Post Views: 277
ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆಗೆ ಸನ್ಮಾನ
ಬೆಳ್ತಂಗಡಿ: ಮುಂಡಾಜೆಯ ಸಚಿನ್ ಭಿಡೆ ಅವರ ಬಹುಮುಖಿ ಸೇವೆಗಳನ್ನು ಗುರುತಿಸಿ ಕರ್ನಾಟಕ ರಾಜ್ಯಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಕುಂದಾಪುರ ಪ್ರಾದೇಶಿಕ ವಿಭಾಗ ಹಾಗೂ ಕುದುರೆಮುಖ ವನ್ಯ ಜೀವಿ ವಿಭಾಗ ಉಡುಪಿ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿಯ ಖಾಸಗಿ ಹೋಟೆಲ್ ಸಭಾಭವನದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ಕಾಠ್ಯಕ್ರಮ ಜರುಗಿತು.
ಏನು ಸಾಧನೆ?: ಸಚಿನ್ ಭಿಡೆ ಅವರು ತಮ್ಮ ಸ್ವಂತ 5 ಎಕರೆ ಭೂಮಿಯಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಸುಮಾರು 800 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು, ಇದರಲ್ಲಿ 527 ಗಿಡಗಳನ್ನು ಕಾರ್ಗಿಲ್ ಯೋಧರ ನೆನಪಿಗಾಗಿ ನೆಡಲಾಗಿದೆ.
ರಾಷ್ಟ್ರಪ್ರೇಮ, ಪರಿಸರ ಪ್ರೇಮ ದೊಂದಿಗೆ ಅನೇಕ ವೈದ್ಯಕೀಯ ಆಸರೆ, ಅನಾಥ ಶವಗಳ ಸಂಸ್ಕಾರ, ರಕ್ತ ದಾನ, ಸ್ವಚ್ಛತೆ, ಹವಾಮಾನ ವೈಪರೀತ್ಯದ ಸಮಯ ಸಾಕಷ್ಟು ನೆರವು, ಮನೆಗಳ ದುರಸ್ತಿಗೆ ಶ್ರಮ ವಹಿಸುತ್ತಿರುವ ಅವರು, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರಾಗಿದ್ದಾರೆ. ಸರಕಾರದ ಆಪತ್ ಮಿತ್ರ ಯೋಜನೆಯಲ್ಲಿ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ) ಮತ್ತು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ) ತರಬೇತಿ ಪಡೆದಿದ್ದು ಸ್ವಯಂಸೇವಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬಹುಮುಖಿ ಸೇವೆಗಳನ್ನು ಗುರುತಿಸಿ, ಸನ್ಮಾನಿಸಲಾಯಿತು.
News & Photo courtesy; Vijaya Karnataka















