Friday , 25 September 2026

ಮಂಗಳಾರತಿ – ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಮಂಗಳಾರತಿ
**********
“ಮಂಗಳಾರತಿ ಆಗುತ್ತಿದೆ ಬಾರೊ..” ಎಂದು ಮಂಗಳಮ್ಮ ಮಗನಿಗೆ ಕರೆದರು. ಜಾಗಟೆ ಸದ್ದು, ಶಂಖ ನಾದ ಮೊಳಗುತ್ತಿರುವಾಗ ರಮೇಶನಿಗೆ ತಾಯಿಯ ಕರೆ ಅಸ್ಪಷ್ಟವಾಗಿ ಕೇಳಿಸಿತ್ತು. ರಮೇಶನಿಗೆ ದೇವರಲ್ಲಿ ನಂಬಿಕೆ ಇಲ್ಲದ ಕಾರಣ ಇದೆಲ್ಲ ಮೂಢನಂಬಿಕೆ ಎಂದು ತೀರ್ಮಾನಿಸಿ ಅನ್ಯಮನಸ್ಕನಾಗಿರುತ್ತಾನೆ ಎಂದು ಎಲ್ಲರೂ ಭಾವಿಸಿದ್ದರೆ, ರಮೇಶನ ಮನದೊಳಗಿನ ತುಮುಲ ಇತರರಿಗೆ ಅರ್ಥವಾಗುತ್ತಿರಲಿಲ್ಲ. ಅದ್ಯಾಕೊ ಸಣ್ಣವನಾಗಿದ್ದ ದಿನಗಳಿಂದಲೂ ರಮೇಶನಿಗೆ ಈ ಶಂಖ, ಗಂಟೆ, ಜಾಗಟೆಗಳೆಂದರೆ ಅದ್ಯಾವುದೊ ಭೀತಿ ಮನಸ್ಸಿನೊಳಗೆ ಉಂಟಾಗುತ್ತಿತ್ತು. ಭಕ್ತಿ ಭಾವ ಬರಬೇಕಾಗಿದ್ದಲ್ಲಿ ಭೀತಿ ಪ್ರವೇಶ ಯಾವಾಗ ಆಯಿತೊ ಗೊತ್ತಿಲ್ಲ. ಮನೆಯಲ್ಲಿ ಮಾತ್ರವಲ್ಲ ದೇವಸ್ಥಾನಗಳ ಗಂಟೆ ಜಾಗಟೆಗಳೂ ರಮೇಶನ ಮನಸ್ಥಿತಿಯನ್ನು ಭೀತಗೊಳಿಸುತ್ತಿದ್ದವು. ಅದಕ್ಕೆಂದೇ ರಮೇಶ ದೇವಸ್ಥಾನಗಳಿಗೂ ಹೋಗುತ್ತಿರಲಿಲ್ಲ. ಹಾಗೆಂದು ಎಲ್ಲ ಸದ್ದು ಗದ್ದಲಗಳೂ ಇದೇ ಪರಿಣಾಮವನ್ನು ಉಂಟು ಮಾಡುತ್ತಿರಲಿಲ್ಲ. ಮೋಟಾರುಗಳ ಸದ್ದಾಗಲಿ, ಕಾರ್ಖಾನೆಗಳ ಸದ್ದಾಗಲಿ, ಗುಡುಗಿನ ಭೀಕರತೆಯಾಗಲಿ, ಬಹಳ ಜನ ಸೇರಿದಲ್ಲಿ ಉಂಟಾಗುವ ಗದ್ದಲಗಳಾಗಲಿ ರಮೇಶನಿಗೆ ಅಹಿತವಾಗುತ್ತಿರಲಿಲ್ಲ. ಅಂತೆಯೇ ಇಂಥ ದೌರ್ಬಲ್ಯವನ್ನು ಇತರರೊಡನೆ ತೋರ್ಪಡಿಸಿಕೊಳ್ಳಲು ಮುಜುಗರವಾಗುತ್ತಿದ್ದುದರಿಂದ ತನಗೆ ಈ ಕ್ರಿಯೆಗಳಲ್ಲಿ ಆಸಕ್ತಿ ಇಲ್ಲವೆಂದು ಹೇಳಿಕೊಳ್ಳುತ್ತಿದ್ದ. ಆದರೆ ಇದರ ಅರಿವಿರದ ಮಂಗಳಮ್ಮ ಮಗನ ಮನೋಧರ್ಮಕ್ಕೆ ಸಹಜವಾಗಿ ನೊಂದಿದ್ದಳು. ಮಂಗಳಮ್ಮ ಇನ್ನೊಮ್ಮೆ ಮಗನನ್ನು ಕೂಗಿದಾಗ ತಾಯಿಗೆ ಬೇಸರವಾಗಬಾರದೆಂದು ಮನಸ್ಸಿಲ್ಲದ ಮನಸ್ಸಿನಿಂದ ರಮೇಶ ದೇವರ ಕೋಣೆಗೆ ನಡೆದ. ಅದೇ ಮನಸ್ಸಿನಿಂದ ದೇವರಿಗೆ ಕೈಯನ್ನೂ ಮುಗಿದ, ಆರತಿಯ ಮೇಲೆ ಕೈ ಸುತ್ತು ಬರಿಸಿ ಹಣೆಗೂ ಹಚ್ಚಿಕೊಂಡ. ದೂರದಿಂದ ನೋಡುತ್ತಿದ್ದ ಮಂಗಳಮ್ಮನಿಗೆ ಇದರಿಂದ ಖುಷಿಯಾಗುವ ಬದಲು ಬೇಸರವೇ ಆಗಿತ್ತು. ಮಗ ಯಾಕೆ ನಾಸ್ತಿಕವಾದಿಯಾದ ಎಂಬುದೇ ಪ್ರಶ್ನೆಯಾಗಿತ್ತು ಮಂಗಳಮ್ಮನಿಗೆ. ಸನಾತನ ಧರ್ಮದ ಯಾವತ್ತೂ ಶಾಸ್ತ್ರ ಕಟ್ಟಳೆಗಳನ್ನು ಚಾಚೂ ತಪ್ಪದಂತೆ ಆಚರಿಸಿಕೊಂಡು ಬಂದಂಥ ಸಾಂಪ್ರದಾಯಿಕ ಕುಟುಂಬದಲ್ಲಿ ರಮೇಶನಂಥ ಮಗ ಹುಟ್ಟಿದುದಕ್ಕೆ ಉತ್ತರ ಸಿಗುವಲ್ಲಿ ಮಂಗಳಮ್ಮ ಸೋತಿದ್ದಳು.

ಮಂಗಳಮ್ಮನಿಗೆ ಸೋಮನಾಥನೊಂದಿಗೆ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಕೊರಗಿತ್ತು. ಎಲ್ಲ ಸಾಧ್ಯತೆಗಳೂ ಮುಗಿದು ನಿರಾಸೆ ಆವರಿಸಿದಾಗ ದಂಪತಿಗಳು ಶರಣಾದದ್ದು ಜ್ಯೋತಿಷ್ಯಕ್ಕೆ. ಅಂತೆಯೇ ಊರಲ್ಲಿ ಪ್ರಸಿದ್ಧ ಜ್ಯೋತಿಷಿಯಾದ ನಾಗಪ್ರಸಾದ ಭಟ್ಟರಲ್ಲಿ ತಮ್ಮ ಭವಿಷ್ಯದ ಬಗ್ಗೆ ವಿಚಾರಿಸುವುದೆಂದು ನಿರ್ಧರಿಸಿ ಒಂದು ದಿನ ಮಂಗಳಮ್ಮ ದಂಪತಿಗಳು ಭಟ್ಟರ ಮನೆಗೆ ಜಾತಕಗಳನ್ನು ಹಿಡಿದುಕೊಂಡು ಹೋದರು. ಭಟ್ಟರು ಜಾತಕಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ‘ಈ ಜಾತಕದ ಪ್ರಕಾರ ನಿಮಗೆ ಮಕ್ಕಳಾಗುವ ಯೋಗವಿದೆ. ಆದರೆ ಕಾಲ ನಿರ್ಣಯ ಮಾತ್ರ ನನ್ನರಿವಿಗೆ ಎಟುಕದು’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಭಿಪ್ರಾಯ ತಿಳಿಸಿದಾಗ ಒಂದಷ್ಟು ಸಮಾಧಾನ ಒಂದಷ್ಟು ಅಸಮಾಧಾನದ ಜತೆಗೆ ದಂಪತಿಗಳು ಮನೆಗೆ ಮರಳಿದರು. ಕಾಯುವುದೊಂದೆ ಉಳಿದ ದಾರಿಯಾದಾಗ ಈ ಕಾಯುವಿಕೆಯೂ ಅಸಹ್ಯವಾಗತೊಡಗಿತು ಮಂಗಳಮ್ಮನಿಗೆ. ಮತ್ತೂ ಒಂದೆರಡು ವರ್ಷಗಳು ಕಳೆದಾಗ ಸೋಮನಾಥನಿಗೆ ದೇವರ ಮೇಲಾಗಲಿ, ಜ್ಯೋತಿಷ್ಯದ ಮೇಲಾಗಲಿ ಜಿಗುಪ್ಸೆ ಉಂಟಾಗತೊಡಗಿತು. ಆದರೂ ಕರ್ತವ್ಯವೊ ಎಂಬಂತೆ ನಿತ್ಯ ಪೂಜೆಯನ್ನು ಮಾಡುತ್ತಿದ್ದರೂ ಕ್ರಮೇಣ ಅದಕ್ಕೂ ಮನಸ್ಸಿಲ್ಲದಂತಾದಾಗ ಸಂಪೂರ್ಣ ನಾಸ್ತಿಕತೆಯತ್ತ ವಾಲಿದ್ದರು ದಂಪತಿಗಳು. ಹೀಗೆ ಬದುಕು ಶುಷ್ಕವಾಗತೊಡಗಿದಾಗ ಮಂಗಳಮ್ಮ ಗರ್ಭಿಣಿಯಾದಳು. ಇದರಿಂದ ಖುಷಿಯಾದ ದಂಪತಿಗಳು ಮತ್ತೊಮ್ಮೆ ತಮ್ಮ ಪೂರ್ವ ಸ್ವಭಾವಕ್ಕೆ ಮರಳಿದರು. ಬರಬರುತ್ತ ಬರಬರುತ್ತ ಜೀವನದಲ್ಲಿ ಹೊಸತನ ಮೂಡತೊಡಗಿತು. ಅಂತೆಯೇ ಮಗನ ಜನನವಾದಾಗ ಜ್ಯೋತಿಷ್ಯದ ಮೇಲೆ, ದೇವರ ಮೇಲೆ, ಬದುಕಿನ ಮೇಲೆ ನಂಬಿಕೆಯ ಜತೆಗೆ ಪೂರ್ಣ ವಿಶ್ವಾಸವೂ ಮೂಡಿತ್ತು.

ಇತ್ತ ಮಗುವಿಗೆ ಬೆಳೆದಂತೆ ದೈವ, ದೇವರ ಬಗ್ಗೆ ಭಕ್ತಿ ಭಾವ ಬೆಳೆಯಬೇಕಾದ ಕಡೆ ದೇವರ ಬಗ್ಗೆ ಸಣ್ಣ ನಿರ್ಲಕ್ಷ್ಯ ಆವರಿಸತೊಡಗಿತು. ಸಣ್ಣ ಮಗು ದೊಡ್ಡದಾದ ಮೇಲೆ ಸರಿಯಾಗಬಹುದು ಎಂದೆಣಿಸಿ ದಂಪತಿಗಳು ತಾಳ್ಮೆಯಿಂದಿದ್ದರೆ ಬರಬರುತ್ತ ದೇವರಿಗೆ ನಮಸ್ಕಾರ ಮಾಡುವುದೂ ಉಪಯೋಗವಿಲ್ಲವೆಂಬ ಮಗನ ಸಿದ್ಧಾಂತಕ್ಕೆ ದಂಪತಿಗಳು ಕಾರಣ ಹುಡುಕಲಾರಂಭಿಸಿದರು. ವೈದ್ಯರಲ್ಲಿ ಹೋದರೆ ‘ಇದು ವ್ಯಾಧಿ ಅಲ್ಲ. ಪ್ರತಿಯೊಬ್ಬರ ಮನಸ್ಥಿತಿ ಬೇರೆ ಬೇರೆಯಾಗಿರುತ್ತದೆ. ಎಲ್ಲರೂ ದೇವರನ್ನು ನಂಬಲೇ ಬೇಕೆಂದಿಲ್ಲ. ಕೆಲವರು ದೇವರನ್ನು ನಂಬದಿದ್ದರೂ ಒಳ್ಳೆಯ ಬದುಕನ್ನು ಬದುಕಬಲ್ಲರು’ ಎಂದು ಹೇಳಿದರೆ ವಿನಹ ರಮೇಶನ ಮನಸ್ಸನ್ನು ಅರಿತುಕೊಳ್ಳಲು ವಿಫಲರಾಗಿದ್ದರು. ಮಂಗಳಮ್ಮ ದಂಪತಿಗಳಿಗೆ ಸಮಾಧಾನವಾಗಿರಲಿಲ್ಲ. ಮತ್ತೊಮ್ಮೆ ಜ್ಯೋತಿಷ್ಯದ ಮೊರೆ ಹೋಗುವುದೇ ಸೂಕ್ತವೆಂದು ದಂಪತಿಗಳು ನಾಗಪ್ರಸಾದ ಭಟ್ಟರಲ್ಲಿ ಹೋದರು. ನಾಗಪ್ರಸಾದ ಭಟ್ಟರು ರಮೇಶನ ಜಾತಕದ ಜತೆ ಸೋಮನಾಥ, ಮಂಗಳಮ್ಮನ ಜಾತಕಗಳನ್ನೂ ಪರಿಶೀಲಿಸಿದರು. ಜ್ಯೋತಿಷ್ಯದ ವಿಚಾರವಾಗಿ ಬಹಳಷ್ಟು ಅಧ್ಯಯನ ಮಾಡಿದ ನಾಗಪ್ರಸಾದ ಭಟ್ಟರು “ನೋಡಿ ಮಂಗಳಮ್ಮ ನಿಮಗೆ ತಡವಾದರೂ ಪುತ್ರ ಪ್ರಾಪ್ತಿ ಯೋಗ ಉಂಟಾಗಿದೆ. ಖುಷಿ ಪಡಿ. ಅಂತೆಯೇ ಆ ಮಗು ನೀವೆಣಿಸಿದಂತೆ ಇರಬೇಕೆಂದೇನಿಲ್ಲ. ಸೂಕ್ಷ್ಮವಾಗಿ ನೋಡಿದಾಗ ಈ ಮಗುವಿಗೆ ಜನ್ಮಾಂತರದ ಸಂಬಂಧಗಳೂ ಕಾಣ ಸಿಗುತ್ತವೆ. ಅದಕ್ಕೆ ಇನ್ನಷ್ಟು ಅಧ್ಯಯನ ಬೇಕು. ನನ್ನ ತಿಳಿವಿನ ಮಟ್ಟದಲ್ಲಿ ಹೇಳುವುದಾದರೆ ಈ ಮಗು ಮುಂದೆ ಕೀರ್ತಿ ಅಪಕೀರ್ತಿ ಎರಡನ್ನೂ ಏಕಪ್ರಕಾರವಾಗಿ ಸಂಪಾದಿಸುತ್ತದೆ ಎಂದು ಹೇಳಬಹುದು. ಅಂತೆಯೇ ನಿಮ್ಮ ಮನೆಗಾಗಲಿ ವಂಶಕ್ಕಾಗಲಿ ಈ ಮಗುವಿನಿಂದ ಬಹಳವಾದದ್ದನ್ನು ನಿರೀಕ್ಷಿಸಬೇಡಿ’ ಎಂದಾಗ ಮಂಗಳ ದಂಪತಿಗಳಿಗೆ ಮತ್ತೊಮ್ಮೆ ನಿರಾಸೆಯೇ ಮೂಡಿತ್ತು.

