ಆತ್ಮೀಯ ಬಾಂಧವರೇ,
ಇಂದು ರಾಮಕೃಷ್ಣ ಆಶ್ರಮ ದಲ್ಲಿ ನಡೆದ “ಸ್ಫೂರ್ತಿ” ಕಾರ್ಯಕ್ರಮ ವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಆರಂಭ ದಲ್ಲಿ ನಮ್ಮ ಸುಹಾಸಿನಿ ಯರಿಂದ ಸುಶ್ರಾವ್ಯ ವಾದ ಗಣಪತಿ ಸ್ತುತಿ ಯಿಂದ ಒಂದು ವಿಶೇಷ ಮಂಗಳ ಕರವಾದ ವಾತಾ ವರಣ ನಿರ್ಮಾಣವಾಗಿ, ಸರ್ವರನ್ನೂ ಮುದಗೊಳಿಸಿತು. ಸ್ವಾಗತ ಭಾಷಣ ಮಾಡಿದ ಗಣೇಶ್ ಕಾರ್ಣಿಕ ರು ಸಾಂದರ್ಭಿಕ ವಾಗಿ ಇದನ್ನು ಪ್ರಸ್ತಾಪಿಸಿದ್ರು. ನಂತರ ಶ್ರೀ ಜಿತ ಕಾಮಾ ನಂದಜೀ ( ಹಿರಿಯ ಸ್ವಾಮಿಗಳು )ಯವರು ರಾಮಕೃಷ್ಣ ಮಠ ದ ಸ್ಥಾಪನೆ, ಬೆಳೆದು ಬಂದ ಹಂತ ಗಳು, ಮಠ ದಿಂದ ನಡೆಯುತ್ತಿರುವ ಜನ ಸ್ನೇಹಿ ಕಾರ್ಯಕ್ರಮ ಗಳ ಬಗ್ಗೆ ಸ್ಥೂಲ ವಾಗಿ ವಿವರಿಸಿ, ಕಾರ್ಯಕ್ರಮ ಕ್ಕೆ ಶುಭ ಕೋರಿದರು. ನಂತರ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಪ್ರಶಾಂತ್ ಬಾಳಿಗಾ (CGM, ONGC), ಶ್ರೀ ಶಶಿಧರ ಡೋಂಗ್ರೆ ( ಜಾಗತಿಕ ಮುಖ್ಯಸ್ಥರು, L&T ಸಂಶೋಧನಾ ಕೇಂದ್ರ, ಮೈಸೂರು ) ಸಭೆಯನ್ನುದ್ದೇಶಿಸಿ ಮಾತನಾಡಿದರು. ಅನೇಕ ಜಾಗತಿಕ ಸವಾಲುಗಳನ್ನು ಎದುರಿಸುತ್ತ, ನಮ್ಮ ಪ್ರತಿಭಾ ಸಂಪನ್ನರು ದೇಶವನ್ನು ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ಹೇಗೆ ಶ್ರಮಿಸುತ್ತಿದ್ದಾರೆ ಎಂಬುದನ್ನು ವಿವರಿಸಿದರು. ನಮ್ಮ ಅಧ್ಯಕ್ಷ ರು ವಂದನಾರ್ಪಣೆ ಮಾಡಿದರು.ನಂತರ 15 ನಿಮಿಷ ಗಳ ಚಹಾ ವಿರಾಮ. ಬಿಸಿ ಬಿಸಿ ವೆಜ್ ಬೋಂಡಾ ಮತ್ತು ಚಾ. 👌🏿
ಕಾರ್ಯಕ್ರಮ ದ ಎರಡನೇ ಅವಧಿಯಲ್ಲಿ ಮಠದ ಕಿರಿಯ ಸ್ವಾಮಿಗಳು, ಸ್ವಾಮಿ ವಿವೇಕಾನಂದ ರ ಹುಟ್ಟು, ಸಾಧನೆ ಯಿಂದ ಹಿಡಿದು ಇಂದಿನ ಆಧುನಿಕ ಯುಗದ ತಾಂತ್ರಿಕತೆ, ಜನಜೀವನ, ಆಧ್ಯಾತ್ಮ ಗಳು ಸಂಮಿಳಿತ ಗೊಂಡಂತಹ ಪ್ರೇರಣಾ ದಾಯಕ ನುಡಿ ಗಳ ನ್ನಾ ಡಿ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದರು. ಆ ಮೇಲೆ ಕಾರ್ಯಕ್ರಮ ದ ಕೇಂದ್ರ ಬಿಂದು ಡಾ. ನವಕಾಂತ್ ಭಟ್ ಗೋರೆ ಯವರು ತಮ್ಮ ಉಪನ್ಯಾಸ ದಲ್ಲಿ ನ್ಯಾನೋ ಟೆಕ್ನಾಲಜಿ ಅಂದ್ರೆ ಏನು?, ಅದರ ಒಳಿತು ಗಳ ಸಮಗ್ರ ವಾಗಿ ಮನಮುಟ್ಟುವಂತೆ ವಿವರಿಸಿದರು.
