Sunday , 26 July 2026

ಡಾ|| ಅರವಿಂದ್ ಪಟವರ್ಧನ!!-ಖ್ಯಾತ ಆಯುರ್ವೇದ ವೈದ್ಯರು

ಡಾ|| ಅರವಿಂದ್ ಪಟವರ್ಧನ!!
ಇವರ ಬಗ್ಗೆ ವಿಶೇಷ ಲೇಖನ!

30 ಜೂನ್ 2025ರಂದು ನಿಧನರಾದರು. ಹುಟ್ಟು ಹಬ್ಬದಂದೇ ಮರಣಹೊಂದಿದ ಮಹಾನ್ ಚೀತನ.

ಪುಣೆಯ ತಿಲಕ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿ ಎ ಎಮ್ ಎನ್ &
ಎಸ್, ಇಂಟಿಗ್ರೇಟೆಡ್ ಪದವಿಯಾಗಿತ್ತು.ಆದರೂ ಆಯುರ್ವೇದ ಚಿಕಿತ್ಸೆಯನ್ನೆ ಅನುಸರಿಸುತ್ತಿದ್ದರು. ವಿದ್ಯಾಭ್ಯಾಸದ ನಂತರ ಅವರ ತಂದೆ ವೈದ್ಯ ಗಣಪತಿರಾವ ಪಟವರ್ಧನ ರ ಜೊತೆಗೆ ಅನುಭವವನ್ನು ಪಡೆದರು.
ಗುಣಿ ಶಾಸ್ತ್ರಿಗಳ ಶಿಷ್ಯರಾಗಿದ್ದ ವೈದ್ಯ ಗಣಪತಿರಾವ ಪಟವರ್ಧನರು , ಸಂಶೋಧನೆ, ಹೊಸ ವಿಚಾರಗಳ ಆಗರಗಳಾಗಿದ್ದರು ಕೆಲವೇ ಕೆಲವು ವನಸ್ಪತಿಗಳಿಂದ ಅತ್ಯಂತ ಕಡಿಮೆ ಔಷಧಗಳಿಂದ ರೋಗಗಳನ್ನ ಗುಣಪಡಿಸುವ ಮಹಾನ್ ವಿಜ್ಞಾನಿಯಾಗಿದ್ದರು. ಯಾವುದಾದರೂ ವ್ಯಕ್ತಿಯ ಕಾರಣ ಆ ನಗರ ಗುರ್ತಿಸಲ್ಪಡುತ್ತದೆ ಎಂದರೆ ಅದು ಶಿರಸಿ ಮತ್ತು ವೈದ್ಯ ಗಣಪತಿರಾವ ಪಟವರ್ಧನರಿಂದ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಗೋಳವೆಲ್ಕರ್ ಗುರೂಜಿಯವರ ಚಿಕಿತ್ಸಾ ಸಮಯದಲ್ಲಿ ವೈದ್ಯ ಗಣಪತಿರಾವ ಪಟವರ್ಧನರಿಗೆ ಇವರು ಸಹಾಯಕರಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ.

ಸಾಮಾನ್ಯವಾಗಿ ಆಯುರ್ವೇದ ಚಿಕಿತ್ಸೆ ಎಂದರೆ ಹಲವು ತಿಂಗಳ ಕಾಲ, ಹಲವು ವಿಧದ ಸಂಕೀರ್ಣ ಔಷಧಿಗಳ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ಹಲವು ವೈದ್ಯರದ್ದು ಹಾಗೂ ರೋಗಿಗಳದ್ದು, ಆದರೆ ಇಂತಹ ಒಂದು ವಿಚಾರ ಅಭಿಪ್ರಾಯವನ್ನು ಬದಿಗಿಟ್ಟು ಕೆಲವೇ ಕೆಲವು ಔಷಧಗಳಿಂದ ಕೆಲವೇ ಕೆಲವು ದಿನಗಳಲ್ಲಿ ರೋಗಿಯ ರೋಗದ
ಚಿಕಿತ್ಸೆ ಒದಗಿಸಬಹುದು ಎಂಬ ಒಂದು ವಿಚಾರದ ಪ್ರತಿಪಾದಕರಾಗಿ ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು
ಡಾ ಅರವಿಂದ್ ಪಟವರ್ಧನ. ಅಂದರೆ ಸಾಮಾನ್ಯ ಭಾಷೆಯಲ್ಲಿ ಆಯುರ್ವೇದಿಕ್ ಜನರಲ್ ಪ್ರಾಕ್ಟೀಸ್ ದೈನಂದಿನ ರೋಗಿಗಳ ಅವಶ್ಯಕ ಚಿಕಿತ್ಸೆ ಮೂರು ನಾಲ್ಕು ದಿನದಲ್ಲಿ ಅವನ ರೋಗದಿಂದ ಮುಕ್ತ ಮಾಡಬಹುದು ಅಥವಾ ಕಡಿಮೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಂತಹ ವೈದ್ಯ.

ಶಾಸ್ತ್ರೋಕ್ತವಾದ ಔಷಧಿಗಳನ್ನ ಅಷ್ಟೇ ಉಪಯೋಗಿಸಿ ಚಿಕಿತ್ಸೆ ನೀಡುತ್ತೇನೆ ಎನ್ನುವುದರ ಬದಲು ಯಾರು ಯಾವ ಉತ್ತಮ ದರ್ಜೆಯ, ಉತ್ತಮ ಪರಿಣಾಮಕಾರಿ ಔಷಧಗಳನ್ನು ತಯಾರಿಸುತ್ತಾರೋ ಅದನ್ನು ಉಪಯೋಗಿಸುವ ರೂಢಿಯನ್ನ ಜಾರಿಗೆ ತಂದರು. ಅತಿ ಅವಶ್ಯಕ ಔಷಧಗಳಿಂದ ರೋಗಿಯ ರೋಗವನ್ನು ಗುಣಪಡಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟಂತಹ ವೈದ್ಯರು ಇವರಾಗಿದ್ದರು ಎನ್ನುವುದು ವಿಶೇಷ.

ಬಂದಂತ ರೋಗಿ ತನಗೆ ಊಟ ಮಾಡಲು ಸಮಯವಿಲ್ಲ ಎಂದು ಹೇಳಿದಾಗ ಯಾವುದೇ ರೀತಿ ಮುಲಾಜಿಲ್ಲದೆ ರೋಗಿಗೆ ಬಯ್ಯುವುದು ಇವರ ರೂಡಿಯಾಗಿತ್ತು, ಅಲ್ಲದೆ ಅವನಿಗೆ ನೀನು ದುಡಿಯುವುದು ನಿನ್ನ ಹೊಟ್ಟೆಗಾಗಿ ಮತ್ತು ನಿನ್ನ ಆಹಾರಕ್ಕಾಗಿ ಅದಕ್ಕೆ ಸಮಯವಿಲ್ಲ ಎಂದರೆ ಹೇಗೆ ಎಂಬ ಪ್ರಶ್ನೆಯನ್ನ ಹಾಕಿ ಸರಿಯಾದ ಸಮಯಕ್ಕೆ ಆಹಾರ ಸ್ವೀಕರಿಸಬೇಕು ಎಂಬ ವಿಚಾರದ ಪ್ರತಿಪಾದನೆಯನ್ನ ಹಾಗೂ ತಿಳುವಳಿಕೆಯನ್ನು ನೀಡಿ ರೋಗಿಗಳಿಗೆ ಕಳುಹಿಸುತ್ತಿದ್ದದ್ದು ಇಂದೂ ಕೂಡ ರೋಗಿಗಳು ನೆನಪಿಸುತ್ತಾರೆ.

ಔಷಧ ತಯಾರಿಕೆಯ ತಯಾರಿಕೆಯನ್ನು ಇವರು ಹೊಸ ರೀತಿಯ ವಿಚಾರವನ್ನು ಜಾರಿಗೆ ತಂದು ಅದೇ ರೀತಿಯಲ್ಲಿ ಔಷಧಯನ್ನು ತಯಾರಿಸುತ್ತಿದ್ದರು. ಯಾವುದೇ ಒಂದು ಸಣ್ಣ ವಿಚಾರ ದಿಂದ ಹೊಸ ಔಷಧ ತಯಾರಿಸಬಹುದು ಎಂದು ಅವರ ಮನಸ್ಸಿನಲ್ಲಿ ಬಂದರೆ ಅದನ್ನು ತಕ್ಷಣದಲ್ಲಿ ಜಾರಿಗೆ ತರುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಸಮಾಜದ ಪ್ರಸಿದ್ಧ ವ್ಯಕ್ತಿಗೆ ಚಿಕಿತ್ಸೆ ನೀಡಿದರೆ ಅವರ ಜೊತೆ ಭಾವಚಿತ್ರವನ್ನು ಪ್ರಚಾರಪಡಿಸುವುದು ವೈದ್ಯ ರ ಒಂದು ರೂಢಿಯಾಗಿದೆ.ಆದರೆ ವಿಶ್ವವಿಖ್ಯಾತರ ಚಿಕಿತ್ಸೆಗೆ ಬಂದರು ಕೂಡ ಅದನ್ನು ಇತರರಿಗೆ ಪ್ರಚಾರ ಪಡಿಸದಂತಹ ವಿಚಾರ ಇವರದಾಗಿತ್ತು. ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಖಾಸಗಿ ವೈದ್ಯರಾಗಿದ್ದರರು ಎನ್ನುವ ಸಂಗತಿಯನ್ನು ಶ್ರೀಗಳವರೇ ಅವರ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.ರಾಷ್ಟೀಯ ಸ್ವಯಂಸೇವಕ ಸಂಘದ ಶ್ರೀ ಹೂ ವೇ ಶೇಷಾದ್ರಿ, ಶ್ರೀ ಬಾಬುರಾವ್ ದೇಸಾಯಿ,ಮಹಾನ್ ಶಾಸ್ತ್ರಿಯ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್, ಶ್ರೀ ರಘನಾಥ ನಾಕೋಡ,ಚಿತ್ರನಟಿ ತಾರಾ,
ದಾವಣಗೆ ಚಿಗಟೇರಿ ಆಸ್ಪತ್ರೆಗೆಯ ಚಿಗಟೇರಿ, ನೆಬ್ಬೂರು ನಾರಾಯಣ ಭಾಗವತರು, ಶಿವಾನಂದ ಹೆಗಡೆ ಕೆರೆಮನೆ ಮುಂತಾದವರು.

ಕೆಲ ದಿನಗಳ ಹಿಂದೆ ಅವರ ಮಗನ ( ಖ್ಯಾತ ಆಯುರ್ವೇದ ವೈದ್ಯರು) ಭೇಟಿಗೆ ಬಂದ ಹಲವಾರು ಹೇಳಿದ ಮಾತು ಒಂದೇ ಒಂದು ಹೊತ್ತು ಊಟಕ್ಕೂ ತುಟ್ಟಿ ಇತ್ತು ಆಗ ಔಷಧಿಕೂಟ್ಟವರು ಅಂತ.

ಹಲವು ಆಧ್ಯಾತ್ಮಿಕ ವಿಚಾರ ,ಮಂತ್ರ ಪಠಣ ರೂಢಿಯಲ್ಲಿ ಇಟ್ಟಿದ್ದರು.2 ಘಂಟೆಯ ಅವಧಿಯಲ್ಲಿ ಸಂಪೂರ್ಣ ಭಗವದ್ಗೀತೆ ಪಠಿಸುತ್ತಿದ್ದರು.