ಜಾನಕಿ ಬಾಯಿಯ ನಾಲ್ಕು ಮಕ್ಕಳಲ್ಲಿ ನಾಗೇಶನು ಚಿಕ್ಕಂದಿನಿಂದಲೂ ಬುದ್ಧಿಮಾಂದ್ಯನಾಗಿದ್ದನು. ಆದರೆ ಜಾನಕಿಯು ಎಲ್ಲ ಮಕ್ಕಳಿಗಿಂತ ಒಂದಷ್ಟು ಹೆಚ್ಚಿನ ಮುತುವರ್ಜಿಯಿಂದಲೇ ನಾಗೇಶನನ್ನು ನೋಡಿಕೊಳ್ಳುತ್ತಿದ್ದಳು. ಹಾಗೆಂದು ಬುದ್ಧಿಮಾಂದ್ಯನೆಂದರೆ ಕೆಲವು ಸಂದರ್ಭಗಳಲ್ಲಿ ಬುದ್ಧಿವಂತರಿಗಿಂತ ಕಡಿಮೆ ಇಲ್ಲದಷ್ಟು ಚುರುಕಾಗಿದ್ದದ್ದೂ ಇತ್ತು. ಆದರೆ ಆತನೊಟ್ಟಿಗೆ ಯಾರಾದರೊಬ್ಬರು ಪ್ರತಿಕ್ಷಣದಲ್ಲೂ ಇರಬೇಕಾಗಿತ್ತು. ಕೆಲವೊಮ್ಮೆ ಅದರಲ್ಲೂ ನೀರು, ಬೆಂಕಿ ಕಂಡಾಕ್ಷಣ ಆತ ಅಸಹಜವಾಗಿ ವರ್ತಿಸುತ್ತಿದ್ದ. ಇದನ್ನೆಲ್ಲ ಮನಗಂಡ ಜಾನಕಿ ನಾಗೇಶನನ್ನು ಬಿಟ್ಟು ಒಂದು ಗಳಿಗೆ ಕೂಡ ಇರುತ್ತಿರಲಿಲ್ಲ. ಒಂದು ವೇಳೆ ಅಂಥ ಸಂದರ್ಭ ಬಂದರೆ ಸೂಕ್ತ ಭದ್ರತೆಯಿಂದ ಗಂಡನೊಡನೆ ಅಥವಾ ಇತರ ಮಕ್ಕಳೊಡನೆ ಜವಾಬ್ದಾರಿಯನ್ನು ವಹಿಸಿ ಹೋಗುತ್ತಿದ್ದಳು. ಆದರೂ ಆಕೆಯ ಒಳ ಮನಸ್ಸು ನಾಗೆಶನೊಡನೇ ಇರುತ್ತಿತ್ತು. ನಾಗೇಶ ಅಣ್ಣ, ಅಕ್ಕಂದಿರೊಡನೆ ಆಟವಾಡುತ್ತಿದ್ದರೂ ಅದರ ಸೋಲು ಗೆಲುವುಗಳಲ್ಲಿ ಆಸಕ್ತಿ ಇಲ್ಲದೆ ಸಮನಾಗಿ ಕಾಣುತ್ತಿದ್ದನು. ಬಹುಷ ಸ್ಥಿತಃಪ್ರಜ್ಞನಂತೆ. ಒಂದು ಹಂತದಲ್ಲಿ ಜಾನಕಿಯ ಸಂಸಾರ ಸಾಗುತ್ತಿತ್ತು.

ಒಂದು ದಿನ ಜಾನಕಿಯ ಮನೆಯಲ್ಲಿ ದೇವರ ಪೂಜೆಯನ್ನಿಟ್ಟುಕೊಂಡಿದ್ದರು. ಮನೆಯಲ್ಲಿ ಎಲ್ಲರಿಗೂ ಸಂಭ್ರಮ. ಮೂರರ ಹರೆಯದ ನಾಗೇಶನಿಗೆ ಅದರ ಅರಿವಿಲ್ಲದಿದ್ದರೂ ಮನೆಯೊಳಗಿನ ಸಂತಸದ ವಾತಾವರಣದಲ್ಲಿ ಪಾಲ್ಗೊಂಡಿದ್ದನು. ಎಲ್ಲರೂ ಮನೆಯೊಳಗೆ ಸಂಬಂಧಿಕರೊಡನೆ ಪರಸ್ಪರ ಹಿತಾನುಭವದಲ್ಲಿದ್ದರು. ಪುರೋಹಿತರ ಮಂತ್ರೋಚ್ಚಾರಣೆಯೊಂದಿಗೆ, ಅಡುಗೆ ಭಟ್ಟರ ಅಡುಗೆಯ ಘಮದೊಂದಿಗೆ, ಘಂಟೆ ಜಾಗಟೆ ಶಂಖಗಳ ನಾದದೊಂದಿಗೆ ಪೂಜೆಯು ಅಂತಿಮ ಹಂತಕ್ಕೆ ಬಂದಿತ್ತು. ನಾಗೇಶ ಎಲ್ಲರೊಡನೆ ಮನೆಯೊಳಗೇ ಇರುತ್ತಿದ್ದುದನ್ನು ನೋಡಿ ಜಾನಕಿಯೂ ಒಂದು ಸುರಕ್ಷತಾ ಭಾವದಲ್ಲಿದ್ದಳು. ಮಂಗಳಾರತಿಯ ಗೌಜಿಯಲ್ಲಿ ಮಗನ ಕಡೆ ಗಮನವಿಲ್ಲದಿದ್ದರೂ ರಾತ್ರಿಯಾದ ಕಾರಣ ಹೊರಗೆಲ್ಲೂ ಹೋಗದೆ ಮನೆಯೊಳಗೇ ಇರುತ್ತಾನೆಂಬ ಭಾವದಲ್ಲಿ ನಿರಾಳವಾಗಿಯೇ ಇದ್ದಳು ಜಾನಕಿ. ಮಂಗಳಾರತಿ ಮುಗಿಯುವಾಗಲೂ ಮಗ ಕಾಣದಾದಾಗ ಒಳಗಿಂದಲೇ ನಾಗೇಶನನ್ನು ಕರೆದರು. ಆದರೆ ನಾಗೇಶನ ಉತ್ತರವಿಲ್ಲ. ಕೆಲವೊಮ್ಮೆ ನಾಗೇಶನು ಕರೆದಾಗಲೂ ಅನ್ಯಮನಸ್ಕನಾಗಿದ್ದರೆ ಉತ್ತರಿಸದೇ ಇರುತ್ತಿದ್ದುದರಿಂದ ಜಾನಕಿ ಗಾಬರಿಯಾಗಲಿಲ್ಲ. ಮಗನನ್ನು ಕರಕೊಂಡು ಬರಲು ಅಣ್ಣ ರಾಜೇಶನಿಗೆ ಹೊರಗೆ ಕಳುಹಿಸಿದಳು. ರಾಜೇಶ ಚಾವಡಿಗೆ ಬಂದು ನೋಡಿದಾಗ ನಾಗೇಶ ಗೋಡೆಯ ಬದಿಯಲ್ಲಿ ಬಿದ್ದುಕೊಂಡಿದ್ದ. ಅಲ್ಲಿಂದಲೆ ‘ಅಮ್ಮ ನಾಗೇಶ ಇಲ್ಲಿ ಬಿದ್ದಿದ್ದಾನೆ’ ಎಂದು ಬೊಬ್ಬೆ ಹಾಕಿದ. ಎಲ್ಲರೂ ಗಾಬರಿಯಿಂದ ಹೊರಗೆ ಬಂದು ನೋಡಿದರೆ ನಾಗೇಶನ ಜೀವ ಹೊರಟು ಹೋಗಿತ್ತು. ನಡೆದದ್ದಿಷ್ಟೆ… ನಾಗೇಶ ಮಂಗಳಾರತಿ ನಡೆಯುವಾಗ ಹೊರಗೆ ಬಂದಿದ್ದ. ಪೂಜೆಗೆ ಹೆಚ್ಚಿನ ಬೆಳಕಿಗೆಂದು ತತ್ಕಾಲಿಕವಾಗಿ ಹೊರಗಿನ ಫ್ಲಗ್ಗಿಂದ ವಾಯರೊಂದನ್ನು ಎಳೆದು ವ್ಯವಸ್ಥೆ ಮಾಡಿದ್ದರು. ನಾಗೇಶ ಹೊರಗೆ ಹೋದವನಿಗೆ ಈ ಹೊಸ ವ್ಯವಸ್ಥೆಯು ಕುತೂಹಲವನ್ನು ಮೂಡಿಸಿತ್ತು. ಅದೇನು ಎಡವಟ್ಟಾಯಿತೊ ತಿಳಿಯದು ವಾಯರ್ ಮುಟ್ಟಿದಾಕ್ಷಣ ಅದರಿಂದ ಕರೆಂಟ್ ನಾಗೇಶನಿಗೆ ರವಾನೆಯಾಗಿದೆ. ಬೊಬ್ಬೆ ಹಾಕಿದರೂ ಗಂಟೆ ಜಾಗಟೆಗಳ ಸದ್ದಿಗೆ ಯಾರಿಗೂ ತಿಳಿಯಲಿಲ್ಲ. ಅಂತೆಯೇ ಕೆಲ ಕ್ಷಣದಲ್ಲೇ ನಾಗೇಶ ಅಸಹಾಯಕ ಸ್ಥಿತಿಯಲ್ಲಿ ಪ್ರಾಣ ಕಳಕೊಂಡಿದ್ದ.

