*ನಮ್ಮ ಹತ್ತಿರದಲ್ಲೇ ಇದ್ದಾರೆ ಒಬ್ಬರು”ಮಧುಬನಿ” ಪ್ರತಿಭೆ*
ಇವತ್ತು ಬೆಳ್ತಂಗಡಿ ತಾಲೂಕಿನ ಒಬ್ಬರು “ಮಧುಬನಿ ಪೈಂಟಿಂಗ್” ಚಿತ್ರಗಳನ್ನು ಅದ್ಭುತವಾಗಿ ಬಿಡಿಸಬಲ್ಲ ಯುವ ಚಿತ್ಪಾವನ ಸೈಲೆಂಟ್ ಪ್ರತಿಭೆಯೊಂದನ್ನು ಪರಿಚಯಿಸುತ್ತೀದ್ದೇನೆ. ಅವರೇ *ಉಲ್ಫೆ ಆಶಯ್ ತಾಮ್ಹನ್ಕರ್* .
ಮೂಲತಃ ಇಲೆಕ್ಟ್ರಾನಿಕ್ ಇಂಜಿನಿಯರ್ ಆಗಿದ್ದರೂ, ಸಾಫ್ಟ್ ವೇರ್ / ಎಲೆಕ್ಟ್ರಾನಿಕ್ಸ್ ಎರಡರಲ್ಲೂ ಎತ್ತಿದ ಕೈ. ಪ್ರಸ್ತುತ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿ. ಅದಲ್ಲದೆ ಹವ್ಯಾಸಿ ಚಿತ್ರಗಾರ, ವಿಶೇಷವಾಗಿ ಮಧುಬನಿ ಎಕ್ಸ್ಪರ್ಟ್. ಇವರು ಉಲ್ಫೆ ಶ್ರೀ ಹರಿಶ್ಚಂದ್ರ ತಾಮ್ಹನ್ಕರ್/ಶ್ರೀಮತಿ ಅರುಣಾ ತಾಮ್ಹನ್ಕರ್ ಇವರ ದ್ವಿತೀಯ ಪುತ್ರ.
ಅವರು ಬಿಡಿಸಿದ ಕೆಲವು ಚಿತ್ರಗಳನ್ನು ಇಲ್ಲಿ ತೋರಿಸುತ್ತೀದ್ದೇನೆ. ಕೇವಲ ಇದಕ್ಕೆ ಸೀಮಿತವಾಗದೆ ಇವರಿಗೆ ಯಕ್ಷಗಾನದಲ್ಲೂ ಬಹು ಆಸಕ್ತಿ (ಚೆಂಡೆ, ಮದ್ದಳೆ). ಇತ್ತ, ಗಣಹೋಮ, ರುದ್ರಾಭಿಷೇಕ, ದುರ್ಗಾಸಪ್ತಶತಿ ಪಾರಾಯಣಗಳ ಪೌರೋಹಿತ್ಯವನ್ನೂ ಮಾಡಬಲ್ಲ ಪ್ರಚಾರವನ್ನು ಬಯಸದ ಬಹುಮುಖ ಪ್ರತಿಭೆ.
*ಡಾ.ಅಜಿತ್ ಹೆಬ್ಬಾರ್ ಹೊಸಮಠ*
