ಇವೆಲ್ಲ ಕಾರಣಗಳಿಂದ ಹಲವು ಸನ್ಮಾನಗಳು ಅವರಿಗೆ ಹುಡುಕಿಕೊಂಡು ಬಂದವು
ಸ್ವರ್ಣವಲ್ಲಿ ಮಹಾ ಸಂಸ್ಥಾನದಿಂದ ಸನ್ಮಾನ.
ಕನ್ನಡ ಸಾಹಿತ್ಯ ಪರಿಷತ್ ಶಿರಸಿ ಘಟಕದಿಂದ ಸನ್ಮಾನ.
ರಾಜ್ಯ ಚಿತ್ಪಾವನ ಮಹಾ ಸಮ್ಮೇಳದಲ್ಲಿ ಸನ್ಮಾನ, ಹತ್ತು ಹಲವು ಗೌರವಕ್ಕೆ ಭಾಜನರಾಗಿದ್ದರು.

Article Courtesy: Sirsi’s boys and girls Facebook Page

Events/Announcements

Advertisement

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 8 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 22 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 497 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

ಗರುಡ ಗರ್ವಭಂಗ – ಚಿತ್ಪಾವನರೆ ಸೇರಿ ಪ್ರಸ್ತುತ ಪಡಿಸಿದ ಚಿತ್ಪಾವನಿ ಭಾಷೆಯ ಯಕ್ಷಗಾನ

Post Views: 234 ಚಿತ್ಪಾವನರಿಂದ ಗರುಡ ಗರ್ವಭಂಗ ************************** ಈ ದಿನ ಅಂದರೆ ೨೮/ ೬/ ೨೦೨೬ ನೇ ಆದಿತ್ಯವಾರ ಚಿತ್ಪಾವನ ಸಮಾಜಕ್ಕೆ ಒಂದು ಹೆಮ್ಮೆಯ ದಿನ. ಇದಕ್ಕೆ ಕಾರಣ ಈ...

ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ)

Post Views: 96 ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ) ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಪದ್ಯಾಣ...

ಡಾ. ಚಂದ್ರಶೇಖರ ದಾಮ್ಲೆಯವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ

Post Views: 140   ಉಡುಪಿಯ ಯಕ್ಷಗಾನ ಕಲಾರಂಗ, ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ತಜ್ಞ, ಲೇಖಕ,ಪ್ರಸಂಗ ಕರ್ತ, ಕಲಾವಿಮರ್ಶಕ,...

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ -ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ

Post Views: 125 ****** -***** ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಶ್ರೀ ಅಜಿತ ಹೆಬ್ಬಾರ್...

ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ

Post Views: 150 ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ ಕಾರ್ಕಳ ತಾಲೂಕು ಎಡಪಾಡಿ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಹತ್ತು ದಿನಗಳ ವಸಂತ...

ಡಿ. ಹರೀಶ್ ತಾಮನ್ಕರ್ ರವರ ಶಿಕ್ಷಣ ಕ್ರಾಂತಿ

Post Views: 102 ಡಿ. ಹರೀಶ್ ತಾಮನ್ಕರ್ ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪ ಎಂಬಲ್ಲಿ ಕಳೆದ 19 ವರ್ಷಗಳಿಂದ ಶಿಕ್ಷಣ ಕ್ರಾಂತಿ ಪ್ರಾರಂಭಿಸಿದ್ದಾರೆ. ಅವರು ವಿದ್ಯಾನಿಕೇತನ ಪಿಯು ಕಾಲೇಜನ್ನು 2007 ರಲ್ಲಿ...

ಪರಶುರಾಮ ಜಯಂತಿ – ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು

Post Views: 150 ದಿನಾಂಕ 19/04/2026, ಭಾನುವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು ವತಿಯಿಂದ ಮೖಸೂರಿನ ಬಿ. ಎಸ್. ಎಸ್. ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಂಜೆ 5-30 ರಿಂದ 8...

Recently Added

View All

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 151 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 247 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 373 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 258 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

Nikon Z7 – 5 year old – Body only – for sale – Contact : 9591522880

Post Views: 318 Nikon Z7 5 year old Body only for sale Shutter : 165000 approximately Well maintained always kept in dry cabinet...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 399 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 250 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 238 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 260 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 177 Courtesy: Scholarspace with Anubhav

Watch our latest podcasts