ಜಂಗುಳಿ ಇರುತ್ತದೆ. ಸಾಧಾರಣವಾಗಿ ಪ್ರತಿಯೊಂದು ರೋಗಿಯ ಹಾಸಿಗೆಯ ಪಕ್ಕದಲ್ಲೆ ರೋಗಿಯೊಡನೆ ಒಬ್ಬರಿಗೆ ಇರುವಂಥ ವ್ಯವಸ್ಥೆಯೂ ಇರುತ್ತದೆ. ವ್ಯವಸ್ಥೆ ಎಂದರೆ ಹೆಚ್ಚುವರಿ ಹಾಸಿಗೆಯಾಗಲಿ ಮಂಚವಾಗಲಿ ಇರುವುದಿಲ್ಲ. ಬದಲಾಗಿ ರೋಗಿಯ ಮಂಚದ ಪಕ್ಕದಲ್ಲಿ ಅಂದರೆ ಭಾಗಷಃ ಮಂಚದ ಅಡಿಯಲ್ಲಿ ಮಲಗಿಕೊಳ್ಳಬಹುದು. ಆದರೆ ರೋಗಿಯ ಅನಾರೋಗ್ಯದ ಮುಂದೆ ಇದೆಲ್ಲ ಗೌಣವೆ ಮಾತ್ರವಲ್ಲ ಸಹನೀಯ ಕೂಡ. ಅಂತೆಯೇ ರೋಗಿಗಳನ್ನು ಸಂದರ್ಶಿಸಲು ಬರುವವರು, ಹಿತೈಷಿಗಳು ಎಂದು ಏನಿಲ್ಲವೆಂದರೂ ಒಂದೊಂದು ಮಂಚದ ಬಳಿ ಎರಡು ಮೂರು ಜನರು ರೋಗಿಯ ಹೊರತಾಗಿ ಇರುತ್ತಾರೆ. ಅಂದರೆ ಒಂದು ವಾರ್ಡಲ್ಲಿ ಇಪ್ಪತ್ತೈದು ಮಂಚಗಳಿದ್ದರೆ ಅಲ್ಲಿ ಕನಿಷ್ಟ ಎಪ್ಫತ್ತೈದು ಜನರಾದರೂ ರೋಗಿಗಳ ಹೊರತಾಗಿರುತ್ತಾರೆ. ಇದೆಲ್ಲವೂ ಸಹಜವೆ ಇದರಲ್ಲೇನು ವಿಶೇಷವಿದೆ ಎಂದು ನಿಮಗನಿಸಬಹುದು. ಆದರೆ ನಾನು ಒಂದೆರಡು ದಿವಸ ಈ ವಾರ್ಡಿನಲ್ಲಿರಬೇಕಾದ ಪ್ರಸಂಗವೊಂದು ಬಂದಿತ್ತು. ಆಗ ನಡೆದ ಘಟನೆ ನನಗೆ ಯಾವಾಗ ಆಸ್ಪತ್ರೆಗೆ ಹೋದಾಗಲೂ ನೆನಪಾಗುತ್ತದೆ. ಇವತ್ತು ಕಾರಣಾಂತರದಿಂದ ಆಸ್ಪತ್ರೆಗೆ ನಮ್ಮ ಹಿತೈಷಿಯೊಬ್ಬರನ್ನು ಕರಕೊಂಡು ಬರಲು ಹೋಗಿರುವಾಗ ಅದರ ನೆನಪಾಯಿತು ಹಾಗೂ ಅದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು..