ಒಂದೇ ಕ್ಷಣದಲ್ಲಿ ದೆವರ ಪೂಜೆ ನಡೆಯುವ ಮನೆಯ ವಾತಾವರಣವೇ ಬದಲಾಗಿ ಮಸಣದ ಮನೆಯಾಯಿತು. ಜಾನಕಿ ತನ್ನ ದುರ್ವಿಧಿಗೆ ತನ್ನಲ್ಲೇ ಜಿಗುಪ್ಸೆಗೊಂಡಳು. ಕಷ್ಟವೊ ಸುಖವೊ ಮಗನನ್ನು ಚೆನ್ನಾಗಿ ನೋಡಿಕೊಂಡಿದ್ದಂಥ ಜಾನಕಿ ಆತನನ್ನು ಕಳಕೊಂಡು ಶೂನ್ಯ ಮನಸ್ಕಳಾಗಿದ್ದಳು. ಕಾಲ ಮುಂದೋಡಿದಾಗ ಎಲ್ಲವೂ ಮರೆಯುತ್ತದೆ ಅಥವಾ ತೀವ್ರತೆ ಕಡಿಮೆಯಾಗುತ್ತದೆ. ಅಂತೆಯೇ ಜಾನಕಿ ಉಳಿದ ಮಕ್ಕಳ ವಿದ್ಯಾಭ್ಯಾಸ ಮದುವೆ ಎಂದು ಒಂದು ಹಂತಕ್ಕೆ ತಲುಪಿದ್ದಳು. ಹಿರಿಯ ಮಗ ರಾಜೇಶ ಗಿರಿಜಾ ದಂಪತಿಗಳಿಗೆ ಮದುವೆ ಆಗಿ ಎರಡು ಮಕ್ಕಳಿದ್ದರೆ ಕಿರಿಯ ಮಗ ಸೋಮನಾಥ ಮಂಗಳಾ ದಂಪತಿಗಳಿಗೆ ಒಬ್ಬನೇ ಮಗ ರಮೇಶ. ಇತ್ತ ಮಗಳು ಮೀರಾ ಮದುವೆಯಾಗಿ ಮಕ್ಕಳೊಡನೆ ಸುಂದರ ಸಂಸಾರದೊಂದಿಗಿದ್ದಾಳೆ. ಗಂಡನೂ ವಯೋ ಸಹಜ ದೌರ್ಬಲ್ಯಗಳಿಂದಾಗಿ ತೀರಿಕೊಂಡಿದ್ದ. ಜಾನಕಿಗೆ ವೃದ್ಧಾಪ್ಯ ಬಂದರೂ ಅದೆಷ್ಟೋ ಕಾಲ ಮುಂದೋಡಿದರೂ ಮಗನನ್ನು ಕಳಕೊಂಡ ಆ ದಿನದ ಘಟನೆಯನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಮನೆಯಲ್ಲಿ ಯಾವುದೇ ಪೂಜೆಗಳು ನಡೆದಾಗಲೂ ಅವಳಲ್ಲಿ ಪಾಪ ಪ್ರಜ್ಞೆ ಮೂಡುತ್ತಿತ್ತೇ ವಿನಹ ಭಕ್ತಿ ಭಾವ ಬರುತ್ತಿರಲಿಲ್ಲ. ಇದರಿಂದ ಹೊರಗೆ ಬರಲು ಸಾಧ್ಯವಿಲ್ಲವೆಂಬಂಥ ಅರಿವು ಮಕ್ಕಳಿಗೂ ಇತ್ತು.

ಸೋಮನಾಥ ಮಂಗಳಾ ದಂಪತಿಗಳಿಗೆ ಮಗುವಾಗಿ ಜನಿಸಿದ ರಮೇಶನು ಅಂದು ಕಳಕೊಂಡ ತನ್ನ ಮಗನಂತೇ ಇದ್ದಾನೆಂಬುದು ಜಾನಕಿಯ ಅಭಿಪ್ರಾಯ. ನಾಗೇಶನೆ ಪುನರ್ಜನ್ಮದಲ್ಲಿ ಬಂದಿದ್ದಾನೆ ಎಂಬುದು ಜಾನಕಿಯ ಒಳಮನಸ್ಸು ಹೇಳುತ್ತಿತ್ತು. ಮಕ್ಕಳಾದರೊ ತಾಯಿಗೆ ಇದರಲ್ಲಿ ಸುಖವಿರುವುದಾದರೆ ನಾವು ವಾದ ಮಾಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಅಷ್ಟಾಗಿ ಇದು ಬಾಧೆ ಕೊಡುವಂಥದ್ದಲ್ಲ. ಕಳೆದುದನ್ನು ಪಡಕೊಂಡದ್ದರಲ್ಲಿ ಕಾಣಲು ಸಾಧ್ಯವಾದರೆ ಅಷ್ಟರ ಮಟ್ಟಿಗೆ ಖುಷಿಯ ವಿಚಾರವೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಬರಬರುತ್ತ ಬರಬರುತ್ತ ರಮೇಶನಿಗೆ ಈ ಜಾಗಟೆ, ಶಂಖಗಳ ಶಬ್ದಗಳು ಅಸಹನೀಯವೆಂದೆನಿಸಿದಾಗ ಜಾನಕಿಯ ನಂಬಿಕೆಯನ್ನು ಪೂರ್ತಿ ತಳ್ಳಿಹಾಕುವಂಥದ್ದಲ್ಲವೆಂಬುದು ಕೂಡ ಅರಿವಾಗತೊಡಗಿತ್ತು. ಇದಕ್ಕೆ ಜಾನಕಿಯ ವಾದವೂ ಪುಷ್ಟಿ ಕೊಡುತ್ತಿತ್ತು. ಅದು ಹೇಗೆಂದರೆ ಅಂದು ವಿದ್ಯುತ್ ಆಘಾತವಾದಾಗ ಯಾರೂ ಸಹಾಯಕ್ಕೆ ಬಾರದಿರುವುದಕ್ಕೆ ಈ ಶಂಖ,ಜಾಗಟೆಗಳೇ ಕಾರಣವಾದ್ದರಿಂದ ಮತ್ತು ಭಕ್ತಿ ಭಾವ ಪ್ರದರ್ಶನ ಒಂದು ಜೀವವನ್ನೇ ಬಲಿ ಪಡೆದದ್ದರಿಂದ ಈ ಭೀತಿ ಜನ್ಮಾಂತರದಲ್ಲಿ ರಮೇಶನಲ್ಲಿ ಉಳಿದುಕೊಂಡಿದೆ. ಮಾತ್ರವಲ್ಲ ಆ ಜೀವಕ್ಕೆ ಈ ಮನೆಯ ಮೋಹವೂ ಇದ್ದುದರಿಂದ ಅಂತೆಯೇ ಮಂಗಳಾ ಸೋಮನಾಥರಿಗೆ ತತ್ಕಾಲಿಕವಾದರೂ ನಾಸ್ತಿಕ ಭಾವಗಳು ಆವಿರ್ಭವಿಸಿದ ಕಾಲದಲ್ಲಿ ರಮೇಶನ ಜೀವ ಸೃಷ್ಟಿಯಾಗುವಂತೆ ದೇವರು ಇನ್ನೊಂದು ಅವಕಾಶವನ್ನು ಕೊಟ್ಟಿದ್ದಾನೆ. ಪರಿಣಾಮ ರೂಪವಾಗಿ ದೇವರು, ಪೂಜೆ, ಭಕ್ತಿ ಇದರ ಮೇಲೆ ಜಿಗುಪ್ಸೆ ಉಂಟಾಗಿ ರಮೇಶನು ಸದಾ ಅನ್ಯಮನಸ್ಕನಾಗಿರುತ್ತಾನೆ… ಇಷ್ಟೆಲ್ಲ ಯೋಚನೆಗಳು ಜಾನಕಿಗೆ ಬರಬೇಕಾದರೆ ಅದರಲ್ಲಿ ಒಂದಷ್ಟು ಸತ್ಯವಿದೆ ಎನ್ನುವುದೂ ಸತ್ಯವೆ….
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 22 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 79 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 63 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 109 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 93 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 66 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 80 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 97 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 570 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 453 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 320 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 471 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 303 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 287 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 310 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts