ನಮಸ್ಕಾರು,
ಕಳೆದ ಶನಿವಾರ, ಆದಿತ್ಯವಾರ ( ನವಂಬರ್ 15,16 ) ನಮ್ಮ RBC ( ದಿ. ಶತಾಯುಷಿ ರಾಮಚಂದ್ರ ಭಟ್ ಚಿಪಳೂಣಕರ್ ಕುಟುಂಬದ ” ಕುಟುಂಬ ಮಿಲನ ” ಕಾರ್ಯಕ್ರಮ ಶ್ರಿಂಗೇರಿಯ ಮೆಣಸೆ ಯಲ್ಲಿರುವ ಭಿಡೆ ಹೊಂ ಷ್ಟೆ ಯಲ್ಲಿ ಜರುಗಿತು.
ಕುಟುಂಬದ ಈಗಿರುವ 123 ಜನರಲ್ಲಿ, ಸುಮಾರು 40 ಮಂದಿ ಭಾಗವಹಿಸಿದ್ದರು. ಉಳಿದವರಿಗೆ ಅನಿವಾರ್ಯ ಕಾರಣಗಳಿಂದ ಮನಸ್ಸಿದ್ದರೂ ಭಾಗವಹಿಸಲಾಗಲಿಲ್ಲ.
15 ರಂದು ಮಧ್ಯಾಹ್ನ ಊಟದ ಸಮಯಕ್ಕೆ ಸೇರಿದ ಎಲ್ಲರೂ ಅಲ್ಲೇ ವಾಸ್ತವ್ಯ ಹೂಡಿದ್ದೆವು ( ಅಲ್ಲಿ 14 ವಿವಿಧ ರೀತಿಯ ರೂಂ ಗಳಿದ್ದು 45 ಜನರಿಗೆ ಉಳಿಯುವಂತಹ ಸುವ್ಯವಸ್ತೆ, ತುಂಬಾ ಸ್ವಛ್ಛವಾದ ವಾತಾವರಣ, ಅಡುಗೆಯನ್ನೂ ಮಾಡುವ ವ್ಯವಸ್ಥೆ, ವಿಶಾಲವಾದ ಜಾಗ, ಹೂತೋಟ, ತುಂಬಾ ಆಕರ್ಷಣೀಯವಾಗಿದೆ.)
ಕಾರ್ಯಕ್ರಮ ಕ್ಕೊಸ್ಕರ ಏರ್ಪಾಟು ಮಾಡಿದ್ದ ಭವ್ಯವಾದ ಶಾಮಿಯಾನಾ, ಸ್ಟೇಜ್, ಲೖಟಿಂಗ್, ಮೖಕ್ ಸೆಟ್ ವ್ಯವಸ್ಥೆಗಳೊಂದಿಗೆ ಸಂಜೆ 4-30 ರಿಂದ ಪ್ರಾರಂಭವಾದ ಕಾರ್ಯಕ್ರಮಗಳಲ್ಲಿ ಕುಟುಂಬದ 20 ಹಿರೀಯ ನಾಗರಿಕರ ಪೖಕಿ 12 ಜನ ಪುಸ್ತಕ ರೂಪದಲ್ಲಿ ಬರೆದಿದ್ದ ತಮ್ಮ ಜೀವನ ಚರಿತ್ರೆ / ಯಾತ್ರೆ/ ಆತ್ಮ ಚರಿತ್ರೆಗಳ ಅಧಿಕೃತ ಬಿಡುಗಡೆಯನ್ನು ಕುಟುಂಬದ ಎರಡನೇ ತಲೆಮಾರಿನ ಹಿರಿಯರು ಮಾಡಿದರು.
ಅದರ ನಂತರ ಸೇರಿದ ಎಲ್ಲ ಕುಟುಂಬಸ್ಥರಿಂದ ಈ ಕೆಳಗಿನ ವಿವಿಧ ಮನೋರಂಜನಾ, ಸಾಂಸ್ಕೃತಿಕ, ಕಾರ್ಯಕ್ರಮಗಳು ನಿರಂತರ ರಾತ್ರಿ 10 ಗಂಟೆ ವರೆಗೆ ಜರುಗಿದವು.
ಕುಟುಂಬದ ಮಾಹಿತಿ ಕ್ವಿಝ್, ಹಾಡುಗಳು, ಗ್ರೂಪ್, ವಯ್ಯಕ್ತಿಕ, ಹಾಗೂ ದಂಪತಿಗಳ ನೃತ್ಯಗಳು, ಪ್ರಹಸನಗಳು, ವಿನೋದದ ಆಟಗಳು, ರಸಮಂಜರಿ, ಅಂತಾಕ್ಷರೀ ಇತ್ಯಾದಿ.
ಊಟ, ತಿಂಡಿಗಳ ಏರ್ಪಾಡು ಮಾಳದ ಹೆಸರಾಂತ ಬಾಣಸಿಗರಾದ ಪ್ರಕಾಶ್ ಗೋರೆ, ವಿದ್ಯಾಧರ ಜೋಷಿ ಯವರಿಂದ ಏರ್ಪಡಿಸಲಾಗಿತ್ತು.
ಮರುದಿನ ಬೆಳಿಗ್ಗೆ ತಿಂಡಿಯನಂತರ ಎಲ್ಲರೂ ಹರಿಹರಪುರ ದೇವಸ್ಥಾನಕ್ಕೆ ಭೇಟಿಯಿತ್ತು, ಶೃಂಗೇರಿಯಲ್ಲಿ ಹೊಸತಾಗಿ ಸ್ಥಾಪಿಸಲ್ಪಟ್ಟ 32 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿಯನ್ನು ಸಂದರ್ಶಿಸಿ, ಶ್ರೀ ಮಠ ಹಾಗೂ ಶಾರದಾ ಮಂದಿರದ ದರ್ಶನ ಗೖದು ಭೋಜನ ಪ್ರಸಾದ ಸ್ವೀಕರಿಸಿ, ಸ್ವಸ್ಥಾನಗಳಿಗೆ ಮರಳಿದೆವು.
ನಿಮ್ಮ ಕೋರಿಕೆ ಮೇರೆಗೆ ಕೆಲವು ಫೋಟೊ ಗಳನ್ನು 👇 ಈ ವರದಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ( ವೀಡಿಯೋಗಳು ತುಂಬಾ ಇದೆ )
ದಿನೇಶ್ ಚಿಪಳೂಣಕರ್, ಮೖಸೂರು
ಈ ಕೆಳಗಿನವರ ಜೀವನ ಚರಿತ್ರೆಗಳ ಅಧಿಕೃತ ಬಿಡುಗಡೆಯಾಗಿದೆ.
1. ವಿಮಲಾ ಕಾಕ್ಕಿ
2. ದಿ. ತಂದೆ ಯವರು 2014 ರ ವರೇಗೆ ಡೖರಿ ರೂಪದಲ್ಲಿ ದಾಖಲಿಸಿದ ಅವರ ಜೀವನ ಚರಿತ್ರೆ ಲೇಖನ
3. ಪದ್ಮಾಕ್ಷಿ ಕಾಕ್ಕಿ
4. ಅನುಪಮಾ ಕಾಕ್ಕಿ
5. ಸುನಂದಾತ್ತೆ
6. ಕಾಮಾಕ್ಷಾತ್ತೆ
7. ಮುಕುಂದು ಕಾಕ್ಕಾ
8. ದಿನೇಶು
9. ಪಂಕಜಾ
10. ಅಂಬರೀಷ
11. ನಿರಂಜನ
12. ಪ್ರಮಿಳಾ


Advertisement:
















