Friday , 25 September 2026

ಚಿತ್ಪಾವನರ ವ್ರತ- ಉಪಾಸನೆಗಳು

1. ವಟ ಸಾವಿತ್ರೀ ವ್ರತ (ವಡಾಂಚಿ ಪುನ್ನವ)

  • ಜ್ಯೇಷ್ಠ ಮಾಸದ ಹುಣ್ಣಿಮೆ.
  • ವಟವೃಕ್ಷದ ಬಳಿಗೆ ಹೋಗಿ ಪೂಜೆಯನ್ನು ಮಾಡಿ ಬಾಗಿನವನ್ನು ಸಮರ್ಪಿಸುವುದು.
  • ಅಂದು ಏಕ ಭುಕ್ತ ಉಪವಾಸವನ್ನು ಮಾಡಬೇಕು.
  • ಪತಿಯ ಆಯುಷ್ಯ ವೃದ್ಧಿಗಾಗಿ ಈ ವ್ರತವನ್ನು ಮಾಡುವುದರಿಂದ ಪೂಜೆಯ ನಂತರ ಪತಿಯ ಕಾಲಿಗೆರಗುವುದು ಮುಖ್ಯವಾಗಿದೆ.
  • ಅದೇ ದಿನದಂದು ಒಂದು ವರ್ಷ ವಡ್ವತ ಎಂಬ ಆಚರಣೆ ಇದೆ. ಅದರಲ್ಲಿ ಮುತ್ತೈದೆಯು ೧೬(16) ಜನ ಸಲುವಾಸಿನಿಯರನ್ನು ಕರೆಸಿ ತವರು ಮನೆಯ ೮(8) ಬಾಗಿನಗಳನ್ನು ಹಾಗೆಯೇ ಗಂಡನ ಮನೆಯ ೮ ಬಾಗಿನಗಳನ್ನು ಒಬ್ಬೊಬ್ಬರಿಗೆ ನೀಡಬೇಕು.

2. ರಂಗಣೆ

  • ಕರ್ಕಾಟಕ ಸಂಕ್ರಾಂತಿಯ ದಿನದಂದು, ಹೊಸದಾಗಿ ಮದುವೆಯಾಗಿರುವ ಹೆಣ್ಣುಮಗಳು ಐದು ವರ್ಷ ಐದೈದು ಮನೆಗಳಿಗೆ ಮೌನವಾಗಿ ಹೋಗಿ ಮುಹೂರ್ತ ದ್ವಾರದ ಹೊಸ್ತಿಲಿನ ಪೂಜೆಯನ್ನು ಮಾಡಿ, ತೆಂಗಿನಕಾಯಿಯನ್ನು ಒಳಗೆ ಬಿಡಬೇಕು ಅದನ್ನು ಕುಮಾರಿಕೆಯು ಹಿಡಿಯಬೇಕು.
  • ಆ ದಿನ ಒಪ್ಪೊತ್ತು ಊಟ ಮಾಡಿ ಉಪವಾಸ ವ್ರತವನ್ನು ಮಾಡಬೇಕು.

3. ಶಿವಾಮುಷ್ಠಿ (ಶಿವಾಮೂಠಿ)

  • ಶ್ರಾವಣ ಮಾಸದ ಎಲ್ಲಾ ಸೋಮವಾರಗಳು ಹೊಸದಾಗಿ ಮದುವೆಯಾಗಿರುವಂತಹ ಹೆಣ್ಣು ತಲೆಗೆಸ್ನಾನ ಮಾಡಿ, ದೇವರ ಪೂಜೆ ಮಾಡಿ ನೈವೇದ್ಯಕ್ಕೆ ಅನ್ನ ಹಾಗೂ ಮೊಸರನ್ನು ಇಡಬೇಕು.
  • ಮೊದಲ ಸೋಮವಾರ ಒಂದು ಮುಷ್ಠಿ ಹಾಗೂ ಒಂದು ಚಿಟಿಕೆ ಇಡಿ ಅಕ್ಕಿ, ಎರಡನೇ ಸೋಮವಾರ ಗೋಧಿ, ಮೂರನೇ ಸೋಮವಾರ ಹೆಸರು, ನಾಲ್ಕನೇ ಸೋಮವಾರ ಎಳ್ಳು ಮತ್ತು ಐದನೇ ಸೋಮವಾರ ಸಿಕ್ಕಿದಲ್ಲಿ ಅಕ್ಕಿಯನ್ನು ಒಂದೇ ಪ್ರಮಾಣದಲ್ಲಿ ದೇವರಿಗೆ ಸಮರ್ಪಿಸುವುದು.

4. ಮಂಗಳಾಗೌರಿ

  • ಶ್ರಾವಣ ಮಾಸದ ಮಂಗಳವಾರಗಳು ತಲೆಗೆ ಸ್ನಾನ ಮಾಡಿ ಒಪ್ಪೊತ್ತೂಟದ ಉಪವಾಸ ಮಾಡಬೇಕು.
  • ಮಂಗಳಗೌರಿಗೆ ಮಂಟಪವನ್ನು ತಳಿರು – ತೋರಣ ಬಾಳೆ ಗಿಡಗಳಿಂದ ಸಿಂಗರಿಸಿ ತಯಾರಿಸಬೇಕು. ಅದರೊಳಗೆ ಎರಡು ತುದಿ ಬಾಳೆಲೆಗಳನ್ನು ಇಟ್ಟು ಅದರಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ದೇವಿಯನ್ನು ಸ್ಥಾಪಿಸಬೇಕು (ಮೂರ್ತಿ ಅಥವಾ ಅಕ್ಕಿ ಹಿಟ್ಟಿನಿಂದ ತಯಾರಿಸಿದ ದೇವಿಯ ರೂಪ). ಆ ಮೂರ್ತಿಗೆ ಮುತ್ತೈದೆಯೊಬ್ಬಳು ಬಳಸುವ ಪ್ರತಿಯೊಂದು ಆಭರಣವನ್ನು ಅಕ್ಕಿಹಿಟ್ಟಿನಿಂದ ತಯಾರಿಸಿ ಸಿಂಗರಿಸಬೇಕು (ತಾಳಿಸರ, ಬಳೆ, ಕಾಲುಂಗುರ, ಕಪ್ಪು ಹಿಟ್ಟಿನಿಂದ ಜಡೆ ಹಾಗೂ ಬಳೆ).
  • ಐದು ವರ್ಷಗಳ ಕಾಲವೂ ಉಪವಾಸದ ಜೊತೆಗೆ ಪೂಜಾ ಸಾಮಗ್ರಿಗಳನ್ನು ತಯಾರಿಸಿಕೊಂಡು ಸುವಾಸಿನಿಯನ್ನು ಕರೆಸಿ ಬಾಗಿನವನ್ನು ನೀಡಬೇಕು.
  • ಆ ದಿನ ಬಾಗಿನದ ಜೊತೆಗೆ ಯಾವುದಾದರೂ ಭಕ್ಷ್ಯದ ೧೬(16) ತುಂಡುಗಳನ್ನು ಇಡಬೇಕು.
  • ಕೊನೆಯ ವರ್ಷ ದಂಪತಿ ಪೂಜೆಯನ್ನು ಮಾಡಬೇಕು.

5. ಗಂಧೇತಯಿ

  • ಶ್ರಾವಣ ಮಾಸದ ಶುಕ್ಲಪಕ್ಷ ತದಿಗೆಯಂದು ಏಳುವರ್ಷಗಳ ಕಾಲ ಉಪವಾಸವನ್ನು ಮಾಡಿ ಆರು ವರ್ಷಗಳವರೆಗೆ ಒಬ್ಬ ಬ್ರಾಹ್ಮಣನಿಗೆ ಹೇಳಿ ಅವರಿಗೆ ಬೆಣ್ಣೆಯ ಜೊತೆಗೆ ಸೌಭಾಗ್ಯ ದ್ರವ್ಯಗಳನ್ನು ಇರಿಸಿ ನೀಡಬೇಕು.
  • ಕೊನೆಯ ವರ್ಷ ಸಹೋದರನನ್ನು ಕರೆಸಿ ಅವರಿಗೆ ಕಂಚಿನ ಪಾತ್ರೆಯಲ್ಲಿ ಬೆಣ್ಣೆಯ ಜೊತೆಗೆ ಸೌಭಾಗ್ಯ ದ್ರವ್ಯಗಳನ್ನು ಇಟ್ಟು ಬಾಗಿನವನ್ನು ನೀಡಿ ವ್ರತವನ್ನು ಸಂಪೂರ್ಣಗೊಳಿಸುವುದು.

6. ವರ್ಣನ್ ಷಷ್ಠಿ

  • ಶ್ರಾವಣ ಮಾಸದ ಶುಕ್ಲಪಕ್ಷ ಷಷ್ಠಿಯ ದಿನದಂದು ಒಪ್ಪೊತ್ತೂಟದ ಉಪವಾಸವನ್ನು ಮಾಡಿ ಪತಿಯ ಆಯುಷ್ಯಕ್ಕಾಗಿ ಹೆಸರು ಬೇಳೆಯ ವರ್ಣ(ತೊವ್ವೆ)ವನ್ನು ಮಾಡಿ ಅನ್ನದೊಂದಿಗೆ ದೇವರ ಬಳಿ ನೀರನ್ನು ಬಿಟ್ಟು ದನಕ್ಕೆ ಕೊಡಬೇಕು. ನಂತರ ಬಾಗಿನವನ್ನು ಸಮರ್ಪಿಸಿ ಬ್ರಾಹ್ಮಣನಿಗೆ ನೀಡಬೇಕು.

7. ಶೀಳಾ ಸಪ್ತಮಿ

  • ಶ್ರಾವಣ ಶುಕ್ಲ ಸಪ್ತಮಿಯ ದಿನ ಉಪವಾಸವನ್ನು ಮಾಡಿ, ನೀರಿನ ಮೂಲದಲ್ಲಿ ಪೂಜೆಯನ್ನು ಮಾಡಿ ಮೊಸರನ್ನವನ್ನು ಆ ನೀರಿಗೆ ಬಿಡಬೇಕು.

8. ಶುಕ್ರವಾರ್ಚಿ ವಾಣ

  • ಶ್ರಾವಣ ಮಾಸದ ಶುಕ್ರವಾರ ಬಾಗಿನ ನೀಡುವುದು.
  • ಐದು ವರ್ಷಗಳ ಕಾಲ ಉಪವಾಸವನ್ನು ಮಾಡಿ ಐದು ಬಾಗಿನಗಳನ್ನು ನೀಡುವುದು.
  • ಕೊನೆಯ ವರ್ಷ ದಂಪತಿ ಪೂಜನವನ್ನು ಮಾಡಬೇಕು.
  • ಒಂದು ವರ್ಷದ ಬಾಗಿನದಲ್ಲಿ ಒಂದು ಭಕ್ಷ್ಯದ ೨೦(20) ತುಂಡುಗಳಿರಬೇಕು.
  • ಐದು ವರ್ಷಗಳ ನಂತರ ಆ ಶುಕ್ರವಾರದ ಉಪವಾಸವನ್ನು ಮುಂದುವರೆಸಬೇಕು.

9. ಹರಿತಾಲಿಕಾ ವ್ರತ

  • ಭಾದ್ರಪದ ಶುಕ್ಲ ತದಿಗೆಯ ದಿನ ಉಪವಾಸ ವ್ರತದ ಮೂಲಕ ಕೇವಲ ಹಣ್ಣು – ಹಂಪಲುಗಳ ಸೇವನೆಯನ್ನು ಮಾಡಿ ಬಾಗಿನವನ್ನು ಸಮರ್ಪಿಸಿ ಪಾರ್ವತಿ – ಪರಮೇಶ್ವರರನ್ನು ಪೂಜಿಸುವುದು.

10. ಋಷಿಪಂಚಮಿ

  • ಭಾದ್ರಪದ ಶುಕ್ಲ ಪಂಚಮಿಯ ದಿನದಂದು ಉಪವಾಸ ವ್ರತದ ಮೂಲಕ ಅರುಂಧತಿ ಸಹಿತ ಸಪ್ತರ್ಷಿಗಳನ್ನು ಬಾಗಿನದಲ್ಲಿ ೭(7) ಬಗೆಯ ತರಕಾರಿಗಳನ್ನಿಟ್ಟು ಸಮರ್ಪಿಸುವುದು. ನಂತರ ಅದನ್ನು ಬ್ರಾಹ್ಮಣನಿಗೆ ನೀಡುವುದು.
  • ಆ ದಿನ ಸೈಂಧವ ಲವಣವನ್ನು ಸೇವಿಸಬೇಕು.

11. ಅದುಖ ನವಮಿ

  • ಭಾದ್ರಪದ ಮಾಸದ ಶುಕ್ಲ ಪಕ್ಷದ ನವಮಿಯ ದಿನದಂದು, ಏಕಭುಕ್ತ ಉಪವಾಸವನ್ನು ಮಾಡಿ, ಬ್ರಾಹ್ಮಣನನ್ನು ಕರೆಸಿ ೯(9) ಮುಠ್ಯೆಗಳನ್ನು ತಯಾರಿಸಿ ಬಾಗಿನದಲ್ಲಿ ಎಂಟು ವರ್ಷಗಳ ಕಾಲ ನೀಡಬೇಕು.
  • ಕೊನೆಯ ವರ್ಷವಾದ ಒಂಭತ್ತನೇ ವರ್ಷವೂ ಬ್ರಾಹ್ಮಣನನ್ನು ಕರೆಸಿ ೧೦(10) ತೆಂಗಿನಕಾಯಿಗಳನ್ನು ಬಾಗಿನದೊಂದಿಗೆ ಇರಿಸಿ ದೇವರಿಗೆ ಸಮರ್ಪಿಸಿ ಬ್ರಾಹ್ಮಣನಿಗೆ ನೀಡುವುದು.

