ತಾಂತ್ರಿಕ ಪುಸ್ತಕ “ಜ್ಞಾನ ತಂತ್ರದ” ಲೋಕಾರ್ಪಣೆ
ದಕ್ಷಿಣ ಕನ್ನಡ ಜಿಲೆಯ ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ , ವಿಜಯ ಕರ್ನಾಟಕ ದೈನಿಕದ ತಾಂತ್ರಿಕ ಅಂಕಣಕಾರ ಹಾಗೂ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನದ ಸೋಶಿಯಲ್ ಮೀಡಿಯ ಇನ್‌ಫ್ಲುಯೆನ್ಸರ್ ಮೂಲತಃ ಹೊಸಮಠದ ಚಿತ್ಪಾವನ ಬಾಂಧವರಾದ ಡಾ.ಅಜಿತ್ ಹೆಬ್ಬಾರ್ ಆಠವಲೆ ಇವರ ತಂತ್ರಜ್ಞಾನ ಲೇಖನಗಳ ಸಂಗ್ರಹದ “ಜ್ಞಾನ ತಂತ್ರ” ಪುಸ್ತಕದ ಬಿಡುಗಡೆ ಸಮಾರಂಭವು ಸೆ. 22 ರಂದು ಪುತ್ತೂರು ನಗರದ ಪುತ್ತೂರು ಕ್ಲಬ್ ಸಭಾಂಗಣದಲ್ಲಿ ಅಸೋಶಿಯೇಶನ್ ಆಫ್ ಕನ್‌ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಸಂಸ್ಥೆಯ ಪುತ್ತೂರು ಸೆಂಟರ್ ಆಶ್ರಯದಲ್ಲಿ ಜರುಗಿದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ನಡೆಯಿತು. “ಸೇತು ಬಂಧು” ಹಾಗೂ “ಬ್ರಿಜ್ ಮ್ಯಾನ್ ಆಫ್ ಇಂಡಿಯಾ” ಅಂತರ್ರಾಷ್ಟೀಯ ಖ್ಯಾತಿಯ ಸುಳ್ಯದ ಇಂಜಿನಿಯರ್ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಜನಸಾಮಾನ್ಯರಿಗಾಗಿಯೇ ಉದ್ದೇಶಿತ ಕನ್ನಡ ಭಾಷೆಯ ಈ ಪುಸ್ತಕವು ಮುಖ್ಯವಾಗಿ ಕಂಪ್ಯೂಟರ್, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಡಿಜಿಟಲ್ ತಂತ್ರಜ್ಞಾನ, ಮೊಬೈಲ್ ಫೋನ್, ಯಂತ್ರೋಪಕರಣ, ಫ್ಯಾಕ್ಟರಿ, ಸೂಪರ್ ಕಾರು, ಅಣುವಿಜ್ಞಾನ, ವಿಮಾನ ತಂತ್ರಜ್ಞಾನ, ಬಾಹ್ಯಾಕಾಶ, ದೂರ ಸಂವೇದಿ ಉಪಗ್ರಹ, ಪರಿಸರ ವಿಜ್ಞಾನ, ಸಿವಿಲ್ ಇಂಜಿನಿಯರಿಂಗ್, ಗ್ರೀನ್ ಬಿಲ್ಡಿಂಗ್, ಮೆಟ್ರೋ ರೈಲು, ಸ್ಮಾರ್ಟ್ ಸಿಟಿ, ಇಂಧನ ಮೂಲಗಳು, ಬಯೋ ಟೆಕ್ನಾಲಜಿ, ಸ್ಮಾರ್ಟ್ ಹಾಗೂ ಮೆಟಾ ಮೆಟಿರಿಯಲ್ಸ್, ವೈದ್ಯಕೀಯ ತಂತ್ರಜ್ಞಾನ, ದಂತ ವೈದ್ಯಕೀಯ, ಸೌಂದರ್ಯ ಶಾಸ್ತ್ರ, ಫಾರೆನ್ಸಿಕ್, ಲೇಸರ್, ರೇಡಾರ್ ಮುಂತಾದ ನೂರಕ್ಕೂ ಮಿಗಿಲಾದ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಲೇಖನಗಳ ಸಚಿತ್ರ ಸಂಗ್ರಹವನ್ನು ಹೊಂದಿದೆ. ಹಾಗೂ ಆಳ್ವಾಸ್ ತಾಂತ್ರಿಕ್ ಮಹಾವಿದ್ಯಾಲಯದ ಪ್ರೊ. ವಾಸುದೇವ ಶಹಪುರ ಈ ಪುಸ್ತಕದ ಮುನ್ನುಡಿಕಾರರಾಗಿದ್ದು, ಹೊಸಮಠದ ಶ್ರೀ. ಕರುಣಾಕರ ಗೋಗಟೆ ನಾಡೋಳಿ ಇವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಪುಸ್ತಕದಲ್ಲಿ ಆಸಕ್ತಿ ಉಳ್ಳವರು ಲೇಖಕರನ್ನು ವೈಯಕ್ತಿಕ ವಾಟ್ಸಾಪ್ ಸಂದೇಶದ ಮೂಲಕ ಸಂಪರ್ಕಿಸಬಹುದು.
ಮೊ. ಫೋ / ವಾಟ್ಸಾಪ್ : +919448582073















