ಶಿರಸಿಯ ಭಾರತೀಯ ವೈದ್ಯಕೀಯ ಸಂಘದ(IMA) ಅಧ್ಯಕ್ಷರಾಗಿ ಶಿರಸಿಯ ಹಿರಿಯ ವೈದ್ಯರಾದ
ಡಾ. ಮುಕುಂದ ಮರಾಠೆ ಆಯ್ಕೆಯಾಗಿದ್ದಾರೆ.
ತೂಕದಾರ ಶ್ರೀ ಕೃಷ್ಣರಾವ್ ಮರಾಠೆ ಮತ್ತು ಶ್ರೀಮತಿ ವರದಾ ಮರಾಠೆ ಅವರ ಮಗ.1953 ಜನಿಸಿದ ಇವರು ಪ್ರಾಥಮಿಕ ಶಿಕ್ಷಣ ಮರಿಕಾಂಬಾ ಶಾಲೆ, ಶಿರಸಿ,B.Sc: ಎಂ.ಇ.ಎಸ್. ಕಾಲೇಜು, ಶಿರಸಿ,1978 ರಲ್ಲಿ
MBBS: ವಿಐಎಂಎಸ್ (VIMS), ಬಳ್ಳಾರಿಯಲ್ಲಿ ಶಿಕ್ಷಣ ಪಡೆದರು .ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಅನಂತ ಪಟವರ್ಧನ ಅವರೊಂದಿಗೆ ಕಾರ್ಯನಿರ್ವಹಿಸಿ ಅಮೂಲ್ಯ ಅನುಭವ ಗಳಿಸಿದರು.
ಆರಂಭಿಕ ಸೇವೆ: ತಮ್ಮ ವೈದ್ಯಕೀಯ ಜೀವನದ ಆರಂಭದಲ್ಲಿ ನೀರನಳ್ಳಿ ಮತ್ತು ಸೋರಬದಲ್ಲಿ ಕೆಲವು ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿದರು
1980ರಲ್ಲಿ ಡಾ. ಮಧುರಾ ಮರಾಠೆ ಅವರೊಂದಿಗೆ ವಿವಾಹ.
ಡಾ. ಮಧುರಾ ಮರಾಠೆ ಅವರು ಶಿರಸಿಯ ಖ್ಯಾತ ಸ್ತ್ರೀರೋಗ ತಜ್ಞೆ. ಮಕ್ಕಳು ಡಾ. ಪ್ರಿಯಾಂಕಾ ಮರಾಠೆ BDS, ನಾಶಿಕದಲ್ಲಿ ದಂತ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಪತಿ ಶ್ರೀ ಮಂದಾರ್ ಜೋಶಿ, ಇಂಜಿನಿಯರ್.
2. ಡಾ. ರಾಧಿಕಾ ಮರಾಠೆ MBBS, MD, FIPM
ಸಮಾಲೋಚಕ ವೇದನಾ ತಜ್ಞೆ (Consultant Pain Physician)
ಪತಿ: ಡಾ. ಆದಿತ್ಯ ಫಡ್ನಿಸ್ – MBBS, MS (Ophthalmology), ರೋಟರಿ ಆಸ್ಪತ್ರೆಯಲ್ಲಿ ಫ್ಯಾಕೊ ಶಸ್ತ್ರಚಿಕಿತ್ಸಕ. ಶಿರಸಿ
3. ಡಾ. ಕೃಷ್ಣ ಮರಾಠೆ – MBBS, MS (Laparoscopic Surgery) ಸ್ತ್ರೀರೋಗ ಮತ್ತು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕ.
ಪತ್ನಿ: ಡಾ. ವಿಜೇತಾ ಹೆಗಡೆ – MBBS, MS, ART (Assisted Reproductive Technology) ನಲ್ಲಿ ಫೆಲೋಶಿಪ್ ಪಡೆದಿದ್ದು, ಸ್ತ್ರೀರೋಗ ಹಾಗೂ ಸಂತಾನೋತ್ಪತ್ತಿ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
1988ರಲ್ಲಿ ತಮ್ಮ ಪತ್ನಿಯೊಂದಿಗೆ ಶಿರಸಿಯಲ್ಲಿ ತೂಕದಾರ ಕೃಷ್ಣ ಆಸ್ಪತ್ರೆ (Tookdar Krishna Hospital) ಸ್ಥಾಪಿಸಿದರು.ಈ ಆಸ್ಪತ್ರೆಯು ಶಿರಸಿ ಮತ್ತು ಸುತ್ತಮುತ್ತಲಿನ ಜನತೆಗೆ ನಂಬಿಕೆ ಹಾಗೂ ಆರೈಕೆಯ ಕೇಂದ್ರವಾಗಿದೆ.
ಪರಂಪರೆ: ಅವರ ತಂದೆ ಶ್ರೀ ಕೃಷ್ಣರಾವ್ ಮರಾಠೆ, ಶಿರಸಿಯ ಮಾರಿಕಾಂಬಾ ದೇವಸ್ಥಾನದ ಪ್ರಮುಖ ಬಾಬುದಾರರಾಗಿದ್ದು, ದೇವಸ್ಥಾನದ ನಿರ್ವಹಣೆ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಮಹತ್ತರ ಪಾತ್ರವಹಿಸಿದ್ದರು.