12. ಮಹಾಲಕ್ಷೀ

  • ಆಶ್ವೀಜ ಮಾಸದ ಶುಕ್ಲ ಅಷ್ಟಮಿಯ ದಿನ ಮತ್ತು ಚತುರ್ದಶಿಯ ದಿನ ಹಾಗೂ ಅದೇ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ಹಾಗೂ ಚತುರ್ದಶಿಯ ದಿನಗಳು.
  • ತಲೆಗೆ ಸ್ನಾನ ಮಾಡಿ ಏಕಭುಕ್ತ ಉಪವಾಸ ಮಾಡಬೇಕು.
  • ಒಂದು ಮಲ್ಲಿಗೆಯ ಹೂವು ಹಾಗೂ ಒಂದು ಅಕ್ಷತೆಯನ್ನು ಮಂತ್ರದ ಮೂಲಕ ೧೭(17) ಬಾರಿ ತುಳಸಿಗಿಡಕ್ಕೆ ಸಮರ್ಪಿಸುವುದು.
  • ಐದು ವರ್ಷಗಳ ಕಾಲ ಈ ವೃತವನ್ನು ಮಾಡಬೇಕಿದ್ದು, ವರ್ಷಗಳ ಲೆಕ್ಕದಲ್ಲಿ ಕಂಕಣವನ್ನು ಕಟ್ಟಬೇಕು.
  • ಆ ಕಂಕಣವನ್ನು ಕೊನೆಯ ವರ್ಷ ಹಾಲಿನಲ್ಲಿ ಹಾಕಿ ಅದನ್ನು ತುಳಸಿಕಟ್ಟೆಯಲ್ಲಿ ವಿಸರ್ಜನೆ ಮಾಡಬೇಕು.

13. ಸೋಳಾಂಡೆ

  • ಮುತ್ತೈದೆಯು ಮಾಡಬೇಕಾದ ಒಂದು ವ್ರತವಾಗಿದ್ದು ಇದರಲ್ಲಿ ೧೬(16) ತುಂಡುಗಳನ್ನು ಇಟ್ಟು ಬಾಗಿನವನ್ನು ದೇವರಿಗೆ ಸಮರ್ಪಿಸಿ, ಬ್ರಾಹ್ಮಣನಿಗೆ ನೀಡುವುದು.
  • ಇದನ್ನು ಹೂವು ಹಣ್ಣುಗಳಿಂದ ಮಾಡಬಹುದು. ಆದರೆ ಮೊದಲನೆಯದಾಗಿ ಬಾಳೆಹಣ್ಣುಗಳಿಂದಲೇ ಮಾಡಬೇಕು.

14. ಸೋಮವತೀ ಅಮಾವಾಸ್ಯೆ

  • ಸೋಮವಾರ ಅಮಾವಾಸ್ಯೆ ಬಂದ ದಿನ ಆಚರಿಸಲಾಗುವ ಈ ವ್ರತದಂದು ಅಶ್ವತ್ಥ ವೃಕ್ಷದ ಬಳಿಗೆ ಹೋಗಿ ೧೦೮(108) ಅಕ್ಕಿ ಕಾಳು, ಕುಸುಮ ಸಹಿತ ಹೂವು, ನಾಣ್ಯ ಅಥವಾ ಅಡಿಕೆ ಇಲ್ಲವೇ ಯಾವುದೇ ಭಕ್ಷ್ಯಗಳನ್ನು ೧೦೮ ಪ್ರದಕ್ಷಿಣೆಗಳ ಮೂಲಕ ಸಮರ್ಪಿಸಬೇಕು.
  • ಜೊತೆಗೆ ಬಾಗಿನವನ್ನು ಕೂಡ ಸಮರ್ಪಣೆ ಮಾಡಿ ಬ್ರಾಹ್ಮಣನಿಗೆ ನೀಡಬೇಕು.

ಕುಮಾರಿಕೆಯರು ಮಾಡುವ ನಾರಂದೇವು, ಮುತ್ತೈದೆಯರ ಅರಸಿನ ಕುಂಕುಮ, ಕಾರ್ತಿಕ ಹುಣ್ಣಿಮೆಯಂದು ಆಚರಿಸುವ ತ್ರಿಪುರ ಹೀಗೆ ಅನೇಕ ವ್ರತಗಳು ನಮ್ಮ ಚಿತ್ಪಾವನರಲ್ಲಿವೆ. ಆದರೆ ಕಾಲ ಕಳೆದಂತೆ ಕೆಲವು ವ್ರತ – ಉಪಾಸನೆಗಳು ಕಾಲನ ಮಡಿಲಿಗೆ ಸೇರಿವೆ.

ಮಾಹಿತಿ: ಚಂಪಾ .ಸಿ. ನಾತು , ಮುಂಢಲ್ಸು

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 22 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 79 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 63 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 109 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 93 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 67 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 80 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 98 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 570 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 297 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 453 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 320 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 471 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 303 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 288 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 310 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 227 Courtesy: Scholarspace with Anubhav

Watch our latest podcasts