ಯಕ್ಷಗಾನ ಲೋಕದಲ್ಲಿ ಕಲಾವಿದರನ್ನು ಗೌರವಿಸುವ ಕೆಲವೇ ಕೆಲವು ಅಪರೂಪದ ವ್ಯಕ್ತಿಗಳಲ್ಲಿ ಶ್ರೀ ಸತೀಶ್ ಭಟ್ ಅವರು ಕೂಡ ಒಬ್ಬರು.
ಬಜಗೋಳಿಯಲ್ಲಿ ತಮ್ಮ ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದರೂ, ಯಕ್ಷಗಾನದ ಮೇಲಿನ ಅವರ ಪ್ರೀತಿ ಮತ್ತು ಗೌರವ ಅಪಾರ. ತೆಂಕುತಿಟ್ಟು, ಬಡಗುತಿಟ್ಟು ಎಂಬ ಭೇದವಿಲ್ಲದೆ, ಎಲ್ಲಾ ಕಲಾವಿದರನ್ನೂ ತಮ್ಮ ಕುಟುಂಬದ ಸದಸ್ಯರಂತೆ ಕಾಣುವ ಅವರ ವ್ಯಕ್ತಿತ್ವ ಅನುಕರಣೀಯ.
15.9.25 ಸೋಮವಾರ ಮುಡ್ರಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ‘ಶ್ರೀಹರಿಲೀಲಾಮೃತ’ ಪ್ರದರ್ಶನದ ವೇಳೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ವತಿಯಿಂದ ಮೇಳದ ವ್ಯವಸ್ಥಾಪಕ ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಗೌರವ ಸಮರ್ಪಣೆ ಮಾಡಿದ್ದು ನಿಜಕ್ಕೂ ಅರ್ಥಪೂರ್ಣ ಎನಿಸಿತು.
ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರೊಂದಿಗೆ ಅವರು ಹೊಂದಿರುವ ಆಳವಾದ ಬಾಂಧವ್ಯ, ಹಣಕ್ಕಿಂತ ಮಿಗಿಲಾದ ಮಾನವೀಯ ಸಂಬಂಧಗಳ ಮಹತ್ವವನ್ನು ಸಾರುತ್ತದೆ. ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಅವರಿಗೆ ಸಿಕ್ಕ ಈ ಗೌರವ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಪತ್ನಿ ಶ್ರೀಮತಿ ಸಂಧ್ಯಾ,ಮಗ ಸಂದೇಶ್ ಬೆಂಗಳೂರಿನಲ್ಲಿ ಉದ್ಯೋಗಿ ಹಾಗೂ ಯಕ್ಷಗಾನ ಕಲಾವಿದ,ಇನ್ನೋರ್ವ ಪುತ್ರ ಸಂಜಯ್ puc ವಿದ್ಯಾಭ್ಯಾಸ ಮಾಡುತ್ತಿದ್ದು ಆತನೂ ಹವ್ಯಾಸ ಯಕ್ಷಗಾನ ಕಲಾವಿದನಾಗಿದ್ದಾನೆ. ಸಹೋದರ ಸುನೀಲ್ ಅಣ್ಣನ ಜೊತೆಯಲ್ಲಿ ಕ್ಯಾಟರಿಂಗ್ ಉದ್ಯಮಕ್ಕೆ ಬೆಂಬಲ ನೀಡುತ್ತಿದ್ದಾರೆ. ತಾಯಿ ಶ್ರೀಮತಿ ಚಂದ್ರಾವತಿ ಇವರೆಲ್ಲರ ಪ್ರೇರಕ ಶಕ್ತಿ. ಈ ಎಲ್ಲಾ ಸದಸ್ಯರೊಂದಿಗೆ ಸುಖ ಸಂಸಾರ ನಡೆಸುವ ಸತೀಶ್ ಭಟ್ ಇವರ ಇನ್ನೊಂದು ಆಸಕ್ತಿಕರ ಕ್ಷೇತ್ರ ಹೈನುಗಾರಿಕೆ. ಜಾನುವಾರುಗಳನ್ನು ಸಾಕಿಕೊಂಡು ಅದರ ಪಾಲನೆ ಪೋಷಣೆಯಲ್ಲೂ ತೊಡಗಿದ್ದಾರೆ.
ನಮ್ಮ ಬಳಗದ ಸದಸ್ಯರೂ ಆಗಿರುವ ಶ್ರೀ ಸತೀಶ್ ಭಟ್ ಅವರಿಗೆ ಶುಭಾಶಯಗಳು ಹಾಗೂ ಅಭಿನಂದನೆಗಳು.















