ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ
ಕಾರ್ಕಳ ತಾಲೂಕು ಎಡಪಾಡಿ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಹತ್ತು ದಿನಗಳ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರವು ಮೇ 11-05-2026 ರಂದು ಶ್ರೀ ದೇವರ ಸಮ್ಮುಖದಲ್ಲಿ ಭಜಕರ ಭಾಗವಹಿಸುವಿಕೆಯೊಂದಿಗೆ ದೀಪ ಬೆಳಗಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಿಬಿರದಲ್ಲಿ 25 ಶಿಬಿರಾರ್ಥಿ, 10ಶಿಬಿರಾರ್ಥಿನಿಯರು ಹೀಗೆ ಒಟ್ಟು 35 ಶಿಬಿರಾರ್ಥಿಗಳು ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಋಗ್ವೇದ ಯಜುರ್ವೇದಿಯ ಸಂಧ್ಯಾವಂದನೆ, ಪುರುಷ ಸೂಕ್ತ ವನ್ನು ಬಾಲಕರಿಗೆ ಬೋಧಿಸಲಾಯಿತು ಅಥರ್ವಶೀರ್ಷ ಮೇಧಾ ಸೂಕ್ತ ಸ್ತೋತ್ರಗಳು ಸುಭಾಷಿತಗಳು ಭಜನೆ ಇತ್ಯಾದಿಗಳನ್ನು ಎಲ್ಲಾ ಶಿಬಿರಾರ್ಥಿಗಳಿಗೆ ಬೋಧಿಸಲಾಯಿತು. ಬಾಲಕಿಯರಿಗೆ ನಿತ್ಯ ದೇವರ ಮುಂದೆ ಹಾಕುವ ವಿವಿಧ ರಂಗೋಲಿಗಳು, ಬತ್ತಿ ತಯಾರಿ, , ಹೂ ಮಾಲೆ ಕಟ್ಟುವುದು ಇತ್ಯಾದಿಗಳ ತರಬೇತಿಯನ್ನು ನೀಡಲಾಯಿತು. ಪ್ರತಿದಿನ ಸಾಯಂಕಾಲ ಬದುಕನ್ನು ಕಲಿಸುವ ವಿವಿಧ ಚಟುವಟಿಕೆಗಳನ್ನು,
ಮೋಜಿನ ಆಟಗಳನ್ನು ರಸಪ್ರಶ್ನೆಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಳ್ಳಲಾಗಿತ್ತು. 20-05-2026 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಗುರುಗಳಾದ ಶ್ರೀ ಸತೀಶ ಡೋಂಗ್ರೆ ಇವರು ಬಾಲ್ಯದಲ್ಲಿ ಕಲಿತ ಇಂತಹ ವೈದಿಕ ಮತ್ತು ಸಂಸ್ಕಾರ ಶಿಬಿರಗಳು ಮುಂದೆ ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ ಅಲ್ಲದೇ ಶಿಬಿರದಲ್ಲಿ ಕಲಿತ ವಿಷಯಗಳನ್ನು ಪ್ರತಿದಿನ ಪಾಲಿಸುವಲ್ಲಿ ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಗುರುಗಳಾದ ಶ್ರೀ ಅನಂತ ಪದ್ಮನಾಭ ಗೋರೆ,
ಶ್ರೀ ವೀರೇಶ್ವರ ಸಹಸ್ರಬುದ್ಧ್ಯೆ
ಶ್ರೀ ವೆಂಕಟೇಶ ಮೆಹೆಂದಳೆ
ರಂಗೋಲಿ, ಬತ್ತಿ ತರಬೇತಿಯನ್ನು ನೀಡಿದ ಶ್ರೀಮತಿ ಪ್ರೇಮಾ ಬರ್ವೆ ಮತ್ತು ಶ್ರೀಮತಿ ಶಿವಾನಿ ಸಹಸ್ರಬುದ್ಧ್ಯೆ ಭಜನಾ ತರಬೇತಿಯನ್ನು ನಡೆಸಿಕೊಟ್ಟ
ಶ್ರೀಮತಿ ವಸುಧಾ ಚಿಪ್ಳೂಣ್ಕರ್, ಕಾರ್ಕಳ ತಾಲೂಕು ಚಿತ್ಪಾವನ ಸಂಘದ ಅಧ್ಯಕ್ಷರಾದ ಶ್ರೀ ರತ್ನಾಕರ ಮರಾಠೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುಧಾಕರ ಡೋಂಗ್ರೆ ಇವರು ವಹಿಸಿದ್ದರು ಇಂತಹ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲು ಭಜಕರೆಲ್ಲರ ಇದೇ ರೀತಿಯ ಸಹಕಾರವನ್ನು ಕೋರಿದರು. ಶಿಬಿರ ಸಂಯೋಜಕರಾದ ಶ್ರೀ ಗಜಾನನ ಮರಾಠೆ ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸುಬ್ರಾಯ ಲೋಂಢೆ ಇವರು ಗುರುವಂದನಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಮಹಾದೇವ ಕರ್ಮರ್ಕರ್ ಇವರು ಧನ್ಯವಾದ ಸಮರ್ಪಣೆಗೈದರು. ಶಿಬಿರಾರ್ಥಿ ಓಂಕಾರ ಗೋರೆ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಬಿರಾರ್ಥಿಗಳಿಗೆ ಶ್ರೀ ದೇವರ ಭಾವಚಿತ್ರ ಪ್ರಮಾಣ ಪತ್ರವನ್ನು ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಿಬಿರದಲ್ಲಿ ಕಲಿತ ಗಣಪತ್ಯಥರ್ವಶೀರ್ಷವನ್ನು ಪ್ರಾರ್ಥನೆಯ ರೂಪದಲ್ಲಿ ಪಠಿಸಲಾಯಿತು. ಶಿಬಿರದ ಅನಿಸಿಕೆಗಳನ್ನು ಶಿಬಿರಾರ್ಥಿಗಳು ಮತ್ತು ಪೋಷಕರು ಹಂಚಿಕೊಂಡರು ಶಿಬಿರದಲ್ಲಿ ಕಲಿತ ಭಜನೆ ರಂಗೋಲಿ,ಯೋಗಾಸನ ಇತ್ಯಾದಿ ಚಟುವಟಿಕೆಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಯಿತು. ಶ್ರೀ ಪರಾಶರ ಸಹಸ್ರಬುದ್ಧ್ಯೆ, ಆಡಳಿತ ಮಂಡಳಿಯ ಸರ್ವ ಸದಸ್ಯರು ಪೋಷಕರು ಹಾಗೂ ಭಜಕರು ಶಿಬಿರದ ಯಶಸ್ಸಿಗೆ ಸಹಕರಿಸಿದರು.















