ದಿ ನಾರಾಯಣ ತಾಮನ್ಕರ್ ಮುಂಡಾಜೆಯವರ ಸ್ಮರಣಾರ್ಥವಾಗಿ ಅವರ ಮಗ ವಿಶ್ರಾಂತ ಅಧ್ಯಾಪಕ ಶಂಕರ್ ಎನ್. ತಾಮನ್ಕರ್ ರವರು ಮತ್ತು ಶ್ರೀಮತಿ ಸ್ವಾತಿ ತಾಮನ್ಕರ್ ಅವರು ತಾ. 3.8.2025ರಂದು ಆದಿತ್ಯವಾರ ತಮ್ಮ ಪರಂಪರಾ ಮನೆಯಲ್ಲಿ ನಡೆದ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಮುಂಡಾಜೆ ಪರಿಸರದ ನಾಲ್ಕು ವಿದ್ಯಾರ್ಥಿಗಳಿಗೆ ತಲಾ ರೂ. 5000 ದಂತೆ ವಿದ್ಯಾರ್ಥಿ ಸಹಾಯ ಹಸ್ತವನ್ನೂ ಮೂರು ಮಂದಿ ಅರ್ಹ ನಾಗರಿಕರಿಗೆ ಆಹಾರ ಕಿಟ್ಟನ್ನೂ ಒಬ್ಬ ನಾಗರಿಕರಿಗೆ ರೂ.5000 ಆರೋಗ್ಯ ಸಹಾಯ ಹಸ್ತವನ್ನೂ ನೀಡಿರುತ್ತಾರೆ.ಈ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಗಣೇಶ್ ಬಂಗೇರ ಅಧ್ಯಕ್ಷರು ಗ್ರಾಮ ಪಂಚಾಯತ್ ಮುಂಡಾಜೆ ;ಶ್ರೀ ನಾಮದೇವ ರಾವ್ ಸಂಚಾಲಕರು ಯಂಗ್ ಚಾಲೆಂಜರ್ಸ್ ಮುಂಡಾಜೆ; ಉದ್ಯಮಿ ಅರೆಕ್ಕಲ್ ರಾಮಚಂದ್ರ ಭಟ್;ದಿಶಾ ಪಟವರ್ಧನ್ ಗ್ರಾಮ ಪಂಚಾಯತ್ ಸದಸ್ಯರು ಮುಂಡಾಜೆ ಯವರು ಭಾಗವಹಿಸಿ ಶುಭ ಕೋರಿದರು .ಮತ್ತು ಇಂತಹ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.ಶಂಕರ್ ತಾಮನ್ಕರರವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ಮಾಡಿದರು
Courtesy: Bende News