ಮೂರನೇ ಅವಧಿಯಲ್ಲಿ ವಿಷಯ ದ ಬಗ್ಗೆ ವಿದ್ಯಾರ್ಥಿ ಗಳೊಂದಿಗೆ ಪ್ರಶ್ ನೋ ತ್ತರ ಮಾದರಿಯಲ್ಲಿ ಚರ್ಚೆ ನಡೆಯಿತು. ಈ ಚರ್ಚೆ ಯಲ್ಲಿ ಡಾ. ನವಕಾಂತ್, ಡಾ. ಶಶಿಧರ್ ಡೋಂಗ್ರೆ, ಮತ್ತು ಡಾ. ಕವಿತಾ ಮೇಡಂ ಮತ್ತು ಕಿರಿಯ ಸ್ವಾಮಿಗಳು ವಿದ್ಯಾರ್ಥಿಗಳ ಪ್ರಶ್ನೆ ಗಳಿಗೆ ಸೂಕ್ತ ಉತ್ತರ ನೀಡಿದರು. ಈ ಚರ್ಚಾ ಕೂಟ ಬಹಳ ಆಸಕ್ತಿ ದಾಯಕ ವಾಗಿ , ವಿಜ್ಞಾನ, ತಂತ್ರಜ್ಞಾನ, ಮನಃ ಶಾಸ್ತ್ರ, ಹಾಗು ಆಧ್ಯಾತ್ಮಿ ಕ ವಿಚಾರ ಗಳನ್ನು ಒಳಗೊಂಡ ಹೂರಣವಾಗಿ, ಜಿದ್ ನ್ಯಾ ಸು ಗಳಿಗೆ ರಸದೂ ಟ ದಂತೆ ಆಪ್ಯಾಯ ಮಾನ ವಾಯಿತು. ಮುಸ್ಲಿಂ ವಿದ್ಯಾರ್ಥಿ ಯೊಬ್ಬ ನ “ಅದ್ ವೈತ” ಸಿದ್ಧಾಂತ ದ ಬಗೆಗಿನ ಪ್ರಶ್ನೆ ಗೆ ಕಿರಿಯ ಸ್ವಾಮಿಗಳು ಉತ್ತರಿಸಿದ್ರು.ನಮ್ಮ ಗ್ರಂಥ ಗಳ ಅಧ್ಯಯನ ಮಾಡ್ಬೇಕಾದ್ರೆ ಸಂಸ್ಕೃತ ಭಾಷೆಯ ಕಲಿಕೆ ಮತ್ತು ಸಮರ್ಥ ಗುರು ಗಳ ಅವಶ್ಯಕತೆ ಯನ್ನು ಒತ್ತಿ ಹೇಳಿದ್ರು.ಕೆಲವು ವಿಚಿತ್ರ ಪ್ರಶ್ನೆಗಳಿಗೆ ನಿರ್ಣಾಯಕರು ಶಾಂತವಾಗಿ ಉತ್ತರಿಸಿದರು.
ಒಟ್ಟಿನಲ್ಲಿ ಹೇಳುವುದಾದರೆ ಈ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ, ವಿದ್ಯಾರ್ಥಿಗಳಿಗೆ ಯಾವುದೇ ಹಂತದಲ್ಲಿ ನೀರಸ ವೆಂದೇನಿಸದೆ ಸಾಗಿ ರೋಚಕ ವಾಗಿ ಮುಕ್ತಾಯ ವಾಯಿತು.
ನಮ್ಮ ಅಧ್ಯಕ್ಷ ರ ದೂರ ದೃ ಷ್ಟಿ ಯ ಈ ಕಾರ್ಯಕ್ರಮ ಇಂದು ಸಂಪನ್ನ ಗೊಂಡು, ಎಲ್ಲರಿಗೂ ಬಹಳ ಸಂತೋಷವಾಯಿತು. ನಮ್ಮ ಸಮಾಜ ದ ಈ ಇಬ್ಬರು ವಾಮನ ಮೂರ್ತಿ ಗಳ ಜ್ಞಾ ನ, ಸ್ಥಾ ನ ಮತ್ತು ಅವರ ಗುಣ ವಿಶೇಷ ಗಳು ನಮಗೊಂದು ಹೆಮ್ಮ, ಮತ್ತು ಆದರ್ಶ.ಈ ಕಾರ್ಯಕ್ರಮ ನಡೆಸುವಲ್ಲಿ ನಮ್ಮ ಅಧ್ಯಕ್ಷ ರ ಪರಿಶ್ರಮ ಬಹಳ. ಅವರಿಗೂ, ಆಶ್ರಮ ದವರಿಗೂ, ಬಂದು ಭಾಗವಹಿಸಿದ ಎಲ್ಲ ಸಮಾಜ ಬಾನ್ ಧವರಿಗೂ ಮಂಗಳೂರು ಚಿತ್ಪಾವನ ಸಂಘ ದ ಪರವಾಗಿ ಅಭಿನಂದನೆಗಳು 🙏🏿🙏🏿
