ಅಂದು ನಾನು ರೋಗಿಯೊಡನೆ ಇರುವಾಗ ನಾನೊಬ್ಬನೇ ಇದ್ದೆ. ಆದರೆ ಇತರ ರೋಗಿಗಳೊಡನೆ ಮೂರು ನಾಲ್ಕು ಜನರಷ್ಟು ಇರುತ್ತಿದ್ದರು. ಆದರೆ ಒಂದು ಮಂಚದಲ್ಲಿ ಮಾತ್ರ ಮಕ್ಕಳು, ಹೆಂಗಸರು ಸೇರಿ ಹತ್ತಾರು ಜನರು ಕುರ್ಚಿ, ಹಾಸಿಗೆ, ನೆಲದ ಮೇಲೆ ಅಸ್ತವ್ಯಸ್ತವಾಗಿ ನಾವು ಮನೆಯೊಳಗಿನ ಬೆಡ್ ರೂಮಲ್ಲಿರುವಂತೆ ಗುಂಪು ಗುಂಪಾಗಿ ಇರುವುದರ ಜತೆ ತಮಾಷೆ ಮಾತಾಡಿಕೊಂಡು ಆಸ್ಪತ್ರೆಯೊಳಗೆ ಕೂಡ ಈ ರೀತಿಯಲ್ಲಿರಬಹುದು ಎಂದು ತೋರಿಸಿಕೊಟ್ಟಿದ್ದರು. ಇದನ್ನೆಲ್ಲ ನಾನು ಪಕ್ಕದಿಂದ ನೋಡುತ್ತಲಿದ್ದೆ. ಆಗ ನನಗೆ ಸಂಶಯವೊಂದು ಮೂಡಿತು. ಇಲ್ಲಿ ರೋಗಿ ಯಾರು.. ರೋಗಿಯನ್ನು ನೋಡಲೆಂದು ಬಂದವರು ಯಾರು.. ರೋಗಿಯೊಡನೆ ಇರುವವರು ಯಾರು.. ಒಂದೂ ಅರ್ಥವಾಗಿಲ್ಲ. ಇರಲಿ ನನಗ್ಯಾಕೆ ಅದೆಲ್ಲವೆಂದು ಸುಮ್ಮನಿದ್ದರೂ ಅವರ ಗಲಾಟೆ, ಮಾತು, ನಗು, ಮಕ್ಕಳ ಮೊಬೈಲಿನಿಂದ ಬರುವ ಕರ್ಕಶ ಧ್ವನಿ ಇದೆಲ್ಲ ಒಂದು ಹಂತದಲ್ಲಿ ಕಿರಿ ಕಿರಿ ಮಾಡುತ್ತಿದ್ದುದು ಅಂತು ಸುಳ್ಳಲ್ಲ. ಆದರೂ ನನಗೆ ರೋಗಿ ಯಾರೆಂದು ಇದ್ದ ಕುತೂಹಲ ಮಾತ್ರ ಕೊನೆಯಾಗಲಿಲ್ಲ.

ಅಷ್ಟರಲ್ಲಿ ಮುಖ್ಯ ವೈದ್ಯಾಧಿಕಾರಿ ರೌಂಡ್ಸಿಗೆ ಬರುವ ವೇಳೆಯಾಗಿತ್ತು. ನಾನು ಕೂಡ ಮಧ್ಯೆ ಮಧ್ಯೆ ವೈದ್ಯರ ಬರುವಿಕೆಯ ನಿರೀಕ್ಷೆಯಿಂದ ಹೊರಗೆ ನೋಡುತ್ತಲೆ ಇದ್ದೆ. ಅಂತೆಯೆ ನನ್ನೆದರಿನ ಮಂಚದಲ್ಲಿರುವ ಹತ್ತಾರು ಮಂದಿಗಳ ಕುಟುಂಬವೂ ವೈದ್ಯರ ನಿರೀಕ್ಷೆಯಲ್ಲಿ ಇಣುಕುತ್ತಲೇ ಇದ್ದರು. ಒಂದರ್ಧ ಗಂಟೆಯಾದ ಮೇಲೆ ವೈದ್ಯರು ಬರುವ ಲಕ್ಷಣ ಗೋಚರಿಸತೊಡಗಿತು. ಅದು ಹೇಗೆ ಲಕ್ಷಣ ಮೊದಲು ಗೋಚರಿಸುವುದು ಎಂಬ ಕುತೂಹಲ ನಿಮಗಿರಬಹುದು. ಮಳೆ ಬರುವ ಮೊದಲು ಗಾಳಿ, ಗುಡುಗು, ಮಿಂಚುಗಳು ಬರುವಂತೆ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಹಾಗೆಯೇ ಎನ್ನಬಹುದು. ಅದು ಈ ರೀತಿ ಇರುತ್ತದೆ. ಆಸ್ಪತ್ರೆಯ ಸಿಬ್ಬಂಧಿ ಏಕಾಏಕಿ ನಿಶ್ಶಬ್ಧರಾಗುತ್ತಾರೆ. ಅದೇನೊ ಘಟಿಸುತ್ತದೆ ಎಂಬ ತರಾತುರಿಯಲ್ಲಿ ನರ್ಸ್ಗಳೆಲ್ಲ ಹಿಂದೆ ಮುಂದೆ ಗಡಿಬಿಡಿಯಿಂದ ತಿರುಗಲಾರಂಭಿಸುತ್ತಾರೆ. ಅದರ ಮಧ್ಯೆ ಯಾರೋ ಒಂದಷ್ಟು ಜನ ಡಾಕ್ಟ್ರು ಬಂದ್ರು ಡಾಕ್ಟ್ರು ಬಂದ್ರು ಎಂದು ಗಾಭರಿಯೋ ಎಂಬಂತೆ ವಿಧೇಯತೆಯತ್ತ ಹೊರಳುತ್ತಾರೆ. ಸ್ವಚ್ಛತೆಯ ಕಾಯಕದಲ್ಲಿ ತೊಡಗಿರುವವರು ಸ್ವಲ್ಪ ಬದಿಗೆ ಸರಿದು ನಿಲ್ಲುತ್ತಾರೆ.. ಇಂಥ ಲಕ್ಷಣಗಳು ಕಂಡಾಗ ತುಂಬಾ ಜನರಿದ್ದ ಮಂಚದ ಕಡೆಯಿಂದ ಒಬ್ಬೊಬ್ಬರೆ ಹೊರಗೆ ಬರಲಾರಂಭಿಸುತ್ತಾರೆ. ಆಗ ನನ್ನ ಕುತೂಹಲಕ್ಕೆ ಉತ್ತರ ಸಿಗುವ ಸಮಯ ಬಂತೆಂದು ಅಂದಕೊಂಡೆ. ಅಂದರೆ ಕೊನೆಯಲ್ಲಿ ಯಾರು ಹಾಸಿಗೆಯಲ್ಲಿರುತ್ತಾನೊ ಆತನೇ ರೋಗಿ ಇರಬಹುದೆಂದು ಅಂದುಕೊಂಡೆ. ಹಾಗೆಯೇ ಆಯಿತೇ.. ಇಲ್ಲ. ಅಂದರೆ ಅಲ್ಲಿವರೆಗೆ ಹಾಸಿಗೆಯಲ್ಲಿ ತೆವಳಿಕೊಂಡಿದ್ದಂಥ ಯಾರೂ ರೋಗಿಗಳಲ್ಲ. ಪಕ್ಕದಲ್ಲಿ ಕುರ್ಚಿಯ ಮೇಲೆ ಮೊಬೈಲ್ ನೋಡಿಕೊಂಡಿದ್ದಂಥ ನಡುವಯಸ್ಸಿನ ಮಹಿಳೆಯೊಬ್ಬರು ಉಳಿದವರ ಚಡಪಡಿಕೆಯನ್ನು ಕಂಡು ಕೂಡಲೆ ಮೊಬೈಲನ್ನು ಹತ್ತಿರವಿದ್ದವರಲ್ಲಿ ಕೊಟ್ಟು ಬೇಗ ಬೇಗನೆ ಹೋಗಿ ಹಾಸಿಗೆಯಲ್ಲಿ ಮಲಗಿ ಕೊಂಡರು. ಅಲ್ಲಿಗೆ ನನಗೆ ಇದ್ದಂಥ ಕುತೂಹಲ ಹೊರಟು ಹೋಗುವುದರ ಜತೆಗೆ ಹೀಗೂ ಒಂದು ವಿಚಾರವಿದೆ ಎಂದು ಅರಗಿಸಿಕೊಳ್ಳಲು ಒಂದು ಕ್ಷಣವೇ ಬೇಕಾಯಿತು. ಮಾತ್ರವಲ್ಲ ಇದೊಂದು ತಮಾಷೆಯಾಗಿಯೂ ಕಂಡಿತು… ಅಂದರೆ ಆಸ್ಪತ್ರೆಯಲ್ಲಾದರು ಕೂಡ ಮಂಚದಲ್ಲಿ ಮಲಗಿದ್ದವನೇ ರೋಗಿಯಾಗಬೇಕಿಲ್ಲ. ಅಥವಾ ರೋಗಿಯಾದವನು ಮಂಚದಲ್ಲಿ ಮಲಗಬೇಕೆಂದಿಲ್ಲ ಎಂಬ ಸತ್ಯದ ಅನಾವರಣವಾಗಿತ್ತು… ಈ ಜಗತ್ತೇ ಒಂದು ವಿಶ್ವ ವಿದ್ಯಾಲಯ ಎಂದು ಇದಕ್ಕೇ ಹೇಳುವುದು..

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 22 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 79 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 63 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 109 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 93 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 66 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 79 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 96 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 570 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 453 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 320 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 470 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 309 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts